ಒಳಗಣ್ಣಿನ ಬೆಳಕಿನ ಸಾಧನೆ : ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತಮ ಫಲಿತಾಂಶ ಪಡೆದ ಗೆಳತಿಯರು
Team Udayavani, May 8, 2019, 7:22 PM IST
ಬದಿಯಡ್ಕ: ಒಳಗಣ್ಣಿನ ಬೆಳಕಲ್ಲಿ ಓದಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳಿಂದ ವಿಜೇತರಾದ 4 ಮಂದಿ ಗೆಳತಿಯರ ತಂಡ ನಾಡಿಗೆ ಮಾದರಿಯಾಗಿದ್ದಾರೆ. ಕಾಸರಗೋಡು ಸರಕಾರಿ ಅಂಧರ ವಿದ್ಯಾಲಯದಲ್ಲಿ ಕಲಿತ, ಆಪ್ತ ಗೆಳತಿಯರಾದ 4 ಮಂದಿಯ ಅಕ್ಷರ ದೀಪದಡಿಯ ಸಾಧನೆಯ ಹಾದಿಯಲ್ಲಿ ದೃಷ್ಟಿ ಹೀನತೆ ತಡೆಯಾಗಿಲ್ಲ. ಪನತ್ತಡಿ ನಿವಾಸಿ ಭಾವನಾ ಭಾಸ್ಕರ್, ಕರಿವೇಡಗಂ ನಿವಾಸಿ ಎಂ.ಮೂವಂದಿ, ಕುತ್ತಿಕೋಲ್ ನಿವಾಸಿ ಎಚ್.ಸೌಮ್ಯಾ, ಮಡಿಕೈ ನಿವಾಸಿ ಕೆ.ಶ್ವೇತಾ ಇವರು ವಿಶೇಷ ಚೇತನೆಯ ನಡುವೆಯೂ ಕಠಿಣ ಯತ್ನದ ಮೂಲಕ ಫಲವನ್ನು ಕಂಡಿದ್ದಾರೆ.
ಅಕಾಡೆಮಿಕ್ ಅಧ್ಯಯನದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಇವರ ಸಾಧನೆ ಗಮನಾರ್ಹವಾಗಿದೆ. ಕಳೆದ ಬಾರಿಯ ರಾಜ್ಯ ಮಟ್ಟದ ಸಎಷ್ಯಲ್ ಸ್ಕೂಲ್ ಕಲೋತ್ಸವದಲ್ಲಿ ಸಮೂಹ ಗಾಯನ, ದೇಶಭಕ್ತಿಗೀತೆ ವಿಭಾಗಗಳ ಸ್ಪರ್ಧೆಯಲ್ಲಿ ಎಶ್ರೇಣಿಯೊಂದಿಗೆ ಪ್ರಥಮ ಬಹುಮಾನವನ್ನು ಈ ಗೆಳತಿಯರ ತಂಡ ಪಡೆದುಕೊಂಡಿದೆ. ದೃಷ್ಟಿ ಹೀನರಿಗಾಗಿ ಶಿಕ್ಷಣ ಇಲಾಖೆ ಸಿದ್ಧಪಡಿಸಿರುವ ಇನ್‌ಕ್ಲೂಸಿವ್ ಎಜ್ಯುಕೇಶನ್ ಫೋರ್ ದಿ ಡಿಸೇಬಲ್ಡ್ (ಐ.ಇ.ಡಿ.) ಪ್ರಕಾರದ ಕಲಿಕೆ ಯೋಜನೆ ಮೂಲಕ ಇವರು ಶಿಕ್ಷಣ ನಡೆಸುತ್ತಿದ್ದಾರೆ. ಇತರ ವಿದ್ಯಾರ್ಥಿಗಳಿಗೂ ಕಳಿಯುತ್ತಿರುವ ಎಲ್ಲ ವಿಷಯಗಳನ್ನು ಇವರು ಅಧ್ಯಯನ ನಡೆಸುತ್ತಿದ್ದಾರೆ. ಗಣಿತದ ಬದಲು ಪ್ರತ್ಯೇಕ ಕಂಪ್ಯೂಟರ್ ಪಠ್ಯ ಪದ್ಧತಿಯೊಂದು ಇವರ ಕಲಿಕೆಯಲ್ಲಿದೆ. ಇದರೊಂದಿಗೆ ಮಾಹಿತಿ ತಂತ್ರಜ್ಞಾನದ ಕಲಿಕೆಯೂ ಇವರಿಗಿದೆ. ಇವರು ಸ್ಕೈÅಬ್‌ನ ಸಹಾಯದಿಂದ ಪರೀಕ್ಷೆ ಬರೆದಿದ್ದರು. ಒಂದರಿಂದ ಹತ್ತನೇ ತರಗತಿ ವರೆಗೆ ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವಸತಿ ಹೂಡಿ ಕಲಿಕೆ ನಡೆಸುತ್ತಿದ್ದಾರೆ. ಈ ಶಾಲೆಯಲ್ಲಿ 7 ನೇ ತರಗತಿ ಕಲಿತು ನಂತರ ಫೌÅಢಶಾಲೆ ಕಲಿಕೆ ಕಾಸರಗೋಡು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಸಲಾಗುತ್ತದೆ. ಕಾಸರಗೋಡು ಅಲ್ಲದೆ ತ್ರಿಶೂರು, ಕೋಟಯಂ, ತಿರುವನಂತಪುರಂ ಜಿಲ್ಲೆಹಳಲ್ಲಿ ಸರಕಾರಿ ಅಂಧ ವಿದ್ಯಾಲಯಗಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.