ವಿಜ್ಞಾನ ಕಲಿಕೋಪಕರಣಗಳ ತಯಾರಿ ಕಾರ್ಯಾಗಾರ
Team Udayavani, Aug 2, 2019, 5:30 AM IST
ಮಂಜೇಶ್ವರ: ಮಂಜೇಶ್ವರ ಉಪಜಿಲ್ಲಾ ವಿಜ್ಞಾನ ಸಂಘದ ನೇತೃತ್ವದಲ್ಲಿ ಕಲಿಕೋಪಕರಣಗಳ ತಯಾರಿ ಕಾರ್ಯಾಗಾರ ಮಂಜೇಶ್ವರದ ಎಸ್.ಎ.ಟಿ. ಹೈಸ್ಕೂಲ್‌ನಲ್ಲಿ ನಡೆಯಿತು.
ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿ ದಿನೇಶ್ ಬಿ. ಅವರು ಸಂಮಾರಂಭವನ್ನು ಉದ್ಘಾಟಿಸಿ, ಈ ಕಾರ್ಯಾಗಾರದಿಂದ ತರಗತಿ ಯಲ್ಲಿ ಅಧ್ಯಾಪಕರಿಗೆ ವಿಜ್ಞಾನದ ಆಶಯವನ್ನು ವಿದ್ಯಾರ್ಥಿಗಳಿಗೆ ಸುಲಭವಾಗಿ ತಲುಪಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಹರೀಂದ್ರನಾಥನ್ ಮತ್ತು ಪ್ರಸಾದ್ ಅವರು ಕಾರ್ಯಾಗಾರ ನಡೆಸಿದರು. ಒತ್ತಡ, ಘರ್ಷಣೆ, ನ್ಯೂಟನ್‌ನ ಮೂರನೇ ನಿಯಮ, ಬೆಳಕಿನ ಪಥ, ರಾಸಾಯನಿಕ ಬದಲಾವಣೆ, ಉಷ್ಣದ ಸಂವಹನ, ಬೆಳಕಿನ ವರ್ಣ ವಿಭಜನೆ ಇತ್ಯಾದಿ ಆಶಯಗಳಿಗೆ ಸಂಬಂಧಿಸಿದ ಕಲಿಕೋಪಕರಣಗಳನ್ನು ಪ್ರಾತ್ಯಕ್ಷಿಕವಾಗಿ ತಯಾರಿಸಿದರು. ಇದರಲ್ಲಿ ನ್ಯೂಟನ್‌ನ ಮೂರನೇ ನಿಯಮವನ್ನು ಉಪಯೋಗಿಸಿ ರಾಕೆಟ್ ಉಡಾವಣೆ, ಬೆಳಕಿನ ಕೇಂದ್ರೀಕರಣ ಮತ್ತು ವಿಕೇಂದ್ರೀಕರಣ ಎಲ್ಲರ ಗಮನ ಸೆಳೆಯಿತು. ತರಗತಿ ಚಟುವಟಿಕೆಗೆ ಉಪಯುಕ್ತವಾದ ಕಾರ್ಯಾಗಾರ ಎಂದು ಅಧ್ಯಾಪಕರು ಪ್ರಶಂಸಿಸಿದರು.
ಎಸ್‌ಎಟಿ ಎಲ್‌ಪಿ ಶಾಲೆಯ ಮುಖ್ಯೋಪಾ ಧ್ಯಾಯರಾದ ತೇಜಶ್ ಕಿರಣ್ ಅವರು ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಬಿ.ಪಿ.ಒ. ವಿಜಯ ಕುಮಾರ್ ಪಾವಳ ಮುಖ್ಯ ಅತಿಥಿಯಾಗಿ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಈ ಕಾರ್ಯಾಗಾರ ತುಂಬಾ ಪ್ರಯೋಜನಕಾರಿ ಎಂದು ಹೇಳಿದರು.
ಮಂಜೇಶ್ವರ ಉಪಜಿಲ್ಲೆಯ ಎಲ್ಲಾ ಎಲ್‌ಪಿ, ಯು.ಪಿ, ಹೈಸ್ಕೂಲ್‌ನ ವಿಜ್ಞಾನ ಅಧ್ಯಾಪಕರು ಉಪಸ್ಥಿತರಿದ್ದರು ಮಂಜೇಶ್ವರ ಉಪಜಿಲ್ಲೆಯ ವಿಜ್ಞಾನ ಸಂಘದ ಕಾರ್ಯದರ್ಶಿ ಕೃಷ್ಣವೇಣಿ ಬಿ. ಸ್ವಾಗತಿಸಿದರು. ಹರಿದಾಸ್ ವಂದಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.