ಪ್ರತ್ಯೇಕ ಸ್ಕ್ವಾಡ್‌ಗಳ ರಚನೆ,ಶುಚೀಕರಣ ಯಜ್ಞ ಶೀಘ್ರ

ಜಲಾಶಯಗಳನ್ನು ಮಾಲಿನ್ಯಗೊಳಿಸಿದರೆ ಸಜೆ ಮತ್ತು ದಂಡ

Team Udayavani, May 11, 2019, 6:00 AM IST

10KSDE6

ಕಾಸರಗೋಡು: ಜಿಲ್ಲಾಡಳಿತ ಜಾರಿಗೊಳಿಸುವ ತೀವ್ರ ಶುಚಿತ್ವ ಯಜ್ಞದ ನಂತರವೂ ಹೆದ್ದಾರಿ ಬದಿ ತ್ಯಾಜ್ಯ ತಂದು ಸುರಿಯುವವರ ವಿರುದ್ಧ ಕಠಿನ ಕಾನೂನು ಕ್ರಮಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ ಬಾಬು ಮುನ್ನೆಚ್ಚರಿಕೆ ನೀಡಿದ್ದಾರೆ.

ಹೆದ್ದಾರಿ ಬದಿ, ಸಾರ್ವಜನಿಕ ಪ್ರದೇಶಗಳಲ್ಲಿ ತ್ಯಾಜ್ಯ ತಂದು ಸುರಿಯುವವರ ವಿರುದ್ಧ ದುರಂತ ನಿವಾರಣೆ ಕಾಯಿದೆ ಸಹಿತ ಕಾನೂನು ಕ್ರಮ ನಡೆಸುವುದಾಗಿ ಅವರು ತಿಳಿಸಿದರು.

ಈ ರೀತಿಯ ತ್ಯಾಜ್ಯ ಎಸೆತದ ಪರಿಣಾಮ ತೀವ್ರತರ ಆರೋಗ್ಯ ಸಮಸ್ಯೆಗಳು ತಲೆದೋರುತ್ತವೆ. ಬೀದಿನಾಯಿಗಳ ಕಾಟ, ಜಲಾಶಯಗಳ ವಿನಾಶ ಇತ್ಯಾದಿ ಗಂಭೀರ ಸಮಸ್ಯೆಗಳಿಗೆ ಇದು ಕಾರಣ ವಾಗಲಿದೆ. ಘನ ತ್ಯಾಜ್ಯ ಪರಿಷ್ಕರಣೆ ಕಾಯಿದೆ 4(2), ಪರಿಸರ ಸಂರಕ್ಷಣೆ ಕಾಯಿದೆ 1986, ಕಾಯಿದೆ 15 ಪ್ರಕಾರ 5 ವರ್ಷ ವರೆಗೆ ಸಜೆ ಅಥವಾ ಒಂದು ಲಕ್ಷ ರೂ. ದಂಡ ಅಥವಾ ಎರಡೂ ಸಜೆ ಜತೆಗೆ ಲಭಿಸಬಹುದಾದ ಅಪರಾಧವಿದು. ಹರಿತ ಕೇರಳವನ್ನು ಮಲಿನಗೊಳಿಸುವವರ ವಿರುದ್ಧ ಯಾವುದೇ ತಾರತಮ್ಯವಿಲ್ಲದೆ ಕ್ರಮ ಕೈಗೊಳ್ಳುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

ಮಾಲಿನ್ಯ ಹಾಕಿದರೆ ಸಜೆ ಮತ್ತು ದಂಡ
ಜಲಾಶಯಗಳನ್ನು ಮಲಿನಗೊಳಿಸುವುದು ಮೂರು ವರ್ಷ ವರೆಗಿನ ಸಜೆ ಅಥವಾ 2 ಲಕ್ಷ ರೂ. ದಂಡ ಯಾ ಎರಡೂ ಶಿಕ್ಷೆ ಜತೆಗೆ ನೀಡಬಹುದಾದ ಅಪರಾಧವಾಗಿದೆ.

ರಾಜ್ಯ ನೀರಾವರಿ ಮತ್ತು ಜಲಸಂರಕ್ಷಣೆ ಕಾಯಿದೆ 2003 ಸೆಕ್ಷನ್‌ 70(3)72 ಸಿ.ಪ್ರಕಾರ ಈ ಶಿಕ್ಷೆ ವಿ ಧಿಸಲಾಗುವುದು.ನ್ಯಾಯಾಲಯವೊಂದರಲ್ಲಿ ಈ ಸಂಬಂಧ ಆರೋಪಿ ಅಪರಾಧಿಯೆಂದು ತೀರ್ಪಿಗೊಳಗಾದರೆ ಈ ಶಿಕ್ಷೆ ನೀಡಲಾಗುವುದು. ಕೇರಳ ಪಂಚಾಯತ್‌ ರಾಜ್‌ ಕಾಯಿದೆ 1994 ಸೆಕ್ಷನ್‌ 219 ಎಸ್‌ ಸೆಕ್ಷನ್‌ 29(ಟಿ) ಕೇರಳ ಮುನಿಸಿಪಾಲಿಟಿ ಕಾಯಿದೆ 1994 ಸೆಕ್ಷನ್‌ 340(ಎ) ಪ್ರಕಾರ 10 ಸಾವಿರ ರೂ.ಗಿಂತ ಕಡಿಮೆಯಾಗದ 25 ಸಾವಿರ ರೂ.ಗಿಂತ ಅ ಧಿಕವಾಗದ ದಂಡ ಮತ್ತು 6 ತಿಂಗಳಿಗಿಂತ ಕಡಿಮೆಯಲ್ಲದ ಮತ್ತು ಒಂದು ವರ್ಷಕ್ಕಿಂತ ಅಧಿ ಕವಲ್ಲದ ಸಜೆ ಲಭಿಸಬಹುದಾಗಿದೆ.
ಗ್ರಾಮ ಪಂಚಾಯತ್‌,ನಗರಸಭೆ  ಕಾರ್ಯದರ್ಶಿ,ಪೊಲೀಸರು,ತ್ಯಾಜ್ಯ ನಿಯಂತ್ರಣ ಮಂಡಳಿ ಜಿಲ್ಲಾ ಸಿಬ್ಬಂದಿ ಈ ಸಂಬಂಧ ಕ್ರಮಕೈಗೊಳ್ಳಬಹುದಾಗಿದೆ.

ಜಲಾಶಯ,ಜಲಮೂಲ,ಜಲವಿತರಣೆ ಸೌಲಭ್ಯಗಳನ್ನು ಮಲಿನಗೊಳಿಸುವ ರೀತಿ ತ್ಯಾಜ್ಯ ಹರಿಯ ಬಿಟ್ಟರೆ ಅದು ಶಿಕ್ಷಾರ್ಹವಾಗಿದೆ. ಜಲಮಲಿನೀಕರಣ (ನಿಯಂತ್ರಣ ಮತ್ತು ನಿವಾರಣೆ) ಕಾಯಿದೆ 1974 ಸೆಕ್ಷನ್‌ 43 ಪ್ರಕಾರ ಒಂದೂವರೆ ವರ್ಷಕ್ಕಿಂತ ಕಡಿಮೆಯಾಗದ, 6 ವರ್ಷಕ್ಕಿಂತ ಅಧಿಕವಲ್ಲದ ಸಜೆ ಸಿಗಬಹುದಾಗಿದೆ.

ಪ್ರತ್ಯೇಕ ಸ್ಕ್ವಾಡ್‌
ತ್ಯಾಜ್ಯ ತಂದು ಸುರಿಯುವವರ ವಿರುದ್ಧ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಪ್ರತ್ಯೇಕ ಸ್ಕ್ವಾಡ್‌ಗಳನ್ನು ರಚಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ ಬಾಬು ತಿಳಿಸಿದರು.

ಸಾರ್ವಜನಿಕ ಆರೋಗ್ಯ ಸಂರಕ್ಷಣೆ ಪರಿಶೀಲಿಸಿ ಈ ಕ್ರಮಕೈಗೊಳ್ಳುವುದಾಗಿ ಅವರು ಹೇಳಿದರು. ಪೊಲೀಸ್‌, ಕಂದಾಯ, ಗ್ರಾಮ ಪಂಚಾಯತ್‌ ಮತ್ತು ನಗರಸಭೆ ಸಿಬಂದಿ ಸೇರಿ ಸ್ಕ್ವಾಡ್‌ ರಚಿಸಲಾಗುವುದು. ಅರಣ್ಯ ವಲಯದಲ್ಲಿ ಅರಣ್ಯ ಇಲಾಖೆಯ ಸಿಬಂದಿಯೂ ಇರುವರು.

ತೀವ್ರ ಶುಚೀಕರಣ ಯಜ್ಞ : 4 ಸಾವಿರ ಮಂದಿ ಭಾಗಿ : ಜಿಲ್ಲಾಡಳಿತದ ನೇತೃತ್ವದಲ್ಲಿ ಜಿಲ್ಲೆಯ ಹೆದ್ದಾರಿ ಬದಿ ನಡೆಸಲಾದ ತೀವ್ರ ಶುಚೀಕರಣ ಯಜ್ಞದಲ್ಲಿ ಸುಮಾರು 4 ಸಾವಿರಕ್ಕೂ ಅಧಿಕ ಮಂದಿ ಶ್ರಮದಾನ ನಡೆಸಿದರು. 15 ಮೆಟ್ರಿಕ್‌ ಟನ್‌ ತ್ಯಾಜ್ಯ ಈ ಮೂಲಕ ಸಂಗ್ರಹಿಸಲಾಗಿದೆ. 2600 ಮಂದಿ ವಿವಿಧ ಸಂಘಟನೆಗಳ ಪ್ರತಿನಿ ಧಿಗಳು, ಜನಪ್ರತಿನಿಧಿಗಳು, ಸಿಬಂದಿ, ಶಿಕ್ಷಕರು, ಉದ್ಯೋಗ ಖಾತರಿ ಯೋಜನೆ ಕಾರ್ಯಕರ್ತರು ಈ ಕಾಯಕ ನಡೆಸಿದರು.

ಟಾಪ್ ನ್ಯೂಸ್

MUDA Case: ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ ಸಿದ್ದರಾಮಯ್ಯ

MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ

Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ  ಪ್ರತಿಭಟನೆ

Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ

Uppunda: ಈ ಬಾರಿ ಕೋಟೇಶ್ವರಕ್ಕಿಂತ ಮೊದಲು ಉಪ್ಪುಂದ ರಥೋತ್ಸವ

Uppunda: ಈ ಬಾರಿ ಕೋಟೇಶ್ವರಕ್ಕಿಂತ ಮೊದಲು ಉಪ್ಪುಂದ ರಥೋತ್ಸವ

01236

Bantwal: ತುಂಬೆ ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ

SALMAN-KHAN

Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ

ಅಂಗಡಿಯಲ್ಲಿ‌ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ 

ಅಂಗಡಿಯಲ್ಲಿ‌ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ 

Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ

Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

MUDA Case: ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ ಸಿದ್ದರಾಮಯ್ಯ

MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ

1

Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ

Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ  ಪ್ರತಿಭಟನೆ

Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ

Uppunda: ಈ ಬಾರಿ ಕೋಟೇಶ್ವರಕ್ಕಿಂತ ಮೊದಲು ಉಪ್ಪುಂದ ರಥೋತ್ಸವ

Uppunda: ಈ ಬಾರಿ ಕೋಟೇಶ್ವರಕ್ಕಿಂತ ಮೊದಲು ಉಪ್ಪುಂದ ರಥೋತ್ಸವ

01236

Bantwal: ತುಂಬೆ ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.