ಸೂರಂಬೈಲು ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ


Team Udayavani, Apr 4, 2019, 7:37 PM IST

surambailu

ಬದಿಯಡ್ಕ: ಸ್ಪಷ್ಟ ಹಾದಿಯ ಸಕಾರಾತ್ಮಕ ಯತ್ನಗಳಿದ್ದರೆ ನಿರ್ವಹಿಸುವ ಕರ್ಮ ಶುಭ ಫಲ ನೀಡುತ್ತದೆ. ಭಗವಂತನ ಕುರಿತಾದ ಶ್ರದ್ದೆ ಆವಿರ್ಭವಿಸುವ ಸ್ಥಳ ದೇವಾಲಯಗಳಾಗಿದ್ದು, ದೇಹ,ಜೀವ ಹಾಗೂ ದೇವ ಭಾವಗಳ ಏಕಸೂತ್ರಿತ ವ್ಯವಸ್ಥೆ ಪವಿತ್ರ ಕ್ಷೇತ್ರಗಳಾಗಿವೆ ಎಂದು ಖ್ಯಾತ ಪ್ರವಚನಕಾರ, ವೈದಿಕ ವಿದ್ವಾಂಸ ವಿದ್ವಾನ್‌. ಹಿರಣ್ಯ ವೆಂಕಟೇಶ್ವರ ಭಟ್‌ ಅವರು ತಿಳಿಸಿದರು.

ಸೂರಂಬೈಲು ಸಮೀಪದ ಶಡ್ರಂಪಾಡಿ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಮತ್ತು ಉಳ್ಳಾಕ್ಲು, ಧೂಮಾವತಿ, ರಕ್ತೇಶ್ವರಿ ದೈವ ಸಾನಿಧ್ಯಗಳ ನವೀಕರಣ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಥಮ ದಿನ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಉಪನ್ಯಾಸ ನೀಡಿ ಮಾತನಾಡುತ್ತಿದ್ದರು.

ಒಂದು ಗ್ರಾಮ, ಊರು, ಮಾಗಣೆಯಲ್ಲಿ ಪ್ರಧಾನವಾದ ಮೂರು ಆಲಯಗಳಿರಬೇಕು. ದೇವಾಲಯ, ವಿದ್ಯಾಲಯ ಮತ್ತು ಔಷಧಾಲಯಗಳು ಉತ್ತಮ ಸಮಾಜಕ್ಕೆ ಅಗತ್ಯ. ಈ ಮೂರೂ ಆಲಯಗಳಿಲ್ಲದಲ್ಲಿ ಬದುಕಲೇ ಬಾರದು ಎಂದು ಶಾಸ್ತ್ರ ಹೇಳುತ್ತದೆ. ದೇವಾಲಯದಲ್ಲಿ ಆರಾಧನೆ ನಿಲ್ಲುವುದು ದೊಡ್ಡ ದೋಷ. ಆದರೆ ಭಗವಂತನ ಸಾನ್ನಿಧ್ಯವು ಎಂದಿಗೂ ಕ್ಷಯವಾಗುವುದಿಲ್ಲ, ಭಜಕರಿಗೆ ದೊರಕುವ ಅನುಗ್ರಹ ಮಾತ್ರ ಕಡಿಮೆಯಾಗುತ್ತದೆ ಎಂದು ಅವರು ತಿಳಿಸಿದರು. ದೇಹದ ಚಟುವಟಿಕೆಗೆ ಜೀರ್ಣವಾಗುವುದು ಅಗತ್ಯ. ಆದರೆ ದೇವಾಲಯಗಳು ಜೀರ್ಣವಾಗಬಾರದು.

ಆಚಾರ್ಯರ ತಪಸ್ಸು, ಆಮ್ನಾಯ ಜಪ, ಉತ್ಸವ, ಅನ್ನದಾನ ಮತ್ತು ನಿಯಮಗಳ ಅನುಸರಣೆ ಇವುಗಳು ಕೇÒತ್ರದ ಅಭಿವೃದ್ಧಿಗೆ ಕಾರಣಗಳು. ಇವುಗಳನ್ನು ಅನುಸರಿಸುವುದು ನಾವು ದೇವರ ಅನುಗ್ರಹಕ್ಕೆ ಪಾತ್ರರಾಗಲು ನಾವು ಅರ್ಹರು ಎಂಬುದನ್ನು ತೋರಿಸಿಕೊಡುತ್ತದೆ ಎಂದು ವಿದ್ವಾಂಸ ಹಿರಣ್ಯ ವೆಂಕಟೇಶ್ವರ ಭಟ್‌ ಅಭಿಪ್ರಾಯಪಟ್ಟರು.

ಶ್ರೀ ಕ್ಷೇತ್ರ ಮಲ್ಲದ ಧರ್ಮದರ್ಶಿ ಆನೆಮಜಲು ವಿಷ್ಣು ಭಟ್‌ ಅಧ್ಯಕ್ಷತೆ ವಹಿಸಿದರು. ಭಗವದ್ಗೀತೆಯಲ್ಲಿ ವಿಶ್ವಮಾನವತಾ ವಾದದ ಕುರಿತಾಗಿ ಸುಗುಣಾ ಬಾಲಕೃಷ್ಣ ತಂತ್ರಿಯವರು ಬರೆದ ಅಶೋಚ್ಯಾನ್‌ ಅನ್ವಶೋಚಸ್ತÌಮ್‌ ವಿಶೇಷ ಬರಹಗಳ ಪುಸ್ತಕವನ್ನು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು. ಪುತ್ತಿಗೆ ಗ್ರಾಮ ಪಂಚಾಯತು ಸದಸ್ಯ ವರಪ್ರಸಾದ್‌ ಪೆರ್ಣೆ, ಚಂದ್ರ.ಯಂ, ಎಡನಾಡು ಕಣ್ಣೂರು ಸೇವಾ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಯಚ್‌. ಶಿವರಾಮ ಭಟ್‌ ಶುಭಾಶಂಸನೆಗೆ„ದರು. ಬ್ರಹ್ಮಕಲಶೋತ್ಸವ ಸಮಿತಿಯ ಬಿ.ವಸಂತ ಪೈ ಬದಿಯಡ್ಕ, ಡಿ.ಕೃಷ್ಣ ಭಟ್‌ ದೊಡ್ಡಮಾಣಿ ಮತ್ತು ಪ್ರವೀಣ ದೊಡ್ಡಮಾಣಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಶ್ರೀಕೃಷ್ಣಪ್ರಸಾದ್‌.ಕೆ.ಎಚ್‌ ಸ್ವಾಗತಿಸಿ, ಬ್ರಹ್ಮಕಲಶೋತ್ಸವ ಸಮಿತಿಯ ಜೊತೆಕಾರ್ಯದರ್ಶಿ ಸೂರ್ಯನಾರಾಯಣ ಹೊಸಮನೆ ವಂದಿಸಿದರು. ನೀನಾಸಂ ಕಲಾವಿದ ಮಂಜುನಾಥ ಹೊಸಮನೆ ಕಾರ್ಯಕ್ರಮ ನಿರೂಪಿಸಿದರು.

ಸಂಜೆ ಶ್ರೀಕ್ಷೇತ್ರದ ತಂತ್ರಿವರ್ಯ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳನ್ನು ಪೂರ್ಣಕುಂಭಗಳೊಂದಿಗೆ ಸ್ವಾಗತಿಸಲಾಯಿತು. ವೈದಿಕ ಕಾರ್ಯಕ್ರಮಗಳ ಅಂಗವಾಗಿ ರಾತ್ರಿ ಆಚಾರ್ಯವರಣ, ಋತ್ವಿಕವರಣ, ಪುಣ್ಯಾಹ, ಅಂಕುರಾರೋಪಣ, ಸ್ಥಳಶುದ್ಧಿ, ಪ್ರಾಸಾದಶುದ್ಧಿ, ವಾಸ್ತುಹೋಮ, ರಕೋÒಘ್ನ ಹೋಮಗಳು ಜರಗಿದವು.

ಮರುದಿನ ಬೆಳಿಗ್ಗೆ ಗಣಪತಿ ಹೋಮ, ಉಷಃಪೂಜೆ, ಅಂಕುರಪೂಜೆ, ಚತುಃಶುದ್ಧಿ, ಧಾರಾಪಂಚಕಂ, ಪಂಚಗವ್ಯಂ ಮತ್ತು ಸಾಯಂಕಾಲ ಕುಂಡ ಶುದ್ಧಿ, ಅಂಕುರಪೂಜೆ, ರಾತ್ರಿಪೂಜೆಗಳ ವಿಧಿವಿಧಾನಗಳು ನೆರವೇರಿದವು. ಅನಂತಪದ್ಮನಾಭ ಮಹಿಳಾ ಭಜನಾ ಸಂಘ ಅನಂತಪುರ, ಸಾರಥಿ ಮಹಿಳಾ ಭಜನಾ ಸಂಘ ಮುಜುಂಗಾವು, ಮಹಾದೇವ ಶಾಸ್ತಾರ ಭಜನಾ ಸಂಘ ಕಿದೂರು ಇವರಿಂದ ಬೆಳಿಗ್ಗೆ ಮತ್ತು ಶಾಸ್ತಾ ಭಜನಾ ಸಂಘ ನಾಯ್ಕಪು ಇವರಿಂದ ಅಪರಾಹ್ನ ಭಜನಾ ಕಾರ್ಯಕ್ರಮ ನಡೆಯಿತು.

ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಬೆಳಿಗ್ಗೆ 10.30 ರಿಂದ ಯಸ್‌.ಯಸ್‌.ಯಸ್‌.ಗ್ರೂಪ್‌, ಐ.ಸಿ.ರೋಡ್‌ ಮುಜುಂಗಾವು ಇವರಿಂದ ಭಕ್ತಿಗಾನಸುಧಾ, ಅಪರಾಹ್ನ ಯಕ್ಷಭಾರತೀ ನೀರ್ಚಾಲು ಇವರಿಂದ “ಸುಧನ್ವ ಮೋಕ್ಷ ‘ ಯಕ್ಷಗಾನ ತಾಳಮದ್ದಳೆ, ಸಾಯಂಕಾಲ ಹರಿದಾಸ ಜಯಾನಂದ ಕುಮಾರ್‌ ಹೊಸದುರ್ಗ ಇವರಿಂದ ಹರಿಕಥಾ ಸಂಕೀರ್ತನೆ ಮತ್ತು ಸ್ಥಳೀಯ ಕಲಾವಿದರಿಂದ ನƒತ್ಯ ಸಾಂಸ್ಕೃತಿಕ ಕಾರ್ಯಕ್ರಮ ವೈವಿಧ್ಯಗಳು ಜರಗಿದವು.

ಇಂದಿನ ಕಾರ್ಯಕ್ರಮ:
ಗುರುವಾರದಂದು ಸಾಯಂಕಾಲ ಅ—ವಾಸ ಹೋಮ, ಕಲಶಾ—ವಾಸ ಕ್ರಿಯೆಗಳು ಮತ್ತು ಪ್ರಾರ್ಥನೆಗಳು ನಡೆಯಲಿವೆ.

ಶ್ರೀರಾಮ ಭಜನಾ ಸಂಘ ನಾಯ್ಕಪು, ಮಹಾದೇವಿ ಮಹಿಳಾ ಭಜನಾ ಸಂಘ ಕಳತ್ತೂರು, ವಿವೇಕಾನಂದ ಸ್ವಸಹಾಯ ಸಂಘ ಬೆರಿಪದವು ಇವರಿಂದ ಬೆಳಿಗ್ಗೆ ಮತ್ತು ಶ್ರೀಕೃಷ್ಣ ಭಜನಾ ಮಂಡಳಿ ಮಂಗಲ್ಪಾಡಿ ಇವರಿಂದ ಅಪರಾಹ್ನ ಭಜನಾ ಕಾರ್ಯಕ್ರಮ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಬೆಳಿಗ್ಗೆ 10.30 ರಿಂದ ವಾಣಿಪ್ರಸಾದ್‌ ಕಬೆಕೋRಡು ಇವರ ಶಿಷ್ಯೆ ಕುಮಾರಿ ರೂಪಾ ಕನಕಪ್ಪಾಡಿ ಇವರಿಂದ ಸಂಗೀತ ಕಛೇರಿ, ಸಂಜೆ ಡಾ.ಕಿರಣ್‌ ಕುಮಾರ್‌, ‘ಗಾನಸಿರಿ’ ಪುತ್ತೂರು ಇವರ ಶಿಷ್ಯೆ ಕುಮಾರಿ ವಿಭಾಶ್ರೀ ಬೆಳ್ಳಾರೆ ಇವರಿಂದ ಭಕ್ತಿ-ಭಾವ-ಗಾನ ಕಾರ್ಯಕ್ರಮ ಜರುಗಿತು. ನಾಟ್ಯ ವಿದ್ಯಾನಿಲಯ ಕುಂಬಳೆಯ ವಿದ್ಯಾಲಕ್ಷಿ¾ ಇವರ ಶಿಷ್ಯವೃಂದದವರಿಂದ ರಾತ್ರಿ 8 ಗಂಟೆಗೆ ‘ನƒತ್ಯ ಸಂಭ್ರಮ – 2019’ ಕಾರ್ಯಕ್ರಮ ಪ್ರಸ್ತುತಿ ನಡೆಯಲಿದೆ.

ಟಾಪ್ ನ್ಯೂಸ್

Khel Ratna ನಾಮನಿರ್ದೇಶಿತರ ಪಟ್ಟಿಯಲ್ಲಿ ಭಾಕರ್‌ ಹೆಸರಿಲ್ಲ?

Khel Ratna ನಾಮನಿರ್ದೇಶಿತರ ಪಟ್ಟಿಯಲ್ಲಿ ಭಾಕರ್‌ ಹೆಸರಿಲ್ಲ?

Khattar (2)

Kasaragod: ಸ್ಥಳ ನೀಡಿದರೆ ಕೇರಳದಲ್ಲಿ ಅಣು ಶಕ್ತಿ ನಿಲಯ: ಕೇಂದ್ರ ಸಚಿವ ಖಟ್ಟರ್‌

AUS v NZ: ಆಸ್ಟ್ರೇಲಿಯ ವನಿತೆಯರಿಗೆ ಸರಣಿ

AUS v NZ: ಆಸ್ಟ್ರೇಲಿಯ ವನಿತೆಯರಿಗೆ ಸರಣಿ

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

Bengal

Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್‌ ವಿಧಿವಶ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

CTR-Wife-pallavi

ಸುಮ್ನೆ ಬ್ಯಾಂಡೇಜ್‌ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-KDP

Dakshina Kannada; ಜಿಲ್ಲಾ ಕೆಡಿಪಿ ಸಭೆ: ಕರಾವಳಿ ನಿರ್ಲಕ್ಷ್ಯ ಆರೋಪಿಸಿ ಬಿಜೆಪಿ ಸಭಾತ್ಯಾಗ

Khel Ratna ನಾಮನಿರ್ದೇಶಿತರ ಪಟ್ಟಿಯಲ್ಲಿ ಭಾಕರ್‌ ಹೆಸರಿಲ್ಲ?

Khel Ratna ನಾಮನಿರ್ದೇಶಿತರ ಪಟ್ಟಿಯಲ್ಲಿ ಭಾಕರ್‌ ಹೆಸರಿಲ್ಲ?

Khattar (2)

Kasaragod: ಸ್ಥಳ ನೀಡಿದರೆ ಕೇರಳದಲ್ಲಿ ಅಣು ಶಕ್ತಿ ನಿಲಯ: ಕೇಂದ್ರ ಸಚಿವ ಖಟ್ಟರ್‌

police

Udupi: ಕೋಳಿ ಅಂಕಕ್ಕೆ ದಾಳಿ; 9 ಕೋಳಿ ಸಹಿತ ನಾಲ್ವರ ವಶ

AUS v NZ: ಆಸ್ಟ್ರೇಲಿಯ ವನಿತೆಯರಿಗೆ ಸರಣಿ

AUS v NZ: ಆಸ್ಟ್ರೇಲಿಯ ವನಿತೆಯರಿಗೆ ಸರಣಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.