ಸಹಸ್ರ ಕುಂಭಾಭಿಷೇಕ ನಡೆಸುವ ವೈದಿಕರಿಗೆ ಶ್ರೀರಕ್ಷೆ


Team Udayavani, Jul 12, 2017, 2:00 AM IST

shreerakhe.jpg

ದೇಗುಲಗಳಲ್ಲಿ ಸಾನ್ನಿಧ್ಯಾಭಿವೃದ್ಧಿಯಾಗುತ್ತಿದ್ದರೆ ಆ ಕ್ಷೇತ್ರ ಕಾರಣಿಕವಾಗಿ ಶೋಭಿಸುತ್ತದೆ. ಹೀಗಾಗಿ ದೇವಸ್ಥಾನಗಳಲ್ಲಿ ನಿರಂತರ ಪೂಜಾ ವಿಧಿ ವಿಧಾನಗಳು ನಡೆಯುತ್ತಲೇ ಇರುತ್ತವೆ. ನಿತ್ಯ, ನೈಮಿತ್ತಿಕ ಮತ್ತು ಕಾಮ್ಯ ಇವು ದೇಗುಲಗಳಲ್ಲಿ ಅನಾದಿ ಕಾಲದಿಂದಲೂ ಆಚರಿಸಿಕೊಂಡು ಬಂದ ಅನುಷ್ಠಾನವಾಗಿದೆ. ನಿತ್ಯ ಅನ್ನುವುದು ದೇಗುಲದ ನಿತ್ಯ ಪೂಜಾ ವಿಧಿವಿಧಾನ ಗಳು, ನೈಮಿತ್ತಿಕವು ಸಮಯಾ ಸಮಯದಲ್ಲಿ ಬರುವ ವಿಶೇಷ ದಿನಗಳು, ವಾರ್ಷಿಕ ಉತ್ಸವಗಳ ವೇಳೆ ನಡೆಯುವ ಪೂಜಾ ಕೈಂಕರ್ಯಗಳು ಕಾಮ್ಯ ಅನ್ನುವುದು ಬಹಳ ವಿಶೇಷವಾಗಿ ದೇಗುಲಗಳಲ್ಲಿ ಕೈಗೊಳ್ಳುವ ಹೋಮ ಹವನಾದಿ ಅನುಷ್ಠಾನಗಳು ಕುಂಭಾಭಿಷೇಕ, ಋಕ್‌ ಸಂಹಿತಾ ಯಾಗ, ವಿಷ್ಣು ಹವನ ಇತ್ಯಾದಿ.

ದೇಗುಲಗಳಲ್ಲಿ ನಡೆಯುವ ಈ ತರದ ಪೂಜಾ ವಿಧಿ ವಿಧಾನಗಳನ್ನು ವೈದಿಕ ಶಾಸ್ತ್ರವನ್ನು ಶಾಸ್ತ್ರೋಕ್ತವಾಗಿ ಅಭ್ಯಸಿಸಿರುವ ವೈದಿಕರು ಮಾಡುತ್ತಾರೆ. ನಿತ್ಯ ಪೂಜೆಯ ವಿಧಿ ವಿಧಾನವಾಗಲೀ ನೈಮಿತ್ತಿಕವಾಗಿ ಬರುವ ಪೂಜೆ ಉತ್ಸವಾದಿ ಪ್ರಕಾರವನ್ನು ಕಾಲಾಂತರದಿಂದ ಬಂದ ರೀತಿಯಲ್ಲಿ ಮಾಡಬಹುದು. ಆದರೆ ಕಾಮ್ಯದ ಪ್ರಕಾರದಲ್ಲಿ ನಡೆಸುವ ಕುಂಭಾಭಿಷೇಕ ಮುಂತಾದ ವಿಶೇಷ ಕಾರ್ಯಕ್ರಮಗಳನ್ನು ವಿದ್ವತ್‌ ಸಾಧನೆಯ ವೈದಿಕರೇ ಮಾಡಬೇಕು. ಆದಕ್ಕೆ ಬೃಹತ್‌ ವ್ಯವಸ್ಥೆಯ ವಿಧಿವಿಧಾನಗಳಿವೆ. ಇದನ್ನು ಮನಗೊಂಡ ವೈದಿಕರೊಬ್ಬರು 1001 ಕಲಶ “ಪದ್ಮಸಂಹಿತಾ’ ದ್ರವ್ಯ ಕಲಶಾಭಿಷೇಕವನ್ನು ಮಾಡುವ ಕುರಿತು ಸಾಮಾನ್ಯ ವೈದಿಕನೊಬ್ಬನು ಸುಲಭವಾಗಿ ತಿಳಿದುಕೊಳ್ಳುವ ರೀತಿಯಲ್ಲಿ ನಾಲ್ಕು ಫುಲ್‌ ಸೈಜ್‌ ಕಾಗದದಲ್ಲಿ ವಿಶೇಷ ಅಭಿಷೇಕದ ಮಂಡಲ ಸಹಿತವಾಗಿ ವಿವರಣೆ ಒದಗಿಸುವ ದಾಖಲೆ ಮಾಡಿ ಇಟ್ಟಿದ್ದಾರೆ. 


ಅವರು ಕಾಸರಗೋಡು ಶ್ರೀ ವರದರಾಜ ವೆಂಕಟರಮಣ ದೇವಸ್ಥಾನದಲ್ಲಿ 35 ವರ್ಷಗಳ ಕಾಲ ಮುಖ್ಯ ಅರ್ಚಕರಾಗಿದ್ದ ವೇದಮೂರ್ತಿ ದಿ|ಕುಂಬಳೆ ಪುರುಷೋತ್ತಮ ಭಟ್‌. ಶ್ರೀ ಕ್ಷೇತ್ರದ ಅರ್ಚಕ ವೃತ್ತಿಯಿಂದ ನಿವೃತ್ತಿ ಹೊಂದಿ ಕುಂಬಳೆಯಲ್ಲಿ ವಾಸ್ತವ್ಯವಿದ್ದ ಇವರು 2014 ರಲ್ಲಿ ತೀರಿಕೊಂಡರು. ಆದರೆ ಇವರು ಸಿದ್ಧಪಡಿಸಿದ ಕುಂಭಾಭಿಷೇಕ ನಡೆಸುವ ಮಾಹಿತಿ ಒದಗಿಸುವ ನಾಲ್ಕು ಪುಟಗಳ ವಿವರಣೆಯ ದಾಖಲೆ ಇವರ ಪುತ್ರ, ಇದೀಗ ಶ್ರೀ ವೆಂಕಟರಮಣ ಕ್ಷೇತ್ರದಲ್ಲಿ ಮುಖ್ಯ ಅರ್ಚಕರಾಗಿರುವ ವೇದಮೂರ್ತಿ ಕೆ.ವೇದವ್ಯಾಸ ಭಟ್‌ ಅವರ ಸಂಗ್ರಹದಲ್ಲಿದ್ದು ಇದನ್ನು ಆಧಾರವಾಗಿಟ್ಟುಕೊಂಡು ಈಗಾಗಲೇ ಅನೇಕ ಗೌಡ ಸಾರಸ್ವತ ದೇವಸ್ಥಾನಗಳಲ್ಲಿ ಕುಂಭಾಭಿಷೇಕ ನಡೆಸಲಾಗಿದೆ.

ದಿ|ಪುರುಷೋತ್ತಮ ಭಟ್‌ ಅವರು ದ್ರವ್ಯಕಲಶಾಭಿಷೇಕ ನಡೆಸಲು ಮಾಡಬೇಕಾದ ಬಗ್ಗೆ ವಿವರಣೆ ನೀಡಿ ಸಿದ್ಧ ಪಡಿಸಿದ ನಾಲ್ಕು ಪ್ರತ್ಯೇಕ ನಕ್ಷೆಗಳನ್ನು ಜೋಡಿಸಿಟ್ಟರೆ ದೊಡ್ಡ ಹಾಸುಗೆ ಗಾತ್ರದಷ್ಟಾಗುತ್ತದೆ. ಇವುಗಳಲ್ಲಿ ತಿಳಿಸಲಾದ ಅಂಶವನ್ನು ಚುಟುಕಾಗಿ ವಿವರಿಸುವುದಿದ್ದರೆ, ದ್ರವ್ಯಕಲಶಾಭಿಷೇಕದಲ್ಲಿ ಬ್ರಹ್ಮಪದ, ದಿವ್ಯಪದ ಮತ್ತು ಮಾನುಷಪದ ಅನ್ನುವ ಮೂರು ವಿಧದ ಕಲಶ ಸಿದ್ಧವಾಗಬೇಕು. ಬ್ರಹ್ಮಪದ ಪ್ರಕಾರದಲ್ಲಿ ಒಟ್ಟು 81 ಕಲಶಗಳು. ಇಂತಹ 5 ಜತೆ ಕಲಶಗಳನ್ನು ಮಧ್ಯಭಾಗದಲ್ಲಿ ಓರಣವಾಗಿ ಇಟ್ಟು ಇದರ ಕೇಂದ್ರದಲ್ಲಿ ಪ್ರಧಾನ ಕಲಶ ಇರಿಸಬೇಕು. ಇವುಗಳಲ್ಲಿ ಹಾಕಬೇಕಾಗಿರುವ ದ್ರವ್ಯಗಳನ್ನೂ ಸೂಚಿಸಲಾಗಿದೆ. ಪಂಚಗವ್ಯ, ಕುಂಕುಮ ಕೇಸರಿ, ಲಾವಂಚ, ಕಂಕೋಷ್ಠ, ಜಟಾಮಾಂಸಿ, ಹಳದಿ ಗಂಧ, ಮುರ ಕರಿ ಮಡಿವಾಳ, ಅಗರು ಹೀಗೆ ಅನೇಕ ದ್ರವ್ಯಗಳನ್ನು ಯಾವ ಯಾವ ಕಲಶದಲ್ಲಿ ಹಾಕಬೇಕು ಅನ್ನುವುದರ ವಿವರಣೆ ಇದೆ. ಪ್ರಧಾನ ಕಲಶದಲ್ಲಿ ದೊಡ್ಡ ಬಾವಿ ನೀರು, ಸಣ್ಣ ಬಾವಿ ನೀರು, ಕೆರೆ ನೀರು, ಮಂಜು ನೀರು, ಭಾಗೀರಥಿ, ಸಮುದ್ರ ನೀರು, ದೊಡ್ಡ ಕೆರೆ ನೀರು, ಮಳೆ ನೀರನ್ನು ಹಾಕಿ ಸರ್ವ ಲೋಹಗಳು, ಸರ್ವ ರತ್ನಗಳು, ಫಲಗಳು, ಔಷಧ ಮೂಲಿಕೆಗಳು, ಸರ್ವ ಆಯುಧಗಳು, ಪರಿಮಳ ದ್ರವ್ಯಗಳನ್ನು ಬೆರಸಬೇಕು.

ದಿವ್ಯ ಪದ ವಿಭಾಗದಲ್ಲಿ 49 ಕಲಶಗಳ 4 ಜತೆಗಳು. ಇವುಗಳನ್ನು 81 ಕಲಶದ ಅನಂತರದ ಮಂಡಲವಾಗಿ ಜೋಡಿಸಬೇಕು. ಇದರಲ್ಲಿ ಹಾಕ ಬೇಕಾದ ಸರ್ವ ದ್ರವ್ಯಗಳ ವಿವರಣೆ ಕೊಡಲಾಗಿದೆ. ಮಾನಷ ಪದದಲ್ಲಿ 25 ಕಲಶಗಳ 16 ಜತೆಗಳನ್ನು ಮಾಡಬೇಕಿದೆ. ಇವುಗಳ ಕಲಶದಲ್ಲಿ ಹಾಕಬೇಕಾದ ದ್ರವ್ಯಗಳೂ ಪ್ರತ್ಯೇಕವಾಗಿವೆ. ಇದನ್ನು 49 ಕಲಶಗಳ ಜತೆಯ ಹೊರ ಭಾಗದಲ್ಲಿ ಜೋಡಿಸಿ ಇಡಬೇಕು. ಅಂತು 1001 ಕಲಶಗಳ ಜೋಡಣೆ ಸಾಮಾನ್ಯ 36×36 ಅಡಿ ವಿಸ್ತೀರ್ಣದ ಬೃಹತ್‌ ಮಂಡಲವಾಗುತ್ತದೆ. ದೇವರಿಗೆ ಅಭಿಷೇಕ ಮಾಡುವಾಗ ಹೊರ ವಲಯದ ಕಲಶಗಳನ್ನು ಪ್ರಕಾರಗಳ ಕ್ರಮದಲ್ಲೇ ನಡೆಸಿ ಕೊನೆಯಲ್ಲಿ ಮಹಾಕಲಶದ ಅಭಿಷೇಕ ಮಾಡಬೇಕು. ಈ ಕಲಶ ಜೋಡಣೆಯ ಬಗ್ಗೆ ‘ನಕ್ಷೆ’ಯಲ್ಲಿ ಸುಮಾರು 110 ಮಂಡಲಗಳ ಚಿತ್ರಣ ಮಾಡಿದ್ದು, ಇರಿಸುವ ಸ್ಥಳದಲ್ಲಿ ಕಲಶದಲ್ಲಿ ಹಾಕಬೇಕಾದ ದ್ರವ್ಯಗಳ ಹೆಸರು ನಮೂದಿಸಲಾಗಿದೆ. ಇವುಗಳನ್ನು ಅಂತಿಮವಾಗಿ ಜೋಡಿಸಿಡುವ ಕುರಿತೂ ಮಂಡಲ ಸೂಚಿಸುತ್ತಿದೆ. ಒಂದೊಂದು ಕಲಶದ ದೇವರ ಹೆಸರು ಬರೆಯಲಾಗಿದೆ. ಅಂತು ದ್ರವ್ಯ ಕಲಶಾಭಿಷೇಕದ ಪೂರ್ಣ ಮಾಹಿತಿ 4 ನಕ್ಷೆಗಳಲ್ಲಿ ಬಹಳ ಸರಳವಾಗಿ ತಿಳಿಸಿದೆ. ಸಂಸ್ಕೃತ ಭಾಷೆಯಲ್ಲಿ ಇದನ್ನು ಸಿದ್ಧಪಡಿಸಲಾಗಿದೆ.

2004 ರಲ್ಲಿ ಇದನ್ನು ಸಿದ್ಧಪಡಿಸಿ ಕಾಶೀ ಮಠಾಧೀಶ ಶ್ರೀ ಸುಧೀಂದ್ರ ತೀರ್ಥ ಶ್ರೀ ಪಾದಂಗಳವರಲ್ಲಿ ವಿವರಿಸಿ ಅವರಿಂದ ಅಪ್ಪಣೆಯನ್ನು ಪಡೆಯಲಾಗಿತ್ತು. ಅನೇಕ ವೈದಿಕ ಪಂಡಿತರೂ ಈ ಕಾಯಕವನ್ನು ಭೇಷ್‌ ಅಂದಿದ್ದಾರೆ. ಈ ನಕ್ಷೆಯನ್ನು ಆಧಾರವಾಗಿಟ್ಟು ಮಂಜೇಶ್ವರ, ಬಂಟ್ವಾಳ, ಕಾರ್ಕಳ, ಪುತ್ತೂರಿನ ಗೌಡ ಸಾರಸ್ವತ ಬ್ರಾಹ್ಮಣರ ದೇಗುಲಗಳಲ್ಲಿ ಸಹಸ್ರ ಕಲಷಾಭಿಷೇಕ ನಡೆಸಲಾಗಿದೆ. ಮಂಗಳೂರಿನ ಗೌಡ ಸಾರಸ್ವತ ಬ್ರಾಹ್ಮಣರ ವೈದಿಕ ತರಬೇತಿ ಶಾಲೆ ಶ್ರೀನಿವಾಸ ನಿಗಮಾಗಮ ಪಾಠಶಾಲೆ ಪ್ರಕಟಿಸಿದ ‘ಅಥ ಶ್ರೀ ವಿಷ್ಣು ಸಂಪ್ರೋಕ್ಷಣ ವಿಧಿಃ ಇತ್ಯಾದಿ ಸಂಗ್ರಹ’ ಪುಸ್ತಕದಲ್ಲಿ ಪುರುಷೋತ್ತಮ ಭಟ್‌ ಅವರ ಈ ನಕ್ಷೆಯ ಸಂಪೂರ್ಣ ಮಾಹಿತಿ ಛಾಪಿಸಲಾಗಿದೆ.

ದಿ| ಪುರುಷೋತ್ತಮ ಭಟ್ಟರು ವೈದಿಕ ತರಬೇತಿ ಪಡೆದದ್ದು ಮಂಗಳೂರಿನ ನಿಗಮಾಗಮ ಪಾಠ ಶಾಲೆಯಿಂದ. 12 ವರ್ಷ ಪ್ರಾಯದಲ್ಲೇ ಅವರು “ಪುರೋಹಿತ ರತ್ನ’ ಪದವಿ ಪಡೆದಿದ್ದಾರೆ. ಸಂಸ್ಕೃತ, ಜ್ಯೋತಿಷ, ಕರ್ಮಾಂಗ ಪೂಜಾ ವಿಧಿವಿಧಾನ ಎಲ್ಲವೂ ಚಿಕ್ಕ ಪ್ರಾಯದಲ್ಲೇ ಅವರು ಕರಗತ ಮಾಡಿಕೊಂಡಿದ್ದರು. ಗೋವಾದ ಬಿಚ್ಚೋಲಿಯಲ್ಲಿ ಸಾಹಿತ್ಯ ಮೀಮಾಂಸೆಯನ್ನೂ ಅವರು ಅಭ್ಯಾಸ ಮಾಡಿದ್ದಾರೆ. ವೇದಮೂರ್ತಿ ದಿ| ಮಂಜೇಶ್ವರ ಕೇಶವ ಭಟ್‌ ಮತ್ತು ವೇದಮೂರ್ತಿ ದಿ| ಅನಂತ ಭಟ್‌ ಇವರು ಪುರುಷೋತ್ತಮ ಭಟ್ಟರ ಗುರುಗಳು. ಇದರ ಜತೆ ಸಂಸ್ಕೃತ ಮತ್ತು ಕನ್ನಡ ಭಾಷೆಯಲ್ಲಿ ಅನೇಕ ಬಿಡಿ ಲೇಖನಗಳನ್ನೂ ಇವರು ಬರೆದಿದ್ದಾರೆ. ಪುರುಷಾರ್ಥ ಸಾಧನೆಯಿಂದ ಸದ್ಗ$ೃಹಸ್ಥರಾಗೋಣ ಅನ್ನುವ ಇವರ ಲೇಖನವನ್ನು ಕಿರು ಪುಸ್ತಕವಾಗಿ ಪ್ರಕಟಿಸಿ ವಿವಾಹ ಸಂರ್ದದಲ್ಲಿ ವಿತರಿಸಲಾಗಿತ್ತು. ಹರಿದ್ವಾರದಲ್ಲಿ ಶ್ರೀ ಸುಧೀಂದ್ರ ತೀರ್ಥರು ವೇದವ್ಯಾಸ ದೇವರಿಗೆ ಸಹಸ್ರ ಶಂಖಾಭಿಷೇಕ ನಡೆಸಿದ್ದು, ಇದರ ಸರ್ವ ವೈದಿಕ ಸಿದ್ಧತೆ ಮಾಡಿದವರು ಪುರುಷೋತ್ತಮ ಭಟ್ಟರು. ಕಾಶೀ ಮಠದ ಸಾಮಾನ್ಯ ಹೆಚ್ಚಿನ ವಿಶೇಷ ಕಾರ್ಯಕ್ರಮಗಳಿಗೆ ಶ್ರೀ ಗುರುಗಳು ಇವರನ್ನೇ ಗೊತ್ತು ಮಾಡುತ್ತಿದ್ದರು. ವೈದಿಕ ವಿಭಾಗಕ್ಕೆ ಸಂಬಂಧಪಟ್ಟು ಇವರು ಬರೆದಿರುವ ಅನೇಕ ಬಿಡಿ ಲೇಖನಗಳು ಇಂದು ವೇದವ್ಯಾಸ ಭಟ್ಟರು ಜೋಪಾನವಾಗಿ ಇರಿಸಿದ್ದಾರೆ. ಆಗಾಗ ಬರುವ ದೂರದೂರಿನ ವೈದಿಕರಿಗೆ ಇವರ ಲೇಖನಗಳಿಂದ ವೈದಿಕ ಸಮುದಾಯಕ್ಕೆ ಬಹಳ ಉಪಯೋಗವಾಗುತ್ತಿದೆ.

– ರಾಮದಾಸ್‌ ಕಾಸರಗೋಡು

ಟಾಪ್ ನ್ಯೂಸ್

Maharashtra Election: Election officials checked Amit Shah’s bag

Maharashtra Election: ಅಮಿತ್‌ ಶಾ ಅವರ ಬ್ಯಾಗ್‌ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು

Anmol Buffalo: The price of this Buffalo weighing 1500 kg is Rs 23 crore!

Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!

13-BBK-11

BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!

12-gundya

Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು

ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಲ್ಕರ್ ಹತ್ಯೆ ಆರೋಪಿ: ಮೂಲಗಳು

Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ

Kiwi player will be away from Test cricket after the England series

Test: ಇಂಗ್ಲೆಂಡ್‌ ಸರಣಿಯ ಬಳಿಕ ಟೆಸ್ಟ್‌ ಕ್ರಿಕೆಟ್‌ ನಿಂದ ದೂರವಾಗಲಿದ್ದಾರೆ ಕಿವೀಸ್‌ ಆಟಗಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

Kasaragod ಅಪರಾಧ ಸುದ್ದಿಗಳು

Untitled-5

Kasaragod: ಮಾನ್ಯ ಅಯ್ಯಪ್ಪ ಭಜನ ಮಂದಿರದಿಂದ ಕಳವು; ಓರ್ವನ ಬಂಧನ

Arrest

Kasaragodu: ಆಸ್ತಿ ವಿವಾದ: ಅಣ್ಣನ ಕೊಲೆ, ಇಬ್ಬರಿಗೆ ಇರಿತ; ತಮ್ಮನ ಸೆರೆ

ACT

Manjeshwar: ಬಂಧಿತರ ಪೈಕಿ ಓರ್ವ 15 ಪ್ರಕರಣಗಳಲ್ಲಿ ಆರೋಪಿ

POlice

Kumbla: ಪ್ರಾಣ ಲೆಕ್ಕಿಸದೆ ಹೊಳೆಗೆ ಹಾರಿ ಆರೋಪಿಯನ್ನು ಬಂಧಿಸಿದ ಪೊಲೀಸರು

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Organ Donation: ಸಾವಿನ ನಂತರವೂ ನೆರವಾದ ಜೀವ

Organ Donation: ಸಾವಿನ ನಂತರವೂ ನೆರವಾದ ಜೀವ

Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ

Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ

Maharashtra Election: Election officials checked Amit Shah’s bag

Maharashtra Election: ಅಮಿತ್‌ ಶಾ ಅವರ ಬ್ಯಾಗ್‌ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು

15-bng

Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್‌ ಆಯುಕ್ತರಿಗೆ ದೂರು

14-bng

Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.