Kasaragod: ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದಿಂದ ಕಳವು; ಆರೋಪಿಯ ಬಂಧನ
Team Udayavani, Nov 16, 2024, 7:54 PM IST
ಕಾಸರಗೋಡು: ನವಂಬರ್ 3 ರಂದು ರಾತ್ರಿ ಎಡನೀರು ಮಠದ ಶ್ರೀ ವಿಷ್ಣುಮಂಗಲ ದೇವಸ್ಥಾನದ ಬಾಗಿಲು ಮುರಿದು ಒಳನುಗ್ಗಿ ಕಾಣಿಕೆ ಹುಂಡಿಯಲ್ಲಿದ್ದ ಸುಮಾರು 7500 ರೂ. ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಕುಖ್ಯಾತ ಅಂತರಾಜ್ಯ ಕಳವು ಪ್ರಕರಣದ ಆರೋಪಿ ಕರ್ನಾಟಕ ಕಡಬ ತಾಲೂಕಿನ ಪೊಯ್ಲಿ ಅತೂರು ಕುಳಾಯಿ ಹೌಸ್‌ನ ಇಬ್ರಾಹಿಂ ಕಲಂದರ್ ಆಲಿಯಾಸ್ ಇಬ್ರಾಹಿಂ(45)ನ ಬಂಧನವನ್ನು ವಿದ್ಯಾನಗರ ಪೊಲೀಸರು ದಾಖಲಿಸಿಕೊಂಡಿದ್ದಾರೆ.
********************************************************************************************************
ಇತರೆ ಅಪರಾಧಗಳು ಸುದ್ದಿಗಳು..
ಪೈಂಟ್ ಅಂಗಡಿಗೆ ಬೆಂಕಿ
ಕಾಸರಗೋಡು: ನಗರದ ಚಕ್ಕರಬಜಾರ್‌ನಲ್ಲಿರುವ ರಶೀದ್ ಅವರ ಮಾಲಕತ್ವದ ಪೈಂಟ್ ಮಾರಾಟದಂಗಡಿಗೆ ಬೆಂಕಿ ಹತ್ತಿಕೊಂಡ ಘಟನೆ ನಡೆದಿದೆ.
ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಆರಿಸಿತು. ಶನಿವಾರ ಮುಂಜಾನೆ ಮೂರುವರೆ ಗಂಟೆಗೆ ಬೆಂಕಿ ಹತ್ತಿಕೊಂಡು ಉರಿಯುತ್ತಿರುವುದು ಪೊಲೀಸರ ಗಮನಕ್ಕೆ ಬಂದಿತ್ತು. ಪೆಟ್ರೋಲಿಂಗ್ ನಡೆಸುತ್ತಿದ್ದ ಪೊಲೀಸರು ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಅಗ್ನಿಶಾಮಕ ದಳ ಗಂಟೆಗಳೊಳಗೆ ಬೆಂಕಿಯನ್ನು ಆರಿಸಿದ ಹಿನ್ನೆಲೆಯಲ್ಲಿ ಸಂಭವನೀಯ ಭಾರೀ ದುರಂತ ತಪ್ಪಿತು. ನಾಲ್ಕು ಕೊಠಡಿಗಳಲ್ಲಾಗಿ ಸುಮಾರು ಒಂದು ಕೋಟಿ ರೂ. ಮೌಲ್ಯದ ಪೈಂಟ್ ಇರಿಸಲಾಗಿತ್ತು. ಶುಕ್ರವಾರ ರಾತ್ರಿ ಅಂಗಡಿ ಮುಚ್ಚುವಾಗ ಶಟರ್ ಹಾಕಲು ಅಸಾಧ್ಯವಾದ ಹಿನ್ನೆಲೆಯಲ್ಲಿ ವೆಲ್ಡಿಂಗ್ ಕೆಲಸ ಮಾಡಲಾಗಿತ್ತು. ಈ ವೇಳೆ ಬೆಂಕಿಯ ಕಿಡಿ ಮರದ ಅಡ್ಡಕ್ಕೆ ಬಿದ್ದಿದ್ದು, ಅದು ಗಮನಕ್ಕೆ ಬಂದಿರಲಿಲ್ಲ. ಮರದ ಅಡ್ಡ ಉರಿದು ಬೆಂಕಿ ಆವರಿಸಿರಬೇಕೆಂದು ಶಂಕಿಸಲಾಗಿದೆ.
ಯುವಕ ಸಮುದ್ರದಲ್ಲಿ ನಾಪತ್ತೆ:
ಕಾಸರಗೋಡು: ದುಬೈಯಲ್ಲಿ ಬೀಚ್‌ನಲ್ಲಿ ಸ್ನಾನ ಮಾಡುತ್ತಿದ್ದಾಗ ಸಮುದ್ರ ತೆರೆಗೆ ಸಿಲುಕಿ ಚೆಂಗಳ ತೈವಳಪ್ಪು ನಿವಾಸಿ ಎ.ಪಿ.ಅಶ್ರಫ್ ಅವರ ಪುತ್ರ ಮಫಾಸ್ ಸಮುದ್ರದಲ್ಲಿ ನಾಪತ್ತೆಯಾದ ಘಟನೆ ನಡೆದಿದೆ. ಮಫಾಸ್ ದುಬೈಯಲ್ಲಿ ವಿದ್ಯಾರ್ಥಿಯಾಗಿದ್ದು, ಆತನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.