ಅದ್ದುಚ್ಚರವರ ನಿಸ್ವಾರ್ಥ ಸೇವೆ; ತಲೇಕಳ ಶಾಲೆ ರಸ್ತೆ ಅಭಿವೃದ್ಧಿ
ತಲೇಕಳ ಶಾಲಾ ರಸ್ತೆಯ ತಾತ್ಕಾಲಿಕ ದುರಸ್ತಿ
Team Udayavani, Jun 29, 2019, 5:51 AM IST
ತಲೇಕಳ: ಸರಕಾರಿ ಶಾಲೆ ತಲೇಕಳಕ್ಕೆ ಕಡಂಬಾರ್ – ಬಟ್ಟಿಪದವುನಿಂದ ಹೋಗುವ ಇಳಿಜಾರಿ ನಿಂದ ಕೂಡಿದ ರಸ್ತೆಯು ಮಳೆಯಿಂದ ಸಂಪೂರ್ಣವಾಗಿ ಹದಗೆಟ್ಟಿದೆ. ದೊಡ್ಡ ಹೊಂಡಗಳು ನಿರ್ಮಾಣಗೊಂಡು ವಾಹನಗಳ ಸಂಚಾರಕ್ಕೆ ತೊಡಕಾಗಿತ್ತು. ಪಿ.ಟಿ.ಎ. ಸದಸ್ಯರಾದ ಅಬ್ದುಲ್ ರಹಮಾನ್ (ಅದ್ದುಚ್ಚ) ಬಟ್ಟಿಪದವು ಅವರ ನೇತೃತ್ವದಲ್ಲಿ ಸ್ವಂತ ಖರ್ಚಿನಲ್ಲಿ ಜೆಸಿಬಿ ಮೂಲಕ ತಾತ್ಕಾಲಿಕವಾಗಿ ದುರಸ್ತಿಗೊಳಿಸಲಾಯಿತು. ಪಿ.ಟಿ.ಎ ಸದಸ್ಯರಾದ ರಮೇಶ ಬಟ್ಟಿಪದವು, ಶಾಲಾ ಶಿಕ್ಷಕರು ಸಹಕರಿಸಿದರು.
ಶಾಲೆಯ ಅಭಿಮಾನಿ
ತಲೇಕಳ ಶಾಲೆಯ ಬಗ್ಗೆ ತುಂಬಾ ಅಭಿಮಾನವಿರುವ ಇವರ ನಿಸ್ವಾರ್ಥ ಸೇವೆಯು ಇಂದು ಶಾಲಾ ಮಕ್ಕಳ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ. ತನ್ನ ಸ್ವಂತ ವಾಹನವನ್ನು ಶಾಲೆಯ ಸೇವೆಗೆ ಉಪಯೋಗಿಸುತ್ತಿದ್ದಾರೆ. ಮಾತ್ರವಲ್ಲ ಕಳೆದ ವರ್ಷವು ರಸ್ತೆ ಹದಗೆಟ್ಟಾಗ ಪಿ.ಟಿ.ಎ. ಅಧ್ಯಕ್ಷರಾದ ರಝಾಖ್ ಬಟ್ಟಿಪದವುರೊಂದಿಗೆ ಸೇರಿ ತನ್ನ ಅಂಗಡಿ ವ್ಯಾಪಾರವನ್ನು ಮುಚ್ಚಿ ದುರಸ್ತಿ ಕೆಲಸಕ್ಕೆ ಸಹಕರಿಸಿದ್ದಾರೆ. ನೆರೆಯ ರಾಜ್ಯದಿಂದ ಕೆಲಸ ನಿಮಿತ್ತ ಇಲ್ಲಿ ವಾಸಿಸುವ ಕುಟುಂಬಗಳ ಮಕ್ಕಳಿಗೆ ವಿದ್ಯಾಭ್ಯಾಸ ನೀಡಲು ಮಾರ್ಗದರ್ಶನ ನೀಡುತ್ತಿದ್ದಾರೆ.
ವಿದ್ಯಾರ್ಥಿಗಳ ಸಂಖ್ಯೆ 28ರಿಂದ 60ಕ್ಕೆ
ತಲೇಕಳ ಶಾಲೆಗೆ ಸೌಂಡ್ ಸಿಸ್ಟಮ್‌ಗೆ ಹಣ ಸಂಗ್ರಹಿಸಲು ತೀರ್ಮಾನಿಸಿದಾಗ ಮುಂಚೂಣಿಯಲ್ಲಿ ನಿಂತು ಸಹಕರಿಸಿದ್ದಾರೆ. ಈ ರೀತಿ ಇವರು ಈ ಶಾಲೆಯ ಬಗ್ಗೆ ಅಪಾರ ಕಾಳಜಿ ವಹಿಸಿ ಶಾಲೆಯ ಅಭಿವೃದ್ಧಿಯಲ್ಲಿ ಕೈ ಜೋಡಿಸಿದ್ದಾರೆ. ಇವರೊಂದಿಗೆ ರಕ್ಷಕರು, ಊರವರು ಸೇರಿ 2014ರಲ್ಲಿ ವಿದ್ಯಾರ್ಥಿಗಳ ಸಂಖ್ಯೆ 28 ಇದ್ದ ಈ ಶಾಲೆಯು ಇದೀಗ ವಿದ್ಯಾರ್ಥಿಗಳ ಸಂಖ್ಯೆ 60ರ ಬಳಿ ತಲುಪಲು ಕಾರಣರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.