Kasaragod: ವಂಚನೆ ಪ್ರಕರಣ… ಸಚಿತಾ ರೈ ಕಣ್ಣೂರು ಸೆಂಟ್ರಲ್ ಜೈಲಿಗೆ
Team Udayavani, Oct 25, 2024, 6:35 PM IST
ಕಾಸರಗೋಡು: ಕೇಂದ್ರ-ರಾಜ್ಯ ಸರಕಾರಿ ಸಂಸ್ಥೆಗಳಲ್ಲಿ ಉದ್ಯೋಗ ದೊರಕಿಸಿಕೊಡುವುದಾಗಿ ಭರವಸೆ ನೀಡಿ ಲಕ್ಷಾಂತರ ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಆರೋಪಿ ಡಿವೈಎಫ್‌ಐ ಮಾಜಿ ನೇತಾರೆ, ಅಧ್ಯಾಪಿಕೆ ಶೇಣಿ ಬಲ್ತಕಲ್ಲುವಿನ ಸಚಿತಾ ರೈ(27) ಯನ್ನು ಕಣ್ಣೂರು ಸೆಂಟ್ರಲ್ ಜೈಲಿಗೆ ಕಳುಹಿಸಲಾಗಿದೆ. ಈಕೆಯ ಜತೆಗೆ ಕೆಲವೇ ತಿಂಗಳು ಪ್ರಾಯದ ಮಗು ಕೂಡಾ ಇದೆ.
ಬಂಧಿತ ಆರೋಪಿಯನ್ನು ಕಾಸರಗೋಡು ಪ್ರಥಮ ದರ್ಜೆ ಮೆಜಿಸ್ಟ್ರೇಟ್ (ಪ್ರಥಮ) ವಸತಿಯಲ್ಲಿ ಹಾಜರುಪಡಿಸಿದಾಗ ರಿಮಾಂಡ್ ವಿಧಿಸಿ, ಕಣ್ಣೂರು ಸೆಂಟ್ರಲ್ ಜೈಲಿಗೆ ಕಳುಹಿಸಲು ಮೆಜಿಸ್ಟ್ರೇಟ್ ಆದೇಶಿಸಿದ್ದರು. ಅದರಂತೆ ಕಣ್ಣೂರು ಸೆಂಟ್ರಲ್ ಜೈಲಿಗೆ ಕಳುಹಿಸಲಾಗಿದೆ.
ಹಲವರಿಂದ ಪಡೆದುಕೊಂಡ ಒಟ್ಟು 78 ಲಕ್ಷ ರೂ. ಕುಂಜಾರು ನಿವಾಸಿ ಚಂದ್ರಶೇಖರನಿಗೆ ಹಸ್ತಾಂತರಿಸಿದ್ದಾಗಿ ಸಚಿತಾ ರೈ ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ. ಹಣ ನೀಡಿರುವುದರ ಪುರಾವೆಯಾಗಿ 78 ಲಕ್ಷ ರೂ.ಗಳ ಚೆಕ್ ನೀಡಿರುವುದಾಗಿಯೂ ಅದು ತನ್ನ ಕೈವಶವಿದೆ ಎಂದು ಸಚಿತಾ ರೈ ಹೇಳಿದ್ದಾಳೆ. ಅ.24 ರಂದು ರಾತ್ರಿ 11 ಗಂಟೆಗೆ ಮೆಜಿಸ್ಟ್ರೇಟ್ ವಸತಿಯಲ್ಲಿ ಹಾಜರುಪಡಿಸಿದ್ದು, ತಡ ರಾತ್ರಿಯಾದುದರಿಂದ ಕಾಂಞಂಗಾಡ್‌ನಲ್ಲಿರುವ ಜಿಲ್ಲಾ ಜೈಲಿಗೆ ಕಳುಹಿಸಲಾಗಿತ್ತು. ಅ.25 ರಂದು ಬೆಳಗ್ಗೆ ಕಣ್ಣೂರು ಸೆಂಟ್ರಲ್ ಜೈಲಿಗೆ ಕೊಂಡೊಯ್ಯಲಾಯಿತು. ಈಕೆಯ ವಿರುದ್ಧ ವಿವಿಧ ಠಾಣೆಗಳಲ್ಲಾಗಿ ಡಜನ್‌ನಷ್ಟು ಕೇಸುಗಳು ದಾಖಲಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Karnataka By Poll Results: ಜೆಡಿಎಸ್ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್
Bengaluru: ಹನಿಟ್ರ್ಯಾಪ್: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.