ಮತ ಜಾಗೃತಿಯಲ್ಲಿ ಯಶಸ್ವಿಯಾದ ಮತ ಜಾಗೃತಿ ವಾಹನ
Team Udayavani, Mar 30, 2019, 6:30 AM IST
ಕಾಸರಗೋಡು: ಮತದಾನ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತೆ ವಿವಿಧ ರೂಪದ ಕ್ರಿಯಾತ್ಮಕ ಚಟುವಟಿಕೆಗಳನ್ನು ನಡೆಸುತ್ತಿದೆ. ಇದರ ಅಂಗವಾಗಿ ಜಿಲ್ಲೆಯಲ್ಲಿ ಪರ್ಯಟನೆ ನಡೆಸುತ್ತಿರುವ ಮತದಾನ ಜಾಗೃತಿ ವಾಹನ ತನ್ನದೇ ಕೊಡುಗೆ ನೀಡುತ್ತಿದೆ.
ಲೋಕಸಭೆ ಚುನಾವಣೆ ಅಂಗವಾಗಿ ಮತದಾತರ ಸಂಶಯ ನಿವಾರಣೆ, ವಿವಿಪಾಟ್ ಮಿಷನ್ ಚಟುವಟಿಕೆ ಸಂಬಂಧ ಜನತೆಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಮತ ವಾಹನ ಪೂರಕ ಕೊಡುಗೆ ನೀಡುತ್ತಿದೆ.
ಈ ಬಾರಿ ಎಲ್ಲ ಮತಗಟ್ಟೆಗಳಲ್ಲೂ ವಿವಿಪಾಟ್ ಸಹಿತ ಮತಯಂತ್ರ ಬಳಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಈ ವಿಚಾರಗಳಲ್ಲಿ ಜಾಗೃತಿ ಅನಿವಾರ್ಯವಾಗಿದೆ. ಈ ವಾಹನ ಪರ್ಯಟನೆಯ ಜೊತೆಯಲ್ಲಿ ಮತದಾನ ಕುರಿತಾದ ಸಮಗ್ರ ಮಾಹಿತಿಯನ್ನೂ ನೀಡಲಾ ಗುತ್ತಿರುವುದರಿಂದ ಮತಯಂತ್ರ ಮೂಲಕದ ಮತದಾನ ಸುಲಭವಾಗಲಿದೆ ಎಂದು ಜಿಲ್ಲಾಡಳಿತೆ ಅಂದಾಜಿಸಿದೆ.
ಮತಯಂತ್ರ ಜತೆಗೆ ಅಳವಡಿಕೆಗೊಂಡಿರುವ ವಿವಿಪಾಟ್ ಮೆಷಿನ್ ಸ್ಕ್ರೀನ್‌ನಲ್ಲಿ ಮತದಾತ ಮತ ಚಲಾಯಿಸಿದ ತತ್‌ಕ್ಷಣ ಮತ ನೀಡಿರುವ ಅಭ್ಯರ್ಥಿಯ ಹೆಸರು, ಚಿಹ್ನೆ ಮತ್ತು ಕ್ರಮ ನಂಬ್ರ 8 ಸೆಕೆಂಡ್ ಕಾಲ ಕಂಡು ಬರಲಿದೆ.
ತದನಂತರ ವಿವಿಪಾಟ್ ಮೆಷಿನ್‌ನ ಬಾಕ್ಸ್ ನಲ್ಲಿ ಈ ಮಾಹಿತಿಗಳಿರುವ ಸ್ಲಿಪ್ ಬಂದು ಬೀಳಲಿದೆ. ಅದನ್ನು ಸಂಗ್ರಹಿಸಲಾಗುವುದು.
ಒಬ್ಬ ಮತದಾತನ ಮತವೂ ಅಸಿಂಧು ವಾಗಬಾರದು, ಮತಚಲಾವಣೆ ಆಗದೇ ಉಳಿಯಬಾರದು ಎಂಬ ಸಂದೇಶಗಳೊಂದಿಗೆ ಇಂಥಾ ಯತ್ನಗಳು ನಡೆಯುತ್ತಿವೆ. ಮಂಜೇಶ್ವರ ವಿಧಾನಸಭೆ ಕ್ಷೇತ್ರದಲ್ಲಿ ಯಶಸ್ವಿ ಪರ್ಯಟನೆ ನಡೆಸಿರುವ ಮತ ವಾಹನ ಈಗ ಕಾಸರಗೋಡು ವಿಧನಸಭೆ ಕ್ಷೇತ್ರದಲ್ಲಿ ಪರ್ಯಟನೆ ನಡೆಸುತ್ತಿದೆ. ಮಾ.30ರಂದು ಕಾಸರಗೋಡು ಕ್ಷೇತ್ರದ ಪರ್ಯಟನೆ, 31ರಿಂದ ಎ.3 ರ ವರೆಗೆ ಉದುಮಾದಲ್ಲಿ, 4ರಿಂದ 7 ರ ವರೆಗೆ ಕಾಂಞಂಗಾಡಿನಲ್ಲಿ, 8ರಿಂದ 12 ರ ವರೆಗೆ ತ್ರಿಕರಿಪುರದಲ್ಲಿ ಮತವಾಹನ ಪರ್ಯಟನೆ ನಡೆಸಿ ಸಂಚಾರ ಪೂರ್ಣಗೊಳಿಸಲಿದೆ.
ದಿನಕ್ಕೆ 4 ಗ್ರಾಮಗಳಲ್ಲಿ ಮತ ವಾಹನ ಪರ್ಯ ಟನೆ ನಡೆಸುತ್ತಿದೆ. 4 ಮಂದಿ ಸಿಬಂದಿ ಮತ ವಾಹನದಲ್ಲಿ ಹೊಣೆಹೊತ್ತು ಸಂಚರಿಸುತ್ತಿದ್ದಾರೆ.
ಸಾರ್ವಜನಿಕರು ಅತೀವ ವಿಶ್ವಾಸದೊಂದಿಗೆ ಎಲ್ಲೆಡೆ ಮತವಾಹನಕ್ಕೆ ಸ್ವಾಗತ ನೀಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shimoga: ಎಸ್ಐಟಿ ರಚನೆ ಮೂಲಕ ಕಾಂಗ್ರೆಸ್ ಹಗೆ ತೀರಿಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ
Organ Donation: ಸಾವಿನ ನಂತರವೂ ನೆರವಾದ ಜೀವ
Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್ ಆಯುಕ್ತರಿಗೆ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.