ಮದ್ಯ ಸಾಗಾಟಕ್ಕೆ ಶಾಲಾ ವಿದ್ಯಾರ್ಥಿ ಬಳಕೆ!


Team Udayavani, Mar 16, 2018, 11:38 AM IST

drink.jpg

ಬದಿಯಡ್ಕ: ಶಾಲಾ ವಿದ್ಯಾರ್ಥಿ ಮೂಲಕ ಕೆಲವು ವರ್ಷಗಳಿಂದ ಮದ್ಯ ಸಾಗಿಸುತ್ತಿದ್ದ  ಆರೋಪದಲ್ಲಿ ಕುಂಬಾxಜೆ ವಡಂಬಳೆ ನಿವಾಸಿ, ಮದ್ಯ ವ್ಯಾಪಾರಿ ಕೇಶವ(42)ನ ವಿರುದ್ಧ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದ್ದು, ಆತ ತಲೆಮರೆಸಿಕೊಂಡಿದ್ದಾನೆ.

ಕಲಿಕೆಯಲ್ಲಿ ಆಸಕ್ತಿ ಇಲ್ಲದ ಮತ್ತು ಹಿರಿಯರ ಮಾತು ಕೇಳದ ವಿದ್ಯಾರ್ಥಿಯೋರ್ವನನ್ನು ಜುವ ನೈಲ್‌ ಹೋಮ್‌ಗೆ ಸೇರಿಸಿದ ಬಳಿಕ ಈ ರಹಸ್ಯ ಬಯಲಿಗೆ ಬಂದಿದೆ.

ತನ್ನದೇ ಊರಿನ ಮತ್ತು ಉತ್ತಮ ಕುಟುಂಬದ 15ರ ಹರೆಯದ ವಿದ್ಯಾರ್ಥಿಯೋರ್ವನನ್ನು ಆರೋ ಪಿಯು ಮೂರು ವರ್ಷಗಳಿಂದ ಮದ್ಯ ವ್ಯಾಪಾರಕ್ಕೆ ಬಳಸಿಕೊಂಡಿದ್ದ ಎಂದು ಆರೋಪಿಸಲಾಗಿದೆ. 

ಮವ್ವಾರಿನ ಶಾಲೆಯಲ್ಲಿ 7ನೇ ತರಗತಿಯಲ್ಲಿ  ಕಲಿಯುತ್ತಿದ್ದಾಗಲೇ  ಬಾಲಕನನ್ನು ಪುಸಲಾಯಿಸಿ ಈತ ಮದ್ಯ ಸಾಗಾಟಕ್ಕೆ ಬಳಸಿಕೊಂಡಿದ್ದ.  ಅನಂತರ ಬಾಲಕ ಬದಿಯಡ್ಕ ಬಳಿಯ ಶಾಲೆಯಲ್ಲಿ 8ನೇ ತರಗತಿಗೆ ಸೇರಿದ. ಪ್ರತಿಭಾವಂತ ನಾಗಿದ್ದ ವಿದ್ಯಾರ್ಥಿ ಶಿಕ್ಷಣದಲ್ಲಿ ನಿರಾಸಕ್ತಿ ತೋರಿಸಲಾರಂಭಿಸಿದ ಹಾಗೂ ಮನೆಯವರ ಮಾತನ್ನು ನಿರ್ಲಕ್ಷಿಸತೊಡಗಿದೆ. ಈ ಹಿನ್ನೆಲೆ ಯಲ್ಲಿ ಆತನನ್ನು ವಿಟ್ಲದ ಶಾಲೆಗೆ ಸೇರಿಸಿ  ಹಾಸ್ಟೆಲ್‌ನಲ್ಲಿ ಉಳಿದು ಕೊಳ್ಳುವ ವ್ಯವಸ್ಥೆ ಮಾಡಲಾಗಿತ್ತು. ಕೆಲವೇ ದಿನಗಳಲ್ಲಿ  ಅಲ್ಲಿಂದ ಮನೆಗೆ  ವಾಪಸಾದ ಕಾರಣ  ಮನೆಯವರು   ಪರವನಡ್ಕದ ಜುವನೈಲ್‌ ಹೋಮ್‌ಗೆ ಸೇರಿಸಿದರು.

ಅಲ್ಲಿನ ಅಧಿಕಾರಿಗಳು ಬಾಲಕನಿಗೆ ಆಪ್ತಸಲಹೆ ನೀಡುತ್ತಿದ್ದಾಗ ಈತ ಹಿಂದೆ ಮಾಡಿದ್ದ ಕಳ್ಳವ್ಯವಹಾರವನ್ನು ಬಹಿರಂಗಪಡಿಸಿದ.  ತಾನು 3 ವರ್ಷಗಳಿಂದ ಆ ತಪ್ಪನ್ನು ಮಾಡು ತ್ತಿದ್ದೇನೆಂದು ಬಾಲಕ ತಿಳಿಸಿದ್ದ ಹಿನ್ನೆಲೆ ಯಲ್ಲಿ ಅಧಿಕಾರಿಗಳು  ಬದಿಯಡ್ಕ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಆಗಮಿಸಿ ಬಾಲಕನಿಂದ  ಮಾಹಿತಿ ಸಂಗ್ರಹಿಸಿದಾಗ ಮದ್ಯ  ಮಾರಾಟ ದಂಧೆಗೆ ಈತ ಬಳಕೆ ಯಾದುದು  ತಿಳಿದು ಬಂತು.

7ನೇ ತರಗತಿಯಲ್ಲಿದ್ದಾಗ  ಕೇಶವ ತನ್ನನ್ನು  ಮದ್ಯ ಸಾಗಾಟಕ್ಕೆ ಬಳಸಿಕೊಂಡಿದ್ದ.  ಪ್ರತಿದಿನ ಆತ ಬದಿಯಡ್ಕದಿಂದ ನೀಡುವ ಚೀಲ ವನ್ನು ಕುಂಬಾxಜೆಗೆ ತಲುಪಿಸು ತ್ತಿದ್ದೆ. ಕೆಲವೊಮ್ಮೆ ಬೆಳಗ್ಗೆ ಹಾಗೂ ಮಧ್ಯಾಹ್ನವೂ ಬರುವಂತೆ ಒತ್ತಾಯಿ ಸುತ್ತಿದ್ದ. ಆಗ ಶಾಲೆಯಿಂದಲೇ ತೆರ ಳುತ್ತಿದ್ದುದ್ದಾಗಿ ಬಾಲಕ ಹೇಳಿದ್ದಾನೆ.

ಪೊಲೀಸರು  ಆರೋಪಿಯ ಬಂಧನಕ್ಕಾಗಿ ಬಲೆ  ಬೀಸಿದ್ದಾರೆ.

ಟಾಪ್ ನ್ಯೂಸ್

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

arest

Kumbla: ಯುವಕನನ್ನು ಅಪಹರಿಸಿ ಕೊಲೆಗೆ ಯತ್ನ; ಬಂಧನ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

10-madikeri

Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ

8-madikeri

Madikeri:ರೈಲ್ವೆ ಕಂಬಿ ಬೇಲಿಯನ್ನೇ ಮುರಿದ ಕಾಡಾನೆಗಳು:ನಿತ್ಯ ಉಪಟಳದಿಂದ ಬೇಸತ್ತ ಗ್ರಾಮಸ್ಥರು

Arrest

Madikeri: ವೀರ ಸೇನಾನಿಗಳಿಗೆ ಅಗೌರವ: ಆರೋಪಿ ಸೆರೆ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Bengaluru: ಹಿಂದೂ ದೇವತೆಗಳ ಬಗ್ಗೆ ಅಶ್ಲೀಲ ಪದ ಬಳಕೆ: ಕಿಡಿಗೇಡಿ ವಿರುದ್ಧ ದೂರು

Bengaluru: ಹಿಂದೂ ದೇವತೆಗಳ ಬಗ್ಗೆ ಅಶ್ಲೀಲ ಪದ ಬಳಕೆ: ಕಿಡಿಗೇಡಿ ವಿರುದ್ಧ ದೂರು

arest

Kumbla: ಯುವಕನನ್ನು ಅಪಹರಿಸಿ ಕೊಲೆಗೆ ಯತ್ನ; ಬಂಧನ

crime

Gangolli: ಬೈಕ್‌ಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ

road-mishap

Udupi: ಪಿಕಪ್‌ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಗಾಯ

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.