ಸಮಾಜ ಸಂಘಟನೆಗಳು ಸಮಾಜಮುಖೀ ಕಾರ್ಯಕ್ರಮ ಹಮ್ಮಿಕೊಳ್ಳಲಿ
Team Udayavani, Apr 24, 2018, 6:40 AM IST
ಕಾಸರಗೋಡು: ಸಮುದಾಯ ಸಂಘಟನೆಗಳು ಸಮಾಜಮುಖೀ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಾಜಹಿತ, ಜನಹಿತ ಸಂಘಟನೆಗಳಾಗಬೇಕು. ಸಮಾಜದ ಸಾಧಕರನ್ನು ಗುರುತಿಸಿ ಗೌರವಿಸುವ ಜತೆಯಲ್ಲಿ ಪೂರ್ವಸೂರಿಗಳ ಕೊಡುಗೆಗಳನ್ನು ಸ್ಮರಿಸುವ ಮೂಲಕ ಸುಭದ್ರ ಸಮಾಜವನ್ನು ಕಟ್ಟಬೇಕು ಎಂದು ಹಿರಿಯ ಪತ್ರಕರ್ತ, ಸಂಸ್ಕೃತಿ ಚಿಂತಕ ಮಲಾರ್ ಜಯರಾಮ ರೈ ಹೇಳಿದರು.
ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದಲ್ಲಿ ಆಯೋಜಿಸಿದ ಬೇಕಲ ರಾಮನಾಯಕ ಶತಮಾನೋತ್ತರ ಸಂಸ್ಮರಣೆ ಮತ್ತು ಸಾಧಕರಿಗೆ ಅಭಿನಂದನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬದುಕಿನ ಸುಖ, ಖಾಸಗೀತನವನ್ನು ಮರೆತು ಸಾಧನಾ ಪಥದಲ್ಲಿ ಮುಂದುವರಿದಾಗ ಮಹಾನ್ ಕೊಡುಗೆಗಳ ನಿರ್ಮಾಣವಾಗುತ್ತದೆ. ಕನ್ನಡಾಂತರ್ಗತ ತುಳುನಾಡಿಗೆ ಕನ್ನಡ ಸಮಾಜ ಬಾಂಧವರು ನೀಡಿದ ಕೊಡುಗೆ ಗಮನಾರ್ಹ. ಈ ಪ್ರದೇಶವನ್ನು ತನ್ನ ಅಂಕಿತದಲ್ಲಿರಿಸಿದ್ದ ಕನ್ನಡ ರಾಜರುಗಳ ಜತೆಯಲ್ಲಿ ಬಂದ ರಾಮಕ್ಷತ್ರಿಯರು ಕನ್ನಡ ಮನೆಮಾತಿನವರಾಗಿದ್ದು, ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಗೆ ನೀಡಿದ ಕೊಡುಗೆ ಮಹತ್ತಾದುದು. ಅಂತಹ ಸಮಾಜದಲ್ಲಿ ಹುಟ್ಟಿ ಬಂದ ಬೇಕಲ ರಾಮನಾಯಕರು ಸರ್ವಜನ ಸಂಪೂಜ್ಯರು ಎಂದು ಮಲಾರ್ ಜಯರಾಮ ರೈ ಹೇಳಿದರು.
ಬೇಕಲ ರಾಮನಾಯಕರು ಗಡಿನಾಡು ಕಾಸರಗೋಡು ಸಹಿತ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮಣ್ಣಿನ ಸತ್ವ-ಮಹತ್ವಗಳನ್ನು ಸಂಶೋಧಿ ಸಿ ಮುಂದಿನ ತಲೆಮಾರಿಗೆ ಗ್ರಹಿಸಲು ದಾಖಲೀಕರಣಗೊಳಿಸಿದ ಸಾಧನೆಗಳು ಋಷಿ ಸದೃಶ ಪರಮೋಚ್ಚ ತಪಸ್ಸಾಗಿದೆ. ಇತಿಹಾಸ ಸಾಗಿಬಂದ ಸ್ಪಷ್ಟ ಜ್ಞಾನದಿಂದಷ್ಟೆ ವರ್ತಮಾನದ ಬದುಕಿನ ಸವಿ ಅರ್ಥೈಸಲು ಸಾಧ್ಯ. ಹಿಂದಿನ ಕಾಲಘಟ್ಟದಲ್ಲಿ ಭಾಷೆ, ಸಂಸ್ಕೃತಿಯ ಬೆಳವಣಿಗೆಗಳಿಗೆ ರಾಜಾಶ್ರಯದ ನೆರಳಿತ್ತು. ಆದರೆ ಇಂದದು ಅಸಾಧ್ಯವಾಗಿದ್ದು, ಎಲ್ಲರೂ ಪರಸ್ಪರ ಕೈಜೋಡಿಸಿ ಮುಂದಡಿಯಿಟ್ಟಲ್ಲಿ ಬೆಳವಣಿಗೆ ಸಾಧ್ಯ ಎಂದು ಕರೆನೀಡಿದರು.
ಬೇಕಲ ರಾಮನಾಯಕರ ಭಾವಚಿತ್ರದ ಮುಂದೆ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕನ್ನಡಭವನ ಗ್ರಂಥಾ
ಲಯದ ಸಂಸ್ಥಾಪಕ ಹಾಗೂ ನಿರ್ದೇಶಕ ಕೆ.ವಾಮನ ರಾವ್ ಬೇಕಲ್‌ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಪರ ಕಾರ್ಯಕ್ರಮಗಳ
ಮೂಲಕ ವಿದ್ಯಾರ್ಥಿ-ಯುವಜನರಲ್ಲಿ ಕನ್ನಡ ಪ್ರೀತಿ ಹುಟ್ಟಿಸುವ ಕೆಲಸ ತುರ್ತಾಗಿ ನಡೆಯಬೇಕಾಗಿದೆ ಎಂದು ವಾಮನ ರಾವ್ ಬೇಕಲ್ ಹೇಳಿದರು.
ಸಮಾರಂಭದಲ್ಲಿ ಡಿವಿಜಿ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಸಾಹಿತಿ, ಭಾಷಾಂತರಕಾರ ಎ.ನರಸಿಂಹ ಭಟ್ ಅವರನ್ನು ಅಭಿನಂದಿಸಿ ಗೌರವಿಸಲಾಯಿತು. ಜೊತೆಗೆ ಹಿರಿಯ ಲೇಖಕಿ ಮಾಲತಿ ಕಮಲಾಕ್ಷ ಅವರನ್ನು ಅಭಿನಂದಿಸಲಾಯಿತು. ಕನ್ನಡ ಭವನ ಸಮಿತಿ ಅಧ್ಯಕ್ಷ, ಪತ್ರಕರ್ತ, ಸಾಹಿತಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ ನರಸಿಂಹ ಭಟ್ ಅವರ ಕುರಿತು ಅಭಿನಂದನಾ ಭಾಷಣಗೈದರು. ಬೇಕಲ ರಾಮ ನಾಯಕರ ಬದುಕು-ಸಾಧನೆಗಳ ಕುರಿತು ಕನ್ನಡ ಭವನ ಮಹಿಳಾ ಸಮಿತಿಯ ಸಂಚಾಲಕಿ ಆಶಾ ಜಗದೀಶ್ ಕೂಡ್ಲು ಸಂಸ್ಮರಣಾ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಸಹಾಯಕ ಜಿಲ್ಲಾಧಿಕಾರಿ ಬಿ.ಬಾಲಕೃಷ್ಣ ಅಗ್ಗಿತ್ತಾಯ, ಬೇಕಲ ರಾಮ ನಾಯಕರ ಹಿರಿಯ ಪುತ್ರ ಯಜ್ಞನಾರಾಯಣ, ಮುಖ್ಯೋಪಾಧ್ಯಾಯ ರಾಜೇಶ್ಚಂದ್ರ ಉಪಸ್ಥಿತರಿದ್ದರು.
ಕನ್ನಡ ಭವನದ ಕಾರ್ಯದರ್ಶಿ ಜಗದೀಶ್ ಕೂಡ್ಲು ಸ್ವಾಗತಿಸಿದರು. ನಿರ್ದೇಶಕಿ ಕೆ.ಪಿ.ಸಂಧ್ಯಾರಾಣಿ ಟೀಚರ್ ಸ್ಮರಣಿಕೆ ನೀಡಿದರು. ಪ್ರಾಧ್ಯಾಪಕಿ ಲತಾ ಪ್ರಕಾಶ್ ರಾವ್ ಕಾರ್ಯಕ್ರಮ ನಿರೂಪಿಸಿದರು. ಸಂಚಾಲಕ ತಾರಾನಾಥ ಶೆಟ್ಟಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
C.T.Ravi ಪ್ರಕರಣ ಸಿಐಡಿಗೆ ನೀಡಿದ್ದಕ್ಕೆ ಸಭಾಪತಿ ಬಸವರಾಜ ಹೊರಟ್ಟಿ ಆಕ್ಷೇಪ
Donald Trump ಸೋಲಿಸುತ್ತಿದ್ದೆ, ಪಕ್ಷಕ್ಕಾಗಿ ಹಿಂದೆ ಸರಿದೆ: ಅಧ್ಯಕ್ಷ ಜೋ ಬೈಡೆನ್
ಹಿಂದೂ ಕಾರ್ಯಕರ್ತರ ಪರ ಕಾನೂನು ಪ್ರಕೋಷ್ಠ ಹೋರಾಟ: ಬಿ.ವೈ.ವಿಜಯೇಂದ್ರ
ಇಂದಿರಾ ಗಾಂಧಿ ಸಂವಿಧಾನ ತಿದ್ದುಪಡಿ ಮಾಡಿದ್ದರಿಂದ ದೇಶಕ್ಕೆ ಭಾರೀ ಹಿನ್ನಡೆ: ಕೆ.ಅಣ್ಣಾಮಲೈ
ಕೆಮ್ತೂರು ತುಳು ನಾಟಕ ಸ್ಪರ್ಧೆ: “ಈದಿ’ ಪ್ರಥಮ, “ದಿ ಫೈಯರ್’ ದ್ವಿತೀಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.