ಮಕ್ಕಳ ಅಭಿವೃದ್ಧಿಗೆ ‘ಸ್ಮಾರ್ಟ್‌ ಅಂಗನವಾಡಿ’ ನಿರ್ಮಾಣ

ಈಜುಕೊಳ, ಉದ್ಯಾನ, ಇನ್‌ಡೋರ್‌, ಔಟ್ ಡೋರ್‌ ಆಟದ ಮೈದಾನ ವ್ಯವಸ್ಥೆ

Team Udayavani, Aug 5, 2019, 5:26 AM IST

as

ಕಾಸರಗೋಡು : ಮಕ್ಕಳ ಸಮಗ್ರ ಅಭಿವೃದ್ಧಿ ಯೋಜನೆಯಂತೆ ಕೇರಳ ರಾಜ್ಯ ಸರಕಾರ ರಾಜ್ಯದೆಲ್ಲೆಡೆ ‘ಸ್ಮಾರ್ಟ್‌ ಅಂಗನವಾಡಿ’ಗಳನ್ನು ಸ್ಥಾಪಿಸುವ ಮಹತ್ವದ ಯೋಜನೆಯನ್ನು ರೂಪಿಸಿದೆ. ಪ್ರಸ್ತುತ ಇರುವ ಅಂಗನವಾಡಿಗಳನ್ನು ಸಬಲೀಕರಣ ಗೊಳಿಸುವ ಮತ್ತು ಆಧುನಿಕ ಸೌಲಭ್ಯಗಳಿ ರುವ ಅಂಗನವಾಡಿಗಳನ್ನು ನಿರ್ಮಿಸುವ ಉದ್ದೇಶವನ್ನು ಸರಕಾರ ಹೊಂದಿದೆ.

ಮಕ್ಕಳ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ರುವ ಪ್ರಕೃತಿ ಸ್ನೇಹಿ ಅಂಗನವಾಡಿಗಳನ್ನು ನಿರ್ಮಿಸಲಾಗುವುದು. ಮಕ್ಕಳ ಮಾನಸಿಕ, ದೈಹಿಕ ಮತ್ತು ಸಾಮೂಹಿಕ ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡು ಸ್ಮಾರ್ಟ್‌ ಅಂಗನ ವಾಡಿಗಳ ನಿರ್ಮಾಣವಾಗಲಿದೆ. ಈ ಅಂಗನ ವಾಡಿಗಳಲ್ಲಿ ಅತ್ಯುತ್ತಮ ಗುಣಮಟ್ಟದ ಸೌಕರ್ಯಗಳನ್ನು ಕಲ್ಪಿಸಲಾಗುವುದು.

ಶಿಶು ವಿಕಸನ ಇಲಾಖೆ ಅಂಗನವಾಡಿಗಳ ಮೂಲ ಸೌಕರ್ಯಗಳನ್ನು ಅಭಿವೃದ್ಧಿಗೊಳಿಸಿ ಮಕ್ಕಳ ಮಾನಸಿಕ ಹಾಗು ಬೌದ್ಧಿಕ, ಶಾರೀರಿಕ ವಿಕಾಸವನ್ನು ಗುರಿಯಾಗಿರಿಸಿಕೊಂಡು ಇಂತಹ ಅಂಗನವಾಡಿಗಳ ನಿರ್ಮಾಣದ ಮಹತ್ವಾಕಾಂಕ್ಷೆಯ ಯೋಜನೆಯನ್ನು ಸಾಕಾರ ಗೊಳಿಸಲು ಮುಂದಾಗಿದೆ. ಅಂಗನ ವಾಡಿ ಕಟ್ಟಡಗಳಿಂದ ಆರಂಭಗೊಂಡು ಮಕ್ಕಳ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿ ಸುವ ಎಲ್ಲಾ ಕಾರ್ಯಗಳನ್ನು ಗಮನಹರಿಸಿ ಮಾದರಿ ಅಂಗನವಾಡಿಗಳಿಗೆ ರೂಪುಕಲ್ಪನೆ ನೀಡಲಾಗಿದೆ. ಆರು ವರ್ಷ ಪ್ರಾಯದ ವರೆಗಿನ ಮಕ್ಕಳ ಬೆಳವಣಿಗೆಗೆ ಮತ್ತು ಬುದ್ಧಿ ವಿಕಾಸಕ್ಕೆ ಅನುಗುಣವಾಗಿ ತಿರುವನಂತ ಪುರದ ಚೈಲ್ಡ್ ಡೆವಲಪ್‌ಮೆಂಟ್ ಸೆಂಟರ್‌(ಸಿ.ಡಿ.ಸಿ)ನ ವರದಿಯ ಆಧಾರದಲ್ಲಿ ಅಂಗನವಾಡಿಗಳನ್ನು ಸಮಗ್ರವಾಗಿ ಪರಿಷ್ಕರಿಸಲಾಗಿದೆ.

2019-20ನೇ ಹಣಕಾಸು ವರ್ಷದಲ್ಲಿ ರಾಜ್ಯದಲ್ಲಿ ಒಟ್ಟು 210 ಸ್ಮಾರ್ಟ್‌ ಅಂಗನ ವಾಡಿಗಳನ್ನು ನಿರ್ಮಿಸಲು ಕೇರಳ ರಾಜ್ಯ ಸರಕಾರ ಉದ್ದೇಶಿಸಿದೆ. ಕೇರಳ ರಾಜ್ಯ ನಿರ್ಮಿತಿ ಕೇಂದ್ರ ಹಾಗು ಕಾಲೇಜು ಆಫ್‌ ಆರ್ಕಿಟೆಕ್ಚರ್‌ ಸಂಯುಕ್ತವಾಗಿ ಸ್ಥಾಪಿಸಿದ ಲಾರಿ ಬೇಕರ್‌ನ ಹೆಸರಿನಲ್ಲಿರುವ ಕಾಟ್ಲ್ಯಾಬಿಸಾಸ್‌ ಡಿಸೈನ್‌ ಲ್ಯಾಬ್‌ನಲ್ಲಿ ಇದರ ಮಾದರಿ ನಕ್ಷೆಯನ್ನು ತಯಾರಿಸಲಾಗಿದೆ.

ವ್ಯತ್ಯಸ್ಥ ವಿಸ್ತೃತಿಗನುಸಾರವಾಗಿ ಕಟ್ಟಡದ ರೂಪುರೇಷೆ ತಯಾರಿಸಲಾಗಿದೆ. ಸದ್ಯ ಆರು ರೀತಿಯ ಮಾದರಿಯನ್ನು ತಯಾರಿಸಿದ್ದು ಅವುಗಳ ರೀತಿಯಲ್ಲಿ ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಲಾಗುವುದು. ಒಂದೂವರೆ ಸೆಂಟ್ಸ್‌ ಸ್ಥಳದಿಂದ ಆರಂಭಿಸಿ 10 ಸೆಂಟ್ಸ್‌ ಸ್ಥಳಾವಕಾಶದಲ್ಲಿ ಯೋಗ್ಯವಾದ ರೀತಿಯಲ್ಲಿ ಅಂಗನವಾಡಿ ಕಟ್ಟಡಗಳ ನಿರ್ಮಾಣವಾಗಲಿದೆ. 10 ಸೆಂಟ್ಸ್‌ ಮತ್ತು ಏಳೂವರೆ ಸೆಂಟ್ಸ್‌ ಸ್ಥಳವಿರುವ ಅಂಗನವಾಡಿಗಳಲ್ಲಿ ಈಜು ಕೊಳ, ಉದ್ಯಾನ, ಇಂಡೋರ್‌, ಔಟ್ ಡೋರ್‌ ಆಟದ ಮೈದಾನ ವ್ಯವಸ್ಥೆಯನ್ನು ಕಲ್ಪಿಸಲಾಗುವುದು.

ಆರಂಭಿಕ ಹಂತದಲ್ಲಿ ತಿರುವನಂತಪುರ ಜಿಲ್ಲೆಯ ಪೂಜಾಪುರ ಮಹಿಳಾ ಶಿಶು ವಿಕಸನ ಇಲಾಖೆಯ ಸ್ವಾಧೀನ ದಲ್ಲಿರುವ 10 ಸೆಂಟ್ಸ್‌ ಸ್ಥಳದಲ್ಲಿ ಮತ್ತು ತಿರುವನಂತಪುರ ಅರ್ಬನ್‌ 2 ಐ.ಸಿ.ಡಿ.ಎಸ್‌. ಪ್ರಾಜೆಕ್ಟ್ ವ್ಯಾಪ್ತಿಯಲ್ಲಿರುವ 37 ನೇ ನಂಬ್ರದ ಅಂಗನವಾಡಿಗೆ ಸ್ಮಾರ್ಟ್‌ ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಲಾಗುವುದು. ಪ್ರಸ್ತುತ ಬಾಡಿಗೆ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಅಂಗನವಾಡಿಗಳು ಪೂರ್ಣವಾಗಿ ಇಲಾಖೆಯ ಫಂಡ್‌ ಮಾತ್ರವೇ ಬಳಸಿ ಸ್ಮಾರ್ಟ್‌ ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಲಾಗುವುದು. ಎರಡು ಹಂತಗಳಲ್ಲಿ 1655.23 ಚದರಡಿ ವಿಸ್ತೀರ್ಣದಲ್ಲಿ ಸ್ಮಾರ್ಟ್‌ ಅಂಗನವಾಡಿಗಳಿಗೆ 44,94,518 ರೂ. ಎಸ್ಟಿಮೇಟ್ ಮಾಡಲಾಗಿದೆ.

ಮಕ್ಕಳ ಬೌದ್ಧಿಕ ಬೆಳವಣಿಗೆಯಲ್ಲಿ ಅಂಗನವಾಡಿಗಳು ಪ್ರಮುಖ ಪಾತ್ರವಹಿಸುತ್ತವೆ. ಈ ಹಿನ್ನೆಲೆಯಲ್ಲಿ ಅಂಗನವಾಡಿಗಳ ಕಟ್ಟಡವನ್ನು ಆಧುನೀಕರಣಗೊಳಿಸುವುದು ಕೂಡಾ ಅಷ್ಟೇ ಮುಖ್ಯ ಎಂಬ ನೆಲೆ ಯಲ್ಲಿ ಸ್ಮಾರ್ಟ್‌ ಅಂಗನವಾಡಿಗಳಾಗಿ ಬದಲಾ ಯಿಸಲಾಗುವುದು. ರಾಜ್ಯದಲ್ಲಿ 258 ಐ.ಸಿ.ಡಿ.ಎಸ್‌. ಪ್ರಾಜೆಕ್ಟ್ಗಳಲ್ಲೂ ಸ್ಥಳೀಯಾಡಳಿತ ಸಂಸ್ಥೆಗಳ, ಶಾಸಕರ ಮತ್ತು ಸಂಸದರ ಪ್ರಾದೇಶಿಕ ನಿಧಿಯನ್ನು ಮತ್ತು ಶಿಶು ವಿಕಸನ ಇಲಾಖೆಯ ನಿಧಿಯನ್ನು ಬಳಸಿಕೊಂಡು ಈ ಯೋಜನೆಗೆ ರೂಪು ನೀಡಲಾಗಿದೆ.

ಪ್ರಮುಖ ಪಾತ್ರ

ಸ್ಮಾರ್ಟ್‌ ಅಂಗನವಾಡಿಅಂಗನವಾಡಿಗಳಲ್ಲಿ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಿ ಮಕ್ಕಳ ಮಾನಸಿಕ, ಶಾರೀರಿಕ ಹಾಗು ಬೌದ್ಧಿಕ ಸ್ಥಿತಿಯನ್ನು ಉತ್ತಮಪಡಿಸಿ ಮಕ್ಕಳ ಸಮಗ್ರ ಅಭಿವೃದ್ಧಿ ಸಂಕಲ್ಪದೊಂದಿಗೆ ಸ್ಮಾರ್ಟ್‌ ಅಂಗನವಾಡಿಗಳನ್ನು ನಿರ್ಮಿಸಲು ಶಿಶು ವಿಕಸನ ಇಲಾಖೆ ಗುರಿಯಿರಿಸಿಕೊಂಡಿದೆ.
-ಕೆ.ಕೆ. ಶೈಲಜಾ, ಆರೋಗ್ಯ ಸಚಿವೆ, ಕೇರಳ ಸರಕಾರ

ಟಾಪ್ ನ್ಯೂಸ್

ಅಂತಾರಾಜ್ಯ ಮಕ್ಕಳ ಮಾರಾಟ ಜಾಲ ಪತ್ತೆ… 4.50 ಲಕ್ಷಕ್ಕೆ ಗೋವಾಕ್ಕೆ ಮಾರಿದ್ದ ಮಗುವಿನ ರಕ್ಷಣೆ

ಅಂತಾರಾಜ್ಯ ಮಕ್ಕಳ ಮಾರಾಟ ಜಾಲ ಪತ್ತೆ… 4.50 ಲಕ್ಷಕ್ಕೆ ಗೋವಾಕ್ಕೆ ಮಾರಿದ್ದ ಮಗುವಿನ ರಕ್ಷಣೆ

Protest: ಮುಳಗುಂದ: ಕಡಲೆ ಖರೀದಿ ಹಣ ಬಿಡುಗಡೆಗೆ ಆಗ್ರಹಿಸಿ ಪಾದಯಾತ್ರೆ… ಅಹೋರಾತ್ರಿ ಧರಣಿ

Protest: ಮುಳಗುಂದ: ಕಡಲೆ ಖರೀದಿ ಹಣ ಬಿಡುಗಡೆಗೆ ಆಗ್ರಹಿಸಿ ಪಾದಯಾತ್ರೆ… ಅಹೋರಾತ್ರಿ ಧರಣಿ

7-surathkal

Surathkal: ಈಜಾಡಲು ತೆರಳಿದ್ದ ನಾಲ್ವರ ಪೈಕಿ ಮೂವರು ಸಮುದ್ರಪಾಲು

Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ

Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ

Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್

Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್

1-delhi

Delhi Election; ಅಧಿಕಾರ ಉಳಿಸಿಕೊಳ್ಳುವರೋ? ಪಡೆದುಕೊಳ್ಳುವರೋ?

Visa Extended: ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ವೀಸಾ ಅವಧಿ ವಿಸ್ತರಿಸಿದ ಭಾರತ

Visa Extended: ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ವೀಸಾ ಅವಧಿ ವಿಸ್ತರಿಸಿದ ಭಾರತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

ಅಂತಾರಾಜ್ಯ ಮಕ್ಕಳ ಮಾರಾಟ ಜಾಲ ಪತ್ತೆ… 4.50 ಲಕ್ಷಕ್ಕೆ ಗೋವಾಕ್ಕೆ ಮಾರಿದ್ದ ಮಗುವಿನ ರಕ್ಷಣೆ

ಅಂತಾರಾಜ್ಯ ಮಕ್ಕಳ ಮಾರಾಟ ಜಾಲ ಪತ್ತೆ… 4.50 ಲಕ್ಷಕ್ಕೆ ಗೋವಾಕ್ಕೆ ಮಾರಿದ್ದ ಮಗುವಿನ ರಕ್ಷಣೆ

Protest: ಮುಳಗುಂದ: ಕಡಲೆ ಖರೀದಿ ಹಣ ಬಿಡುಗಡೆಗೆ ಆಗ್ರಹಿಸಿ ಪಾದಯಾತ್ರೆ… ಅಹೋರಾತ್ರಿ ಧರಣಿ

Protest: ಮುಳಗುಂದ: ಕಡಲೆ ಖರೀದಿ ಹಣ ಬಿಡುಗಡೆಗೆ ಆಗ್ರಹಿಸಿ ಪಾದಯಾತ್ರೆ… ಅಹೋರಾತ್ರಿ ಧರಣಿ

7-surathkal

Surathkal: ಈಜಾಡಲು ತೆರಳಿದ್ದ ನಾಲ್ವರ ಪೈಕಿ ಮೂವರು ಸಮುದ್ರಪಾಲು

Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ

Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ

11(1

Manipal: ಮಣ್ಣಪಳ್ಳ ಕೆರೆಯಲ್ಲಿ ಹೇಳ್ಳೋರಿಲ್ಲ, ಕೇಳ್ಳೋರಿಲ್ಲ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.