ಮರಳಿನಿಂದ ಜಾರುವ ರಸ್ತೆಗೆ ಮೋಕ್ಷ ಬೇಕಿದೆ
Team Udayavani, Jul 17, 2017, 3:45 AM IST
ಕುಂಬಳೆ: ಕುಂಬಳೆ ಪೊಲೀಸ್ ಠಾಣೆಯ ಮುಂದಿನ ರಸ್ತೆ ಮರಳು ತುಂಬಿ ಅಪಾಯವನ್ನು ಆಹ್ವಾನಿಸುತ್ತಿದೆ.
ಕಾನೂನು ಬಾಹಿರವಾಗಿ ಸಮುದ್ರತೀರ ಮತ್ತು ಹೊಳೆಗಳಿಂದ ಅಕ್ರಮವಾಗಿ ಲಾರಿ, ಟೆಂಪೊ, ಇನ್ನಿತರ ವಾಹನಗಳಲ್ಲಿ ಸಾಗಿಸುತ್ತಿದ್ದಾಗ ಪೊಲೀಸರು ವಾಹನಗಳನ್ನು ವಶಪಡಿಸಿ ಈ ರಸ್ತೆ ಪಕ್ಕದಲ್ಲಿರಿಸಿದಾಗ ಮಾರುತಿ, ಆಮ್ನಿ, ರಿಕ್ಷಾ ಮುಂತಾದ ಸಣ್ಣ ವಾಹನಗಳಿಂದ ಮರಳು ರಸ್ತೆಗೆ ಜಾರಿಬಿದ್ದು ರಸ್ತೆಯಲ್ಲಿ ಶೇಖರಣೆಯಾಗುವುದು. ಇದರಿಂದ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೊಡಕಾಗುವುದು. ಬೈಕ್‌ಗಳು ಈ ರಸ್ತೆಯಲ್ಲಿ ಹಲವು ಬಾರಿ ಸ್ಕಿಡ್ ಆಗಿ ಅಪಾಯ ಸಂಭವಿಸಿದೆ.
ಕುಂಬಳೆ ಗ್ರಾಮ ಪಂಚಾಯತ್ ಮತ್ತು ಪೊಲೀಸ್ ಠಾಣೆಯ ಮುಂದೆಯೇ ಈ ಅವಾಂತರ ನಡೆಯುತ್ತಿದ್ದರೂ ಸ್ಥಳೀಯಾಡಳಿತವಾಗಲಿ ಪೊಲೀಸರಾಗಲಿ ಈ ಸಮಸ್ಯೆಗೆ ಪರಿಹಾರ ಕಂಡಿಲ್ಲ.ವಿದ್ಯಾಲಯಕ್ಕೆ ಸಿ.ಐ.ಕಚೇರಿಗೆ,ಕೃಷಿ ಭವನ ಸಾರ್ವಜನಿಕ ಶ್ಮಶಾನಗಳಿಗೆ ತೆರಳುವ ರಸ್ತೆಯಲ್ಲಿ ತುಂಬಿರುವ ಮರಳನ್ನು ತೆರವುಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂಬುದಾಗಿ ಸಾರ್ವಜನಿಕರ ಬೇಡಿಕೆಯಾಗಿದೆ. ಇನ್ನಷ್ಟು ಅಪಾಯ ಸಂಭವಿಸುವ ಮುನ್ನ ಸಮಸ್ಯೆಗೆ ಪರಿಹಾರ ಕಾಣಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.