ವರ್ಣರಂಜಿತ ಶೋಭಾಯಾತ್ರೆಯೊಂದಿಗೆ ಗಣೇಶೋತ್ಸವ ಸಂಪನ್ನ
Team Udayavani, Aug 31, 2017, 8:20 AM IST
ಕಾಸರಗೋಡು: ಐದು ದಿನಗಳಿಂದ ಭಕ್ತಿ, ಶ್ರದ್ಧೆ, ಸಂಭ್ರಮ, ಸಡಗರದಿಂದ ನಡೆಯುತ್ತಿದ್ದ 62ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ವರ್ಣರಂಜಿತ ಶೋಭಾಯಾತ್ರೆಯೊಂದಿಗೆ ಸಂಪನ್ನಗೊಂಡಿತು.
ಆ. 25ರಂದು ಕಾಸರಗೋಡು ನಗರದ ಇತಿಹಾಸ ಪ್ರಸಿದ್ಧ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಪ್ರಾಂಗಣದಲ್ಲಿ ಪ್ರತಿಷ್ಠೆಗೊಂಡ ಶ್ರೀ ಗಣಪತಿ ವಿಗ್ರಹಕ್ಕೆ ಕಳೆದ ಐದು ದಿನಗಳಿಂದ ಪೂಜೆ, ಪುನಸ್ಕಾರ ಸಲ್ಲಿಸಿದ ಭಕ್ತಾದಿಗಳು ಪುನೀತರಾಗಿದ್ದರು. ಐದೂ ದಿನವೂ ವೈವಿಧ್ಯಮಯ ವಿಧಿವಿಧಾನಗಳ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.
ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಗಿತ್ತು. ಆ. 29ರಂದು ಬೆಳಗ್ಗೆ ಗಣಹೋಮ, ಪೂಜೆಯ ಬಳಿಕ ಸಮಾರೋಪ ಸಮಾ ರಂಭ ನಡೆಯಿತು. ಸಮಾರಂಭದಲ್ಲಿ ಡಾ| ವೆಂಕಟಗಿರಿ ಕೆ.ಎಂ. ಅಧ್ಯಕ್ಷತೆ ವಹಿಸಿದರು. ಗೀತಾ ಸಾವಿತ್ರಿ ಬಹು ಮಾನ ವಿತರಿಸಿದರು. ಆ ಬಳಿಕ ಧ್ವಜಾ ವತರಣ, ಮಹಾಪೂಜೆ ನಡೆದು ಶ್ರೀ ಮಹಾಗಣಪತಿ ವಿಗ್ರಹ ವಿಸರ್ಜನಾ ಮೆರವಣಿಗೆ ಆರಂಭಗೊಂಡಿತು. ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಿಂದ ಹೊರಟು ಬ್ಯಾಂಕ್ ರಸ್ತೆ, ಶಿವಾಜಿ ನಗರ, ಅಶ್ವಿನಿ ನಗರ, ನೇತಾಜಿ ವೃತ್ತ, ಮಹಾತ್ಮಾಗಾಂಧಿ ರಸ್ತೆ, ಶ್ರೀ ರಾಮ ಪೇಟೆಯಾಗಿ ಶ್ರೀ ವರದರಾಜ ವೆಂಕಟರಮಣ ದೇವಸ್ಥಾನದ ಶ್ರೀ ಲಕ್ಷ್ಮೀ ಸರೋವರದಲ್ಲಿ ಶ್ರೀ ಗಣೇಶ ವಿಗ್ರಹವನ್ನು ವಿಸರ್ಜಿಸಲಾಯಿತು.
ಶೋಭಾಯಾತ್ರೆಯ ಜತೆಗೆ ವಿವಿಧ ಆರಾಧನಾಲಯಗಳ ಆಶ್ರಯದಲ್ಲಿ ರೂಪಿಸಿದ ಭಾರತೀಯ ಸಂಸ್ಕೃತಿ, ಪುರಾಣವನ್ನು ಪ್ರತಿಬಿಂಬಿಸುವ ನಿಶ್ಚಲ ದೃಶ್ಯಗಳು ನೋಡುಗರ ಕಣ್ಮನ ಸೆಳೆಯಿತು. ದಾರಿ ಉದ್ದಕ್ಕೂ ಅಲ್ಲಲ್ಲಿ ಮಂಟಪಗಳನ್ನು ನಿರ್ಮಿಸಿ ಭಕ್ತರು ಶ್ರೀ ಗಣೇಶ ವಿಗ್ರಹಕ್ಕೆ ಆರತಿ ಬೆಳಗಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.