ಬದಿಯಡ್ಕದಲ್ಲಿ ದ್ವಿದಿನ ತಾಳಮದ್ದಳೆ ಸಂವಾದ ಸಂಪನ್ನ
Team Udayavani, Oct 3, 2019, 5:06 AM IST
ಬದಿಯಡ್ಕ: ಮಾತಿನ ಅರ್ಥತಲ್ಪಗಳನ್ನು ವಿಸ್ತರಿಸಿ, ಎತ್ತರಿಸಿದ ತಾಳಮದ್ದಳೆಯ ಶಕಪುರುಷ ದಿ.ಶೇಣಿ ಗೋಪಾಲಕೃಷ್ಣ ಭಟ್ ಮತ್ತು ಕಾಸರಗೋಡು ತಾಲೂಕಿಗೆ ತೆಂಕು-ಬಡಗಿನ ಶ್ರೇಷ್ಠ ಕಲಾವಿದ ರನ್ನು ಪರಿಚಯಿಸಿ, ಯಕ್ಷ ಕಲಾಸ್ವಾದನೆಯ ಮಿತಿ ವಿಸ್ತರಿಸಿ, ಅಭಿರುಚಿ ಬೆಳೆಸಿದ ಶ್ರೇಷ್ಠ ಕಲಾಸಂಘಟಕ ದಿ| ವೈ.ಡಿ. ನಾಯಕ್ ಬದಿಯಡ್ಕ ಇವರ ಜಂಟಿ ಸಂಸ್ಮರಣೆ ಮತ್ತು ಉಭಯ ತಾಳಮದ್ದಳೆ ಬದಿಯಡ್ಕದಲ್ಲಿ ಸಂಪನ್ನಗೊಂಡಿತು.
ಶೇಣಿ ರಂಗಜಂಗಮ ಟ್ರಸ್ಟ್ ಮತ್ತು ಯಕ್ಷಸ್ನೇಹಿ ಬಳಗ ಪೆರ್ಲ ಇದರ ಸಂಯುಕ್ತ ಸಾರಥ್ಯದಲ್ಲಿ ಇಲ್ಲಿನ ಶಿವಳ್ಳಿ ಸಂಪದ ಕಟ್ಟಡದಲ್ಲಿ ತಾಳಮದ್ದಳೆ ಸಮಾರೋಪ ಸಮಾ ರಂಭದಲ್ಲಿ ಉಭಯ ಸಾಧಕರ ಸಂಸ್ಮರಣೆ ನಡೆಯಿತು. ಸಮಾರಂಭವನ್ನು ಖ್ಯಾತ ವೈದ್ಯ, ಸಾಹಿತಿ ಡಾ| ಶ್ರೀನಿಧಿ ಸರಳಾಯ ದೀಪ ಬೆಳಗಿಸಿ ಉದ್ಘಾಟಿಸಿದರು. ಶೇಣಿ ಮತ್ತು ವೈ.ಡಿ. ನಾಯಕರ ಕುರಿತಾಗಿ ‘ಕಣಿಪುರ’ ಯಕ್ಷಗಾನ ಮಾಸಪತ್ರಿಕೆ ಸಂಪಾದಕ ಎಂ.ನಾ. ಚಂಬಲ್ತಿಮಾರ್ ಸಂಸ್ಮರಣ ಭಾಷಣ ಮಾಡಿ ಶೇಣಿ ಮತ್ತು ವೈ.ಡಿ. ನಾಯಕರು ನಮ್ಮ ನೆಲದ ಸಾಂಸ್ಕೃತಿಕ ಆಸ್ತಿ. ಅವರ ಮೆಲುಕಿನಿಂದ ಉತ್ತೇಜಿತರಾಗಿ ಪರಂಪರೆಯನ್ನು ಕೈದಾಟಿಸುವ ಕೆಲಸ ನಮ್ಮದಾಗಬೇಕು. ಶೇಣಿಯವರು ಬೌದ್ಧಿಕವಾಗಿ ಕಲೆಯನ್ನೂ ಪ್ರೇಕ್ಷಕರನ್ನೂ ಎತ್ತರಿಸಿದರೆ, ವೈ.ಡಿ. ನಾಯಕರು ಸಂಘಟನಾ ಸಾಮರ್ಥ್ಯದಿಂದ ಗಡಿನಾಡಿನ ಜನತೆಗೆ ತೆಂಕು-ಬಡಗಿನ ಅತಿಸಮರ್ಥ ಕಲಾವಿದರ ಪ್ರಸ್ತುತಿಯ ದರ್ಶನ ಇತ್ತವರು. ಇವರಿಬ್ಬರಿಂದಾಗಿ ಕಲೆ, ಅಭಿರುಚಿ, ಬೌದ್ಧಿಕತೆ ಈ ನೆಲದಲ್ಲಿ ಬೆಳೆದಿದೆ. ಅದನ್ನು ಮರೆತರೆ ಇತಿಹಾಸ ಕ್ಷಮಿಸದು ಎಂದು ಹೇಳಿದರು.
ನಿವೃತ್ತ ಸಬ್ ರಿಜಿಸ್ಟ್ರಾರ್ ಆಫೀಸರ್ ಮಹಮ್ಮದಾಲಿ ಪೆರ್ಲ ಅಧ್ಯಕ್ಷತೆ ವಹಿಸಿದರು. ವೈ.ಡಿ. ನಾಯಕರ ಪುತ್ರ ವೈ. ರಾಘವೇಂದ್ರ ನಾಯಕ್, ಕೋಟೆ ಗಣಪತಿ ಭಟ್ ಉಪಸ್ಥಿತರಿದ್ದರು.
ಶೇಣಿ ವೇಣುಗೋಪಾಲ ಭಟ್ ಸ್ವಾಗತಿಸಿ, ಮೂಲಡ್ಕ ನಾರಾಯಣ ವಂದಿಸಿದರು. ದ್ವಿದಿನ ತಾಳಮದ್ದಳೆಯನ್ನು ಅರವಿಂದ ಕುಮಾರ್ ಅಲೆವೂರಾಯ ಉದ್ಘಾಟಿಸಿ ದರು. ಬಳಿಕ ಮೊದಲದಿನ ‘ಕನ್ಯಾಂತರಂಗ’ ಮತ್ತು ಎರಡನೇ ದಿನ ತರಣಿಸೇನ ಕಾಳಗ’ ತಾಳಮದ್ದಳೆ ಪ್ರಸ್ತುತವಾಯಿತು.
ಅರ್ಥಧಾರಿಗಳಾಗಿ ಮೂಲಡ್ಕ ನಾರಾಯಣ, ಶೇಣಿ ವೇಣುಗೋಪಾಲಭಟ್, ಕೆಕ್ಕಾರು ಆನಂದ ಭಟ್, ಬೇ.ಸಿ. ಗೋಪಾಲಕೃಷ್ಣ ಭಟ್, ಈಶ್ವರ ನಲ್ಕ ಪಾಲ್ಗೊಂಡರು.
ಹಿಮ್ಮೇಳದಲ್ಲಿ ಭಾಗವತರಾಗಿ ಸತೀಶ ಪುಣಿಂಚತ್ತಾಯ, ಗೋವಿಂದ ಭಟ್ ಬೇಂದ್ರೋಡು, ಮನೋಹರ ಬಲ್ಲಾಳ್ ಅಡ್ವಳ ಹಾಗೂ ಚೆಂಡೆ, ಮದ್ದಳೆಯಲ್ಲಿ ಸುಧೀಶ್ ಪಾಣಾಜೆ, ನಾರಾಯಣ ಶರ್ಮ, ಸಮƒದ್ಧ ಪುಣಿಂಚತ್ತಾಯ ಪಾಲ್ಗೊಂಡರು.
ತಾಳಮದ್ದಳೆ ಸಂವಾದ
ತಾಳಮದ್ದಳೆಯ ಪ್ರಸ್ತುತಿಯ ಗುಣಮಟ್ಟವನ್ನು ಪ್ರೇಕ್ಷಕ ಮತ್ತು ಕಲಾವಿದರ ಸಮ್ಮುಖದಲ್ಲಿಯೇ ಅವಲೋಕನಗೆ„ಯುವ ಈ ಹಿಂದೆ ತಾಳಮದ್ದಳೆ ಗಳಲ್ಲಿದ್ದ ಸಂವಾದ ಪರಂಪರೆಯನ್ನು ಬದಿಯಡ್ಕದಲ್ಲಿ ಮತ್ತೆ ಆರಂಭಿಸಲಾಯಿತು. ತಾಳಮದ್ದಳೆಗಳು ಸೊರಗುವುದನ್ನು ತಪ್ಪಿಸಿ, ಪ್ರೇಕ್ಷಕರನ್ನು ಮತ್ತು ಕಲಾವಿದರನ್ನು ರೂಪಿಸಲು ಆರೋಗ್ಯಪೂರ್ಣ ವಿಮರ್ಶೆಗಳ ಸಂವಾದ ತಾಳಮದ್ದಳೆಗಳಿಗೆ ಅಗತ್ಯವಾಗಿದೆ. ಈ ಪ್ರಯೋಗವನ್ನು ಪ್ರೇಕ್ಷಕರು ಪ್ರಶಂಸಿಸಿ ಅಭಿಪ್ರಾಯ ಪ್ರಕಟಿಸಿದರು. ತಾಳಮದ್ದಳೆ ಮುಗಿದ ಬಳಿಕ ಇಡೀ ಪ್ರದರ್ಶನವನ್ನು ವೀಕ್ಷಿಸಿದ ಪ್ರೇಕ್ಷಕರು ಮುಕ್ತವಾಗಿ ಕಲಾವಿದರನ್ನು ಪ್ರಶ್ನಿಸುವುದು, ತಮ್ಮ ಅಭಿಪ್ರಾಯಗಳನ್ನು ಮಂಡಿಸುವುದು ಮತ್ತು ಅವಲೋಕನ ನಡೆಸುವುದು ಸಂವಾದದ ಉದ್ದೇಶವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.