ದೇಶದ ಗಮನ ಸೆಳೆದ  ಕೈಪಂಗಳರವರ ನೂತನ ತಂತ್ರಜ್ಞಾನ – ಸೋಲಾರ್‌ ಲೆಡ್‌ಲೈಟ್‌


Team Udayavani, May 3, 2019, 3:53 PM IST

3

ಬದಿಯಡ್ಕ :ಯಾವುದೇ ಒಂದು ವಿಷಯದ ಬಗ್ಗೆ ಅತಿಯಾದ ಆಸಕ್ತಿ ಇದ್ದಾಗ ಮಾತ್ರ ಯಾವನೇ ಒಬ್ಬ ವ್ಯಕ್ತಿ ಆ ವಿಷಯದ ಬಗ್ಗೆ ಆಳವಾಗಿ ಅಧ್ಯಯನ ನಡೆಸಿ ಸಾಧ್ಯಾಸಾಧ್ಯತೆಗಳನ್ನು ಪರಿಗಣಿಸಿ ಆ ಕ್ಷೇತ್ರದಲ್ಲಿ ವಿಭಿನ್ನವಾಗಿ ಏನನ್ನಾದರೂ ಸಾಧಿಸಲು ಸಾಧ್ಯ. ಅದರಲ್ಲೂ ಕೃಷಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಸಂಪೂರ್ಣವಾಗಿ ಅರ್ಪಿಸಿಕೊಂಡು ಎದುರಾಗುವ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸತತ ಪ್ರಯತ್ನದ ಮೂಲಕ ಸಂಶೋಧನೆ ಮಾಡಿ ಯಶಸ್ವಿಯಾದ ಕೆಲವೇ ಕೆಲವರಲ್ಲಿ ರಾಜಗೋಪಾಲ ಕೈಪಂಗಳ ಅವರೂ ಒಬ್ಬರು. ಛಲದಿಂದ ಕೈಗೆತ್ತಿಕೊಂಡ ಕಾರ್ಯವನ್ನು ನಿರ್ವಹಿಸಿ ದೇಶದ ರೈತರಿಗೆ ನೆಮ್ಮದಿಯ ದಾರಿಯನ್ನು ತೋರಿದ್ದಾರೆ.

ಕೃಷಿಯನ್ನು ಪ್ರಾಣಿ ಹಾಗೂ ಪಕ್ಷಿಗಳ ಹಾವಳಿಯಿಂದ ರಕ್ಷಣೆ ಮಾಡುವುದು ಕೃಷಿ ಕ್ಷೇತ್ರದ ಪ್ರಮುಖ ಸವಾಲುಗಳಲ್ಲೊಂದು. ಕೆಲವು ಅಂಕಿ ಅಂಶಗಳ ಪ್ರಕಾರ ಸುಮಾರು 45 % ಉತ್ಪನ್ನಗಳು ಕಾಡು ಪ್ರಾಣಿಗಳಿಂದ ನಾಶವಾಗುತ್ತಿರುತ್ತದೆ. ಈ ನಿಟ್ಟಿನಲ್ಲಿ ಬೆಳ್ಳೂರು ಗ್ರಾ.ಪಂ. ವ್ಯಾಪ್ತಿಯ ನೆಟ್ಟಣಿಗೆ ನಿವಾಸಿ ರಾಜಗೋಪಾಲ ಭಟ್‌ ಕೈಪಂಗಳ ಎಂಬವರು ಆವಿಷ್ಕರಿಸಿದ ಸೋಲಾರ್‌ ಲೆಡ್‌ಲೈಟ್‌ ತಂತ್ರಜ್ಞಾನ ದೇಶದ ಗಮನ ಸೆಳೆದಿದೆ. ಇತ್ತಿಚೇಗೆ ಲಕ್ನೋದಲ್ಲಿ ಕೇಂದ್ರ ಸರಕಾರದ ಪ್ರಧಾನಮಂತ್ರಿ ಫಸಲ್‌ ಭೀಮ ಯೋಜನೆಯ (ಪಿ.ಎಂ.ಎಫ್‌.ಬಿ.ವೈ.) ರಾಷ್ಟ್ರೀಯ ಸಮಾಲೋಚನಾ ಸಭೆಯಲ್ಲಿ ತಮ್ಮ ಆವಿಷ್ಕಾರದ ಬಗ್ಗೆ ಪ್ರಬಂಧ ಮಂಡಿಸುವ ಮೂಲಕ ರಾಜಗೋಪಾಲ ಕೈಪಂಗಳ ದೇಶದ ಗಮನ ಸೆಳೆದಿದ್ದಾರೆ. ಸಮಾಲೋಚನೆಯಲ್ಲಿ ಯೋಜನೆಗೆ ಸಂಬಂಧಿಸಿದ ಹಲವಾರು ರಾಜ್ಯಗಳ ಕೃಷಿ ವಿಜ್ಞಾನಿಗಳು, ತಂತ್ರಜ್ಞರು, ಬ್ಯಾಂಕ್‌ ಅಧಿಕಾರಿಗಳು, ವಿಮಾ ಹಾಗೂ ಕೇಂದ್ರ ಕೃಷಿ ಇಲಾಖೆಯ ಉನ್ನತ ಅಧಿಕಾರಿಗಳು ಮತ್ತು ಕೃಷಿಕರು ಪಾಲ್ಗೊಂಡಿದ್ದರು. ಸಾಮಾನ್ಯವಾಗಿ ತೋಟ, ಗದ್ದೆಗಳಿಗೆ ಕಾಡು ಪ್ರಾಣಿಗಳ ಉಪಟಳ ಎಲ್ಲೆಡೆಯೂ ಇದೆ. ಅದರಲ್ಲೂ ಮುಳ್ಳುಹಂದಿ, ಕಾಡು ಹಂದಿ, ಕಾಡು ಕೋಣ, ಜಿಂಕೆ, ಮಂಗ, ಕಾಡಾನೆ ಇತ್ಯಾದಿ ಪ್ರಾಣಿಗಳು, ನವಿಲು, ಬಾವಲಿ ಮೊದಲಾದವು ಕೃಷಿ ತೋಟಕ್ಕೆ ಲಗ್ಗೆಯಿಕ್ಕಿ ವ್ಯಾಪಕ ಹಾನಿ ಉಂಟುಮಾಡುತ್ತವೆ. ಹೆಚ್ಚಿನ ವೇಳೆ ಹೊಟ್ಟೆ ನೀಗಿಸುವುದರ ಜೊತೆಗೆ ಮೋಜಿಗಾಗಿ ಪ್ರಾಣಿಗಳು ಬೆಳೆ ಹಾಳುಗೆಡುವುದು ಕಂಡು ಬರುತ್ತದೆ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ರಾಜಗೋಪಾಲ ಕೈಪಂಗಳ ಅವರು ಕಂಡು ಹಿಡಿದ ಸೋಲಾರ್‌ ಲೆಡ್‌ಲೈಟ್‌ ಉಪಕರಣವು ರಾತ್ರೆ ತೋಟಕ್ಕೆ ಲಗ್ಗೆ ಇಡುವ ಯಾವುದೇ ಕಾಡು ಪ್ರಾಣಿಗಳನ್ನು ತಡೆದು ಕೃಷಿಯನ್ನು ಸುರಕ್ಷಿತವಾಗಿಡಲು ಸಹಕಾರಿ. ಲಕ್ನೋದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಕೈಪಂಗಳ ಅವರ ಉಪಕರಣದ ಬಗ್ಗೆ ಪ್ರಶಂಸೆ ವ್ಯಕ್ತವಾಗಿದೆ.


ಎಲ್ಲ ಕಡೆಯಿಂದಲೂ ಬೇಡಿಕೆ

ರಾಜಗೋಪಾಲ ಭಟ್‌ ಕೈಪಂಗಳ ಅವರ ಸೋಲಾರ್‌ ಲೆಡ್‌ಲೆ„ಟ್‌ ಉಪಕರಣದ ಯಶಸ್ಸಿನಿಂದ ಎಲ್ಲ ಕಡೆಯಿಂದಲೂ ಬೇಡಿಕೆ ಹುಡುಕಿಕೊಂಡು ಬಂದಿದೆ. ಈಗಾಗಲೇ ಇಂಥ ಸಾವಿರಕ್ಕಿಂತಲೂ ಅಧಿಕ ಉಪಕರಣ ತಯಾರಿಸಲಾಗಿದೆ. ತಿರುವನಂತಪುರದ ಆಯಿಲ್‌ ಪಾವ್‌ ಸಂಶೋಧನಾ ಕೇಂದ್ರ ಕೈಪಂಗಳ ಆವರ ಸೋಲಾರ್‌ ಉಪಕರಣ ಖರೀದಿಸಿದೆ. ವಿಟ್ಲ ಸಿಪಿಸಿಆರ್‌ಐ ಕೂಡ ಈ ಉಪಕರಣ ಖರೀದಿಸಿದೆ. ರಾಜ್ಯದ ವಿವಿಧ ಕೃಷಿ ವಿವಿಗಳು, ಅರಣ್ಯ ಇಲಾಖೆ, ಬೃಹತ್ ಪ್ರಮಾಣದ ಕೃಷಿ ಸಂಸ್ಥೆಗಳು, ರೆಸಾರ್ಟ್‌ಗಳು ಕೈಪಂಗಳ ಅವರ ಸೋಲಾರ್‌ ಉಪಕರಣ ಖರೀದಿಸಲು ಮುಂದೆ ಬಂದಿದೆ.

ಯಾರಿವರು?
ಸುಮಾರು ಎರಡು ದಶಕಗಳ ಕಾಲ ಕೊಲ್ಲಿ ರಾಷ್ಟ್ರಗಳಲ್ಲಿ ರಿಟೈಲ್ ಮಾರುಕಟ್ಟೆಯಲ್ಲಿ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸಿದ ಅನುಭವದೊಂದಿಗೆ ಮೂರು ವರ್ಷಗಳ ಹಿಂದೆ ಹುಟ್ಟೂರಿಗೆ ವಾಪಾಸಾಗಿ ಕೃಷಿಯನ್ನೇ ಕಾಯಕವಾಗಿಸಿದವರು. ಸಾರ್ವಜನಿಕವಾಗಿ ಗುರುತಿಸಿಕೊಂಡಿರುವ ಇವರು ಕೈಪಂಗಳ ಮೂಲಕ ಪುತ್ತೂರು ತಲುಪುವ ರಸ್ತೆಗಾಗಿ ಅಗತ್ಯದ ಭೂಮಿಯನ್ನು ಇತರ ರೈತರೊಂದಿಗೆ ದಾನ ಮಾಡಿದವರು. ಕಾಡುಪ್ರಾಣಿಗಳ ಉಪಟಳದ ಕುರಿತಾದ ಹಲವಾರು ಬಾನುಲಿ ಕಾರ್ಯಕ್ರಮಗಳನ್ನು ನೀಡಿದ್ದಾರೆ.

ಏನಿದು ಸೋಲಾರ್‌ ಲೆಡ್‌ ಲೈಟ್‌ ?
ಸಂಪೂರ್ಣ ಸೋಲಾರ್‌ ಶಕ್ತಿಯಿಂದ ಪ್ರವರ್ತಿಸುವ ಪ್ರಾಣಿ ನಿಯಂತ್ರಕ ಈ ವ್ಯವಸ್ಥೆ 20 ಮೀಟರ್‌ಗಳಿಗೆ ಒಂದರಂತೆ 26 ಸೆಂಟಿಮೀಟರ್‌ ಎತ್ತರದಲ್ಲಿ ಅಳವಡಿಸಲಾಗುತ್ತದೆ. ಈ ಉಪಕರಣ ರಾತ್ರಿಯಾಗುತ್ತಿದ್ದಂತೆ ಸರ್ಚ್‌ಲೈಟ್ನಂತೆ ಕೆಂಬಣ್ಣದ ಬೆಳಕು ಬೀರುವ ಮೂಲಕ ಪ್ರಾಣಿಗಳಿಗೆ ಭಯ ಹುಟ್ಟಿಸುತ್ತದೆ. ಹಾಗೂ ಇದರಿಂದ ಭಯಗೊಂಡ ಪ್ರಾಣಿಗಳು ಆಹಾರಕ್ಕಾಗಿ ಬೇರೆಡೆಗೆ ಪಲಾಯನ ಹೋಗುತ್ತವೆ. ಕಾಡು ಪ್ರಾಣಿಗಳ ಕಣ್ಣಿನ ಎತ್ತರವನ್ನು ಅವಲಂಬಿಸಿ ಈ ಉಪಕರಣವನ್ನು ಇರಿಸಬೇಕಾಗಿದ್ದು ತಮ್ಮ ಸಲಹೆಯಂತೆ ಇರಿಸಿದಲ್ಲಿ ಅವುಗಳ ಉಪಟಳವನ್ನು ತಡೆಯಬಹುದೆಂದು ಸಂಶೋಧಕರು ವ್ಯಕ್ತ ಪಡಿಸಿದರು. ಸೋಲಾರ್‌ ಶಕ್ತಿಯಿಂದ ಕೆಲಸ ಮಾಡುವ ಈ ಉಪಕರಣವು ಅಲ್ಪ ಬಿಸಿಲಿನ ಮಳೆಗಾಲದಲ್ಲೂ ಕಾರ್ಯವೆಸಗುವ ಕ್ಷಮತೆ ಹೊಂದಿದ್ದು , ರೈತನಿಗಾಗಲೀ, ಬೆಳೆಗಳಿಗಾಗಲಿ ಯಾವುದೇ ಅಡ್ಡ ಪರಿಣಾಮ ಉಂಟು ಮಾಡುವುದಿಲ್ಲ . ಎಕರೆಯೊಂದಕ್ಕೆ 15 ರಷ್ಟು ಸೋಲಾರ್‌ ಲೈಟ್‌ ಬೇಕಾಗಬಹುದು ಎನ್ನುತ್ತಾರೆ ಕೈಪಂಗಳ.

ಈ ಸಂಶೋಧನೆಯು ಪೇಟೆಂಟ್‌ ಹೊಂದಿದ್ದು ಇದಕ್ಕೆ wildkrac ಎಂದು ಹೆಸರಿಡಲಾಗಿದ್ದು. ದೇಶದ ಪ್ರಥಮ ರಾಸಾಯನಿಕ ಮುಕ್ತ ಬೆಳೆ ಸಂರಕ್ಷಕ ಉಪಕರಣ ಇದಾಗಿದ್ದು , ರಾತ್ರೆ ಬರುವ ಕಾಡು ಪ್ರಾಣಿಗಳಿಂದ ಬೆಳೆಯನ್ನು ರಕ್ಷಣೆ ಮಾಡಬಹುದು.
ರಾಜಗೋಪಾಲ ಭಟ್‌ ಕೈಪಂಗಳ , ಪ್ರಗತಿಪರ ಕೃಷಿಕ

ಚಿತ್ರ, ವರದಿ :ಅಖೀಲೇಶ್‌ ನಗುಮುಗಂ

ಟಾಪ್ ನ್ಯೂಸ್

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

5-one-plus

OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

1-aaaaa

Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video

Khattar

2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್

6

VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್

naksal (2)

Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಹೊಸ ಸೇರ್ಪಡೆ

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

5-one-plus

OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

1-aaaaa

Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video

Khattar

2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.