ಬೀದಿನಾಯಿ ಕಡಿತ 5 ಲಕ್ಷ ರೂ. ಪರಿಹಾರ
Team Udayavani, Dec 7, 2017, 8:45 AM IST
ಕಾಸರಗೋಡು: ರಾಜ್ಯದ ವಿವಿಧೆಡೆಗಳಲ್ಲಿ ಬೀದಿನಾಯಿ ಕಡಿತಕ್ಕೊಳಗಾಗಿ ಗಾಯಗೊಂಡ ವರ ಪೈಕಿ 104 ಮಂದಿಗೆ 60.11 ಲಕ್ಷ ರೂ. ನಷ್ಟ ಪರಿಹಾರ ಲಭಿಸಲಿದೆ. ಈ ಕುರಿತು ಕೇರಳ ಸರಕಾರವು ಅಧಿಸೂಚನೆ ಹೊರಡಿಸಿದೆ.
ರಾಜ್ಯದಲ್ಲಿ ಬೀದಿನಾಯಿ ಕಡಿತಕ್ಕೊಳಗಾದವರಿಗೆ ನಷ್ಟ ಪರಿಹಾರ ನಿರ್ಧರಿಸಲು ಸುಪ್ರೀಂ ಕೋರ್ಟ್‌ನ ಆದೇಶದಂತೆ ನೇಮಿಸಲಾದ ಜಸ್ಟೀಸ್ ಸಿರಿಜಗನ್ ಸಮಿತಿಯ ಶಿಫಾರಸು ಮತ್ತು ಸುಪ್ರೀಂ ಕೋರ್ಟ್‌ನ ತೀರ್ಪಿನ ಪ್ರಕಾರ ನಷ್ಟಪರಿಹಾರ ಮೊತ್ತ ನಿಶ್ಚಯಿಸಲಾಗಿದೆ.
ಬೀದಿನಾಯಿ ಕಡಿತಕ್ಕೊಳಗಾದ ವ್ಯಕ್ತಿಗೆ ಗರಿಷ್ಠ ಐದು ಲಕ್ಷ ರೂ. ನೀಡುವಂತೆ ನ್ಯಾಯಾಲಯವು ತೀರ್ಪಿನಲ್ಲಿ ತಿಳಿಸಿದೆ. ಅದರಂತೆ ಒಂದು ಲಕ್ಷ ರೂ. ನಿಂದ ಐದು ಲಕ್ಷ ರೂ. ವರೆಗೆ ನಷ್ಟಪರಿಹಾರ ದೊರಕುವವರ ಪಟ್ಟಿಯಲ್ಲಿ 14 ಮಂದಿಯ ಹೆಸರು ಒಳಗೊಂಡಿದೆ. ಕನಿಷ್ಠ ಎಂದರೆ 8,500 ರೂ. ಪರಿಹಾರ ನಿಗದಿಗೊಳಿಸಲಾಗಿದೆ.
ಇತಿಹಾಸದಲ್ಲಿ ಮೊದಲು
ರಾಜ್ಯದ ಇತಿಹಾಸದಲ್ಲಿಯೇ ನಾಯಿ ಕಡಿತಕ್ಕೆ 5 ಲ.ರೂ. ಪರಿಹಾರ ಲಭಿಸಿರುವುದು ಇದೇ ಮೊದಲು. ಈ ನಡುವೆ ಇಬ್ಬರು ಸಾಕು ನಾಯಿ ಕಚ್ಚಿದ ಪ್ರಕರಣವನ್ನು ಕೂಡ ಬೀದಿ ನಾಯಿ ಕಡಿತ ಎಂದು ಸುಳ್ಳು ಹೇಳಿ ಪರಿಹಾರ ಪಡೆದುಕೊಳ್ಳಲು ಪ್ರಯತ್ನಿಸಿದ್ದರು. ಅವರ ಅರ್ಜಿಯನ್ನು ತಿರಸ್ಕರಿಸಲಾಗಿದೆ. ಇನ್ನಿಬ್ಬರು ಸರಿಯಾದ ಮಾಹಿತಿ, ಸಾಕ್ಷ é ನೀಡಲು ವಿಫಲರಾಗಿದ್ದರಿಂದ ಅವರ ಅರ್ಜಿಯನ್ನೂ ವಜಾಗೊಳಿಸಲಾಗಿದೆ.
ಸ್ಥಳೀಯಾಡಳಿತ ಸಂಸ್ಥೆಗಳ ಜವಾಬ್ದಾರಿ
ಬೀದಿನಾಯಿಗಳನ್ನು ನಿಯಂತ್ರಿಸುವುದು ಆಯಾ ಪ್ರದೇಶದಲ್ಲಿನ ಸ್ಥಳೀಯಾಡಳಿತ ಸಂಸ್ಥೆ ಗಳ ಜವಾಬ್ದಾರಿಯಾಗಿದೆ. ಆದುದರಿಂದ ಪರಿಹಾರವನ್ನು ಕೂಡ ಅವರದ್ದೇ ಆದ ನಿಧಿಯಿಂದ ನೀಡಬೇಕು ಎಂದು ಆದೇಶಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Bengaluru: ಭುವನೇಶ್ವರಿ ಪ್ರತಿಮೆಗೆ ಹಾನಿ: ಆಕ್ರೋಶ
Bengaluru: ಕದ್ದ ಮೊಬೈಲ್ ಕೊರಿಯರ್ ಮೂಲಕ ಕೇರಳಕ್ಕೆ ರವಾನೆ!
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.