ವಿದ್ಯಾರ್ಥಿಗಳು ಹೊಸತನಕ್ಕೆ ತೆರೆದುಕೊಳ್ಳಿ: ಕೇರಳ ರಾಜ್ಯಪಾಲ
Team Udayavani, Mar 3, 2020, 12:30 AM IST
ಕಾಸರಗೋಡು: ಎಲ್ಲರಿಗೂ ಶಿಕ್ಷಣ ಲಭಿಸಬೇಕು ಎಂಬ ನಿಟ್ಟಿನಲ್ಲಿ ರಾಜ್ಯ ಗರಿಷ್ಠ ಯತ್ನ ನಡೆಸುತ್ತಿದೆ. ಬದಲಾಗುತ್ತಿರುವ ಕಾಲಮಾನಕ್ಕೆ ತಕ್ಕಂತೆ ಶಿಕ್ಷಣವನ್ನು ಒದಗಿಸುವಲ್ಲಿ ಭಾರತೀಯ ಶಿಕ್ಷಣ ಕ್ರಮ ಪರ್ಯಾಪ್ತವಾಗಿದೆ. ನಾಳೆಯ ಸಮಾಜಕ್ಕಾಗಿ ಸ್ವಯಂ ನವೀಕರಣಕ್ಕೆ ಪ್ರತಿ ವಿದ್ಯಾರ್ಥಿ ಸಿದ್ಧನಾಗಬೇಕು ಎಂದುಎಂದು ಕೇರಳ ರಾಜ್ಯಪಾಲ ಆರೀಫ್ ಮಹಮ್ಮದ್ ಖಾನ್ ಹೇಳಿದರು.ಪೆರಿಯ ಕೇಂದ್ರೀಯ ವಿಶ್ವವಿದ್ಯಾ ನಿಲಯದಲ್ಲಿ ಸೋಮವಾರ ನಡೆದ 4ನೇ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಸಾಮಾಜಿಕ ಕಾಳಜಿ ಅಗತ್ಯ
ಸಮಾಜದ ಬಗ್ಗೆ ವಿದ್ಯಾರ್ಥಿಗಳಿಗೆ ಬದ್ಧತೆ ಇರಬೇಕು. ಸಮಾಜದ ಒಗ್ಗಟ್ಟಿನ ಫಲವಾಗಿ ಅತ್ಯಾಧುನಿಕ ಸೌಲಭ್ಯಗಳಿಂದ ಕೂಡಿದ ಕೇಂದ್ರೀಯ ವಿ.ವಿ. ವಿದ್ಯಾರ್ಥಿಗಳಿಗೆ ದೊರೆತಿದೆ. ಈ ಹಿನ್ನೆಲೆಯನ್ನು ಜಾಗೃತಿಯಿಂದ ಸದಾ ನೆನಪಿಸಿ ಕೊಳ್ಳಬೇಕು ಎಂದವರು ಹೇಳಿದರು.
ಗಮನಾರ್ಹ ಮುನ್ನಡೆ
ಕೇಂದ್ರೀಯ ವಿ.ವಿ.ಯಲ್ಲಿ ವಿಶಿಷ್ಟ ದರ್ಜೆಯಲ್ಲಿ ಉತ್ತೀರ್ಣ ಹೊಂದಿದರಲ್ಲಿ ಶೇ. 65ರಷ್ಟು ಮಂದಿ ವಿದ್ಯಾರ್ಥಿನಿಯರಾಗಿದ್ದಾರೆ. ತೃಶ್ಶೂರ್ ಕೃಷಿ ವಿ.ವಿ.ಯಲ್ಲೂ ವಿಶಿಷ್ಟ ದರ್ಜೆಯಲ್ಲಿ ಉತ್ತೀರ್ಣ ಹೊಂದಿರುವವರಲ್ಲಿ ಶೇ. 90 ಮಂದಿ ಮತ್ತು ಕೊಚ್ಚಿ ಮೀನುಗಾರಿಕೆ ವಿ.ವಿ.ಯಲ್ಲಿ ವಿಶಿಷ್ಟ ದರ್ಜೆಯಲ್ಲಿ ಉತ್ತೀರ್ಣರಾಗಿರುವರಲ್ಲಿ ಶೇ. 100 ಮಂದಿ ವಿದ್ಯಾರ್ಥಿನಿಯರೇ ಆಗಿದ್ದಾರೆ. ಇದು ಶಿಕ್ಷಣ ರಂಗದ ಗಮನಾರ್ಹ ಮುನ್ನಡೆ. ಕೇವಲ 11 ವರ್ಷದ ವಯೋಮಾನ ಹೊಂದಿರುವ ಪೆರಿಯ ಕೇಂದ್ರೀಯ ವಿ.ವಿ.ಯಲ್ಲಿ ಇನ್ನೂ ಹೆಚ್ಚಿನ ಔನ್ನತ್ಯ ಗಳಿಕೆ ಸಾಧ್ಯವಿದೆ. ವಿದ್ಯಾರ್ಥಿಗಳ, ಹೆತ್ತವರ ಜೊತೆಗೆ ಸಾರ್ವಜನಿಕ ಬೆಂಬಲವೂ ಈ ನಿಟ್ಟಿನಲ್ಲಿ ಅಗತ್ಯ ಎಂದು ರಾಜ್ಯಪಾಲರು ಹೇಳಿದರು.
ಸಂಶೋಧನೆ ಪೂರ್ಣಗೊಳಿಸಿದ ಪಿಎಚ್.ಡಿ.ಯ, ಸ್ನಾತಕೋತ್ತರ ಪದವಿ, ಪದವಿಯ 610 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ನಡೆಯಿತು. ವಿ.ವಿ. ಕುಲಪತಿ ಪ್ರೊ| ಎಸ್.ವಿ. ಶೇಷಗಿರಿ ರಾವ್ ಅಧ್ಯಕ್ಷತೆ ವಹಿಸಿದ್ದರು. ಉಪಕುಲಪತಿ ಡಾ| ಕೆ. ಜಯಪ್ರಸಾದ್, ರಿಜಿಸ್ಟ್ರಾರ್ ಡಾ| ಎ. ರಾಧಾಕೃಷ್ಣನ್ ನಾಯರ್, ಹಣಕಾಸು ಅಧಿಕಾರಿ ಡಾ| ಬಿ.ಆರ್. ಪ್ರಸನ್ನ ಕುಮಾರ್ ಉಪಸ್ಥಿತರಿ ದ್ದರು. ಡಾ| ಜಿ. ಗೋಪಕುಮಾರ್ ಸ್ವಾಗತಿ ಸಿದರು. ಪರೀಕ್ಷೆ ನಿಯಂತ್ರಣ ಅಧಿಕಾರಿ ಡಾ| ಎಂ. ಮುರಳೀಧರನ್ ನಂಬ್ಯಾರ್ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?
Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.