ನೆರಳು ಗಿಡಗಳ ಪೋಷಣೆ: ಆಟೋ ರಿಕ್ಷಾ ಚಾಲಕರಿಗೆ ಅಭಿನಂದನೆ
Team Udayavani, Mar 23, 2019, 12:30 AM IST
ಕುಂಬಳೆ: ನೆರಳಿಗಾಗಿ ಗಿಡಗಳನ್ನು ನೆಟ್ಟು ನಿರಂತರ ಅವುಗಳಿಗೆ ನೀರೆರೆದು ಪೋಷಿಸುವ ಮಾದರಿ ಆಟೋ ಚಾಲಕರ ತಂಡವನ್ನು ವಿದ್ಯಾರ್ಥಿ ಸಮೂಹ ಅಭಿನಂದಿಸಿತು.
ವಿಶ್ವ ಅರಣ್ಯ ದಿನಾಚರಣೆಯ ಅಂಗವಾಗಿ ನಡೆದ ಸಮಾರಂಭದಲ್ಲಿ ಕುಂಬಳೆ ಪೇಟೆಯ ಆಟೋ ಚಾಲಕರ ಪರಿಸರ ಪ್ರೇಮವನ್ನು ಕೊಂಡಾಡಿದ ಮಕ್ಕಳು ಅವರಿಗೆ ಉಡುಗೊರೆಗಳನ್ನು ನೀಡಿ ಗೌರವಿಸಿದರು. ಕಳೆದೆರಡು ವರ್ಷಗಳಿಂದ ತಮ್ಮ ಆಟೋ ಸ್ಟಾÂಂಡ್‌ನ್ನು ಹಸರೀಕರಣಗೊಳಿಸುವ ನಿಟ್ಟಿನಲ್ಲಿ ಎರಡು ಬಾದಾಮಿ ಗಿಡಗಳನ್ನು ನೆಟ್ಟು ಸಂರಕ್ಷಿಸುವುದು ಮಕ್ಕಳ ಮೆಚ್ಚುಗೆಗೆ ಪಾತ್ರವಾಗಿದೆ. ಇದೀಗ ಆಟೋ ಚಾಲಕರಿಗೆ ಮಾತ್ರವಲ್ಲ ನಾಗರಿಕರಿಗೂ ನೆರಳಿನಾಸರೆಯಾಗುವಂತೆ ಕುಂಬಳೆ ಪೇಟೆಯ ಹೃದಯ ಭಾಗದಲ್ಲಿ ಬಾದಾಮಿ ಮರಗಳು ಬೆಳೆಯುತ್ತಿವೆ. ಕುಂಬಳೆ ಹೋಲಿ ಫ್ಯಾಮಿಲಿ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳು à ಚಾಲಕರ ಈ ಪ್ರಕೃತಿ ಪ್ರೇಮವನ್ನು ಗುರುತಿಸಿಅದಕ್ಕಾಗಿ ನೇತೃತ್ವ ನೀಡಿದ ಚಾಲಕ ರಾಜಣ್ಣ ಅವರನ್ನು ವಿಶೇಷವಾಗಿ ಗೌರವಿಸಿದರು.
ಹತ್ತು ಮಕ್ಕಳ ಸಾಕಿ ಸಲಹಿದಂತೆ
ಕುಂಬಳೆಯ ಆಟೋ ಚಾಲಕರು ಮರವೊಂದನ್ನು ನೆಟ್ಟು ಬೆಳೆಸುವುದು ಹತ್ತು ಮಕ್ಕಳನ್ನು ಸಾಕಿ ಸಲಹುವುದಕ್ಕೆ ಸಮಾನ ಎಂಬುದನ್ನು ಸಾಧಿಸಿ ತೋರಿಸಿದ್ದಾರೆಂದು ಹೋಲಿ ಫ್ಯಾಮಿಲಿ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿ.ಹಿಲ್ಡಾ ಕ್ರಾಸ್ತ ಈ ಸಂದರ್ಭದಲ್ಲಿ ಹೇಳಿದರು. ಮರ ಗಿಡಗಳ ರಕ್ಷಣೆಯಿಂದ ನಮ್ಮನ್ನು ನಾವೇ ರಕ್ಷಿಸಿದಂತಾಗುವುದು ಎಂದು ಗೈಡ್ ನಾಯಕಿ ಕಾರ್ಮೆಲಿ ತಿಳಿಸಿದರು. ಪುಟಾಣಿ ಪಕ್ಷಿ ನಿರೀಕ್ಷಕ ಪ್ರಣವ್ ಸ್ವಾಗತಿಸಿದರು. ಅಧ್ಯಾಪಕ ರಾಜು ಕಿದೂರು ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ
Mahalingpur: ಇಂದು ಮೃತ ಯೋಧ ಮಹೇಶ ಅಂತ್ಯಕ್ರಿಯೆ; ಯೋಧನ ಮನೆಗೆ ಸಚಿವ ತಿಮ್ಮಾಪುರ ಭೇಟಿ
Max Movie: ಸಖತ್ ರೆಸ್ಪಾನ್ಸ್ ಪಡೆದ ಕಿಚ್ಚನ ʼಮ್ಯಾಕ್ಸ್ʼ ಮೊದಲ ದಿನ ಗಳಿಸಿದ್ದೆಷ್ಟು?
Updated: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ
Madikeri: ಶ್ರೀಗಂಧದ ಮರ ಕಳ್ಳತನ ಪ್ರಕರಣ: ಆರೋಪಿಗಳ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.