ಸೌರಶಕ್ತಿ : ಮಾದರಿಯಾದ ಪಿಲಿಕೋಡ್ ಗ್ರಾಮ ಪಂಚಾಯತ್
Team Udayavani, Jan 18, 2019, 12:35 AM IST
ಕಾಸರಗೋಡು: ವಿದ್ಯುತ್ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪಿಲಿಕೋಡ್ ಗ್ರಾಮ ಪಂಚಾಯತ್ ನಲ್ಲಿ ಜಾರಿಗೊಳಿಸಲಾದ ಸೌರಶಕ್ತಿ ಯಾನ ಯೋಜನೆ ಯಶಸ್ವಿಯಾಗಿ ಮುಂದುವರಿಯುತ್ತಿದೆ.
ಗರಿಷ್ಠ ಸೌರಶಕ್ತಿ ಬಳಕೆ
ಈಗಿರುವ ವ್ಯವಸ್ಥೆಯಲ್ಲಿ ವಿದ್ಯುತ್ ಬಳಕೆ ಗಮನಾರ್ಹ ರೂಪದಲ್ಲಿ ಕಡಿಮೆಗೊಳಿಸಿ, ಸೌರಶಕ್ತಿಯನ್ನು ಗರಿಷ್ಠ ಮಟ್ಟದಲ್ಲಿ ಬಳಸುವ ಗುರಿಯೊಂದಿಗೆ ಯೋಜನೆ ದಾಪುಗಾಲು ಹಾಕುತ್ತಿದೆ. ಗ್ರಾಮಪಂಚಾಯತ್‌ನ ಜನ ಎರಡೂ ಕೈಗಳಿಂದ ಈ ಯೋಜನೆಯನ್ನು ಸ್ವೀಕರಿಸಿದ್ದಾರೆ. ಜನಸಂಖ್ಯೆ ಹೆಚ್ಚಳ, ವಸತಿ ಸೌಲಭ್ಯಗಳ ಹೆಚ್ಚಳ, ಉಪಕರಣಗಳ ವೈವಿಧಿÂàಕರಣ ಇತ್ಯಾದಿಗಳಿಂದ ಸೌರಶಕ್ತಿಯ ಬಳಕೆಗೆ ಇಲ್ಲಿ ಮಹತ್ವ ಲಭಿಸಿದೆ. ವಿನೂತನ ತಂತ್ರಜ್ಞಾನದಿಂದ ನವೀನ ನಿತ್ಯಬಳಕೆಯ ಸಾಮಗ್ರಿಗಳಿಗೆ ಪೂರಕವಾಗಿದೆ.
ಹಂತ ಹಂತದ ಜಾರಿ
ಹಂತಹಂತವಾಗಿ ಸೌರಶಕ್ತಿ ಬಳಕೆ ವ್ಯಾಪಕ ಗೊಳಿಸುವ ಜತೆಗೆ ಪ್ರಕೃತಿಗೆ ಪೂರಕವಾದ ಶಕ್ತಿ ಸಂರಕ್ಷಣೆ, ತಾಂತ್ರಿಕತೆ ಕುರಿತಾದ ಮಾಹಿತಿ ಸ್ಥಳೀಯ ಜನತೆಗೆ ಒದಗಿಸಿ ಅವರನ್ನು ಸೌರಶಕ್ತಿ ಬಳಕೆಗೆ ಸಿದ್ಧ ಗೊಳಿಸುವುದು ಯೋಜನೆಯ ಗುರಿ. ಇದರ ಅಂಗ ವಾಗಿ ಸಾರ್ವಜನಿಕ ಪ್ರದೇಶಗಳ ದಾರಿದೀಪ, ಲೈಟ್ ಕಂಬಗಳನ್ನು ಪೂರ್ಣರೂಪದಲ್ಲಿ ಎಲ್.ಇ.ಡಿ.ಗೆ ಬದಲಿಸಲಾಗಿದೆ.
ಎಂ.ಇ.ಸಿ. ಸಹಕಾರ
ಯೋಜನೆಯನ್ನು ಫಲದಾಯಕವಾಗಿ ಜಾರಿಗೊಳಿಸುವ ಉದ್ದೇಶದಿಂದ ಪಂಚಾಯತ್ ನಿವಾಸಿ ಕುಟುಂಬಗಳ ವಿದ್ಯುತ್ ಬಳಕೆ, ಬಳಸುವ ಉಪಕರಣಗಳ ಸಾಮರ್ಥ್ಯ, ಸೌರಶಕ್ತಿಯನ್ನು ಲಾಭಕರವಾಗಿ ಬಳಸುವ ಸಂಬಂಧ ಮಾಹಿತಿ ಸಂಗ್ರಹಿಸಲಾಗಿತ್ತು. ಹೆಚ್ಚುವರಿ ಮಾಹಿತಿಗಾಗಿ ಸೌರಶಕ್ತಿ ವಲಯದಲ್ಲಿ ಚಟುವಟಿಕೆ ನಡೆಸುತ್ತಿರುವ ಎಂ.ಇ.ಸಿ. ಕೇರಳಂ ಸಂಸ್ಥೆಯನ್ನು ಸಂಪರ್ಕಿಸಲಾಯಿತು. ಪಂಚಾಯತ್‌ನ ಮನವಿಯನ್ನು ಸ್ವೀಕರಿಸಿದ ಎಂ.ಇ.ಸಿ. ಸಂಸ್ಥೆ ಪ್ರಾಥಮಿಕ ಹಂತದ ತರಬೇತಿ ಸಾಮಾಜಿಕ ಕಾರ್ಯಕರ್ತರಿಗೆ ಮತ್ತು ವಿದ್ಯುತ್ ಇಲಾಖೆ ಸಿಬಂದಿ ಸಹಿತ 50 ಮಂದಿಗೆ ತಿರುವನಂತಪುರದಲ್ಲಿ 2ದಿನಗಳ ತರಬೇತಿ ಒದಗಿಸಿತು. ಇದು ಅನಂತರದ ಪ್ರಗತಿಗೆ ತಳಹದಿಯಾಗಿತ್ತು.
ಸಮಿತಿ ರಚಿಸಿ ಕ್ರಮ
ನಂತರ ವಾರ್ಡ್ ಮಟ್ಟದಲ್ಲಿ ಸೌರಶಕ್ತಿಯಾನ ಯೋಜನೆ ಸಂಬಂಧ ಸಮಿತಿಗಳನ್ನು ರಚಿಸ ಲಾಯಿತು. ಈ ಮೂಲಕ ರಾಜಕೀಯ ಪಕ್ಷಗಳ, ಸಾಮಾಜಿಕ ಸಂಘಟನೆಗಳ ಪ್ರತಿನಿ ಧಿಗಳ ಪ್ರತ್ಯೇಕ ಸಭೆಗಳನ್ನು ನಡೆಸಲಾಯಿತು. ತದನಂತರ ನೆರೆಕೂಟ ಮಟ್ಟದಲ್ಲಿ ನಿರಂತರ ತರಗತಿಗಳು, ಪಂಚಾಯತ್ ಮಟ್ಟದಲ್ಲಿ ವಾಟ್ಸಾಪ್ ಗುಂಪುಗಳ ಒಕ್ಕೂಟ, ಮನೆಮನೆ ಸಂದರ್ಶನ, ಮೀಟರ್ ರೀಡಿಂಗ್ ಬಗ್ಗೆ ಕ್ರಿಯಾತ್ಮಕ ತರಬೇತಿ ಇತ್ಯಾದಿ ನಡೆಸಲಾಯಿತು.
ಗಮನಾರ್ಹ ಬದಲಾವಣೆ
ಪಿಲಿಕೋಡ್ ಪಂಚಾಯತ್‌ನ ಜನತೆಯ ವಿದ್ಯುತ್ ಬಳಕೆ 2016ರ ಮಾರ್ಚ್‌ನಿಂದ 2017 ಮಾರ್ಚ್‌ಗೆ ತಲಪುವ ಸಂದರ್ಭ 101694 ಯೂನಿಟ್ ಆಗಿ ಕಡಿಮೆಗೊಂಡಿತ್ತು. 2018 ಎ.12ರಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪಿಲಿಕೋಡ್ ಗ್ರಾಮ ಪಂಚಾಯತನ್ನು “ದೇಶದ ಮೊದಲ ಫಿಲಮೆಂಟ್ ಬಲ್ಬ್ ರಹಿತ ಪಂಚಾಯತ್’ ಎಂದು ಘೋಷಿಸಿದರು.
ಎರಡನೇ ಹಂತದ ಜಾರಿ
ಸೌರಶಕ್ತಿಯಾನ ಯೋಜನೆ ಈಗ ಎರಡನೇ ಹಂತವಾಗಿ ಜಾರಿಯಲ್ಲಿದೆ. ನಿರಂತರ ಸೌರಶಕ್ತಿ ಬಳಕೆಯ ಹಿನ್ನೆಲೆಯಲ್ಲಿ ಸೌರಗ್ರಾಮ ಯೋಜನೆಯನ್ನು ರಚಿಸಲಾಗಿದೆ. ಅನಾರ್ಟ್ ಸಂಸ್ಥೆಯ ನೇತೃತ್ವದಲ್ಲಿ ಗ್ರಾ.ಪಂ.ನ ಎಲ್ಲ ಸಂಸ್ಥೆಗಳಲ್ಲಿ ಸೌರಶಕ್ತಿ ಬಳಸುವ ಯತ್ನ ಈಗ ನಡೆದುಬರುತ್ತಿದೆ.
ಸಮಸ್ಯೆಗಳಿಗೆ ಪರಿಹಾರ
ಪ್ರಕೃತಿಗೆ ಹಾನಿ ಮಾಡಬಲ್ಲ ಹಳೆಯ ಕ್ರಮಗಳಿಂದ ಮುಂದಿನ ಜನಾಂಗಕ್ಕೆ ಸಮಸ್ಯೆಯಾಗಬಲ್ಲ ಅನೇಕ ವಿಚಾರಗಳೂ ಇದ್ದುವು. ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಜನ ಒಂದು ಕಡೆ ಸೇರಿ ನಡೆಸಿದ ಯತ್ನದ ಫಲವಾಗಿ ಸೌರಶಕ್ತಿ ಬಳಕೆಯ ಸೌರಶಕ್ತಿಯಾನ ಯೋಜನೆ ಜಾರಿಗೆ ಬಂದಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.