ಶಾಲಾ ಕಲೋತ್ಸವ: ಪ್ರಶಸ್ತಿಗಾಗಿ ಜಿದ್ದಾಜಿದ್ದಿನ ಸ್ಪರ್ಧೆ
Team Udayavani, Dec 1, 2019, 5:29 AM IST
ಕಾಸರಗೋಡು: ವಿಶ್ವದಲ್ಲೇ ಬೃಹತ್ ಕಲೋತ್ಸವ ಎಂದೇ ಖ್ಯಾತಿಯನ್ನು ಪಡೆದಿರುವ ಕೇರಳ ರಾಜ್ಯ ಶಾಲಾ ಕಲೋತ್ಸವದ ಪ್ರಶಸ್ತಿಗಾಗಿ ಜಿಲ್ಲೆಗಳ ಮಧ್ಯೆ ಜಿದ್ದಾಜಿದ್ದಿನ ಸ್ಪರ್ಧೆ ನಡೆಯುತ್ತಿದೆ.
ಶನಿವಾರ ಮಧ್ಯಾಹ್ನದವರೆಗಿನ ಅಂಕಗ ಳಂತೆ ಕಲ್ಲಿಕೋಟೆ ಜಿಲ್ಲೆ ಮುನ್ನಡೆ ಯಲ್ಲಿದೆ. ಕಣ್ಣೂರು ಹಾಗು ಪಾಲಾ^ಟ್ ಜಿಲ್ಲೆ ನಿಕಟ ಸ್ಪರ್ಧೆ ಯನ್ನು ನೀಡುತ್ತಿದೆ. ಕಲ್ಲಿಕೋಟೆ ಜಿಲ್ಲೆ 625 ಅಂಕಗಳಿಂದ ಮುನ್ನಡೆಯನ್ನು ಕಾಯ್ದು ಕೊಂಡಿದ್ದರೆ, ಕಣ್ಣೂರು-617, ಪಾಲಾ^ಟ್ – 614 ಅಂಕಗಳಿಂದ ತೀವ್ರ ಸ್ಪರ್ಧೆ ನೀಡುತ್ತಿದೆ.
ಇತರ ಜಿಲ್ಲೆಗಳ ಅಂಕ ಇಂತಿದೆ. ತೃಶ್ಶೂರು – 606, ಮಲಪ್ಪುರಂ-591, ಎರ್ನಾಕುಲಂ- 582, ತಿರುವನಂತಪುರ- 580, ಕೋಟ್ಟ ಯಂ -570, ವಯನಾಡು- 568, ಕಾಸರ ಗೋಡು – 568, ಕೊಲ್ಲಂ-563, ಆಲಪ್ಪುಳ -558, ಪತ್ತನಂತಿಟ್ಟ-508, ಇಡುಕ್ಕಿ – 467 ಅಂಕಗಳನ್ನು ಪಡೆದಿದೆ. ಕಾಸರಗೋಡು ಜಿಲ್ಲೆ 568 ಅಂಕಗಳೊಂದಿಗೆ ಹತ್ತನೇ ಸ್ಥಾನ ಪಡೆದಿದೆ. ಕಳೆದ ವರ್ಷ ಸಮಗ್ರ ಪ್ರಶಸ್ತಿಗೆ ಭಾಜನವಾಗಿದ್ದ ಪಾಲಾ^ಟ್ ಜಿಲ್ಲೆ ಮೂರನೇ ಸ್ಥಾನದಲ್ಲಿದೆ.
ಕಾಸರಗೋಡಿನ ಮಣ್ಣಿನ ಕಲೆಗಳಾದ ಯಕ್ಷಗಾನ, ಪೂರಕ್ಕಳಿ, ಎರ್ದುಕ್ಕಳಿ ಮೊದ ಲಾದ ಕಲಾ ಪ್ರಕಾರ ವೀಕ್ಷಿಸಲು ಭಾರಿ ಸಂಖ್ಯೆಯಲ್ಲಿ ಕಲಾಸ್ವಾದಕರು ನೆರೆದಿದ್ದರು. ಕಲೋತ್ಸವದಲ್ಲಿ ಈ ಎರಡು ಕಲೆಗಳು ಸ್ಪರ್ಧೆಗಳ ಯಾದಿಯಲ್ಲಿ ಸೇರ್ಪಡೆ ಗೊಂಡಿದೆ. ಮಂಗಲಂಕ್ಕಳಿ, ಆಲಾಮಿಕ್ಕಳಿ ಮೊದಲಾದವು ಸ್ಪರ್ಧೆಯ ಯಾದಿಯಲ್ಲಿ ಸ್ಥಾನ ಪಡೆಯ ದಿದ್ದರೂ ಪ್ರದರ್ಶನ ರೂಪದಲ್ಲಿ ಮೇಳೈಸಿದೆ. ತುಳುನಾಡಿನ ದೈವಗಳ ಪ್ರದರ್ಶನವೂ ನಡೆದಿದೆ.
1991 ರಿಂದ ಯಕ್ಷಗಾನ
1991 ರಲ್ಲಿ ಯಕ್ಷಗಾನ ಕಲೆಯನ್ನು ಮೊಟ್ಟಮೊದಲಾಗಿ ಶಾಲಾ ಕಲೋತ್ಸವದಲ್ಲಿ ಏರ್ಪಡಿಸಲಾಗಿತ್ತು. ಅಂದು ಕಾಸರಗೋಡಿನಲ್ಲಿ ನಡೆದ ಶಾಲಾ ಕಲೋತ್ಸವದಲ್ಲಿ ಯಕ್ಷಗಾನ ಸೇರ್ಪಡೆ ನಡೆದಿತ್ತು. ಈ ಬಗ್ಗೆ ಶಿಕ್ಷಣ ನಿರ್ದೇಶಕರು 1990 ಡಿಸೆಂಬರ್ 26 ರಂದು ಆದೇಶ ಹೊರಡಿಸಿದ್ದರು. ಅಂದಿನಿಂದ ಇಂದಿನ ವರೆಗೂ ರಾಜ್ಯ ಶಾಲಾ ಕಲೋತ್ಸವಗಳಲ್ಲಿ ಯಕ್ಷಗಾನದಲ್ಲಿ ಕಾಸರಗೋಡು ಜಿಲ್ಲೆಯೇ ಪ್ರಥಮ ಸ್ಥಾನ ಪಡೆದುಕೊಂಡಿದೆ.
ಧೂಳುಮಯ
ವಿವಿಧ ಸ್ಪರ್ಧೆಗಳು ವೇದಿಕೆ ಮೇಲೆ ಪ್ರಸ್ತುತಗೊಳ್ಳುತ್ತಿರುವಾಗ ವೇದಿಕೆಯ ಹೊರಗೆ ಧೂಳಿನ ಸಮಸ್ಯೆಗೆ ಕಾರಣವಾಗುತ್ತಿತ್ತು. ಧೂಳಿನ ಸಮಸ್ಯೆಯನ್ನು ಪರಿಹರಿಸಲು ಅಗ್ನಿಶಾಮಕ ದಳ ಪದೇ ಪದೇ ನೀರನ್ನು ಸಿಂಪಡಿಸುತ್ತಿತ್ತು. ಸಾರಿಗೆ ಸೌಕರ್ಯದ ತೊಂದರೆ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ವೇದಿಕೆಗಳ ಅಂತರ ದೂರವಿದ್ದ ಕಾರಣದಿಂದ ಎಲ್ಲಾ ವೇದಿಕೆಗಳಿಗೆ ತೆರಳಲು ಬಹಳಷ್ಟು ತ್ರಾಸ ಅನುಭವಿಸುವಂತಾಗಿದೆ ಎಂದು ಕಲಾಸ್ವಾದಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಕಲೋತ್ಸವ: ಚಿತ್ರ ರಚನೆ
ಹೊಸ ಬಸ್ಸು ತಂಗುದಾಣದ ಪರಿಸರದಲ್ಲಿ ವಸ್ತು ಪ್ರದರ್ಶನಕ್ಕೆ ಮೆರಗು ನೀಡಿದ ಪ್ರಸಿದ್ಧ ಚಿತ್ರ ಕಲಾ ಅಧ್ಯಾಪಕರ ಚಿತ್ರ ರಚನೆ ಮತ್ತು ಪ್ರದರ್ಶನ ಜನಮನ ಸೂರೆಗೊಂಡಿತು. ಖ್ಯಾತ ಶಿಲ್ಪಿಯೂ, ಚಿತ್ರಕಾರರಾದ ರವಿ ಪಿಲಿಕೋಡ್ ಉದ್ಘಾಟನಾ ಸಮಾರಂಭ ವನ್ನು ನೆರವೇರಿಸಿದರು. ಮಂಜೇಶ್ವರ ಎಸ್.ಎ.ಟಿ. ಪ್ರೌಢ ಶಾಲೆಯ ಚಿತ್ರಕಲಾ ಶಿಕ್ಷಕ ಜಯಪ್ರಕಾಶ್ ಶೆಟ್ಟಿ ಬೇಳ ನೇತೃತ್ವ ದಲ್ಲಿ ನಡೆದ ಚಿತ್ರ ರಚನೆಗೆ ಡಯಟ್ ಸೀನಿಯರ್ ಲೆಚ್ಚರರ್ ಅನಿಲ್ ಮಣಿಯರ, ಜಿ.ವೀರೇಶ್ವರ್ ಭಟ್ ಶುಭಕೋರಿದರು. ಕಲಾ ಅಧ್ಯಾಪಕರಾದ ಪ್ರಮೋದ್ ಅಡುತಿಲ, ದಿವಾಕರ, ಚಿತ್ರನ್ ಕುಂಞಮಂಗಲ, ಅಶೋಕ್ ಮೊದಲಾದವರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.