ಸತ್ಯಸಾಯಿಬಾಬಾ ಆರಾಧನ ಮಹೋತ್ಸವ
Team Udayavani, Apr 26, 2019, 6:30 AM IST
ಕುಂಬಳೆ: ಭಗವಾನ್ ಶ್ರೀ ಸತ್ಯಸಾಯಿಬಾಬಾರವರ ಎಂಟನೆಯ ವರ್ಷದ ಆರಾಧನಾ ಮಹೋತ್ಸವವು ಬಾಯಾರು ಪ್ರಶಾಂತಿ ವಿದ್ಯಾಕೇಂದ್ರದಲ್ಲಿ ಆಚರಿಸಲಾಯಿತು.
ಆ ಪ್ರಯುಕ್ತ ಹಮ್ಮಿಕೊಳ್ಳಲಾದ ಮಹಾನಾರಾಯಣ ಸೇವೆಯಲ್ಲಿ ಸುಮಾರು 500ಕ್ಕಿಂತಲೂ ಅಧಿಕ ಆಹಾÃ ಪೊಟ್ಟಣಗಳನ್ನು ಬಾಯಾರು ನಗರದಲ್ಲಿ ಸಾರ್ವಜನಿಕರಿಗೆ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಟ್ರಸ್ಟಿನ ಕೋಶಾಧಿಕಾರಿ ಮಾಣಿಪ್ಪಾಡಿ ನಾರಾಯಣ ಭಟ್, ಮ್ಯಾನೇಜಿಂಗ್ ಟ್ರಸ್ಟಿ ಹಿರಣ್ಯ ಮಹಾಲಿಂಗ ಭಟ್, ಸಮಿತಿ ಸಂಚಾಲಕ ಕಟ್ಟದಮನೆ ಗೋಪಾಲಕೃಷ್ಣ ಭಟ್,ಪ್ರಾಂಶುಪಾಲ ಅನೂಪ್.ಕೆ , ನಿಲಯಪಾಲಕ ಕೃಷ್ಣ ನಾಯಕ್ ಹಾಗೂ ಸಮಿತಿ ಸದಸ್ಯರು ಮತ್ತು ಅಧ್ಯಾಪಕ ವೃಂದ ಹಾಗೂ ಸಿಬ್ಬಂದಿವರ್ಗ ಉಪಸ್ಥಿತರಿದ್ದರು.
ಅನಂತರ ಸತ್ಯಸಾಯಿಬಾಬಾರವರ ಭಜನೆ ಹಾಗೂ ಅರ್ಹಫಲಾನುಭವಿಗಳಿಗೆ ಅಮƒತಕಲಶಗಳನ್ನು ವಿತರಿಸಲಾಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.