ಚೆರುವತ್ತೂರು ಪುದಿಯಕ್ಕಾಲ್ ನದಿಗೆ ಪುನಶ್ಚೇತನ
ತ್ವರಿತ ಶುಚೀಕರಣ ಯಜ್ಞ
Team Udayavani, May 14, 2019, 6:00 AM IST
ಕಾಸರಗೋಡು: ಚೆರುವತ್ತೂರಿನ ಜೀವನದಿಯಾಗಿರುವ ಪುದಿಯಕ್ಕಾಲ್ ನದಿ ಸಮೃದ್ಧವಾಗಿ ಹರಿಯಲು ಬೇಕಾದ ಎಲ್ಲ ವ್ಯವಸ್ಥೆಯೂ ನಡೆದಿರುವುದು ಸ್ಥಳೀಯ ಜನಜೀವನಕ್ಕೆ ಪುನಶ್ಚೇತನ ಒದಗಿಸಿದಂತಾಗಿದೆ.
ರಾಜ್ಯ ಸರಕಾರ ಜಾರಿಗೊಳಿಸಿದ ತೀವ್ರ ಶುಚಿತ್ವ ಯಜ್ಞದ ಅಂಗವಾಗಿ ಈ ನದಿಯ ಸಮಗ್ರ ಶುಚೀಕರಣ ಎರಡು ದಿನಗಳ ಕಾಲ ನಡೆಯಿತು. ಚೆರುವತ್ತೂರು ಗ್ರಾಮದ ಪಶ್ಚಿಮ ಭಾಗದಲ್ಲಿ ಮೂರೂವರೆ ಕಿ.ಮೀ.ಉದ್ದ ಹೊಂದಿರುವ ಈ ಹೊಳೆ ತೇಜಸ್ವಿನಿ ನದಿಯ ಕವಲಾಗಿದೆ.ಗ್ರಾ.ಪಂ.ನ 5 ವಾರ್ಡ್‌ನ ಜನತೆಯ ಬದುಕಿಗೆ ನೇರವಾಗಿ ಸಂಬಂಧ ಹೊಂದಿರುವ ಈ ಜಲಾಶಯ ಹಿಂದೊಂದು ಕಾಲದಲ್ಲಿ ವಾಣಿಜ್ಯ ಉದ್ದಿಮೆಗೆ ಮಾರ್ಗವೂ (ಜಲಮಾರ್ಗ ರೂಪದಲ್ಲಿ) ಆಗಿತ್ತು. ಕಾಲಕ್ರಮೇಣ ನದಿಯ ತಟದ ಮೇಲೆ ಅತಿಕ್ರಮಣ, ತ್ಯಾಜ್ಯ ತಂದು ಸುರಿಯುವುದು ಇತ್ಯಾದಿ ಕಾರಣಗಳಿಂದ ನದಿ ವಿನಾಶದ ಅಂಚಿನಲ್ಲಿ ಬಳಲುತ್ತಿತ್ತು.
ಶುಚೀಕರಣ ಯಜ್ಞದ ಅಂಗವಾಗಿ ಶನಿವಾರ ಮತ್ತು ರವಿವಾರ ಈ ನದಿಯ ಸಮಗ್ರ ಶುಚೀಕರಣ ನಡೆದಿದೆ. ಜನಪ್ರತಿನಿ ಧಿಗಳು, ಕುಟುಂಬಶ್ರೀ, ಹರಿತ ಕ್ರಿಯಾ ಸೇನೆ ಸದಸ್ಯರು, ಉದ್ಯೋಗ ಖಾತರಿ ಯೋಜನೆ ಕಾರ್ಮಿ ಕರು, ಸಾರ್ವಜನಿಕರು ಶುಚೀಕರಣ ನಡೆಸಿದ್ದಾರೆ.
ನದಿಗೆ ಅನೇಕ ಕಾಲಗಳಿಂದ ತಂದು ಸುರಿಯಲಾಗುತ್ತಿದ್ದ ಭಾರೀ ಪ್ರಮಾಣದ ಪ್ಲಾಸ್ಟಿಕ್ ಸಹಿತ ತ್ಯಾಜ್ಯಗಳನ್ನು ಮೇಲಕ್ಕೆತ್ತಿ ಸಂಗ್ರಹಿಸಿ ಬೇರೆಡೆಗೆ ರವಾನಿಸಲಾಗಿದೆ. ಭಿತ್ತಿಯ ಶುಚೀಕರಣವೂ ನಡೆದಿದೆ.
ನದಿಯ ಸಂರಕ್ಷಣೆಗೆ ಇತರ ಚಟುವಟಿಕೆಗಳನ್ನು ಕಳೆದ ವರ್ಷದಿಂದಲೇ ಆರಂಭಿಸಲಾಗಿದೆ. ಮುಂದಿನ ವರ್ಷಗಳಲ್ಲಿ ನದಿ ನಿರ್ಮಲವಾಗಿಯೇ ಇರುವಂತೆ ನೋಡಿಕೊಳ್ಳುವ ಯೋಜನೆ ಗ್ರಾಮ ಪಂಚಾಯತ್ ಜಾರಿಗೊಳಿಸಲಿದೆ ಎಂದು ಪದಾ ಧಿಕಾರಿಗಳು ತಿಳಿಸಿದರು. ಇದು ಮತ್ತೂಮ್ಮೆ ಸಮೃದ್ಧವಾದ ಪದಿಕ್ಕಾಲ್ ನದಿಯ ಹರಿಯುವಿಕೆಯನ್ನು ನೋಡುವ ಭಾಗ್ಯವನ್ನು ಸ್ಥಳೀಯರಿಗೆ ಒದಗಿಸಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.