ಭೀಕರ ಸಿಡಿಲು ಸಹಿತ ಬೇಸಗೆ ಮಳೆ: ಇಲಾಖೆ ಎಚ್ಚರಿಕೆ
Team Udayavani, Apr 26, 2019, 6:35 AM IST
ಕಾಸರಗೋಡು: ರಾಜ್ಯದಲ್ಲಿ ಬೇಸಗೆ ಮಳೆ ಯಾವುದೇ ದಿನ ಅಪರಾಹ್ನ 2ರಿಂದ ರಾತ್ರಿ 8 ಗಂಟೆಯ ಅವಧಿಯಲ್ಲಿ ಬಿರುಸಿನ ಗುಡುಗು-ಸಿಡಿಲು ಸಹಿತ ಬರುವ ಸಾಧ್ಯತೆಯಿದೆ ಎಂದು ರಾಜ್ಯ ದುರಂತ ನಿವಾರಣೆ ಪ್ರಾಧಿಕಾರ ಎಚ್ಚರಿಕೆ ನೀಡಿದೆ. ಅತೀವ ಜಾಗ್ರತೆ ಪಾಲಿಸುವಂತೆ ಸಲಹೆ ಮಾಡಲಾಗಿದೆ.
ಈ ಅವಧಿಯಲ್ಲಿ ತೆರೆದ ಪ್ರದೇಶಗಳಲ್ಲಿ ಮಕ್ಕಳು ಸ್ನಾನ ಮಾಡುವುದು ಇತ್ಯಾದಿಗಳನ್ನು ನಿಷೇಧಿಸಲಾಗಿದೆ. ಮಳೆ ನೋಡಲು, ಒಗೆದು ಒಣಗಿಸಲು ಹಾಕಲಾದ ಬಟ್ಟೆ ತೆರವುಗೊಳಿಸುವ ಇತ್ಯಾದಿ ಕಾರಣಕ್ಕೆ ಈ ಅವಧಿಯಲ್ಲಿ ಮನೆ ತಾರಸಿಗೆ ತೆರಳಕೂಡದು. ಮಳೆ ತಾಗುವ ಪ್ರದೇಶದಲ್ಲಿರುವ ಸಾಕು ಪ್ರಾಣಿಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಬೇಕು.
ಈ ಅವಧಿಯಲ್ಲಿ ಯಾರಾದರೂ ವಾಹನಗಳಲ್ಲಿದ್ದರೆ, ಅಲ್ಲೇ ವಾಹನನಿಲ್ಲಿಸಿ ಲೋಹ ಇತ್ಯಾದಿಗಳು ಸ್ಪರ್ಶವಾಗದಂತೆ ಭದ್ರವಾಗಿ ಕುಳಿತುಕೊಳ್ಳಬೇಕು. ಜಲಾಶಯಗಳಲ್ಲಿ ಇಳಿಯಬಾರದು. ಗಾಳಿಪಟ ಹಾರಿಸಬಾರದು. ಬಾಗಿ ಕುಳಿತುಕೊಳ್ಳಬಾರದು. ತಾರಸಿಯಲ್ಲಿ ವಿದ್ಯುತ್ ನಿಯಂತ್ರಕ ಸ್ಥಾಪಿಸಬೇಕು. ಮನೆಯೊಳಗೆ ವಿದ್ಯುತ್ ಸರ್ಜ್ ಪ್ರೊಟೆಕ್ಟರ್ ಸ್ಥಾಪಿಸಬೇಕು.
ಸಂಭವಿಸಬಹುದಾದ ಆರೋಗ್ಯ ಸಮಸ್ಯೆಗಳು
ಬಿರುಸಿನ ಸಿಡಿಲು ವ್ಯಕ್ತಿಗೆ ಬಡಿದರೆ ಜೀವಹಾನಿ ಯಾ ದೃಷ್ಟಿ ಕಳೆದು ಕೊಳ್ಳಬಹುದು. ಹೃದಯಾಘಾತ ಸಂಭವಿಸಬಹುದು. ಈ ಬಗ್ಗೆ ಎಚ್ಚರಿಕೆ ಬೇಕು. ಸಿಡಿಲ ಆಘಾತ ಸಂಭವಿಸಿದಾಗ ವ್ಯಕ್ತಿಯ ಶರೀರದಲ್ಲಿ ವಿದ್ಯುತ್ ಪ್ರವಾಹ ಇರುವುದಿಲ್ಲ. ಆದಕಾರಣ ಪ್ರಥಮ ಶುಶ್ರೂಷೆ ನಡೆಸುವಲ್ಲಿ ಉಳಿದವರು ಹಿಂದೆ-ಮುಂದೆ ನೋಡಬಾರದು. ಸಿಡಿಲು ಬಡಿತ ಸಂಭವಿಸಿ 30 ಸೆಕೆಂಡ್ ವರೆಗೆ ವ್ಯಕ್ತಿಯನ್ನು ಉಳಿಸಿಕೊಳ್ಳಲು ಉತ್ತಮ ಅವಕಾಶಗಳಿವೆ. ತತ್‌ಕ್ಷಣ ಸಮೀಪದ ಆಸ್ಪತ್ರೆಗೆ ಕರೆದೊಯ್ಯಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.