ಕೇರಳ ರಬ್ಬರ್ ಬೆಳೆಗಾರರಿಗೆ ಪ್ರತ್ಯೇಕ ಮೊಬೈಲ್ ಆ್ಯಪ್
Team Udayavani, May 19, 2018, 6:30 AM IST
ಕಾಸರಗೋಡು: ಆಧುನಿಕ ವ್ಯವಸ್ಥೆಯಂತೆ ಇ-ಆಡಳಿತದ ಅಂಗ ವಾಗಿ ಕೇರಳ ಸರಕಾರದ ರಬ್ಬರ್ ಮಂಡಳಿಯು ರಾಜ್ಯದ ರಬ್ಬರ್ ಬೆಳೆಗಾರರಿಗೆ ನೂತನ ಮಾದರಿಯ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಿದೆ. ಈ ಮೂಲಕ ರಬ್ಬರ್ ಕೃಷಿಕರ ವಲಯದಲ್ಲಿ ಅತ್ಯಾಧುನಿಕ ಶೈಲಿಯೊಂದಿಗೆ ಅಭಿವೃದ್ಧಿಯ ಶಕೆಯನ್ನು ಆರಂಭಿಸಲು ನಿರ್ಧರಿಸಲಾಗಿದೆ.
ರಾಷ್ಟ್ರೀಯ ಇನೋಮೆಟಿಕ್ಸ್ ಸೆಂಟರ್ ಅಭಿವೃದ್ಧಿ ಪಡಿಸಿದ “ರಬ್ ಎಸ್‌ಐಎಸ್’ ಎಂಬ ಹೆಸರಿನ ಹೊಸ ಆ್ಯಪ್ ಕೇರಳದ ರಬ್ಬರ್ ಬೆಳೆಗಾರರ ಮತ್ತು ಮಂಡಳಿಯ ಮಧ್ಯೆ ಕಾರ್ಯಾಚರಿಸಲಿದೆ. ರಬ್ ಎಸ್‌ಐಎಸ್ ಎಂಬ ಆ್ಯಪ್‌ನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಲು ಅವಕಾಶವಿದೆ.
ರಬ್ಬರ್ ವಲಯದಲ್ಲಿ ಯೋಜನೆಗಳು, ಸ್ಕೀಮ್‌ಗಳು, ಅಭಿಯಾನ, ಕಾರ್ಮಿಕರ ಕಲ್ಯಾಣ ಕ್ರಮಗಳು, ತರಬೇತಿ ಅಲ್ಲದೆ ಈ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುವ ರೋಗ ಗುರುತಿಸುವಿಕೆ ಮತ್ತು ಅದನ್ನು ತಡೆಗಟ್ಟುವಿಕೆ ಮುಂತಾದವುಗಳ ಕುರಿತು ಈ ನೂತನ ಆ್ಯಪ್‌ನಲ್ಲಿ ಅಲರ್ಟ್ ನೀಡಲಾಗುವುದು.
ಅಪ್ಲಿಕೇಶನ್ ಬಳಸಿಕೊಂಡು ಮಾರುಕಟ್ಟೆ ಬೆಲೆಯ ಬಗ್ಗೆಯೂ ಅಲ್ಲದೆ ಭಾರತೀಯ ಹಾಗೂ ಅಂತಾ ರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ರಬ್ಬರ್ ಬೆಲೆಯಲ್ಲಾಗುತ್ತಿರುವ ಬದಲಾವಣೆಯನ್ನು ಗಮನಿಸಬಹುದು. ದೇಶದ ವಿವಿಧ ಪ್ರದೇಶಗಳಲ್ಲಿ ಕೈಗೊಳ್ಳುವ ಮಾಸಿಕ ಕಲ್ಚರಲ್ ಅಡ್ವೆ$„ಸರೀಸ್ ಉಪಕ್ರಮವು ಆ್ಯಪ್‌ನ ಇನ್ನೊಂದು ವೈಶಿಷ್ಟéವಾಗಿದೆ. ಜೊತೆಗೆ ರಬ್ಬರ್‌ಗೆ ಸಂಬಂಧಿಸಿದಂತೆ ಇರುವ ಸೌಲಭ್ಯ, ಸಮಸ್ಯೆಗಳ ಕುರಿತು ಸಂಪರ್ಕಿಸಬೇಕಾದ ವಿವರ ಮಾಹಿತಿಗಳೂ ಇದರಲ್ಲಿ ಒಳಗೊಂಡಿವೆ.
ಡಿಜಿಟಲ್ ಇಂಡಿಯಾ ಅಭಿಯಾನದ ಅಂಗವಾಗಿ ರಬ್ಬರ್ ಮಂಡಳಿಯು ಡಿಜಿಟಲ್ ವಿಸ್ತರಣಾ ಸೇವೆಯನ್ನು ಉತ್ತೇಜಿಸುತ್ತದೆ. ಮಾತ್ರವಲ್ಲದೆ ಮಂಡ ಳಿಯು ಕಾಲ್‌ಸೆಂಟರ್, ಐವಿಆರ್‌ಎಸ್ ಮತ್ತು ಆನ್‌ಲೈನ್ ರಬ್ಬರ್ ಕ್ಲಿನಿಕ್ ಸಹ ವಾಟ್ಸ್‌ಆ್ಯಪ್ ಹಾಗೂ ಯೂ ಟ್ಯೂಬ್ ಸಹಾಯದಿಂದ ಮಾಡಬಹುದಾಗಿದೆ.
ಈ ಆ್ಯಪ್ ರಸಗೊಬ್ಬರಗಳ ಅತ್ಯುತ್ತಮ ಬಳಕೆ, ಕಡಿಮೆ ವೆಚ್ಚದಲ್ಲಿ ಕೃಷಿ ಉತ್ಪಾ ದನೆಯನ್ನು ಹೆಚ್ಚಿಸುವ ಮತ್ತು ಆದಾಯ ಇಮ್ಮಡಿಗೊಳಿಸುವ ಮಾಹಿತಿ ಒದಗಿಸುತ್ತದೆ. ಇನ್ನೊಂದೆಡೆ ಮಣ್ಣಿನ ಸಂರಕ್ಷಣೆ ಮತ್ತು ಪರಿಸರ ಮಾಲಿನ್ಯ ವನ್ನು ಕಡಿಮೆ ಮಾಡುವ ಸಲುವಾಗಿ ಸಲಹೆಗಳನ್ನು ನೀಡಲಾಗುತ್ತದೆ.
ಈ ರಬ್ ಎಸ್‌ಐಎಸ್ ಆ್ಯಪ್ ಅಂದರೆ ಮಣ್ಣಿನೊಂದಿಗೆ ವಿಜ್ಞಾನ, ಕೃಷಿ ವಿಜ್ಞಾನ, ಜಿಯೋಸ್ಪೇಷಿಯಲ್ ತಂತ್ರಜ್ಞಾನ ಹಾಗೂ ಐಸಿಟಿಗಳ ತತ್ವಗಳ ಸಂಯೋಜನೆಯಾಗಿದೆ. ಇದು ರಬ್ಬರ್ ಸಂಶೋಧನಾ ಸಂಸ್ಥೆಯಿಂದಲೇ ಪೂರ್ಣ ವಾಗಿ ರೂಪಿಸಲ್ಪಟ್ಟಿದ್ದು ಜೊತೆಗೆ ಇಸ್ರೋ ಮ್ಯಾಪಿಂಗ್ ರಬ್ಬರ್ ಪ್ಲಾಂಟೇಶನ್, ಮಣ್ಣಿನ ಫಲವತ್ತತೆ ವಿಶ್ಲೇಷಣೆ ಮತ್ತು ಆ ಬಗೆಯ ಸಾಫ್ಟ್‌ವೇರ್ ಅಭಿವೃದ್ಧಿಯಲ್ಲಿ ಪರಿಣಾಮಕಾರಿಯಾಗಿದೆ.
ಪ್ರಸ್ತುತ ರಬ್ ಎಸ್‌ಐಎಸ್ ಕೇರಳದಲ್ಲಿ ರಬ್ಬರ್ ಬೆಳೆಯುತ್ತಿರುವ ಪ್ರದೇಶಗಳಲ್ಲಿ ಲಭಿಸಲಿದೆ. ಮುಂದಿನ ಹಂತದಲ್ಲಿ ದಕ್ಷಿಣ ಭಾರತದ ರಬ್ಬರ್ ಬೆಳೆಗಾರರಿಗೆ ದೊರಕುವ ನಿಟ್ಟಿನಲ್ಲಿ ಸಂಬಂಧಿತ ಕಾರ್ಯಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ಜಿಲ್ಲೆಯಲ್ಲೂ ವಿವಿಧ ಯೋಜನೆ ಜಾರಿ
ಕೇರಳದ ರಬ್ಬರ್ ಕೃಷಿಕರಿಗೆ ಪ್ರತ್ಯೇಕ ಮೊಬೈಲ್ ಆ್ಯಪ್ ಜಾರಿಗೊಳಿಸುವುದು ಕಾಸರಗೋಡು ಜಿಲ್ಲೆಯ ರಬ್ಬರ್ ಬೆಳೆಗಾರರಲ್ಲಿ ಅತೀವ ಸಂತಸ ತಂದಿದೆ. ಈ ಮೂಲಕ ಜಿಲ್ಲೆಯ ರಬ್ಬರ್ ಕೃಷಿಯನ್ನು ಅಭಿವೃದ್ಧಿಪಡಿಸುವ ಸಂಕಲ್ಪ ಹೊಂದಲಾಗಿದೆ. ಜಿಲ್ಲೆಯ ಪ್ರಮುಖ ಬೆಳೆ ರಬ್ಬರ್ ಅಲ್ಲದಿದ್ದರೂ, ರಬ್ಬರ್ ಕೃಷಿಯನ್ನು ಇದೀಗ ಜಿಲ್ಲೆಯ ಹಲವೆಡೆಗಳಿಗೆ ವಿಸ್ತರಿಸಲಾಗಿದೆ. ಆದರೆ ಇಲ್ಲಿನ ಮಣ್ಣು ರಬ್ಬರ್ ಬೆಳೆಗೆ ಅಷ್ಟೊಂದು ಹೇಳಿಸಿದಲ್ಲ. ಆದ್ದರಿಂದಲೇ ಜಿಲ್ಲೆಯಲ್ಲಿ ರಬ್ಬರ್ ಕೃಷಿಯಲ್ಲಿ ವಿಪರೀತ ಆದಾಯ ಬರುತ್ತಿಲ್ಲ. ಈ ಮಧ್ಯೆ ಹೊಸ ಮೊಬೈಲ್ ಆ್ಯಪ್ ಮೂಲಕ ಜಿಲ್ಲೆಯ ರಬ್ಬರ್ ಬೆಳೆಗಾರರನ್ನು ಸಂರಕ್ಷಿಸಬಹುದಾಗಿದೆ. ಈ ನಿಟ್ಟಿನಲ್ಲಿ ಕೆಲವು ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Kasaragod: ರಸ್ತೆಯಲ್ಲಿ ಬಿಯರ್ ಬಾಟ್ಲಿ ಎಸೆದು ಘರ್ಷಣೆಗೆ ಯತ್ನ; ಕೇಸು ದಾಖಲು
Kasaragod ಅಪರಾಧ ಸುದ್ದಿಗಳು; ತಂಬಾಕು ಉತ್ಪನ್ನಗಳ ಸಹಿತ ಇಬ್ಬರ ಬಂಧನ
Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ
Kasaragod: ಮುಖವಾಡ ಧರಿಸಿದ ವ್ಯಕ್ತಿಯಿಂದ ವಿದ್ಯಾರ್ಥಿಗೆ ಇರಿತ; ಪ್ರಕರಣ ದಾಖಲು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Yakshagana;ಕನ್ನಡ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಸಾರ್ವಕಾಲಿಕ ಕೊಡುಗೆ
Mollywood: ಸೂಪರ್ ಸ್ಟಾರ್ ಮೋಹನ್ ಲಾಲ್‌ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.