“ತಂತ್ರಜ್ಞಾನ ಜನರಿಗೆ ತಲುಪಬೇಕು’


Team Udayavani, Feb 28, 2020, 5:01 AM IST

27KSDE8

ಕಾಸರಗೋಡು: ಇತ್ತೀಚೆಗಿನ ಕೆಲವು ವರ್ಷಗಳಲ್ಲಿ ಭಾರತ ದೇಶ ವಿಜ್ಞಾನ ಮತ್ತು ತಾಂತ್ರಿಕತೆಯಲ್ಲಿ ವಿಶ್ವಮಟ್ಟದಲ್ಲಿ ಗುರುತಿಸಿ ಕೊಂಡಿದ್ದು, ಇದರ ಹಿಂದೆ ವಿಜ್ಞಾನಿಗಳ ಮತ್ತು ಸಂಶೋಧಕರ ನಿರಂತರ ಪ್ರಯತ್ನ ಹಾಗೂ ತ್ಯಾಗ ಇದೆ. ಇದರ ಪ್ರಯೋಜನ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು ಎಂದು ಕೇಂದ್ರ ವಿದೇಶಾಂಗ ಮತ್ತು ಸಂಸದೀಯ ವ್ಯವಹಾರ ಸಚಿವ ವಿ.ಮುರಳೀಧರನ್‌ ಹೇಳಿದರು.

ಸ್ವದೇಶಿ ಸಯನ್ಸ್‌ ಮೂವ್‌ಮೆಂಟ್‌(ವಿಜ್ಞಾನ ಭಾರತಿ) ಕೇರಳ ಘಟಕ ಮತ್ತು ಐಸಿಎಆರ್‌-ಸಿಪಿಸಿಆರ್‌ಐ, ಕೇಂದ್ರೀಯ ವಿದ್ಯಾಲಯ ಕೇರಳ ಸಂಯುಕ್ತ ನೇತೃತ್ವ ದಲ್ಲಿ ಕೇಂದ್ರ ತೋಟಗಾರಿಕೆ ಬೆಳೆ ಸಂಶೋ ಧನೆ ಕೇಂದ್ರ (ಸಿಪಿಸಿಆರ್‌ಐ) ದಲ್ಲಿ ಆಯೋಜಿಸಿದ ಸ್ವದೇಶಿ ಸಯನ್ಸ್‌ ಕಾಂಗ್ರೆಸ್‌ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.

ವಿಜ್ಞಾನ ಮತ್ತು ತಾಂತ್ರಿಕತೆ ಅಭಿವೃದ್ಧಿ ಒಂದು ಪ್ರದೇಶಕ್ಕೆ ಮಾತ್ರ ಸೀಮಿತವಲ್ಲ. ಅದು ವಿಶ್ವಕ್ಕೆ ಸಹಕಾರಿಯಾಗಲಿದೆ. ಭಾರತೀಯ ಪಾರಂಪರಿಕ ವಿಜ್ಞಾನದ ಬಗ್ಗೆ ಎಲ್ಲೆಡೆ ಶಂಕೆ ಇತ್ತು. ಆದರೆ ಇಂದು ಭಾರತೀಯ ಪಾರಂಪರಿಕ ವಿಜ್ಞಾನದ ಬಗ್ಗೆ ವಿಶ್ವವೇ ಗುರುತಿಸಿದೆ. ಈ ಬಗ್ಗೆ ಸಂಶೋಧನೆಗಳನ್ನೂ ನಡೆಸುತ್ತಿದೆ.

ಕೇರಳದಲ್ಲಿ ಕಳೆದ ಎರಡು ವರ್ಷ ಪ್ರಳಯ, ಭೂಕುಸಿತ ಮೊದಲಾದವುಗ ಳಿಂದ ಸಂಭವಿಸಿದ ಜೀವ ಹಾನಿ, ನಾಶನಷ್ಟ ಅಷ್ಟಿಷ್ಟಲ್ಲ. ಇಂತಹ ಪ್ರಕೃತಿ ದುರಂತಕ್ಕೆ ಕಾರಣಗಳೇನು? ಮತ್ತು ಅವುಗಳಿಗೆ ಪರಿಹಾರಗಳೇನು? ಎಂಬ ಬಗ್ಗೆ ಕೇರಳದ ಜನತೆ ಚಿಂತಿಸದಿರುವುದು ವಿಷಾದನೀಯ ಎಂದರು.

ವಿಶ್ವದಾದ್ಯಂತ ವಿದ್ಯುತ್‌ ಸಮಸ್ಯೆ ತಲೆದೋರಿದೆ. ಈ ಸಮಸ್ಯೆಗೆ ಪರಿಹಾರ ಸೌರ ವಿದ್ಯುತ್‌ ಎಂಬುದು ಭಾರತದ ಸಂದೇಶವಾಗಿದೆ. ಈ ಸಂದೇಶದಿಂದ ಪ್ರಚೋದನೆಗೊಂಡ ವಿಶ್ವದ ಹಲವು ದೇಶಗಳು ಸೌರ ವಿದ್ಯುತ್‌ ಸ್ಥಾಪಿಸಲು ಭಾರತದ ಮತ್ತು ಇಲ್ಲಿನ ವಿಜ್ಞಾನಿಗಳ ನೆರವು ಪಡೆಯುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದ ಸಚಿವರು ಸೌರ ವಿದ್ಯುತ್‌ನಿಂದ ನೀರಾವರಿ ಯೋಜನೆಗೂ ಸಹಾಯಕವಾಗಿದೆ. ಇಂದು ತೆಂಗು, ಅಡಿಕೆ ಮೊದಲಾದ ಕೃಷಿಕರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳ ಪರಿಹಾರಕ್ಕೆ ಸಾಕಷ್ಟು ಸಂಶೋಧನೆಗಳಾಗಿವೆ. ಆದರೆ ಶಾಶ್ವತ ಪರಿಹಾರ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಕೃಷಿಕರ ಸಮಸ್ಯೆಗಳಿಗೆ ಶಾಶ್ವತ ಪರಿಹಾರಕ್ಕೆ ವಿಜ್ಞಾನಿಗಳು ಮತ್ತು ಸಂಶೋಧಕರು ಪ್ರಯತ್ನಿಸಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಡಾ|ಕೆ.ಮುರಳೀಧರನ್‌ ಅಧ್ಯಕ್ಷತೆ ವಹಿಸಿದರು. ಕೇರಳ ಫಿಶರೀಸ್‌ ಆ್ಯಂಡ್‌ ಓಶನ್‌ ಸ್ಟಡೀಸ್‌ ವಿ.ವಿ.ಯ ವೈಸ್‌ ಚಾನ್ಸಲರ್‌ ಪ್ರೊ| ಎ. ರಾಮಚಂದ್ರನ್‌, ಕೇಂದ್ರೀಯ ವಿದ್ಯಾಲಯ ಕೇರಳ ವೈಸ್‌ ಚಾನ್ಸಲರ್‌ ಪ್ರೊ| ಜಿ. ಗೋಪಕುಮಾರ್‌ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ವಿಜ್ಞಾನ ಭಾರತೀಯ ವಿವೇಕಾನಂದ ಪೈ, ಪ್ರೊ| ಎಸ್‌.ಕೆ. ಜೆನ, ಭುವನೇಶ್ವರ್‌, ಎ.ಆರ್‌.ಎಸ್‌. ಮೆನೋನ್‌ ಮೊದಲಾದವರು ಉಪಸ್ಥಿತರಿದ್ದರು. ರಾಜೇಂದ್ರನ್‌ ಪ್ರಾಸ್ತಾವಿಕ ಮಾತನಾಡಿದರು. ಸಿಪಿಸಿಆರ್‌ಐ ನಿರ್ದೇಶಕಿ ಡಾ|ಅನಿತಾ ಕರುಣ್‌ ಸ್ವಾಗತಿಸಿದರು.

ಕ್ರಮ ಅಗತ್ಯ
ಕೇರಳದಲ್ಲಿ 44 ನದಿಗಳಿದ್ದರೂ ಇನ್ನೂ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಸಾಧ್ಯವಾಗಿಲ್ಲ. ಮಳೆ ಬಂದ ಕೆಲವೇ ಕ್ಷಣಗಳಲ್ಲಿ ನದಿಗಳ ನೀರು ಸಮುದ್ರ ಸೇರುತ್ತದೆ. ಆದರೆ ಮಳೆ ನೀರನ್ನು ಭೂಮಿಯಲ್ಲಿ ಇಂಗಿಸಲು ಅಗತ್ಯದ ಕ್ರಮ ತೆಗೆದುಕೊಳ್ಳದಿರುವುದೇ ನೀರಿನ ಸಮಸ್ಯೆಗೆ ಪ್ರಮುಖ ಕಾರಣವೆಂದು ಸಚಿವರು ಅಭಿಪ್ರಾಯಪಟ್ಟರು.

ಟಾಪ್ ನ್ಯೂಸ್

Team India; A spinner from the Karnataka coast who joined Team India as a replacement for Ashwin

Team India; ಅಶ್ವಿನ್‌ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್‌

1-cris

Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ

Kambli-health

Kambli Health: ಮಾಜಿ ಕ್ರಿಕೆಟಿಗ ವಿನೋದ್‌ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!

am

Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…

1-maha-kumbha

Mahakumbh 2025: 45 ಕೋಟಿ ಯಾತ್ರಾರ್ಥಿಗಳ ನಿರೀಕ್ಷೆ

Travis Head made a controversial statement about BCCI

INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್‌ ಹೆಡ್? Video

Sheikh ಹಸೀನಾರನ್ನು‌ ಬಾಂಗ್ಲಾದೇಶಕ್ಕೆ ವಾಪಸ್‌ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ

Sheikh ಹಸೀನಾರನ್ನು‌ ಬಾಂಗ್ಲಾದೇಶಕ್ಕೆ ವಾಪಸ್‌ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Team India; A spinner from the Karnataka coast who joined Team India as a replacement for Ashwin

Team India; ಅಶ್ವಿನ್‌ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್‌

1-cris

Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ

Kambli-health

Kambli Health: ಮಾಜಿ ಕ್ರಿಕೆಟಿಗ ವಿನೋದ್‌ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!

Rachel David hope on Unlock Raghava Movie

Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್‌

am

Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.