ಸುರಕ್ಷಾ ದಂತ ಚಿಕಿತ್ಸಾಲಯ: ಎರಡು ದಶಕದ ಸೇವಾ ಸಾರ್ಥಕ್ಯ

Team Udayavani, Jul 2, 2017, 3:45 AM IST

clinic.jpg

ಮಂಜೇಶ್ವರ: ಕಲಿಕೆ, ವೃತ್ತಿ, ಹಣ, ಸಂಪತ್ತು ಇವೆಲ್ಲ ಇಂದಿನ ಜಗತ್ತಿನ ವ್ಯಾಪಾರೀಕರಣಗೊಂಡ ಮುಖಗಳು. ಅದೇ ಬದುಕಾದರೆ…? ಬದುಕು ಬರಡಾಗುತ್ತ, ವ್ಯಾವ ಹಾರಿಕವಾಗಿ ಕೇವಲ ಲೌಕಿಕ ತೃಪ್ತಿಯೊಂದಿಗೆ ಮುಗಿದು ಹೋಗುವ ಪಯಣವಾಗುತ್ತದೆ. ಅದಲ್ಲ… ಅಷ್ಟೇ ಅಲ್ಲ… ಬದುಕಿನ ಮುಖಗಳು. ಅದಕ್ಕೆ ವ್ಯಾಪ್ತಿ, ಆಳ, ಎತ್ತರ ಇದೆ ಎನ್ನುವುದಾದರೆ ಅದನ್ನು ಮಾನಸಿಕ ಬದುಕು ಎನ್ನ ಬಹುದು. ಸಾಕಷ್ಟು ಹಣ, ವೈಭವದ ಜೀವನ ನಡೆಸುವ ಎಲ್ಲ ಅವಕಾಶಗಳಿದ್ದರೂ ಕಲಿಕೆಯ ಜೀವನ ಮೌಲ್ಯಗಳನ್ನು ವೃತ್ತಿ ಮತ್ತು ಖಾಸಗೀ ಜೀವನದಲ್ಲಿ ಅಳವಡಿಸಿಕೊಂಡು ಸಾಮಾಜಿಕ ಬದ್ಧತೆಯಿಂದ ದುಡಿಯುವ, ವರ್ತಿಸುವ ಕೆಲವರನ್ನಾದರೂ ಪ್ರತಿ ಊರುಗಳಲ್ಲಿ ಕಾಣಬಹುದು. ಅಂತಹವರ ಸಾಲಿನಲ್ಲಿ ಗುರುತಿಸಬಹುದಾದ ಹೆಸರುಗಳಲ್ಲೊಂದು ಸುರûಾ ದಂತ ಚಿಕಿತ್ಸಾಲಯದ  ಡಾ| ಮುರಲೀ ಮೋಹನ ಚೂಂತಾರು ಮತ್ತು ಡಾ| ರಾಜಶ್ರೀ ಮೋಹನ್‌ ದಂಪತಿ.

ಮಂಜೇಶ್ವರದ ಹೊಸಂಗಡಿಯಲ್ಲಿ ಡಾ| ಮುರಲೀ ಮೋಹನ ಚೂಂತಾರು ಅವರು ಆರಂಭಿಸಿದ ದಂತ ಚಿಕಿತ್ಸಾಲಯವೇ “ಸುರûಾ’. ಅವರಿಗೆ ಹೆಗಲೆಣೆಯಾಗಿ ಸಾಥ್‌ ನೀಡಿದವರು ಪತ್ನಿ ಡಾ| ರಾಜಶ್ರೀ ಮೋಹನ್‌ಅವರು. ಕೇವಲ ಹಣ ಗಳಿಕೆಯ ದೃಷ್ಟಿಕೋನವಿರುತ್ತಿದ್ದರೆ ಊರಿಗೆ, ವೃತ್ತಿಗೆ ಜತೆಗೆ ತಮ್ಮ ವ್ಯಕ್ತಿತ್ವಕ್ಕೆ ಹೊಸ ರೂಪ ನೀಡಲು ಸಾಧ್ಯವಿರುತ್ತಿರಲಿಲ್ಲ. ಸೇವೆಯ ವಿಶಾಲಾರ್ಥದಲ್ಲಿ ಡಾ| ಮುರಲೀ ಮೋಹನರವರು ತನ್ನ ದಂತ ಚಿಕಿತ್ಸಾಲಯಕ್ಕೆ ಸಾಂಸ್ಥಿಕ ರೂಪ ನೀಡಿ ಹೊಸಂಗಡಿಯ ಅಭಿವೃದ್ಧಿಗೆ ತನ್ನದೇ ರೀತಿಯಲ್ಲಿ ಹೊಸ ಬೆಳಕು ನೀಡಿದವರು. ದಂತ ಚಿಕಿತ್ಸೆ ಗೆಂದು ಬರುವ ಜನರಲ್ಲಿ ಸುರಕ್ಷತೆಯ ಭಾವ ಭದ್ರವಾಗಿ ಬೇರೂರುವಂತೆ ಮಾಡಿ ಸುರûಾ ಎಂಬ ಹೆಸರನ್ನು ಅನ್ವರ್ಥವಾಗಿಸಿದ್ದಾರೆ.

1997 ಜುಲೈ 3ರಂದು 1 ದಂತಕುರ್ಚಿ ಮತ್ತು ದಂತ ಕ್ಷಕಿರಣ (x-ray)  ವ್ಯವಸ್ಥೆಯೊಂದಿಗೆ ಸಚಿವರಾಗಿದ್ದ ಬಿ. ರಮಾನಾಥ ರೈ ಅವರಿಂದ ಉದ್ಘಾಟಿಸಲ್ಪಟ್ಟ ಸುರûಾ ದಂತ ಚಿಕಿತ್ಸಾಲಯವು ಇಂದು ವಿಸ್ತೃತವಾಗಿ, ಅತ್ಯಾಧುನಿಕ ವ್ಯವಸ್ಥೆ, ತಂತ್ರಜ್ಞಾನಗಳೊಂದಿಗೆ ಬೆಳೆದಿದೆ. 

ತಾಯಿಯವರ ನೆನಪಿನಲ್ಲಿ “ಚೂಂತಾರು ಸರೋಜಿನಿ ಭಟ್‌ ಪ್ರತಿಷ್ಠಾನ’ವನ್ನು ಸ್ಥಾಪಿಸಿಕೊಂಡು ಪ್ರತಿಷ್ಠಾನದ ಹೆಸರಿನಲ್ಲಿ ದ.ಕ. ಜಿಲ್ಲೆಯಾದ್ಯಂತ ಉಚಿತ ದಂತ ಚಿಕಿತ್ಸೆ ಮತ್ತು ರಕ್ತದಾನದ ನೂರಾರು ಶಿಬಿರಗಳನ್ನು ನಡೆಸಿಕೊಟ್ಟ ಸೇವಾ ದಾಖಲೆ ಸುರûಾ ದಂತ ಚಿಕಿತ್ಸಾಲಯದ್ದು. 

ದಂತ ವೈದ್ಯಕೀಯ ವೃತ್ತಿಯ ಜತೆಗೆ ಸಾವಿರಾರು ವೈದ್ಯಕೀಯ ಜಾಗೃತಿ ಲೇಖನಗಳನ್ನು ಬರೆದು ಜನರಲ್ಲಿ ರೋಗ ಚಿಕಿತ್ಸೆ ಗಿಂತ ರೋಗ ತಡೆಗಟ್ಟುವುದೇ ವೈದ್ಯರ ವೃತ್ತಿ ಧರ್ಮ ಎಂದು ಪ್ರಾಮಾಣಿಕವಾಗಿ ನಂಬಿಕೊಂಡು ಜನ ರಲ್ಲಿ  ಹಲವಾರು ಸಾಂಕ್ರಾಮಿಕ ರೋಗಗಳ ಬಗ್ಗೆ ಜಾಗೃತಿ ಮತ್ತು ಅರಿವು ಮೂಡಿಸುವ ಕಾರ್ಯವನ್ನು ಸದ್ದಿಲ್ಲದೆ ಮಾಡುತ್ತಿದ್ದಾರೆ. 

ಸಾಹಿತಿಯೂ ಹೌದು
“ಸುರûಾ ದಂತ ಆರೋಗ್ಯ ಮಾರ್ಗದರ್ಶಿ’ ಎಂಬ ದಂತ ರೋಗಗಳಿಗೆ ಸಂಬಂಧಿಸಿದ ಪುಸ್ತಕವನ್ನು ಮತ್ತು “ಕಚಗುಳಿ’ ದಂತ ಹನಿಗವನ ಪುಸ್ತಕವನ್ನು ಪ್ರಕಟಿಸಿರುತ್ತಾರೆ. 

ರಕ್ತದಾನದ ಬಗ್ಗೆಯೂ  “ರಕ್ತದಾನ- ಜೀವದಾನ’ ಎಂಬ ಪುಸ್ತಕವನ್ನು ಮುದ್ರಿಸಿ ಈ ವರೆಗೆ ಹದಿನೈದು ಸಾವಿರ ಪ್ರತಿಗಳನ್ನು ಉಚಿತವಾಗಿ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಹಂಚಿ ರಕ್ತದಾನದ ಬಗ್ಗೆ ಬೃಹತ್‌ ಜಾಗೃತಿ ಮೂಡುವಂತೆ ಸಮಾಜಮುಖೀ ಸೇವೆಯನ್ನು ಮಾಡಿರುತ್ತಾರೆ. ಸಂಜೀವಿನಿ ಆರೋಗ್ಯ ಮಾರ್ಗದರ್ಶಿ ಎಂಬ ವೈದ್ಯಕೀಯ ಜಾಗೃತಿ ಲೇಖನಗಳ ಪುಸ್ತಕ 2016ರಲ್ಲಿ ಬಿಡುಗಡೆಗೊಂಡು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಇತ್ತೀಚಿಗೆ “ಚಿತ್ರಾನ್ನ’ ಎಂಬ 32 ನೈಜ ದಂತಕತೆಗಳ ಸಂಗ್ರಹ ಡಾ| ಮುರಲೀಮೋಹನ್‌ ಚೂಂತಾರು ಇವರ ಸಂಪಾದಕತ್ವದಲ್ಲಿ 2016ರಲ್ಲಿ ಬಿಡುಗಡೆಗೊಂಡು ಓದುಗರಿಂದ ಬಹಳ ಪ್ರಶಂಸೆಗೊಳಗಾಗಿದೆ. 

“ಸಂಜೀವಿನಿ’ ಭಾಗ ಎರಡು ಡಾ| ಚೂಂತಾರು ಇವರ 6ನೇ ಕೃತಿಯಾಗಿದ್ದು ಇದೇ ಜುಲೈ 3ರಂದು ಸುರಕ್ಷ ದಂತ ಚಿಕಿತ್ಸಾಲಯದ ವಿಂಶತಿ ಸಂಭ್ರಮದೊಂದಿಗೆ ಲೋಕಾ ರ್ಪಣೆಗೊಳ್ಳಲಿದೆ. ಎ.ಬಿ. ಶೆಟ್ಟಿ ದಂತಕಾಲೇಜಿನಲ್ಲಿ 16 ವರ್ಷಗಳ ಕಾಲ ಹಿರಿಯ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿರುತ್ತಾರೆ. 

ದಕ್ಷಿಣ ಕನ್ನಡ ಜಿಲ್ಲಾ ರೆಡ್‌ಕ್ರಾಸ್‌ ಸಂಘಟನೆಯ ಸಭಾ ಪತಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲಾ ಗ್ರಹರಕ್ಷಕ ದಳದ ಸಮಾಧೇಷ್ಠರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 

ವೃತ್ತಿ, ಪ್ರವೃತ್ತಿಯ ಜತೆಗೆ ದಂತ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪೂರೈಸಿಕೊಂಡಿರುವ ಡಾ| ಮುರಲೀ ಮೋಹನರು ದಂತ ವಿಜ್ಞಾನಕ್ಕೆ ಸಂಬಂಧಿಸಿದಂತೆ ದೇಶ- ವಿದೇಶಗಳಲ್ಲಿ ಜರಗಿದ ಹಲವು ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ವಿಚಾರ ಮಂಡಿಸಿ ದಂತ ವೈದ್ಯಕೀಯ ಲೋಕದ ಸಂಗತಿಗಳಲ್ಲಿ ತನ್ನ ಪ್ರೌಢಿಮೆಯನ್ನೂ ಮೆರೆ ದಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. 

ಟಾಪ್ ನ್ಯೂಸ್

Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ

Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

2-vitla

Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್

Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್‌ ಗೆದ್ದ ವಿಜ್ಞಾನಿ!

Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್‌ ಗೆದ್ದ ವಿಜ್ಞಾನಿ!

Vivek Ramaswamy: ವಿವೇಕ್‌ಗೆ ಟ್ರಂಪ್‌ ಸರಕಾರದ ಕಾರ್ಯಕ್ಷಮತೆ ಇಲಾಖೆ ಹೊಣೆ

Vivek Ramaswamy: ವಿವೇಕ್‌ಗೆ ಟ್ರಂಪ್‌ ಸರಕಾರದ ಕಾರ್ಯಕ್ಷಮತೆ ಇಲಾಖೆ ಹೊಣೆ

ಖಾತೆ ಇರದ ಆಸ್ತಿಗಳಿಗೆ ಇನ್ನು ಬಿಬಿಎಂಪಿ ಮಾದರಿ ಇ-ಖಾತಾ

E-Khata: ಖಾತೆ ಇರದ ಆಸ್ತಿಗಳಿಗೆ ಇನ್ನು ಬಿಬಿಎಂಪಿ ಮಾದರಿ ಇ-ಖಾತಾ

1-horoscope

Daily Horoscope: ಉದ್ಯೋಗದಲ್ಲಿ ಯಶಸ್ಸಿನ ಭರವಸೆ, ಆಪ್ತರ ನೈತಿಕ ಬೆಂಬಲದಿಂದ ಧೈರ್ಯ ವರ್ಧನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

Kasaragod ಅಪರಾಧ ಸುದ್ದಿಗಳು

Untitled-5

Kasaragod: ಮಾನ್ಯ ಅಯ್ಯಪ್ಪ ಭಜನ ಮಂದಿರದಿಂದ ಕಳವು; ಓರ್ವನ ಬಂಧನ

Arrest

Kasaragodu: ಆಸ್ತಿ ವಿವಾದ: ಅಣ್ಣನ ಕೊಲೆ, ಇಬ್ಬರಿಗೆ ಇರಿತ; ತಮ್ಮನ ಸೆರೆ

ACT

Manjeshwar: ಬಂಧಿತರ ಪೈಕಿ ಓರ್ವ 15 ಪ್ರಕರಣಗಳಲ್ಲಿ ಆರೋಪಿ

POlice

Kumbla: ಪ್ರಾಣ ಲೆಕ್ಕಿಸದೆ ಹೊಳೆಗೆ ಹಾರಿ ಆರೋಪಿಯನ್ನು ಬಂಧಿಸಿದ ಪೊಲೀಸರು

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ

Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

2-vitla

Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್

Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್‌ ಗೆದ್ದ ವಿಜ್ಞಾನಿ!

Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್‌ ಗೆದ್ದ ವಿಜ್ಞಾನಿ!

Vivek Ramaswamy: ವಿವೇಕ್‌ಗೆ ಟ್ರಂಪ್‌ ಸರಕಾರದ ಕಾರ್ಯಕ್ಷಮತೆ ಇಲಾಖೆ ಹೊಣೆ

Vivek Ramaswamy: ವಿವೇಕ್‌ಗೆ ಟ್ರಂಪ್‌ ಸರಕಾರದ ಕಾರ್ಯಕ್ಷಮತೆ ಇಲಾಖೆ ಹೊಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.