ಕಾಸರಗೋಡಿನ ಸಾಹಿತ್ಯ ಲೋಕ : ದಿ| ಕೀರಿಕ್ಕಾಡು ಸುಬ್ರಹ್ಮಣ್ಯ ಭಟ್‌


Team Udayavani, Apr 9, 2018, 9:05 AM IST

Kelu-Master-8-4.jpg

ಕಾಸರಗೋಡಿನ ಸಾಹಿತ್ಯ ಲೋಕದಲ್ಲಿ ವಿದ್ವತ್ತಿನಲ್ಲಿ ಪ್ರಖ್ಯಾತಿಯನ್ನು ಗಳಿಸಿದ ಪ್ರಸಿದ್ಧ ಮನೆತನಗಳಲ್ಲಿ ಕೀರಿಕ್ಕಾಡು ಹವ್ಯಕ ಬ್ರಾಹ್ಮಣ ಮನೆತನವೂ ಒಂದಾಗಿದೆ. ಈ ಮನೆತನದವರಲ್ಲಿ ಹೆಚ್ಚಿನವರು ಸಾಹಿತ್ಯ, ವೈದ್ಯಕೀಯ, ಯಕ್ಷಗಾನ ಆಟ-ಕೂಟಗಳೆಲ್ಲದರಲ್ಲೂ ಖ್ಯಾತಿ ಹೊಂದಿದವರಾಗಿರುತ್ತಾರೆ. ವರ್ತಮಾನ ಕಾಲದಲ್ಲಿ ಗಂಡುಮೆಟ್ಟಿನ ಕಲೆಯೆಂದು ಪ್ರಖ್ಯಾತಿ ಹೊಂದಿದ ಯಕ್ಷಗಾನವು ಸಾಗರೋಲ್ಲಂಘನ ಮಾಡಿ ವಿಜೃಂಭಿಸುತ್ತಿದೆ. ಇಂದು ಯಕ್ಷಗಾನವು ರಮ್ಯಾದ್ಭುತ ಲೋಕವನ್ನು ಚಿತ್ರಿಸುವ ಅಪೂರ್ವ ಮಾಧ್ಯಮ. ಆದರೆ ಐದಾರು ದಶಕಗಳ ಹಿಂದೆ ಯಕ್ಷಗಾನವು ಅನಾದರಣೀಯ ಸ್ಥಿತಿಯಲ್ಲಿತ್ತು. ಯಕ್ಷಗಾನ ಕಲೆಗಾಗಿಯೇ ಜೀವನವನ್ನು ಮುಡಿಪಾಗಿಟ್ಟು ತದೇಕ ಚಿತ್ತದಿಂದ ಕಲಾಸಾಗರದಲ್ಲಿ ತಲ್ಲೀನರಾದವರಲ್ಲಿ ಕೀರ್ತಿಶೇಷರಾದ ಕೀರಿಕ್ಕಾಡು ಸುಬ್ರಹ್ಮಣ್ಯ ಭಟ್ಟರು ಓರ್ವರು. ಅವರು ಬಾಲ್ಯದಿಂದ ವೃದ್ಧಾಪ್ಯದವರೆಗೂ ಯಕ್ಷಗಾನದಲ್ಲಿ ಮುಳುಗಿದ್ದು, ತಲ್ಲೀನರಾಗಿದ್ದು, ಈ ಕಲಾಕ್ಷೇತ್ರಕ್ಕೆ ಅರ್ಪಿಸಿದ ಕೊಡುಗೆ ಅಸದೃಶವಾದುದು.

ಕಾಸರಗೋಡು ತಾಲೂಕಿನ ಕುಂಬ್ಡಾಜೆ ಗ್ರಾಮದ ಒಂದು ಕಿರುಹಳ್ಳಿ ಕೀರಿಕ್ಕಾಡು. ಇಲ್ಲಿ ಸಾಧಾರಣ ಮಧ್ಯಮ ವರ್ಗದ ಹವ್ಯಕ ಬ್ರಾಹ್ಮಣ ಕೃಷಿಕ ಕುಟುಂಬದಲ್ಲಿ ಸುಬ್ರಹ್ಮಣ್ಯ ಭಟ್ಟರು 1920ನೇ ಇಸವಿಯಲ್ಲಿ ಜನಿಸಿದರು. ತಂದೆ ನಾರಾಯಣ ಭಟ್ಟರು ತಾಯಿ ಸಾವಿತ್ರಿ ಅಮ್ಮ. ಕೀರಿಕ್ಕಾಡಿನ ಸಮೀಪದ ಮುನಿಪುರ (ಮುನಿಯೂರು) ಶ್ರೀ ಗೋಪಾಲಕೃಷ್ಣನು ಅವರ ಆರಾಧ್ಯ ದೇವರು. ಅವರು ತಮ್ಮ ವಿದ್ಯಾಭ್ಯಾಸವನ್ನು ಕೀರಿಕ್ಕಾಡಿನ ವಿದ್ಯಾವಿನೋದಿನಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿಯೂ ಅನಂತರ ಪೆರ್ಲದ ಶ್ರೀ ಸತ್ಯನಾರಾಯಣ ಪ್ರೌಢಶಾಲೆಯಲ್ಲಿ ಪೂರೈಸಿದರು.

ದಿ| ಸುಬ್ರಹ್ಮಣ್ಯ ಭಟ್ಟರು ಸರಳ ಸ್ವಭಾವದ ಸಜ್ಜನರು. ನಮ್ಮ ನಾಡಿನ ಪ್ರಾಚೀನ ವಿಶಿಷ್ಟ ಜಾನಪದ ಕಲೆಯಾದ ಯಕ್ಷಗಾನಕ್ಕೆ ಮನಸೋತ ಅವರು ದಿ| ಕಂಡೆತೋಡಿ ನಾರಾಯಣ ಕೇಕುಣ್ಣಾಯರ ಹಿರಿತನದಲ್ಲಿ, ಅಣ್ಣನಾದ ದಿ| ಕೀರಿಕ್ಕಾಡು ಮಾಸ್ತರ್‌ ವಿಷ್ಣು ಭಟ್ಟರ ಶಿಷ್ಯತ್ವದಲ್ಲಿ ಅರ್ಥಧಾರಿಯಾಗಿ ಯಕ್ಷಗಾನರಂಗವನ್ನು ಪ್ರವೇಶಿಸಿ ಜನಾನುರಾಗಿಗಳಾದರು.

ಹಿಂದಿನ ಯಕ್ಷಗಾನ ಪ್ರಪಂಚದ ಖ್ಯಾತರಾದ ಕವಿ ಭೂಷಣ ದಿ| ಕೆ.ಪಿ. ವೆಂಕಪ್ಪ ಶೆಟ್ಟಿ, ದಿ| ನಾರಾಯಣ ಕಿಲ್ಲೆ, ದಿ| ನಾರಂಪಾಡಿ ಸುಬ್ಬಯ್ಯ ಶೆಟ್ಟಿ, ದಿ| ಕೀರಿಕ್ಕಾಡು ಮಾಸ್ತರ್‌ ವಿಷ್ಣು ಭಟ್ಟ, ದಿ| ಪೊಳಲಿ ಶಂಕರನಾರಾಯಣ ಶಾಸ್ತ್ರಿಗಳು, ದಿ| ದೇರಾಜೆ ಸೀತಾರಾಮಯ್ಯ, ದಿ| ಶೇಣಿ ಗೋಪಾಲಕೃಷ್ಣ ಭಟ್ಟ, ದಿ|ಪೆರ್ಲ ಕೃಷ್ಣ ಭಟ್‌ ಮೊದಲಾದವರಿಂದೊಡಗೂಡಿ ಜರಗುತ್ತಿದ್ದ ಯಕ್ಷಗಾನಕೂಟಗಳಲ್ಲಿ ವೀರ, ರೌದ್ರ, ಗಂಭೀರ, ಶಾಂತಗಳೇ ಮೊದಲಾದ ವಿವಿಧ ಸ್ವಭಾವದ ಪಾತ್ರಗಳ ಆಂಗಿಕಾಭಿನಯ ಮತ್ತು ಮಾತಿನ ಮೋಡಿಯಿಂದ ಭಿನ್ನರುಚಿಯ ಪ್ರೇಕ್ಷಕವರ್ಗಕ್ಕೆ ಏಕಕಾಲಕ್ಕೆ ರಸ ಸಮಾರಾಧನೆಯನ್ನು ನೀಡುವ ಕಲೆಯನ್ನು ಕರಗತ ಮಾಡಿಕೊಂಡ ಹಿರಿಯ ಕಲಾವಿದರು ದಿ| ಸುಬ್ರಹ್ಮಣ್ಯ ಭಟ್ಟರಾಗಿರುತ್ತಾರೆ. ಅವರ ಸ್ತ್ರೀ ಪಾತ್ರಗಳ ನಿರೂಪಣೆಯೂ ಜನರಿಂದ ತುಂಬ ಮೆಚ್ಚುಗೆಯನ್ನು ಗಳಿಸಿತ್ತು.

ದಿ| ಕೀರಿಕ್ಕಾಡು ಮಾಸ್ತರ್‌ ವಿಷ್ಣು ಭಟ್ಟ ಅವರಿಂದ ಬನಾರಿಯಲ್ಲಿ ಸ್ಥಾಪಿಸಲ್ಪಟ್ಟ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಂಘ ಎಂಬ ಸಂಸ್ಥೆಯಲ್ಲಿ ಹೆಸರಾಂತ ಕಲಾವಿದರ ಜೊತೆಯಲ್ಲಿ ಎಲ್ಲಾ ಕಥಾಭಾಗಗಳಲ್ಲೂ ನಾಯಕ ಪಾತ್ರದಲ್ಲಿ ಅಭಿನಯಿಸಿ ಅವರು ಹೆಸರು ಗಳಿಸಿರುತ್ತಾರೆ. ಕೀರಿಕ್ಕಾಡು ವಿದ್ಯಾವಿನೋದಿನಿ ಕಿರಿಯ ಪ್ರಾಥಮಿಕ ಶಾಲೆಯ ಪ್ರಬಂಧಕರಾಗಿ ವಿದ್ಯಾಕ್ಷೇತ್ರದಲ್ಲಿಯೂ ಅಪಾರ ಸೇವೆ ಸಲ್ಲಿಸಿರುತ್ತಾರೆ. ಕೀರಿಕ್ಕಾಡಿನಿಂದ ಪುತ್ತೂರು ತಾಲೂಕಿನ ಕುರಿಯ ಗ್ರಾಮದ ಉಳ್ಳಾಲ ಎಂಬಲ್ಲಿ ನೆಲೆಸಿ ಯಕ್ಷಗಾನ ಕಲಾಮಾತೆಗೆ ಅಪೂರ್ವವಾದ ಸೇವೆಯನ್ನು ಸಲ್ಲಿಸಿದರು.
ಪುತ್ತೂರು ಬೊಳ್ವಾರಿನ ಶ್ರೀ ಆಂಜನೇಯ ಯಕ್ಷಗಾನ ತಂಡ ಹಾಗೂ ಇನ್ನಿತರ ಕಲಾ ಸಾಂಸ್ಕೃತಿಕ ಸಂಘಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅನೇಕ ಕಡೆ ಯಕ್ಷಗಾನ-ನಾಟಕ-ಕೂಟ ಎಲ್ಲದರಲ್ಲೂ ಭಾಗವಹಿಸಿದರು. ಅವರ ಅನೇಕ ವಿದ್ವತ್‌ಪೂರ್ಣ ಕಲಾ ಸಾಂಸ್ಕೃತಿಕ ಲೇಖನಗಳು ಅನೇಕ ಸ್ಮರಣ ಸಂಚಿಕೆಗಳಲ್ಲಿ ಮತ್ತು ನಿಯತಕಾಲಿಕಗಳಲ್ಲಿ ಪ್ರಕಟವಾಗಿವೆ. ಅವರು ಸಂಪಾದಿಸಿ ರಚಿಸಿದಂತಹ ಸುಮಾರು 30ಕ್ಕಿಂತಲೂ ಅಧಿಕ ಪೌರಾಣಿಕ, ಚಾರಿತ್ರಿಕ ನಾಟಕಗಳು, ಯಕ್ಷಗಾನ ಅರ್ಥಸಹಿತಗಳು, ಪಾಠಮಾಲಿಕೆಗಳು ಹಸ್ತಪ್ರತಿಗಳಲ್ಲಾಗಿದ್ದುದಾದರೂ ಇದೀಗ ಅಲಭ್ಯವಾಗಿವೆ.

ಕಾಸರಗೋಡು ತಾಲೂಕು ಮುಳ್ಳಂಗೊಚ್ಚಿಯ ದಿ| ಕೇಶವ ಭಟ್ಟ- ಈಶ್ವರಿ ದಂಪತಿಯರ ಪುತ್ರಿ ಸರಸ್ವತಿ ಅಮ್ಮ ದಿ| ಸುಬ್ರಹ್ಮಣ್ಯ ಭಟ್ಟರ ಸಹಧರ್ಮಿಣಿ. ಅವರಿಗೆ ಎರಡು ಗಂಡು ಮತ್ತು ಐದು ಹೆಣ್ಣುಮಕ್ಕಳು. ನಾರಾಯಣಿ, ಸಾವಿತ್ರಿ, ಶಶಿ, ಈಶ್ವರಿ, ವೀಣಾ ಅವರು ಪುತ್ರಿಯರು. ನಾರಾಯಣ ಭಟ್ಟ (ಬಾಳಿಲ ವಿದ್ಯಾಬೋಧಿನಿ ಪ್ರೌಢ ಶಾಲೆಯಲ್ಲಿ ಪದವೀಧರ ಶಿಕ್ಷಕನಾಗಿ ನಿವೃತ್ತಿ), ಕೇಶವಮೂರ್ತಿ (ಬೆಂಗಳೂರಿನಲ್ಲಿ ಸ್ವೋದ್ಯೋಗಿ) ಅವರು ಪುತ್ರರು.

ಧಾರ್ಮಿಕ, ಕಲಾ-ಸಾಂಸ್ಕೃತಿಕ, ಸಾಹಿತ್ಯ ರಂಗಗಳಲ್ಲಿ ಬಹುಮುಖವಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ ದಿ| ಸುಬ್ರಹ್ಮಣ್ಯ ಭಟ್ಟರನ್ನು ನಾಡಿನ ಕೆಲವು ಸಂಘ ಸಂಸ್ಥೆಗಳು ಗೌರವಿಸಿ ಸಮ್ಮಾನಿಸಿವೆ. ಆದರೆ ಕರ್ನಾಟಕ-ಕೇರಳ ಸರಕಾರಗಳು ಅವರ ಸಾಧನೆ ಮತ್ತು ಸೇವೆಯನ್ನು ಪರಿಗಣಿಸಿ ಯಾವುದೇ ಪ್ರಶಸ್ತಿ ಗೌರವಗಳನ್ನು ನೀಡಿಲ್ಲ. ಯಕ್ಷಗಾನ ರಂಗದಲ್ಲಿ ಬಹುಮುಖ ಪ್ರತಿಭೆಯಾಗಿ ಮೆರೆದ ಕೀರಿಕ್ಕಾಡು ಸುಬ್ರಹ್ಮಣ್ಯ ಭಟ್ಟ ಅವರು 1995 ಅಕ್ಟೋಬರ 30ರಂದು ವಿಧಿವಶರಾದರು.

— ಕೆ. ಕೇಳು ಮಾಸ್ತರ್‌ ಅಗಲ್ಪಾಡಿ 

ಟಾಪ್ ನ್ಯೂಸ್

cOurt

Putturu: ಬಾಲಕಿಯೊಂದಿಗೆ ಅನುಚಿತ ವರ್ತನೆ: ಆರೋಪಿಗೆ ಶಿಕ್ಷೆ, ದಂಡ

Sulya-Elephant

Sulya: ಆನೆಗುಂಡಿ: ಹೆದ್ದಾರಿ ಬದಿ ಎರಡು ಕಾಡಾನೆ ಸಂಚಾರ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

JDS protest: ಎಚ್‌ಡಿಕೆ ಕರಿಯ: ಜಮೀರ್‌ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ

JDS protest: ಎಚ್‌ಡಿಕೆ ಕರಿಯ: ಜಮೀರ್‌ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ

ಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ACT

Manjeshwar: ಬಂಧಿತರ ಪೈಕಿ ಓರ್ವ 15 ಪ್ರಕರಣಗಳಲ್ಲಿ ಆರೋಪಿ

POlice

Kumbla: ಪ್ರಾಣ ಲೆಕ್ಕಿಸದೆ ಹೊಳೆಗೆ ಹಾರಿ ಆರೋಪಿಯನ್ನು ಬಂಧಿಸಿದ ಪೊಲೀಸರು

Beete-Wood

Madikeri: ಬೀಟಿ ಮರ ಸಾಗಾಟ: ಸೊತ್ತು ಸಹಿತ ಓರ್ವನ ಬಂಧನ

ssa

Kasaragod: ಎಡನೀರು ಶ್ರೀಗಳ ಕಾರಿಗೆ ಹಾನಿ; ಇಬ್ಬರ ವಿರುದ್ಧ ಕೇಸು ದಾಖಲು

17

Kasargod: ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ ಮತ್ತೆ ಕಲ್ಲು ತೂರಾಟ

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

cOurt

Putturu: ಬಾಲಕಿಯೊಂದಿಗೆ ಅನುಚಿತ ವರ್ತನೆ: ಆರೋಪಿಗೆ ಶಿಕ್ಷೆ, ದಂಡ

Sulya-Elephant

Sulya: ಆನೆಗುಂಡಿ: ಹೆದ್ದಾರಿ ಬದಿ ಎರಡು ಕಾಡಾನೆ ಸಂಚಾರ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.