ಸಾಂಕ್ರಾಮಿಕ ರೋಗ ಭೀತಿಯಲ್ಲಿ ಸೀತಾಂಗೋಳಿ


Team Udayavani, Mar 23, 2020, 5:04 AM IST

ಸಾಂಕ್ರಾಮಿಕ ರೋಗ ಭೀತಿಯಲ್ಲಿ ಸೀತಾಂಗೋಳಿ

ವಿದ್ಯಾನಗರ: ನೀರು ಹರಿಯುವ ಚರಂಡಿಯ ತುಂಬ ಕಸಕಡ್ಡಿ, ಹೋಟೇಲುಗಳ ತ್ಯಾಜ್ಯ. ಬೇಸಗೆಯಲ್ಲೂ ಕಟ್ಟಿನಿಂತ ನೀರಿನಲ್ಲಿ ಹುಳುಗಳು ತುಂಬಿ ಪರಿಸರದಲ್ಲಿ ಕೆಟ್ಟ ವಾಸನೆ ಬರುತ್ತಿದೆ. ಮಳೆಗಾಲಕ್ಕಾಗುವಾಗ ಈ ಕಸಕಡ್ಡಿಗಳ ರಾಶಿಯಿಂದಾಗಿ ಮಳೆನೀರು ಚರಂಡಿಯಲ್ಲಿ ಸುಸೂತ್ರವಾಗಿ ಹರಿಯಲಾಗದೆ ಉಂಟಾಗಬಹುದಾದ ಸಮಸ್ಯೆ ಜನರ ಆತಂಕಕ್ಕೆ ಕಾರಣವಾದರೆ, ತ್ಯಾಜ್ಯ ಉಂಟುಮಾಡಬಹುದಾದ ಸಾಂಕ್ರಾಮಿಕ ರೋಗದ ಭೀತಿ ಇನ್ನೊಂದೆಡೆ. ಆ ಮೂಲಕ ಇಂದು ಸೀತಾಂಗೋಳಿ ಪೇಟೆ ಸದ್ದಿಲ್ಲದೆ ಸಾಂಕ್ರಾಮಿಕ ರೋಗಗಳ ತಾಣವಾಗಿ ಬದಲಾಗುತ್ತಿದೆ.

ನಾಡಿನೆಲ್ಲೆಡೆ ಪರಿಸರ ಶುಚಿತ್ವದ ಮಹತ್ವದ ಬಗ್ಗೆ ಜಾಗƒತಿ ಮೂಡಿಸುತ್ತಿದ್ದರೂ ಕೆಲವರು ಕಿವಿಯಿದ್ದು ಕಿವುಡಾಗುವ, ಕಣ್ಣಿದ್ದು ಕುರುಡಾಗುತ್ತಿದ್ದಾರೆ. ಹರಡುತ್ತಿರುವ ಸಾಂಕ್ರಾಮಿಕ ರೋಗಗಳ ಹಾವಳಿ ಬಗ್ಗೆ ಜನಜಾಗƒತಿ ಮೂಡಿಸುವ ಆರೋಗ್ಯ ಇಲಾಖೆ ಹಾಗೂ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಸೀತಾಂಗೋಳಿ ಪೇಟೆಯ ಚರಂಡಿಯಲ್ಲಿ ತುಂಬಿಕೊಂಡಿರುವ ಮಲಿನ ಜಲದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗದಿರುವುದು ವಿಪರ್ಯಾಸ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಪುತ್ತಿಗೆ ಹಾಗೂ ಬದಿಯಡ್ಕ ಗ್ರಾಮ ಪಂಚಾಯತ್‌ನ ಗಡಿಭಾಗವಾಗಿರುವ ಸೀತಾಂಗೋಳಿ ಪೇಟೆಯಲ್ಲಿ ಮಳೆನೀರು ಹರಿಯುವ ಚರಂಡಿ ಇಂದು ಮಲಿನಜಲ ದಾಸ್ತಾನುಗೊಳ್ಳುವ ತಿಪ್ಪೆಯಾಗಿ ಬದಲಾಗಿದೆ. ಮಲಿನ ನೀರಿನೊಂದಿಗೆ ಹೊಟೇಲುಗಳಿಂದ ಬರುವ ನೀರು, ಆಹಾರ ತ್ಯಾಜ್ಯ, ಕೊಳೆತ ತರಕಾರಿ, ಮತ್ತಿತರ ತ್ಯಾಜ್ಯಗಳೂ ಸೇರಿ ಗಬ್ಬುವಾಸನೆ ಪೇಟೆಯನ್ನು ಆವರಿಸುತ್ತಿದೆ. ಚರಂಡಿ ಸಮೀಪದಲ್ಲೇ ಬದಿಯಡ್ಕ ಭಾಗಕ್ಕೆ ತೆರಳುವ ಬಸ್ಸು ತಂಗುದಾಣವಿದ್ದು ಪ್ರಯಾಣಿಕರು ಮೂಗುಮುಚ್ಚಿಕೊಂಡು ಇಲ್ಲಿ ನಿಲ್ಲಬೇಕಾದ ದುಸ್ಥಿತಿ ಎದುರಾಗಿದೆ.

ಚರಂಡಿಯ ಕೊಳಚೆ ನೀರಿನಲ್ಲಿ ಹುಳಗಳು ಹುಟ್ಟಿಕೊಂಡಿದ್ದು ಸಂಜೆಯಾಗುತ್ತಿದ್ದಂತೆ ವಿಪರೀತ ಕಾಟಕೊಡುವ ಸೊಳ್ಳೆಗಳು ಇಲ್ಲಿನ ನಿವಾಸಿಗಳಿಗೂ, ಪ್ರಯಾಣಿಕರಿಗೂ ಬಹುದೊಡ್ಡ ಸಮಸ್ಯೆಯಾಗಿ ಕಾಡಲಾರಂಭಿಸಿದೆ. ಮಾತ್ರವಲ್ಲದೆ ರಸ್ತೆಬದಿಯ ಈ ತೆರೆದ ಚರಂಡಿಯ ಸನಿಹ ಆಹಾರ ಪದಾರ್ಥಗಳ ಮಾರಾಟವೂ ಜೋರಾಗಿ ನಡೆಯುತ್ತಿದೆ. ಇದರಿಂದಾಗಿ ಜನರಲ್ಲಿ ಸಾಂಕ್ರಾಮಿಕ ರೋಗದ ಭೀತಿ ಹುಟ್ಟಿಕೊಂಡಿದ್ದು ಸ್ಥಳೀಯ ವ್ಯಾಪಾರಿಗಳು ಆದಷ್ಟು ಬೇಗ ಇದಕ್ಕೊಂದು ಪರಿಹಾರ ಕಾಣುವಂತೆ ಒತ್ತಾಯಿಸುತ್ತಿದ್ದಾರೆ.

ನಾಡು ರೋಗ ಭೀತಿಯಿಂದ ಕಂಗೆಟ್ಟಿರುವ ಸಂದರ್ಭದಲ್ಲೂ ಸಾಂಕ್ರಾಮಿಕ ರೋಗ ಉತ್ಪಾಧನಾ ಕೇಂದ್ರವಾಗಿ ಬದಲಾಗುತ್ತಿರುವ ಈ ಚರಂಡಿಯನ್ನು ಸ್ವತ್ಛಗೊಳಿಸುವತ್ತ ಗಮನ ಹರಿಸದ ಆರೋಗ್ಯ ಇಲಾಖೆ ಹಾಗೂ ಸ್ಥಳಿಯಾಡಳಿತ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಕೊರೋನಾ ಎಂಬ ಮಹಾಮಾರಿಯನ್ನು ಬಡಿದೋಡಿಸಲು ಸ್ವಚ್ಚತೆಗೆ ನೀಡುವ ಆದ್ಯತೆ ಇನ್ನೂ ಜನರ ಕಣ್ಣು ತೆರೆಸುವಲ್ಲಿ ವಿಫಲವಾಗುತ್ತಿರುವುದು ವಿಪರ್ಯಾಸ.

ಜಿಲ್ಲಾಧಿಕಾರಿಗೆ ದೂರು
ಸೀತಾಂಗೋಳಿ ಪೇಟೆಯ ಈ ದುರವಸ್ಥೆಯ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿ ಡಾ| ಡಿ.ಸಜಿತ್‌ಬಾಬು ಅವರಿಗೆ ದೂರು ಸಲ್ಲಿಸಿದ್ದು ಈ ಸಮಸ್ಯೆಗೆ ಆದಷ್ಟು ಬೇಗ ಪರಿಹಾರ ಒದಗಿಸುವಂತೆ ಕೇಳಿಕೊಳ್ಳಲಾಗಿದೆ. ಕ್ಲಬ್‌ ಈ ನಿಟ್ಟಿನಲ್ಲಿ ದೃಢವಾದ ಹೆಜ್ಜೆಯನ್ನಿಟ್ಟಿದ್ದು ಈ ಪ್ರದೇಶದ ಸಮಸ್ಯೆಗೆ ಶಾಶ್ವತ ಪರಿಹಾರ ಕಾಣುವತ್ತ ಶ್ರಮಿಸುತ್ತಿದೆ ಎಂದು ಸೀತಾಂಗೊಳಿ ಸಂತೋಷ್‌ ಆರ್ಟ್ಸ್ ಆಂಡ್‌ ನ್ಪೋರ್ಟ್ಸ್ ಕ್ಲಬ್‌ ನ ಅಧ್ಯಕ್ಷರು ಥೋಮಸ್‌.ಡಿ”ಸೋಜಾ ಹೇಳಿದ್ದಾರೆ.

ಟಾಪ್ ನ್ಯೂಸ್

bjp-congress

Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ

BJP FLAG

Maharashtra ; ಕೈ ಯಿಂದ ಲೋಕಸಭಾ ಸ್ಥಾನ ಕಸಿದ ಬಿಜೆಪಿ: ರಾಜ್ಯಸಭೆ ಬಹುಮತದತ್ತ ಚಿತ್ತ

kolahara-TV

By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!

8

Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್‌ ಗೆಲುವು: ಬೊಮ್ಮಾಯಿ ಆರೋಪ

RSS

Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ

CM-Office

By Election Result: ನಾನು ದಂತದ ಗೋಪುರದಲ್ಲಿ ಕೂತವನಲ್ಲ,ಜನರೊಂದಿಗೆ ಸದಾ ಒಡನಾಟವಿದೆ: ಸಿಎಂ

1-ree

Maharashtra; ಪತಿಗೆ ಸೋಲು: ಮತಯಂತ್ರಗಳ ಕುರಿತು ಆಪಾದಿಸಿದ ನಟಿ ಸ್ವರಾ ಭಾಸ್ಕರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

13

Bramavara: ವಿದ್ಯಾರ್ಥಿ ಕಾಲಿನ ಮೇಲೆ ಸಾಗಿದ ಪಿಕ್‌ಅಪ್‌

bjp-congress

Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ

11

Uppinangady: ಸರಣಿ ಅಪಘಾತ; 19 ಮಂದಿಗೆ ಗಾಯ

BJP FLAG

Maharashtra ; ಕೈ ಯಿಂದ ಲೋಕಸಭಾ ಸ್ಥಾನ ಕಸಿದ ಬಿಜೆಪಿ: ರಾಜ್ಯಸಭೆ ಬಹುಮತದತ್ತ ಚಿತ್ತ

kolahara-TV

By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.