ವಿದ್ಯಾರ್ಥಿಗಳಿಂದ ನಾಲ್ಕು ದಿನ 48 ವಿಧದ ಪಕ್ಷಿಗಳ ವೀಕ್ಷಣೆ
Team Udayavani, Feb 21, 2019, 1:00 AM IST
ಕಾಸರಗೋಡು: ಕುಂಬಳೆ ಹೋಲಿ ಫ್ಯಾಮಿಲಿ ಶಾಲಾರಂಭದ ಮೊದಲು ಮೈದಾನಕ್ಕೆ ತೆರಳಿದ ಮಕ್ಕಳು ಆಟವಾಡುವುದರ ಬದಲು ಅತ್ತಿಂದಿತ್ತ ಹಾರಾಡುವ ಬಾನಾಡಿಗಳನ್ನು ಗುರುತಿಸಿದರು. ಸಂಜೆ ಶಾಲೆ ಬಿಟ್ಟ ಬಳಿಕವೂ ಹಕ್ಕಿಗಳ ಹಿಂದೆ ಬಿದ್ದರು. ರಜಾದಿನಗಳಾದ ಶನಿವಾರ ಹಾಗೂ ರವಿವಾರಗಳಂದು ಶಾಲೆಯ ಸುತ್ತಮುತ್ತ ನಡೆದಾಡಿದರು. ಹೀಗೆ ನಾಲ್ಕು ದಿನಗಳ ಕಾಲ ನಡೆದ ಪಕ್ಷಿ ವೀಕ್ಷಣೆಯಲ್ಲಿ 48 ವಿಧದ ಪಕ್ಷಿಗಳನ್ನು ಗುರುತಿಸಿದರು.
ಅವುಗಳ ಬಗ್ಗೆ ಮಾಹಿತಿಯನ್ನು ಕಲೆಹಾಕಿ ಇ-ಬರ್ಡ್ ಎಂಬ ಜಾಲ ತಾಣದಲ್ಲಿ ದಾಖಲಿಸಿಕೊಂಡರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಫೆ. 15ರಿಂದ 18ರ ವರೆಗೆ ಜರಗಿದ ಕ್ಯಾಂಪಸ್ ಬರ್ಡ್ ಕೌಂಟ್ 2019ರಲ್ಲಿ ಕಾಸರಗೋಡು ಜಿಲ್ಲೆಯಿಂದ ಕುಂಬಳೆ ಹೋಲಿ ಫ್ಯಾಮಿಲಿ ಶಾಲೆಯ ಪಕ್ಷಿ ವೀಕ್ಷಕರ ತಂಡ ಮಾತ್ರವೇ ಭಾಗವಹಿಸಿತ್ತು. 27 ಮಕ್ಕಳು ಗಣತಿ ಕಾರ್ಯದಲ್ಲಿ ಪಾಲ್ಗೊಂಡು ಹಕ್ಕಿಗಳ ಬಗೆಗಿನ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡರು. ಶಾಲೆಯ ಆಟದ ಮೈದಾನ ಹಾಗೂ ಪೊಸ್ತಡ್ಕ ಪ್ರದೇಶದಲ್ಲಿ ಸುತ್ತಾಡಿದ ಪುಟಾಣಿಗಳಿಗೆ ಪಕ್ಷಿ ಪ್ರೇಮಿ ತಂಡದ ಸದಸ್ಯೆ ತನ್ವಿಯ ಮನೆಯವರು ಬೆಳಗ್ಗಿನ ಉಪಹಾರದ ವ್ಯವಸ್ಥೆಯನ್ನು ಮಾಡಿದರು. ಕಾಸರಗೋಡು ಪಕ್ಷಿಪ್ರೇಮಿ ತಂಡದ ಅಧ್ಯಾಪಕ ರಾಜು ಕಿದೂರು ಮಾರ್ಗದರ್ಶನ ನೀಡಿದರು.
ಮುಖ್ಯೋಪಾಧ್ಯಾಯಿನಿ ಸಿ. ಸಿಲ್ವಾ ಕ್ರಾಸ್ತಾ, ರಕ್ಷಕರಾದ ತಾರಾನಾಥ್, ಗೋಪಿ, ಅರುಣ್ ಮೊದಲಾದವರು ಸಹಕರಿಸಿದರು.
ಮೈಸೂರಿನ ಪಕ್ಷಿ ವೀಕ್ಷಕರ ಭೇಟಿ
ಬೇಕಲಕೋಟೆ ಪ್ರವಾಸದಲ್ಲಿರುವ ಮೈಸೂರಿನ ಅಂಜಲಿ ಮುಲ್ಲತ್ತಿ ಹಾಗೂ ತಂಡ ಗಣತಿಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಬರ್ಡ್ ಕೌಂಟ್ ಇಂಡಿಯಾದ ಜಾಲತಾಣದ ಮೂಲಕ ಮಾಹಿತಿ ಪಡೆದ ಅವರು ಮಕ್ಕಳಿಗೆ ಮೈಸೂರಿನ ಹಕ್ಕಿ ಲೋಕವನ್ನು ಪರಿಚಯಿಸಿದರು. ಪುಟಾಣಿ ಪಕ್ಷಿ ವೀಕ್ಷಕರ ಉತ್ಸಾಹಕ್ಕೆ ಬೆಂಬಲವಾಗಿ ಮೈಸೂರು ಸಂದರ್ಶಿಸಲು ತಂಡವು ಆಹ್ವಾನ ನೀಡಿತು.
ಪಕ್ಷಿ ವೈವಿಧ್ಯ
ಯುರೋಪಿಯನ್ ವಲಸೆ ಹಕ್ಕಿಗಳಾದ ಬೂದು ಉಲಿಯಕ್ಕಿ ಮತ್ತು ಹಸಿರು ಉಲಿಯಕ್ಕಿ, ಮರಿಯ ಜತೆಗಿದ್ದ ಕಂಚು ಕುಟಿಗ, ನಿರಂತರವಾಗಿ ಹಾಡುತ್ತಿದ್ದ ಹಳದಿ ಹುಬ್ಬಿನ ಪಿಕಲಾರ, ಸಂತಾನ ಕ್ಷೀಣಿಸುತ್ತಿರುವ ವರ್ಗಕ್ಕೆ ಸೇರಿದ ಹಳದಿ ಟಿಟ್ಟಿಭ, ಭಾಗಿಕ ವಲಸೆಗಾರರಾದ ಹೊನ್ನಕ್ಕಿ, ರಾಜ ಹಕ್ಕಿ, ನೀಲ ಬಾಲದ ಕಳ್ಳಿ ಪೀರ, ಬಿಳಿ ತಲೆ ಕಬ್ಬಕ್ಕಿ, ಕೊಂಕಣ ಪ್ರದೇಶದಲ್ಲಿ ಮಾತ್ರವೇ ಗೂಡುಕಟ್ಟುವ ಬಿಳಿ ಹೊಟ್ಟೆಯ ಮೀನು ಗಿಡುಗ, ಒಣಗಿದ ಮರದಲ್ಲಿ ಅವಿತು ಕುಳಿತ್ತಿದ್ದ ಕಂದು ನೊಣ ಹಿಡುಕ ಇವೇ ಮೊದಲಾದ ಅತ್ಯಪೂರ್ವ ಪಕ್ಷಿಗಳ ಚಲನವಲನಗಳನ್ನು ವೀಕ್ಷಿಸುವ ಸೌಭಾಗ್ಯ ಮಕ್ಕಳಿಗೆ ದೊರಕಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ
Madikeri:ರೈಲ್ವೆ ಕಂಬಿ ಬೇಲಿಯನ್ನೇ ಮುರಿದ ಕಾಡಾನೆಗಳು:ನಿತ್ಯ ಉಪಟಳದಿಂದ ಬೇಸತ್ತ ಗ್ರಾಮಸ್ಥರು
Madikeri: ವೀರ ಸೇನಾನಿಗಳಿಗೆ ಅಗೌರವ: ಆರೋಪಿ ಸೆರೆ
Kumbale: ವರ್ಕಾಡಿ ಪ್ಲೈವುಡ್ ಕಾರ್ಖಾನೆಯಲ್ಲಿ ಬೆಂಕಿ ಅನಾಹುತ: ಬೆಂಕಿ: ಕೋಟ್ಯಂತರ ರೂ. ನಷ್ಟ
Kasargod: ಬೆಕ್ಕಿಗಾಗಿ ಬಾವಿಗಿಳಿದ ವಿದ್ಯಾರ್ಥಿಯ ರಕ್ಷಣೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Maharashtra Elections: 22 ಮಹಿಳೆ ಆಯ್ಕೆ, ವಿಪಕ್ಷದಿಂದ ಒಬ್ಬರೇ!
Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
All-party meet: ನಾಳೆಯಿಂದ ಚಳಿಗಾಲದ ಅಧಿವೇಶನ: ಸುಗಮಗೊಳಿಸಲು ಬಯಸಿದ ಸರಕಾರ
Uttar Pradesh: ಝಾನ್ಸಿ ಆಸ್ಪತ್ರೆ ಬೆಂಕಿ ಅವಘಡ: ಮತ್ತೆ 2 ಹಸುಗೂಸು ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.