Kuwait ಬ್ಯಾಂಕ್‌ನಿಂದ 700 ಕೋಟಿ ರೂ. ಲಪಟಾವಣೆ: 1425 ಕೇರಳಿಯರಿಗಾಗಿ ಶೋಧ
Team Udayavani, Dec 11, 2024, 7:45 AM IST
ಕಾಸರಗೋಡು: ಕುವೈಟ್ ಬ್ಯಾಂಕ್‌ನಿಂದ ಸಾಲ ರೂಪದಲ್ಲಿ ಕೇರಳದ 1425 ಮಂದಿ 700 ಕೋಟಿ ರೂ. ಪಡೆದು ಮರು ಪಾವತಿಸದೆ ವಂಚನೆ ನಡೆಸಿ ಆ ದೇಶವನ್ನು ತೊರೆದ ಬಗ್ಗೆ ವರದಿಯಾಗಿದೆ.
ವಂಚನೆ ನಡೆಸಿದವರ ಪತ್ತೆಗಾಗಿ ಕೇರಳದಲ್ಲಿ ಶೋಧ ಆರಂಭಿಸಲಾಗಿದೆ. ಗಲ್ಫ್ ಬ್ಯಾಂಕ್ ಕುವೈಟ್ ಶೇರ್ ಹೋಲ್ಡಿಂಗ್ ಕಂಪೆನಿ ಪಬ್ಲಿಕ್ ಎಂಬ ಬ್ಯಾಂಕ್‌ನಿಂದ ಸಾಲ ಪಡೆದು ವಂಚಿಸಲಾಗಿದೆ.
ಈ ಬಗ್ಗೆ ಪ್ರಸ್ತುತ ಬ್ಯಾಂಕ್ ಅಧಿಕಾರಿಗಳು ಕೇರಳಕ್ಕೆ ಬಂದು ವಂಚನೆ ಬಗ್ಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ದೂರು ಸಲ್ಲಿಸಿದ್ದಾರೆ. ದೂರಿನ ತನಿಖೆಯನ್ನು ಕ್ರೈಂಬ್ರಾಂಚ್ ವಿಭಾಗಕ್ಕೆ ರಾಜ್ಯ ಪೊಲೀಸ್‌ಮಹಾನಿರ್ದೇಶಕರು ಹಸ್ತಾಂತರಿಸಿದ್ದಾರೆ.
2019 ರಿಂದ 2022 ರ ಅವಧಿಯಲ್ಲಿ ಈ ಬ್ಯಾಂಕ್‌ನಿಂದ 50 ಲಕ್ಷ ರೂ. ನಿಂದ 3 ಕೋಟಿ ರೂ. ತನಕ ಸಾಲ ರೂಪದಲ್ಲಿ ಪಡೆದು ಸಕಾಲದಲ್ಲಿ ಮರು ಪಾವತಿಸದೆ ವಂಚಿಸಿದ್ದಾಗಿ ತನಿಖೆಯಿಂದ ಪತ್ತೆಹಚ್ಚಲಾಗಿದೆ. ವಂಚನೆ ನಡೆಸಿ ಕೆಲವರು ಕೇರಳಕ್ಕೆ ವಾಪಸಾಗಿದ್ದಾರೆ. ಇನ್ನು ಕೆಲವರು ಯುರೋಪ್, ಅಮೆರಿಕಾ, ಕೆನಡಾ, ಆಸ್ಟ್ರೇಲಿಯ ಮತ್ತು ನ್ಯೂಜಿಲ್ಯಾಂಡ್‌ಗೆ ತೆರಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP Politics: ಬಿ.ಎಸ್.ಯಡಿಯೂರಪ್ಪ ಅಖಾಡಕ್ಕೆ!; ಒಳಜಗಳ ಬಿಟ್ಟು ಒಗ್ಗಟ್ಟಿನ ಹೆಜ್ಜೆ ಹಾಕೋಣ
Dinner Politics: ಸಿದ್ದರಾಮಯ್ಯ ಬಣದಿಂದ ಡಿ.ಕೆ.ಶಿವಕುಮಾರ್‌ರತ್ತ “ಗುರಿ’!
Protest Happy Ending: “ಆಶಾ’ ಕಾರ್ಯಕರ್ತೆಯರ ಗೌರವಧನ 2 ಸಾವಿರ ರೂ. ಏರಿಕೆ
Daily Horoscope: ಬಹುದಿನದ ಅಪೇಕ್ಷೆಯೊಂದು ಕೈಗೂಡಿದ ಆನಂದ, ಶುಭ ಸಮಾಚಾರ
New Method: ಕಾಣೆಯಾದ ಹೋರಿ ಹುಡುಕಲು “ಜಿಪಿಎಸ್’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.