ಹಸುರಾಯ್ತು ಕಡಲ ನೀರು!
Team Udayavani, Sep 15, 2020, 12:01 AM IST
ಕಾಸರಗೋಡು: ಕಾಂಞಂಗಾಡ್ ಹಾಗೂ ಪರಿಸರದಲ್ಲಿ ಸಮುದ್ರದ ನೀರಿನ ಬಣ್ಣ ಹಸುರಿಗೆ ಬದಲಾಗಿದೆ. ರವಿವಾರ ಮುಸ್ಸಂಜೆ ಸಮುದ್ರದ ನೀರಿನ ಬಣ್ಣ ಹಸುರಾಗಿ ಬದಲಾಗಿದ್ದು, ಸುಮಾರು ಕಿಲೋ ಮೀಟರ್‌ಗಳಷ್ಟು ದೂರದ ವರೆಗೆ ಇದು ಗೋಚರಿಸಿತು. ಮುಂಗಾರು ಮಳೆಯ ಬಳಿಕ ದಡದ ಸಮೀಪ ಸಮುದ್ರದಲ್ಲಿ ಸಾಮಾನ್ಯವಾಗಿ ಕಂಡುಬರುವ ಕಡಲ್‌ಕ್ಕರ ಎಂಬುದೇ ನೀರಿನ ಬಣ್ಣ ವ್ಯತ್ಯಾಸಕ್ಕೆ ಕಾರಣವೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ವಿಜ್ಞಾನಿಗಳು ಇದನ್ನು ಆಲ್ಗಾಲ್ ಬ್ಲೂಮ್ ಎಂದು ಕರೆಯುತ್ತಾರೆ.
ಮಳೆಯ ಬಳಿಕ ಸಸ್ಯಗಳು ಬೆಳೆಯಲು ಅಗತ್ಯವುಳ್ಳ ಧಾತುಗಳು ಹೆಚ್ಚಿರುವ ನೀರು ಸಮುದ್ರಕ್ಕೆ ಹರಿದು ತಲುಪುತ್ತಿದ್ದು, ಸಮುದ್ರ ನೀರಿನಲ್ಲಿ ಅತೀ ಸೂಕ್ಷ್ಮ ಆಲ್ಗೆಗಳು ಹೆಚ್ಚಿರುವುದೇ ಹಸುರು ಬಣ್ಣ ಕಾಣಲು ಕಾರಣವೆಂದು ಕೇಂದ್ರ ವಿ.ವಿ. ಪ್ಲಾಂಟ್ ಸಯನ್ಸ್ ವಿಭಾಗದ ಮುಖ್ಯಸ್ಥ ಡಾ| ಅರುಣ್ ಕುಮಾರ್ ತಿಳಿಸಿದ್ದಾರೆ. ಈ ವಿಸ್ಮಯ ಮೂರು ದಿನಗಳ ಕಾಲ ಇರುವುದು ಎಂದಿದ್ದಾರೆ. ಈ ಹಿಂದೆಯೂ ಸಮುದ್ರದ ನೀರು ಹಸುರು ಬಣ್ಣಕ್ಕೆ ತಿರುಗಿದ್ದು ಕಂಡುಬಂದಿದೆ ಎಂದು ಮೀನು ಕಾರ್ಮಿಕರು ಹೇಳುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.