ಗ್ರಾಮೀಣ ಜಾನಪದ ಕಲೆ ಉಳಿಸಿ: ಶಾಸಕ ರಝಾಕ್
Team Udayavani, Mar 26, 2018, 10:00 AM IST
ಕುಂಬಳೆ: ಗ್ರಾಮೀಣ ಪ್ರದೇಶದ ಜಾನಪದ ಕಲೆಗಳನ್ನು ಉಳಿಸಬೇಕಾಗಿದೆ. ಇದನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸಬೇಕೆಂದು ಶಾಸಕ ಪಿ.ಬಿ. ಅಬ್ದುಲ್ ರಝಾಕ್ ಹೇಳಿದರು. ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಕಾಸರಗೋಡು ಜಿಲ್ಲಾ ವಾರ್ತಾ ಕಚೇರಿಯ ಆಶ್ರಯದಲ್ಲಿ ಕರ್ನಾಟಕ ಜಾನಪದ ಪರಿಷತ್ ಕೇರಳ ಘಟಕ, ತರಂಗಿಣಿ ಆರ್ಟ್ಸ್ ಮತ್ತು ನ್ಪೋರ್ಟ್ಸ್ ಕ್ಲಬ್ ಸುಬ್ಬಯಕಟ್ಟೆ ಇದರ ಸಹಕಾರದೊಂದಿಗೆ ಸುಬ್ಬಯಕಟ್ಟೆಯ ಕುಡಾಲುಮೇರ್ಕಳ ಎ.ಎಲ್.ಪಿ. ಶಾಲೆಯಲ್ಲಿ ಜರಗಿದ ತೇಜಸ್ವಿನಿ 2018 ಉತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಶಾಸಕರು ಅಳಿವಿನಂಚಿನಲ್ಲಿರುವ ಹಳ್ಳಿ ಪ್ರದೇಶದ ಗ್ರಾಮೀಣ ಕಲೆಗಳನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯವೆಂದು ಹೇಳಿದರು. ಅಲ್ಲದೆ ಕೊನೆಯಲ್ಲಿ ಪಕ್ಕಿಲು ಮೂಜಿ ಒಂಜೇ ಗೂಡುಡು ಬದ್ಕೊಂದುಡುಗೆ ಹಾಡಿನ ಸಾಲನ್ನು ಹಾಡಿದರು.
ಬೆಳಗ್ಗೆ ಜರಗಿದ ತೇಜಸ್ವಿನಿ ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ಸರಕಾರದ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ ಭಾಗವಹಿಸಿ ಮಾತನಾಡಿದರು. ಪ್ರಮುಖರು ಉಪಸ್ಥಿತರಿದ್ದ ಸಮಾರಂಭದಲ್ಲಿ ವಿವಿಧ ರಂಗಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರಾದ ಬಿ. ಸೀತಾರಾಮ ಶೆಟ್ಟಿ, ಬಿ.ಕೆ. ಖಾದರ್ ಹಾಜಿ, ಎಸ್. ಕೊಗ್ಗು ಆಚಾರ್ಯ, ಅಚ್ಯುತ , ಬಿ. ರಾಮಕೃಷ್ಣ ಭಂಡಾರಿ, ಮೂಸಾ ಉಸ್ತಾದ್, ಬಳ್ಳು ಅಶ್ವತ್ಥಕಟ್ಟೆ, ವಿದ್ಯಾ ಗಣೇಶ್, ಎ.ಕೆ. ಉಮೇಶ್, ಸುರೇಶ್ ಶೆಟ್ಟಿ ಕಯ್ನಾರ್, ಚೇವಾರು ಶಂಕರ ಕಾಮತ್, ಸ್ಟ್ಯಾನಿ ಕ್ರಾಸ್ತಾ, ಮೂಸಾ ಕುಂಞಿ, ಋತಿಕ್ ಯಾದವ್, ಅಖೀಲೇಶ್, ನಳಿನಿ ಎಸ್., ರಾಮ ಮುನ್ನೂರು, ರವಿ ನಾಯ್ಕಪು, ವಿಮಲ್ ಮಾಸ್ಟರ್, ಬಾಬು ಕುಡಾಲು, ಲತೀಫ್ ಕಾಸರಗೋಡು ಅವರನ್ನು ಸಮ್ಮಾನಿಸಲಾಯಿತು. ತರಂಗಿಣಿ ಆರ್ಟ್ಸ್ ಮತ್ತು ನ್ಪೋರ್ಟ್ಸ್ ಕ್ಲಬ್ ಸುಬ್ಬಯಕಟ್ಟೆ ಮತ್ತು ಕುಡಾಲುಮೇರ್ಕಳ ಎ.ಎಲ್.ಪಿ. ಶಾಲೆಗೆ ಸ್ಮರಣಿಕೆ ನೀಡಲಾಯಿತು.
ಕಾರ್ಯಕ್ರಮದ ಅಂಗವಾಗಿ ಕಾಸರಗೋಡು ಮತ್ತು ಭಾಷಾ ಸಾಮರಸ್ಯದ ಕುರಿತು ಅಪರಾಹ್ನ ಜರಗಿದ ವಿಚಾರ ಸಂಕಿರಣದಲ್ಲಿ ಮಲಾರ್ ಜಯರಾಮ ರೈ ಮತ್ತು ಪಿ.ಪಿ. ಅಡಿಯೋಡಿ ಭಾಗವಹಿಸಿ ಮಾತನಾಡಿದರು. ಪ್ರಭಾಕರ ಕಲ್ಲೂರಾಯ ಅಧ್ಯಕ್ಷತೆ ವಹಿಸಿದರು. ವಿಶ್ರಾಂತ ಪರ್ತಕರ್ತ ಮಲಾರ್ ಜಯರಾಮ ರೈ ಅಧ್ಯಕ್ಷತೆ ವಹಿಸಿದ ಬಹುಭಾಷಾ ಕವಿಗೋಷ್ಠಿಯಲ್ಲಿ ಕವಿಗಳಾದ ಅಶೋಕ್ ಕುಮಾರ್, ವಿದ್ಯಾ ಗಣೇಶ್, ಹರೀಶ್ ಸುಲಾಯ ಒಡ್ಡಂಬೆಟ್ಟು, ವಿರಾಜ್ ಅಡೂರು, ರವೀಂದ್ರನ್ ಪಾಡಿ, ಕೇಶವಪ್ರಸಾದ್ ಕುಳಮರ್ವ, ಖಲೀಲ್ ಪುತ್ತೂರು,ಸ್ಟಾನಿ ಲೋಬೊ,ಸುಂದರ ಬಾರಡ್ಕ ಮತ್ತು ರಾಜಶ್ರೀರೈ ಅವರು ಕನ್ನಡ, ತುಳು, ಕೊಂಕಣಿ, ಮಲೆಯಾಳ, ಬ್ಯಾರಿ, ಸಂಸ್ಕೃತ ಭಾಷೆಗಳ ಸ್ವರಚಿತ ಕವನಗಳನ್ನು ವಾಚಿಸಿದರು. ವಸಂತ ಬಾರಡ್ಕ ಕನ್ನಡ ಜಾನಪದ ಹಾಡುಗಳನ್ನು ಹಾಡಿದರು. ಪ್ರೊ| ಶ್ರೀನಾಥ್ ಕಾರ್ಯಕ್ರಮ ನಿರೂಪಿಸಿದರು. ಎಸ್.ಕೆ. ಬಾಲಕೃಷ್ಣ ವಂದಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗ್ರಾಮೀಣ ಜಾನಪದ ಕಲೆಗಳಾದ ಕನ್ಯಾಪು, ಮಾದಿರ ಕುಣಿತ, ಪಾಡªನ, ಕೈಮುಟ್ಟ್ ಕಳಿ ಮತ್ತು ಬದಿಯಡ್ಕ ರಂಗಸಿರಿ ಸಾಂಸ್ಕೃತಿಕ ವೇದಿಕೆಯ ಕಲಾವಿದರಿಂದ ಯಕ್ಷಗಾನ ಬಯಲಾಟ ಪ್ರೇಕ್ಷಕರ ಮನಸೂರೆಗೊಂಡಿತು.
ಚಿತ್ರ : ಫೂಟೊ ಸ್ಟಾರ್ ಬದಿಯಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kasaragodu: ಸ್ಲೀಪರ್ ಸೆಲ್ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್
Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ
Kasaragod: ಮರಳಿ ಬಂದ ಯುವಕ – ಯುವತಿ ಮತ್ತೆ ನಾಪತ್ತೆ
Kasaragod crime News: ಶಾಲಾ ತರಗತಿಯಲ್ಲಿ ವಿದ್ಯಾರ್ಥಿನಿಗೆ ಹಾವು ಕಡಿತ
Kumble: ಯುವಕನ ಕೊಲೆ; ಆರು ಮಂದಿ ಅಪರಾಧಿಗಳು ಡಿ. 23ರಂದು ಶಿಕ್ಷೆ ತೀರ್ಪು ಘೋಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.