ಧರ್ಮ ರಕ್ಷಣೆಗಾಗಿ ಎಲ್ಲರೂ ಒಂದಾಗಬೇಕು : ಆನೆಗುಂದಿಶ್ರೀ
Team Udayavani, Jul 15, 2017, 2:55 AM IST
ಕಾಸರಗೋಡು: ನಮ್ಮ ಧರ್ಮಾಚರಣೆಗೆ ತೊಂದರೆಯಾದಲ್ಲಿ ಧರ್ಮ ರಕ್ಷಣೆಗಾಗಿ ನಾವೆಲ್ಲರೂ ಒಂದಾಗಬೇಕು. ಎಲ್ಲಾ ಎಲ್ಲೆಗಳನ್ನು ಮೀರಿ ಸಮಸ್ತ ಜೀವ ಸಂಕುಲವನ್ನು ಒಂದೇ ಕುಟುಂಬ ಎಂದು ಭಾವಿಸುವ ಸಂತರು. ಗುರುಗಳಾಗಿ ಮುಕ್ತಿ ಪಥದತ್ತ ಕೊಂಡೊಯ್ಯುವ ಮಾರ್ಗದರ್ಶಕರು ಎಂದು ಕಟಪಾಡಿ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಗಳವರು ಹೇಳಿದರು.
ಅವರು ಕಾಪು ಕಳತ್ತೂರು ಕುಶಲಶೇಖರ ಶೆಟ್ಟಿ ಅಡಿಟೋರಿಯಂನಲ್ಲಿ ಶ್ರೀ ಸ್ವಾಮೀಜಿಗಳವರು ಕುತ್ಯಾರಿನ ಶ್ರೀ ಮಠದ ನಿವೇಶನದಲ್ಲಿ ಕೈಗೊಳ್ಳಲಿರುವ ಚಾತುರ್ಮಾಸ್ಯ ವ್ರತಾಚರಣೆ ಸಂಬಂಧ ನಡೆಯಲಿರುವ ಪುರಪ್ರವೇಶೋತ್ಸವದ ಸಂಬಂಧ ಸಾರ್ವಜನಿಕ ಸ್ವಾಗತ ಸಮಿತಿ ವತಿಯಿಂದ ನಡೆದ ಧಾರ್ಮಿಕ ಸಭೆ ಸಂತ ದರ್ಶನ ಕಾರ್ಯಕ್ರಮದಡಿ ಪೌರಸಮ್ಮಾನವನ್ನು ಸ್ವೀಕರಿಸಿ ತಮ್ಮ ಆಶೀರ್ವಚನದಲ್ಲಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪುರಪ್ರವೇಶೋತ್ಸವ ಸಾರ್ವಜನಿಕ ಸ್ವಾಗತ ಸಮಿತಿ ಅಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿ, ಅರಿವಿನ ಅರಮನೆಯ ಹೆಬ್ಟಾಗಿಲು ಗುರುಪೀಠ. ದೊರಕಿರುವ ಗುರುವನ್ನು ಉಳಿಸಿಕೊಳ್ಳುವ ಗುರುತರ ಹೊಣೆ ಹಿಂದು ಸಮಾಜಕ್ಕಿದೆ. ಸಜ್ಜನರ ಕೂಟ ಬದುಕಿಗೆ ಸದಾ ಸಂಭ್ರಮ, ಸಡಗರವನ್ನು ಕೊಡುತ್ತದೆ. ಊರಿಗೆ ಊರೇ ಹಬ್ಬವನ್ನಾಚರಿಸುವ ಸಡಗರ ಸಂಭ್ರಮವು ಈ ಸಂದರ್ಭ ಆಗುತ್ತಿದೆ. ತಿದ್ದಿ ತೀಡಿ ಸಮಾಜವನ್ನು ಕಟ್ಟುವ ಕೆಲಸ ಧರ್ಮಗುರುಗಳಿಂದಾಗಲಿದೆ. ಆ ನಿಟ್ಟಿನಲ್ಲಿ ಸಮಸ್ತರು ಕಾಲಗತಿಯೊಂದಿಗೆ ಹೆಜ್ಜೆ ಹಾಕಬೇಕಿದೆ ಎಂದರು.
ವಿಧಾನ ಪರಿಷತ್ ಸದಸ್ಯ, ಧಾರ್ಮಿಕ ದತ್ತಿ ಇಲಾಖೆಯ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಹಿಂದು ಧರ್ಮದ ಜಗದ್ಗುರುಗಳಾದ ಅನಂತಶ್ರೀ ವಿಭೂತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಗಳವರಿಂದ ಆತಂಕದ ನಡುವೆಯೂ ಹಿಂದೂ ಧರ್ಮ ವನ್ನು ಕಟ್ಟುವ ಕಾಯಕ ಕಾರ್ಯರೂಪಕ್ಕಿಳಿ ಯಬೇಕಿದೆ. ನಮ್ಮ ಧರ್ಮ, ಸ್ವಾಭಿಮಾನ, ವಿಶ್ವಾಸ ನಂಬಿಕೆ ಇದ್ದಲ್ಲಿ ನಿಶ್ಚಯವಾಗಿ ಗೆಲುವು ಲಭಿಸುತ್ತದೆ. ಚಾತುರ್ಮಾಸ್ಯವು ಹಿಂದು ಸಮಾಜಕ್ಕೆ ಶಕ್ತಿ ಸಾಮರ್ಥ್ಯ ಕೊಡಲಿ ಎಂದರು.
ಧಾರ್ಮಿಕ ಉಪನ್ಯಾಸ ನೀಡಿದ ಯಕ್ಷಗಾನ ಅರ್ಥಧಾರಿಗಳಾದ ಉಜಿರೆ ಅಶೋಕ ಭಟ್, ಧಾರ್ಮಿಕ, ವೇದೋಕ್ತ ಅನುಷ್ಠಾನ ಚಾತುರ್ಮಾಸ್ಯ, ತ್ಯಾಗದಿಂದ ಮಾತ್ರ ಗುರುಗಳ ಅನುಗ್ರಹವಾಗುತ್ತದೆ. ಸಮಾಜವನ್ನು ಸಂಘಟಿಸುವ, ಸಮಾಜವನ್ನು ಮೋಕ್ಷದೆಡೆ ಕೊಂಡೊಯ್ಯುವ ಧಾರ್ಮಿಕ ಸಂದೇಶ ಗುರುಗಳಿಂದಾಗುತ್ತದೆ. ಕ್ರಿಯಾ ಯಜ್ಞ, ಜ್ಞಾನಯಜ್ಞ, ತ್ಯಾಗದ ಆದರ್ಶವೇ ಚಾತುರ್ಮಾಸ್ಯವಾಗಿದೆ ಎಂದರು.
ಜಿ.ಪಂ. ಅಧ್ಯಕ್ಷ ದಿನಕರಬಾಬು, ರಾಜ್ಯಧಾರ್ಮಿಕ ಪರಿಷತ್ ಸದಸ್ಯ ಕೇಂಜ ಶ್ರೀಧರ ತಂತ್ರಿ, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಮಾತನಾಡಿದರು.
ಮಾಜಿ ಶಾಸಕರಾದ ಲಾಲಾಜಿ ಆರ್.ಮೆಂಡನ್, ಪ್ರತಿಷ್ಠಾನ ಅಧ್ಯಕ್ಷರಾದ ತ್ರಾಸಿ ಸುಧಾಕರ ಆಚಾರ್ಯ, ಚಾತು ರ್ಮಾಸ್ಯ ವ್ರತ ನಿರ್ವಹಣಾ ಸಮಿತಿಯ ಗೌರವಾಧ್ಯಕ್ಷರಾದ ಕೆ.ಕೇಶವ ಆಚಾರ್ಯ, ಮಾತೃ ಮಂಡಳಿ ಅಧ್ಯಕ್ಷೆ ಶಿಲ್ಪಾ ಜಿ. ಸುವರ್ಣ, ಕುತ್ಯಾರು ಅರಮನೆ ಜಿನೇಶ್ ಬಲ್ಲಾಳ್, ಶ್ರೀ ಕ್ಷೇತ್ರ ಎಲ್ಲೂರಿನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವೈ.ಪ್ರಫುಲ್ಲ ಶೆಟ್ಟಿ ಎಲ್ಲೂರುಗುತ್ತು, ವಿವಿಧ ಸಮಾಜದ ಮುಖ್ಯಸ್ಥರು ವೇದಿಕೆಯಲ್ಲಿದ್ದರು.
ಸಾರ್ವಜನಿಕ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಮುರಲೀಧರ ಪೈ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಕುತ್ಯಾರು ಪ್ರಸಾದ್ ಪ್ರಸ್ತಾವನೆಗೈದರು. ಕಾರ್ಯದರ್ಶಿ ಜಯಪ್ರಕಾಶ್ ಪ್ರಭು ವಂದಿಸಿದರು. ರೇಶ್ಮಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಅನಂತರ ಭಕ್ತಾದಿಗಳೊಂದಿಗೆ ಶ್ರೀ ಸ್ವಾಮೀಜಿಯವರ ಬೃಹತ್ ಶೋಭಾ ಯಾತ್ರೆಯ ಮೂಲಕ ಪಡುಕುತ್ಯಾರಿನ ಶ್ರೀ ಮಠದ ನಿವೇಶನಕ್ಕೆ ತೆರಳಲಾಯಿತು.
ಸನಾತನ ಧರ್ಮವು ಎಲ್ಲ ಧರ್ಮಕ್ಕೂ ಮಾತೃಸ್ಥಾನದಲ್ಲಿದೆ. ಯಾವುದನ್ನು ಅರಿತು, ವಿಮರ್ಶೆ ಮಾಡಿ, ಅರಿತುಕೊಂಡು ಮುಕ್ತವಾದುದನ್ನು ಅಳವಡಿಸಿಕೊಂಡು ಧಾರ್ಮಿಕನನ್ನಾಗಿಸುತ್ತದೋ ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಂತರಂಗದಿಂದ ಆದ ಸುಧಾರಣೆಯಿಂದ ಪರಿವರ್ತನೆ ಸಾಧ್ಯ. ವ್ಯಕ್ತಿ ಹಿತಚಿಂತನೆ ಬಿಟ್ಟು, ಸಮಷ್ಟಿಯ ಚಿಂತನೆ ಹಿಂದೂ ಬಾಂಧವರು ಬೆಳೆಸಿಕೊಳ್ಳಬೇಕು. ಕಾನೂನು ಮಾಡದೆ ಸಮಾಜದ ಸುಧಾರಣೆಯು ಸಂತರ ಸಂಪರ್ಕದಿಂದಾಗುತ್ತದೆ ಎಂದರು.
ಕಟಪಾಡಿ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಯವರು ಆಶೀರ್ವಚಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kasaragodu: ಸ್ಲೀಪರ್ ಸೆಲ್ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್
Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ
Kasaragod: ಮರಳಿ ಬಂದ ಯುವಕ – ಯುವತಿ ಮತ್ತೆ ನಾಪತ್ತೆ
Kasaragod crime News: ಶಾಲಾ ತರಗತಿಯಲ್ಲಿ ವಿದ್ಯಾರ್ಥಿನಿಗೆ ಹಾವು ಕಡಿತ
Kumble: ಯುವಕನ ಕೊಲೆ; ಆರು ಮಂದಿ ಅಪರಾಧಿಗಳು ಡಿ. 23ರಂದು ಶಿಕ್ಷೆ ತೀರ್ಪು ಘೋಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.