ನದಿಗ‌ಳ ರಕ್ಷಣೆ, ನಿರ್ವಹಣೆಗೆ ವಿಶೇಷ ಕಾನೂನು ಅಗತ್ಯ: ಸೂಲಿಬೆಲೆ


Team Udayavani, Apr 12, 2018, 8:25 AM IST

CHAKRAVARTHY-11-4.jpg

ಮಡಿಕೇರಿ: ಕಾವೇರಿ ನದಿ ಸೇರಿದಂತೆ ದೇಶದ ಎಲ್ಲಾ ನದಿಗ‌ಳ ರಕ್ಷಣೆ ಮತ್ತು ನಿರ್ವಹಣೆಗೆ ವಿಶೇಷ ಕಾನೂನನ್ನು ರೂಪಿಸುವ ಅಗತ್ಯವಿದೆ ಎಂದು ಖ್ಯಾತ ವಾಗ್ಮಿ ಹಾಗೂ ಚಿಂತಕ ಚಕ್ರವರ್ತಿ ಸೂಲಿಬೆಲೆ ಅಭಿಪ್ರಾಯಪಟ್ಟಿದ್ದಾರೆ. ಕೊಡಗು ಜಿಲ್ಲಾ ಪ್ರಸ್‌ಕ್ಲಬ್‌ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ನಡೆದ‌ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಲೀನಗೊಂಡಿದ್ದ ಇಂಗ್ಲೆಂಡಿನ ಥೇಮ್ಸ್‌ ನದಿ, ಗುಜರಾತಿನ ಸಬರಮತಿ ನದಿಗಳು ಪ್ರಸ್ತುತ ಅತ್ಯಂತ ಸ್ವಚ್ಛವಾದ ನದಿಗಳಾಗಿ ಪರಿವರ್ತನೆಯಾಗಿದ್ದು, ಇಂತಹ ಬದಲಾವಣೆಗಳು ಇತರ ನದಿಗಳಲ್ಲೂ ಕಾಣಬೇಕಾಗಿದೆ ಎಂದರು.

ದೇವರೆಂದು ಭಕ್ತಿ ಭಾವದಿಂದ ನದಿಗಳನ್ನು ಪೂಜಿಸುವ ನಾವೇ ನದಿಯ ನೀರನ್ನು ಮಲೀನಗೊಳಿಸುತ್ತಿದ್ದು, ಪ್ರತಿಯೊಬ್ಬರಲ್ಲಿನ ಪ್ರಜ್ಞಾವಂತಿಕೆಯಿಂದ ಮಾತ್ರ ಜೀವನದಿ ಕಾವೇರಿಯ ಸ್ವತ್ಛತೆ ಮತ್ತು ಪಾವಿತ್ರ್ಯತೆಯನ್ನು ಸಂರಕ್ಷಿಸಲು ಸಾಧ್ಯವೆಂದು ಅಭಿಪ್ರಾಯಪಟ್ಟರು. ದಶಕಗಳ ಅಂತರದಲ್ಲಿ ಜೀವನದಿ ಕಾವೇರಿಯ ಹರಿವಿನಲ್ಲಿ ಆತಂಕಕಾರಿ ಬದಲಾವಣೆಗಳಾಗಿದೆ. ಕಾವೇರಿ ನಾಶವಾದರೆ ಕೇವಲ ನದಿ ಮಾತ್ರವಲ್ಲ ಒಂದು ಇಡೀ ಸಂಸ್ಕೃತಿಯೇ ನಾಶವಾದಂತೆ ಎಂದು ಚಕ್ರವರ್ತಿ ಸೂಲಿಬೆಲೆ ಎಚ್ಚರಿಕೆಯ ನುಡಿಗಳನ್ನಾಡಿದರು.

ಜೀವನದಿ ಕಾವೇರಿ ಮಲಿನಗೊಳ್ಳುತ್ತಿರುವ ಬಗ್ಗೆ ರಾಷ್ಟ್ರೀಯ ಹಸಿರು ಪೀಠಕ್ಕೆ ಪತ್ರ ಬರೆದು, ಅವರ ಮೂಲಕ ನದಿಯ ಸಂರಕ್ಷಣೆಯ ಬಗ್ಗೆ ಸರ್ಕಾರಗಳಿಗೆ, ನದಿ ಹರಿಯುವ ಪ್ರದೇಶದ ಜಿಲ್ಲಾ ಆಡಳಿತ, ಗ್ರಾಮ ಪಂಚಾಯ್ತಿಗಳಿಗೆ ತಾಕೀತು ಮಾಡಲು ನಿರ್ದೇಶನ ನೀಡುವಂತೆ ಕೋರಲಾಗುತ್ತದೆ ಎಂದು ಅವರು ಇದೇ ಸಂದರ್ಭ ತಿಳಿಸಿದರು.

ಬೆಂಗಳೂರಿನಲ್ಲಿ ಕುಳಿತು ಶುದ್ಧ ಕಾವೇರಿಯ ನೀರನ್ನು ಕುಡಿದು ಆರೋಗ್ಯವಂತರಾಗಿ ಇರಬೇಕಾದಲ್ಲಿ ನದಿ ಹರಿಯುವ ಪ್ರದೇಶಗಳ ಸಂರಕ್ಷಣೆ, ನದಿಯ ನಿರ್ವಹಣೆ ಅತ್ಯವಶ್ಯವಾಗಿ ನಡೆಯಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಕಾವೇರಿಯ ಉಳಿವಿಗೆಂದೇ ವಿಶೇಷ ಪ್ಯಾಕೇಜನ್ನು ಸರ್ಕಾರ ಒದಗಿಸುವುದು ಅತ್ಯವಶ್ಯ. ಕಾವೇರಿಯ ಉಳಿವಿಗಾಗಿ ಇಲ್ಲಿನ ಪರಿಸರವನ್ನು ಜತನದಿಂದ ಕಾಯ್ದುಕೊಳ್ಳುವ ಸ್ಥಳೀಯರಿಗೆ, ಹೊರ ಜಿಲ್ಲೆಗಳತ್ತ ತಮ್ಮ ಅವಶ್ಯಕತೆಗಳಿಗಾಗಿ ನೋಡಲೇಬೇಕಾದ ಅನಿವಾರ್ಯತೆಯನ್ನು ಇಲ್ಲದಾಗಿಸಿ, ಇಲ್ಲಿಯೇ ಎಲ್ಲಾ ಸೌಲಭ್ಯಗಳು ದೊರಕುವಂತೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಚರ್ಚೆಗಳು ನಡೆಯುವುದು ಸೂಕ್ತವೆಂದರು.ಅಭಿವೃದ್ಧಿಯ ವಿಚಾರಗಳ ನಡುವೆ ವಿಕಾಸದ ಪರಿಕಲ್ಪನೆ ಯಾರಲ್ಲೂ ಇದ್ದಂತಿಲ್ಲ. ಪರಿಸರವನ್ನು ಸಂರಕ್ಷಿಸಿಕೊಂಡು ಅಭಿವೃದ್ಧಿಯನ್ನು ಕಂಡುಕೊಳ್ಳುವುದು ವಿಕಾಸವಾಗುತ್ತದೆ. ಆದರೆ, ಪರಿಸರವನ್ನು ಕಳೆದುಕೊಂಡು ಸೌಲಭ್ಯಗಳನ್ನು ಹೊಂದುವುದೆ ಅಭಿವೃದ್ಧಿ ಎಂಬಂತಾಗಿದೆ. ಇದಕ್ಕೆ ಬೆಂಬಲವಾಗಿ ಸರ್ಕಾರಗಳು ಮುಂದುವರಿಯುತ್ತಿವೆ ಎಂದು ಮಾರ್ಮಿಕವಾಗಿ ನುಡಿದು, ಕೊಡಗಿನ ಹೈಟೆನ್ಶನ್‌ ಮಾರ್ಗ ನಿರ್ಮಾಣದಲ್ಲಿ ಸಹಸ್ರಾರು ಮರಗಳನ್ನು ಕಡಿಯಲು, ಎತ್ತಿನ ಹೊಳೆ ಯೋಜನೆ ಆಗುತ್ತದೋ ಬಿಡುತ್ತದೋ ಅಷ್ಟರಲ್ಲೆ ಯೋಜನೆ ಹಾದು ಹೋಗುವ ಪ್ರದೇಶದ ಅರಣ್ಯದ  ಮರಗಳನ್ನು ತೆಗೆಯುವ ಕಾರ್ಯದ ಹಿಂದೆ ಆತಂಕ ಅಡಗಿದೆ ಎಂದು ಚಕ್ರವರ್ತಿ ಸೂಲಿಬೆಲೆ ತಿಳಿಸಿದರು. ತ್ಯಾಗ ಮನೋಭಾವನೆ ಮತ್ತು ರಾಷ್ಟ್ರೀಯತೆಯ ಭಾವನೆಯನ್ನು ಯುವ ಸಮೂಹದಲ್ಲಿ ಬಿತ್ತುವ ಮೂಲಕ ಕಾವೇರಿಯ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಸಾಧ್ಯವಿದೆ. 

ತಮಿಳುನಾಡಿನಲ್ಲಿ ನಡೆಯುತ್ತಿರುವ ಕಾವೇರಿ ಹೋರಾಟ ತಮಿಳರ ಭಾವನೆಗಳನ್ನು ತಮ್ಮತ್ತ ವಾಲಿಸಿಕೊಂಡು ಚುನಾವಣೆೆ ಗೆಲ್ಲುವ ಪ್ರಯತ್ನವಾಗಿದೆ ಎಂದು ಅವರು ಟೀಕಿಸಿದರು. ಚಿತ್ರನಟ ರಜನೀಕಾಂತ್‌ ಪ್ರಸ್ತುತ ರಾಜಕಾರಣಿಯಾಗಿರುವುದರಿಂದ ಅವರು ಅಂತಹ ಹೋರಾಟದಲ್ಲಿ ಭಾಗಿಯಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು. ಸಂವಾದದಲ್ಲಿ ಕೊಡಗು ಪ್ರಸ್‌ ಕ್ಲಬ್‌ ಅಧ್ಯಕ್ಷ ಅಜ್ಜಮಾಡ ರಮೇಶ್‌ ಕುಟ್ಟಪ್ಪ, ಪ್ರಧಾನ ಕಾರ್ಯದರ್ಶಿ ಸುಬ್ರಮಣಿ ಉಪಸ್ಥಿತರಿದ್ದರು.

ಕೆಟ್ಟ ನಿರ್ವಹಣೆ
ಭಾಗಮಂಡಲ ಸುಂದರವಾಗಿ ದ್ದರೂ ಅಲ್ಲಿನ ನಿರ್ವಹಣೆ ಅತ್ಯಂತ ಕೆಟ್ಟದಾಗಿದೆ. ಪ್ರವಾಸೋದ್ಯಮ ಕೊಡಗಿನ ಜನತೆಗೆ ಅಗತ್ಯ ಆರ್ಥಿಕ ಶಕ್ತಿಯನ್ನು, ಉದ್ಯೋಗ ದೊರಕಿಸಿಕೊಡುತ್ತಿದೆ. ಭಾಗಮಂಡಲದತ್ತ ಸಾಗುವಹಾದಿ ಪರಿಸರಕ್ಕೆ ‌ಧಕ್ಕೆಯಾಗದಂತೆ ನೋಡಿಕೊಳ್ಳುವ ಕಾರಣ ಸಿಂಗಲ್‌ ರೋಡ್‌ ಆಗಿದೆ ಎನ್ನುವುದು ಪ್ರತಿಬಿಂಬಿಸುವಲ್ಲಿ ವಿಫ‌ಲವಾಗಿದ್ದೇ ವೆಂದು ಸೂಲಿಬೆಲೆ ವಿಷಾದಿಸಿದರು.

ಟಾಪ್ ನ್ಯೂಸ್

Jhansi: Teacher watched obscene video in class; student who noticed was beaten up

Jhansi: ತರಗತಿಯಲ್ಲಿ ಅಶ್ಲೀಲ ವಿಡಿಯೋ ನೋಡಿದ ಶಿಕ್ಷಕ; ಗಮನಿಸಿದ ವಿದ್ಯಾರ್ಥಿಗೆ ಥಳಿತ

10-mng

Train Service: ಮಂಗಳೂರು – ವಿಜಯಪುರ ವಿಶೇಷ ರೈಲು ವಿಸ್ತರಣೆ

8-utkhader

U. T. Khader: ಹೆಬ್ಟಾಳ್ಕರ್‌-ಸಿ.ಟಿ. ರವಿ ಪ್ರಕರಣ ಹಕ್ಕು ಭಾದ್ಯತಾ ಸಮಿತಿಗೆ: ಖಾದರ್‌

7-munirathna

Munirathna ವಿರುದ್ಧದ ಅತ್ಯಾಚಾರ ಆರೋಪ ರುಜುವಾತು

6-bandipura

New Year: ಡಿ.31, ಜ. 1ರಂದು ಬಂಡೀಪುರದಲ್ಲಿ ಪ್ರವಾಸಿಗರ ವಾಸ್ತವ್ಯ ನಿರ್ಬಂಧ

Bengaluru; Cab driver fell asleep: Passenger drove the vehicle!

Bengaluru; ನಿದ್ರೆಗೆ ಜಾರಿದ ಕ್ಯಾಬ್‌ ಡ್ರೈವರ್‌: ಪ್ರಯಾಣಿಕನಿಂದಲೇ ವಾಹನ ಚಾಲನೆ!| Video

ಕಂಪನಿಯ ಡೇಟಾ ಕದ್ದು 12.5 ಕೋಟಿ ವಂಚನೆ ಮಾಡಿದ ಬ್ಯಾಂಕ್‌ ಮ್ಯಾನೇಜರ್!

Data Theft: ಕಂಪನಿಯ ಡೇಟಾ ಕದ್ದು 12.5 ಕೋಟಿ ವಂಚನೆ ಮಾಡಿದ ಬ್ಯಾಂಕ್‌ ಮ್ಯಾನೇಜರ್!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11

Kasaragodu: ಹೊಳೆಯಲ್ಲಿ ಮುಳುಗಿ ಮೂವರು ಬಾಲಕರ ಸಾವು

arrest-woman

Madikeri: ಗುಂಡು ಹೊಡೆದು ಕಾರ್ಮಿಕನ ಕೊ*ಲೆ; ವ್ಯಕ್ತಿ ಬಂಧನ

2

Kasaragod: ಹೊಳೆಯಲ್ಲಿ ಮುಳುಗಿ ವಿದ್ಯಾರ್ಥಿ ಸಾವು

Untitled-1

Kasaragod Crime News: ಮೂವರು ಮಕ್ಕಳ ಸಹಿತ ತಾಯಿ ನಾಪತ್ತೆ

Court-1

Kasaragod: ಯೂತ್‌ ಕಾಂಗ್ರೆಸ್‌ ಕಾರ್ಯಕರ್ತರ ಕೊ*ಲೆ ಪ್ರಕರಣ: 14 ಮಂದಿ ತಪ್ಪಿತಸ್ಥರು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Jhansi: Teacher watched obscene video in class; student who noticed was beaten up

Jhansi: ತರಗತಿಯಲ್ಲಿ ಅಶ್ಲೀಲ ವಿಡಿಯೋ ನೋಡಿದ ಶಿಕ್ಷಕ; ಗಮನಿಸಿದ ವಿದ್ಯಾರ್ಥಿಗೆ ಥಳಿತ

11

Kasaragodu: ಹೊಳೆಯಲ್ಲಿ ಮುಳುಗಿ ಮೂವರು ಬಾಲಕರ ಸಾವು

10-mng

Train Service: ಮಂಗಳೂರು – ವಿಜಯಪುರ ವಿಶೇಷ ರೈಲು ವಿಸ್ತರಣೆ

9-

Delhi ಗಣರಾಜ್ಯೋತ್ಸವ; ಹೆಬ್ರಿಯ ಮಹಿಳೆಗೆ ವಿಶೇಷ ಅವಕಾಶ

8-utkhader

U. T. Khader: ಹೆಬ್ಟಾಳ್ಕರ್‌-ಸಿ.ಟಿ. ರವಿ ಪ್ರಕರಣ ಹಕ್ಕು ಭಾದ್ಯತಾ ಸಮಿತಿಗೆ: ಖಾದರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.