ತಲಪಾಡಿ ಟೋಲ್: ಸ್ಥಳೀಯರಿಗೆ ರಿಯಾಯಿತಿ ನೀಡದಿದ್ದರೆ ಹೋರಾಟ
Team Udayavani, Mar 6, 2019, 1:00 AM IST
ಹೊಸಂಗಡಿ: ಕೇರಳದ ಭೂಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಇನ್ನೂ ಆರಂಭಗೊಂಡಿಲ್ಲ. ರಾಜ್ಯದ ಎಡರಂಗ ಸರಕಾರವು ಭೂ ಸ್ವಾಧೀನಪಡಿಸುವಿಕೆಯಲ್ಲಿ ತೋರುತ್ತಿರುವ ವಿಳಂಬ ನೀತಿಯಿಂದ ಜನರು ತೊಂದರೆ ಅನುಭವಿಸು ವಂತಾಗಿದೆ ಎಂದು ಭಾರತೀಯ ಜನತಾ ಯುವಮೋರ್ಚಾದ ಮಂಜೇಶ್ವರ ಮಂಡಲ ಸಮಿತಿಯ ಸಭೆಯು ಆರೋಪಿಸಿದೆ.
ತಲಪಾಡಿ ಟೋಲ್ ಗೇಟ್ನಲ್ಲಿ ಸ್ಥಳೀಯರಿಗೆ ಇದ್ದ ರಿಯಾಯಿತಿ ಇದೀಗ ನೀಡಲು ಸಾಧ್ಯವಿಲ್ಲ ಎನ್ನುತ್ತಿರುವುದು ಟೋಲ್ ವ್ಯವಸ್ಥಾಪಕರ ಉದ್ಧಟತನವಾಗಿದೆ. ಇಲ್ಲಿ ಆಧಾರ್ ಕಾರ್ಡ್ ಹಾಗೂ ವಾಹನ ದಾಖಲೆಗಳ ಅಸಲಿ ಪ್ರತಿ ಕೇಳುತ್ತಿರುವುದು ಕಾನೂನು ಬಾಹಿರವಾಗಿದೆ. ಟೋಲ್ ಕಾರ್ಮಿಕರಿಗೆ ಹಾಗೂ ಅದರ ವ್ಯವಸ್ಥಾಪಕರಿಗೆ ವಾಹನಗಳ ಹಾಗೂ ಆಧಾರ್ ಕಾರ್ಡ್ನ ಅಸಲಿ ಪ್ರತಿ ಕೇಳುವ ಅನುಮತಿ ಇಲ್ಲ ಎಂಬುದನ್ನು ಯುವಮೋರ್ಚಾ ಸಭೆಯಲ್ಲಿ ತಿಳಿಸಲಾಯಿತು.
ಟೋಲ್ ಪ್ರತಿನಿಧಿಗಳು ಉದ್ಧಟತನ ಪ್ರದರ್ಶಿಸಿದರೆ ಹಾಗೂ ವಾಹನ ಚಾಲಕರನ್ನು, ಮಾಲಕರನ್ನು ಬೆದರಿಸುವುದು ಮುಂದುವರಿದರೆ ಟೋಲ್ ಮುಂದೆ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಯುವಮೋರ್ಚಾ ಎಚ್ಚರಿಸಿದೆ. ಮಂಜೇಶ್ವರ ತಾಲೂಕಿನ ಜನರು ಇಲ್ಲದ ರಸ್ತೆಗೆ ಟೋಲ್ ಕಟ್ಟಬೇಕಾದ ಪರಿಸ್ಥಿತಿ ಖಂಡನೀಯ. ಟೋಲ್ ಅಧಿಕೃತರ ದುರಹಂಕಾರ ಧೋರಣೆಗೆ ಸೂಕ್ತ ಉತ್ತರ ನೀಡಲಾಗುವುದು. ಇದರ ವಿರುದ್ಧ ಹಿರಿಯ ಅಧಿಕಾರಿಗಳಿಗೆ ದೂರು ಕೊಡಲು ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಬಿಜೆಪಿ ಮಂಜೇಶ್ವರ ಮಂಡಲ ಪ್ರಧಾನ ಕಾರ್ಯದರ್ಶಿ ಆದರ್ಶ್ ಬಿ.ಎಂ. ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಯುವಮೋರ್ಚಾ ಮಂಡಲಾಧ್ಯಕ್ಷ ಚಂದ್ರಕಾಂತ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಧನರಾಜ್ ಬೀಟಿಗದ್ದೆ, ಸಂತೋಷ್ ದೈಗೋಳಿ, ಸುಮಿತ್ರಾಜ್ ಪೆರ್ಲ, ಪ್ರಜ್ವಿತ್ ಶೆಟ್ಟಿ ಹಾಗೂ ಯುವಮೋರ್ಚಾ ನೇತಾರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Kasaragod: ರಸ್ತೆಯಲ್ಲಿ ಬಿಯರ್ ಬಾಟ್ಲಿ ಎಸೆದು ಘರ್ಷಣೆಗೆ ಯತ್ನ; ಕೇಸು ದಾಖಲು
Kasaragod ಅಪರಾಧ ಸುದ್ದಿಗಳು; ತಂಬಾಕು ಉತ್ಪನ್ನಗಳ ಸಹಿತ ಇಬ್ಬರ ಬಂಧನ
Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ
Kasaragod: ಮುಖವಾಡ ಧರಿಸಿದ ವ್ಯಕ್ತಿಯಿಂದ ವಿದ್ಯಾರ್ಥಿಗೆ ಇರಿತ; ಪ್ರಕರಣ ದಾಖಲು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.