AIMS ಕಾಸರಗೋಡಿನಲ್ಲಿ ಸ್ಥಾಪಿಸುವಂತೆ ಆಗ್ರಹಿಸಿ ಬದಿಯಡ್ಕದಲ್ಲಿ ವ್ಯಾಪಾರಿಗಳಿಂದ ಸಹಿ ಸಂಗ್ರಹ
Team Udayavani, Sep 16, 2020, 7:23 PM IST
ಸಹಿ ಸಂಗ್ರಹ ಅಭಿಯಾನವನ್ನು ಎಸ್.ಎನ್. ಮಯ್ಯ ಬದಿಯಡ್ಕ ಉದ್ಘಾಟಿಸಿದರು.
ಬದಿಯಡ್ಕ: ಕೇಂದ್ರ ಸರಕಾರದಿಂದ ನಿಯಂತ್ರಿಸಲ್ಪಡುವ ವಿಶ್ವ ದರ್ಜೆಯ ಆರೋಗ್ಯ ವ್ಯವಸ್ಥೆಯಾದ “ಏಮ್ಸ್’ ಕಾಸರಗೋಡು ಜಿಲ್ಲೆಯಲ್ಲೇ ಸ್ಥಾಪಿಸಲ್ಪಡಬೇಕು. ಎಂಡೋಸಲ್ಫಾನ್ ಬಾಧಿತ ಪ್ರದೇಶವಾದ ಕಾಸರಗೋಡು ಜಲ್ಲೆಯ ಜನತೆಗೆ ಇದು ಅನುಕೂಲವಾಗಬೇಕು ಎಂದು ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಕಾಸರಗೋಡು ಜಿಲ್ಲಾ ಉಪಾಧ್ಯಕ್ಷ ಎಸ್.ಎನ್. ಮಯ್ಯ ಬದಿಯಡ್ಕ ಹೇಳಿದರು.
ಏಮ್ಸ್ ಸಂಸ್ಥೆ ಕಾಸರಗೋಡು ಜಿಲ್ಲೆಗೆ ಎಂಬ ಘೋಷಣೆಯೊಂದಿಗೆ ಬದಿಯಡ್ಕ ಬಸ್ ನಿಲ್ದಾಣದ ಸಮೀಪದಲ್ಲಿ ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ವತಿಯಿಂದ ನಡೆದ ಸಹಿ ಸಂಗ್ರಹ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೆವಿವಿಇಎಸ್ ಬದಿಯಡ್ಕ ಯೂನಿಟ್ ಅಧ್ಯಕ್ಷ ಕುಂಜಾರು ಮುಹಮ್ಮದ್ ಹಾಜಿ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯದರ್ಶಿ ಹಮೀದ್ ಕಾರ್ಯಕ್ರಮ ನಿರೂಪಿಸಿದರು. ಬದಿಯಡ್ಕ ಪೇಟೆಯಲ್ಲಿ ಸಹಿ ಸಂಗ್ರಹಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.