ಕೆಲಸಕ್ಕೆ ಚಕ್ಕರ್‌: ಪತ್ತೆಗೆ ವಿಶೇಷ ಸಾಫ್ಟ್‌ವೇರ್‌


Team Udayavani, Nov 14, 2018, 2:40 AM IST

punch-machine-13-11.jpg

ಕಾಸರಗೋಡು: ಸರಕಾರಿ ಕಚೇರಿಗಳಲ್ಲಿ ಸಹಿ ಹಾಕಿದ ಬಳಿಕ ಫೀಲ್ಡ್‌ ವರ್ಕ್‌ ಹಾಗೂ ಇನ್ನಿತರ ಕಾರ್ಯದ ನೆಪವೊಡ್ಡಿ ನಾಪತ್ತೆಯಾಗುವ ಕೆಲಸಗಳ್ಳ ಸರಕಾರಿ ನೌಕರರ ಮೇಲೆ ತೀವ್ರ ನಿಗಾವಹಿಸಲು ಕಾಸರಗೋಡು ಜಿಲ್ಲಾಧಿಕಾರಿಯಾಗಿರುವ ಡಾ| ಡಿ. ಸಜಿತ್‌ಬಾಬು ಪ್ರತ್ಯೇಕ ವ್ಯವಸ್ಥೆಯೊಂದನ್ನು ರೂಪಿಸಿದ್ದಾರೆ. ಇದಕ್ಕಾಗಿ ವಿಶೇಷ ಸಾಫ್ಟ್‌ವೇರ್‌ ತಯಾರಿಸಲಾಗಿದ್ದು, ಈ ವ್ಯವಸ್ಥೆಯನ್ನು 2019ನೇ ಜನವರಿ 1ರಿಂದ ಕಾರ್ಯಗತಗೊಳಿಸಲು ನಿರ್ಧರಿಸಲಾಗಿದೆ.

ಸರಕಾರಿ ನೌಕರರು ಕರ್ತವ್ಯಕ್ಕೆ ಅಥವಾ ಕಚೇರಿಗೆ ಹಾಜರಾದ ಅನಂತರ ಎಲ್ಲಿಗೆ ತೆರಳುತ್ತಾರೆ ಎಂಬುದರ ಬಗ್ಗೆ ನಿಗಾ ಇರಿಸಲು ತೀರ್ಮಾನಿಸಲಾಗಿದೆ. ಫೀಲ್ಡ್‌ವರ್ಕ್‌ ಹಾಗೂ ಇತರ ಕರ್ತವ್ಯಕ್ಕೆ ತೆರಳುವುದಾಗಿ ತಿಳಿಸಿ ಅಥವಾ ಮೊಬೈಲ್‌ನಲ್ಲೇ ಗಂಟೆಗಟ್ಟಲೆ ಮಾತನಾಡುತ್ತಾ ಹೊರಗೆ ಬಂದು ಬಳಿಕ ಹಿಂದಿರುಗದೆ ನೌಕರರು ನಾಪತ್ತೆಯಾಗುತ್ತಾರೆ. ಅವರನ್ನು ನಿಯಂತ್ರಿಸುವ ಸಲುವಾಗಿ ಪ್ರತ್ಯೇಕ ವ್ಯವಸ್ಥೆಯನ್ನು ಜಾರಿಗೆ ತರುವುದು ಅನಿವಾರ್ಯ ಎಂಬುದು ಜಿಲ್ಲಾಧಿಕಾರಿಗಳ ಅಭಿಮತವಾಗಿದೆ.

ಕಾಸರಗೋಡು ಜಿಲ್ಲಾಧಿಕಾರಿ ಛೇಂಬರ್‌ನಲ್ಲಿ ಜಿಲ್ಲೆಯ ಪ್ರತಿಯೋರ್ವ ಸರಕಾರಿ ನೌಕರ ಎಲ್ಲಿ ಏನು ಮಾಡುತ್ತಾನೆ ಎಂಬುದನ್ನು ಲೈವ್‌ ಆಗಿ ನೋಡುವ ವ್ಯವಸ್ಥೆ ಇದೆ. ಆದರೆ ಇದಕ್ಕಾಗಿ ಪ್ರತ್ಯೇಕ ಮೊಬೈಲ್‌ ಸಾಫ್ಟ್‌ವೇರ್‌ ಬಳಸಬೇಕಾಗುತ್ತದೆ. ಅಲ್ಲದೆ ಈ ನಿಟ್ಟಿನಲ್ಲಿ ಪ್ರಾಥಮಿಕವಾಗಿ ವಿಶೇಷ ವ್ಯವಸ್ಥೆಗಳನ್ನು ರೂಪಿಸಬೇಕಾಗುತ್ತದೆ.
ಜಿಲ್ಲಾಧಿಕಾರಿ ಅಧೀನದಲ್ಲಿ ಕೆಲಸ ಮಾಡುವ ಸರಕಾರಿ ನೌಕರರು ಜಿಲ್ಲಾಧಿಕಾರಿಗಳ ನಿಯಂತ್ರಣದಲ್ಲಿರುತ್ತಾರೆ. ಪ್ರತಿಯೊಬ್ಬರ ಮೇಲೂ ನಿಗಾ ವಹಿಸಲು ಇದರಿಂದ ಸಾಧ್ಯವಾಗಲಿದೆ. ಆದರೆ ಜಿಲ್ಲೆಯ ಇತರ ಸರಕಾರಿ ಕಚೇರಿಯಲ್ಲಿ ಹಾಜರಾದ ಅನಂತರ ನಾಪತ್ತೆಯಾಗುವ ನೌಕರರ ಬಗ್ಗೆ ವ್ಯಾಪಕ ದೂರುಗಳು ಹಾಗೂ ನಿರಂತರ ಆರೋಪಗಳು ಬಂದಿರುವ ಹಿನ್ನೆಲೆಯಲ್ಲಿ ಲೈವ್‌ ಆಗಿ ನಿಗಾ ವಹಿಸಲು ಮೊಬೈಲ್‌ ಆ್ಯಪ್‌ ಜಾರಿಗೊಳಿಸಲಾಗುವುದು.
ಹೊಸ ಮೊಬೈಲ್‌ ಸಾಫ್ಟ್‌ವೇರ್‌ನಿಂದಾಗಿ ಫೀಲ್ಡ್‌  ವರ್ಕ್‌ಗೆ ತೆರಳುವವರ ಕುರಿತು ಸಂಶಯ ಉಂಟಾದರೆ ಕೂಡಲೇ ಅವರನ್ನು ಸಂಪರ್ಕಿಸಿ ಅವರು ಎಲ್ಲಿ ಏನು ಮಾಡುತ್ತಾರೆ ಎಂಬುದನ್ನು ತಿಳಿಯಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಾಧ್ಯವಾಗುತ್ತದೆ. ಅದೇ ರೀತಿಯಲ್ಲಿ ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆಗಳಲ್ಲೂ ಅಗತ್ಯವಿದ್ದರೆ ಈ ವ್ಯವಸ್ಥೆಯನ್ನು ಜಾರಿಗೊಳಿಸಲು ಉಚಿತವಾಗಿ ವ್ಯವಸ್ಥೆ ರೂಪಿಸುವ ಕುರಿತು ಚಿಂತನೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ಬಾಬು ತಿಳಿಸಿದ್ದಾರೆ.

ಈ ಯೋಜನೆಯನ್ನು ಕಾಸರಗೋಡು ಜಿಲ್ಲೆಯಲ್ಲಿ ಕಾರ್ಯಗತಗೊಳಿಸುವ ಮೂಲಕ ಕೇರಳ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಸರಕಾರಿ ನೌಕರರನ್ನು ಗಮನಿಸುವ ವ್ಯವಸ್ಥೆ ಹೊಂದುವ ಜಿಲ್ಲೆಯಾಗಲಿದೆ. ಸರಕಾರಿ ನೌಕರರನ್ನು ಗಮನಿಸುವ ಸಾಫ್ಟ್‌ವೇರ್‌ನಂತೆಯೇ ನಗರ ಸಹಿತ ವಿವಿಧ ಪ್ರದೇಶಗಳಲ್ಲಿ ತ್ಯಾಜ್ಯ ಎಸೆಯುವವರ ಮಾಹಿತಿಗಳನ್ನು ವಾಟ್ಸ್‌ಆ್ಯಪ್‌ ಮೂಲಕ ಲಭಿಸುವುದನ್ನು ಆಯಾ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಹಸ್ತಾಂತರಿಸಿ ಕ್ರಮ ಕೈಗೊಳ್ಳುವುದನ್ನು ಖಾತರಿ ಪಡಿಸಲಾಗುವುದು. ಈಗಾಗಲೇ ಕಾಸರಗೋಡು ನಗರಸಭೆಯ ಆರೋಗ್ಯ ವಿಭಾಗದ ನೇತೃತ್ವದಲ್ಲಿ ಇದೇ ರೀತಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಲಿನ್ಯ ಎಸೆಯುವವರನ್ನು ಪತ್ತೆಹಚ್ಚಿ ಕ್ರಮಕೈಗೊಳ್ಳಲಾಗುತ್ತಿದೆ. ಈ ವ್ಯವಸ್ಥೆ ಕೂಡ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಏರ್ಪಡಿಸಿದ ನೂತನ ಯೋಜನೆಗಳಲ್ಲಿ ಒಂದಾಗಿದೆ.

ಜಿಲ್ಲೆಯಲ್ಲಿ ವಿನೂತನ ಯೋಜನೆಗಳು
ಸಾರ್ವಜನಿಕ ಸ್ಥಳಗಳಲ್ಲಿ ಮಾಲಿನ್ಯ ಎಸೆಯುವವರ ಕುರಿತು ಚಿತ್ರ ಸಹಿತ ಜಿಲ್ಲಾಧಿಕಾರಿ ಒದಗಿಸಿದ ವಾಟ್ಸ್‌ಆ್ಯಪ್‌ ನಂಬರ್‌ಗೆ ದೂರು ನೀಡುವ ವ್ಯವಸ್ಥೆಯನ್ನು ಈಗಾಗಲೇ ಜಾರಿಗೊಳಿಸಲಾಗಿದೆ. ಇದು ಯಶಸ್ವಿಯಾದ ಹಿನ್ನೆಲೆಯಲ್ಲಿ ಸರಕಾರಿ ನೌಕರರ ಮೇಲೆ ನಿಗಾವಹಿಸುವ ವ್ಯವಸ್ಥೆಯನ್ನು  ಅನುಷ್ಠಾನಕ್ಕೆ ತರಲಾಗುತ್ತಿದೆ. ಈ ಮೂಲಕ ವಿನೂತನ ಯೋಜನೆಗಳನ್ನು ಕಾಸರಗೋಡು ಜಿಲ್ಲೆಯಲ್ಲಿ ಜಾರಿಗೊಳಿಸಲಾಗುತ್ತಿದೆ. ಈ ಮಧ್ಯೆ ಕೇವಲ ನಿಗಾ ಮಾತ್ರವಲ್ಲದೆ ತಪ್ಪಿತಸ್ಥ ನೌಕರರ ವಿರುದ್ಧ ತತ್‌ಕ್ಷಣ ಕ್ರಮ ಕೈಗೊಳ್ಳುವ ವ್ಯವಸ್ಥೆಯನ್ನೂ ಇದರೊಂದಿಗೆ ಜಾರಿಗೊಳಿಸಲು ಜಿಲ್ಲಾಧಿಕಾರಿ ಯೋಜನೆ ರೂಪಿಸಿದ್ದಾರೆ.

ಟಾಪ್ ನ್ಯೂಸ್

2-thirthahalli

Thirthahalli: ತುಂಗಾ ಕಮಾನು ಸೇತುವೆ ಬಳಿ ಪತ್ತೆಯಾಗಿದ್ದ ಅಸ್ತಿ ಪಂಜರ ತಂದು ಹಾಕಿದ್ಯಾರು!!?

IPL: RCB buys young Sehwag amid confusion; Who is this Swastik Chikara

IPL: ಗೊಂದಲದಲ್ಲಿ ಮರಿ ಸೆಹ್ವಾಗ್‌ ನನ್ನು ಖರೀದಿಸಿದ ಆರ್‌ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ

Essar Group: ಎಸ್ಸಾರ್ ಗ್ರೂಪ್ ನಿ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ

Essar Group: ಎಸ್ಸಾರ್ ಗ್ರೂಪ್ ನ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ

9

Renukaswamy Case: ದರ್ಶನ್‌ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ

2-thirthahalli

Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

car-parkala

ಕಾಸರಗೋಡು: ಬೈಕ್‌ ಢಿಕ್ಕಿ; ವಿದ್ಯಾರ್ಥಿಗೆ ಗಂಭೀರ ಗಾಯ

suicide

Kasaragod;ತೀವ್ರ ತಲೆನೋವು: ವಿದ್ಯಾರ್ಥಿನಿ ಸಾ*ವು

arest

Kumbla: ಯುವಕನನ್ನು ಅಪಹರಿಸಿ ಕೊಲೆಗೆ ಯತ್ನ; ಬಂಧನ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

10-madikeri

Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

8

Hampankatte: ಸಿಟಿ ಮಾರ್ಕೆಟ್‌ ರಸ್ತೆಗೆ ಬೇಕಿದೆ ಕಾಯಕಲ್ಪ

7

Mangaluru: ಪಿ.ಎಂ. ರಾವ್‌ ರಸ್ತೆಯಲ್ಲಿ ಮತ್ತೆ ಎಲ್ಲೆಂದರಲ್ಲಿ ವಾಹನ ನಿಲುಗಡೆ

2-thirthahalli

Thirthahalli: ತುಂಗಾ ಕಮಾನು ಸೇತುವೆ ಬಳಿ ಪತ್ತೆಯಾಗಿದ್ದ ಅಸ್ತಿ ಪಂಜರ ತಂದು ಹಾಕಿದ್ಯಾರು!!?

IPL: RCB buys young Sehwag amid confusion; Who is this Swastik Chikara

IPL: ಗೊಂದಲದಲ್ಲಿ ಮರಿ ಸೆಹ್ವಾಗ್‌ ನನ್ನು ಖರೀದಿಸಿದ ಆರ್‌ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ

6(1

Kundapura: ರಾಷ್ಟ್ರೀಯ ಹೆದ್ದಾರಿಯ ಅರಾಟೆ ಹಳೆ ಸೇತುವೆಯಲ್ಲಿ ಸಂಚಾರ ಸ್ಥಗಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.