33 ಲಕ್ಷ ರೂ. ವೆಚ್ಚದ ಇಂಟರ್‌ಲಾಕ್ ರಸ್ತೆ ಕಳಪೆ!
Team Udayavani, Jul 20, 2017, 5:20 AM IST
ಕುಂಬಳೆ: ಕುಂಬಳೆ ಗ್ರಾಮ ಪಂಚಾಯತ್‌ನ ಸರಕಾರಿ ಸಿ.ಎಚ್.ಸಿ. ಆಸ್ಪತ್ರೆ -ಕುಂಟಂಗರಡ್ಕ ರಸ್ತೆಗೆ ರೂ. 33 ಲಕ್ಷ ಹಾರ್ಬರ್ ನಿಧಿಯಲ್ಲಿ ಇಂಟರ್‌ಲಾಕ್ ಅಳವಡಿಸಲಾಗಿತ್ತು. ಆದರೆ ತಿಂಗಳು ಕಳೆಯುವಷ್ಟರಲ್ಲಿ ರಸ್ತೆಯ ಇಂಟರ್‌ಲಾಕ್‌ಗಳು ಎದ್ದು ರಸ್ತೆ ಹದಗೆಟ್ಟಿದೆ.
ಮರು ಅಳವಡಿಕೆಗೆ ಗುತ್ತಿಗೆದಾರರಿಂದ ಸಿದ್ಧತೆ
ಕಳಪೆ ಕಾಮಗಾರಿಯಿಂದ ಈ ರೀತಿಯಾಗಿರುವುದಾಗಿ ಕುಂಬಳೆ ಪಂಚಾಯತ್ ಡಿ.ವೈ.ಎಫ್.ಐ. ಸಮಿತಿ ನಾಯ ಕರು ವಿಜಿಲೆನ್ಸ್ ಅಧಿಕಾರಿಗಳಗೆ ದೂರು ಸಲ್ಲಿಸಿದರು. ದೂರಿಗೆ ಬೆದರಿದ ಗುತ್ತಿಗೆದಾರರು ಇದೀಗ ಜಲ್ಲಿಹುಡಿ ತಂದು ಎದ್ದು ಹೋಗಿದ್ದ ಇಂಟರ್‌ಲಾಕ್‌ಗಳನ್ನು ಮರು ಅಳವಡಿಸಲು ಸಿದ್ಧರಾಗಿದ್ದಾರೆ.
ಭಾರೀ ಅವ್ಯವಹಾರ ಶಂಕೆ
ಲಕ್ಷಗಟ್ಟಲೆ ನಿಧಿ ಬಳಸಿದ ಕಾಮಗಾರಿಯನ್ನು ಕಳಪೆಯಾಗದಂತೆ ಸಂಬಂಧಪಟ್ಟವರು ಗಮನ ಹರಿಸದಿರುವಾಗ ಇದರ ಹಿಂದೆ ಭಾರೀ ಲಂಚದ ಅವ್ಯವಹಾರ ಇರುವುದಾಗಿ ರಸ್ತೆ ಫಲಾನುಭವಿಗಳು ಆರೋಪಿಸುತ್ತಿದ್ದಾರೆ. ಇದರಲ್ಲಿ ಯಾವುದೇ ಪಕ್ಷ, ಜಾತಿ, ಮತ ಭೇದವೆನ್ನದೆ ಗುತ್ತಿಗೆದಾರರೊಂದಿಗೆ ಕೈ ಜೋಡಿಸಿ ತಮ್ಮ ಜೇಬು ತುಂಬಿಸುವ ಕಾರ್ಯದಲ್ಲಿ ಒಂದಾಗುತ್ತಾರೆಂಬುದಾಗಿ ಕೆಟ್ಟು ಹೋಗಿದ್ದ ರಸ್ತೆಯಲ್ಲಿ ಕಷ್ಟಪಟ್ಟು ಸಂಚರಿಸಿ ಕಹಿ ಅನುಭವ ಪಡೆದವರದು. ಆದುದರಿಂದ ಕಳಪೆ ಕಾಮಗಾರಿ ನಡೆಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕೆಂಬುದಾಗಿ ರಸ್ತೆ ಬಳಕೆದಾರರು ಉನ್ನತ ಅಧಿಕಾರಿಯವರನ್ನು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.