ಚಾರಣಿಗರ ಸ್ವರ್ಗ ರಾಣಿಪುರಂ ಚಾರಣಕ್ಕೆ ತಾತ್ಕಾಲಿಕ ನಿಷೇಧ


Team Udayavani, Mar 15, 2018, 9:45 AM IST

Ranipuram-14-3.jpg

ಕಾಸರಗೋಡು: ತಮಿಳುನಾಡಿನ ಕುರುಂಗನಿ ಅರಣ್ಯದಲ್ಲಿ ಕಾಡ್ಗಿಚ್ಚು ಹಬ್ಬಿ11 ಮಂದಿ ಸಾವಿಗೀಡಾಗಿರುವ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯ ಚಾರಣಿಗರ ಸ್ವರ್ಗ ಎಂದೇ ಕರೆಸಿಕೊಂಡಿರುವ ರಾಣಿಪುರಂನಲ್ಲಿ ಚಾರಣ ಮಂಗಳವಾರದಿಂದ ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 
ರಾಣಿಪುರಂನ ಒಂದು ಭಾಗದಲ್ಲಿ ಕರ್ನಾಟಕದ ಅರಣ್ಯ ಪ್ರದೇಶವಾಗಿದ್ದರೆ, ಇನ್ನೊಂದು ಭಾಗ ಕೇರಳಕ್ಕೆ ಸೇರಿದ ಅರಣ್ಯ ಪ್ರದೇಶವಿದೆ. ಅರಣ್ಯದಲ್ಲಿ ಕಾಡ್ಗಿಚ್ಚು ಸಂಭವಿಸಿದರೆ ಚಾರಣಿಗರಿಗೆ ತಮ್ಮನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗದು. ಈ ಅರಣ್ಯ ಪ್ರದೇಶದಿಂದ ಪಾರಾಗಿ ಹೊರ ಬರಲು ಕಷ್ಟಸಾಧ್ಯ. ಇದರಿಂದ ಅಪಾಯ ತಪ್ಪಿದಲ್ಲ. ರಾಣಿಪುರಂ ಅರಣ್ಯಕ್ಕೆ ಸಾಗಲು ರಸ್ತೆ ವ್ಯವಸ್ಥೆಯೂ ಇಲ್ಲದಿರುವುದರಿಂದ ಅಗ್ನಿಶಾಮಕ ದಳವಾಗಲೀ, ಇತರ ರಕ್ಷಣಾ ಕಾರ್ಯಕರ್ತರಿಗಾಗಲೀ ಪ್ರವೇಶಿಸಲು ಸುಲಭವಾಗದು. ಅರಣ್ಯ ರಕ್ಷಕರಿಗೂ ತತ್‌ಕ್ಷಣ ಬೆಂಕಿಯನ್ನು ಆರಿಸಲು ಸಾಧ್ಯವಾಗದು. ರಾಣಿಪುರಂನಲ್ಲಿ ಪ್ರತಿ ವರ್ಷವೂ ಕಾಡ್ಗಿಚ್ಚು ಸಾಮಾನ್ಯವಾಗಿದೆ. 

ಸಂಬಂಧಪಟ್ಟವರ ನೇತೃತ್ವದಲ್ಲಿ ಅರಣ್ಯ ಪಾಲಕರು, ಅರಣ್ಯ ಸಂರಕ್ಷಣೆ ಸಮಿತಿಯ ಕಾರ್ಯಕರ್ತರು ಜೀವದ ಹಂಗು ತೊರೆದು ರಕ್ಷಣಾ ಕಾರ್ಯದಲ್ಲಿ ತೊಡಗುವುದರಿಂದ ಬೆಂಕಿ ಹರಡದಂತೆ ಜಾಗೃತೆ ವಹಿಸುತ್ತಿದ್ದಾರೆ. ಆದರೂ ಚಾರಣ ಪ್ರಿಯರು ಅಕಸ್ಮಾತ್‌ ಬೀಡಿ, ಸಿಗರೇಟ್‌ ಸೇದಿ ಎಸೆದರೆ ಬೆಂಕಿ ಹತ್ತಿಕೊಂಡು ವ್ಯಾಪಕವಾಗಿ ಹರಡುವುದರಲ್ಲಿ ಸಂಶಯವಿಲ್ಲ. ಕಳೆದ ವರ್ಷ 7 ಬಾರಿ ರಾಣಿಪುರಂನಲ್ಲಿ ಕಾಡ್ಗಿಚ್ಚು ಸಂಭವಿಸಿತ್ತು. ಆದರೆ ತತ್‌ಕ್ಷಣದಲ್ಲೇ ಬೆಂಕಿ ಆರಿಸಿದ್ದರಿಂದ ಹೆಚ್ಚಿನ ಅಪಾಯದಿಂದ ಪಾರು ಮಾಡಲಾಗಿತ್ತು.

ಚಾರಣ ನಿಷೇಧದಿಂದ ನಷ್ಟ : ಮುಂದಿನ ದಿನಗಳು ಬೇಸಗೆ ರಜೆಯಾಗಿರುವುದರಿಂದ ಪ್ರವಾಸಿಗರು, ಚಾರಣಿಗರು ರಾಣಿಪುರಂಗೆ ಬರುತ್ತಾರೆ. ಆದರೆ ಈ ಬಾರಿ ಚಾರಣ ನಿಷೇಧಿಸಿರುವುದರಿಂದಾಗಿ ಪ್ರವಾಸಿಗರಿಂದ ಲಭಿಸುವ ವರಮಾನ ನಷ್ಟವಾಗಲಿದೆ. ಬೇಸಗೆಯ ರಜಾದಿನಗಳಲ್ಲಿ ಪ್ರತೀ ವರ್ಷವೂ ಟಿಕೆಟ್‌ ರೂಪದಲ್ಲಿ 75 ಸಾವಿರ ರೂ.ಯಿಂದ ಒಂದುಕಾಲು ಲಕ್ಷ ರೂ. ವರೆಗೆ ವರಮಾನ ಬರುವುದು ಸಾಮಾನ್ಯವಾಗಿದೆ. ಆದರೆ ಈ ಬಾರಿ ಈ ಹಣ ನಷ್ಟವಾಗಲಿದೆ. ಕಾಡ್ಗಿಚ್ಚಿನ ಭೀತಿಯಿಂದಾಗಿ ಮಳೆ ಸುರಿಯುವವರೆಗೆ ಪ್ರವಾಸಿಗರಿಗೆ ಇಲ್ಲಿಗೆ ಪ್ರವೇಶಕ್ಕೆ ಅನುಮತಿಯಿಲ್ಲ. ಹೀಗಿರುವಂತೆ ಕಾಡ್ಗಿಚ್ಚು ತತ್‌ಕ್ಷಣ ಕಂಡುಕೊಳ್ಳಲು ಹೆಚ್ಚಿನ ಸಿಬಂದಿಗಳನ್ನು ನೇಮಿಸಲಾಗುವುದು ಎಂದು ಸೆಕ್ಷನ್‌ ಫಾರೆಸ್ಟರ್‌ ಕೆ.ಮಧುಸೂದನನ್‌ ಅವರು ತಿಳಿಸಿದ್ದಾರೆ.

ಚಾರಣ ನಿಷೇಧಿಸಿದ್ದರೂ ರಾಣಿಪುರದ ಅರಣ್ಯ ಪ್ರದೇಶದಿಂದ ದೂರದವರೆಗೆ ಪ್ರವಾಸಿಗರು ವೀಕ್ಷಿಸಲು ಬರಬಹುದು. ಅರಣ್ಯ ಪ್ರದೇಶಕ್ಕೆ ಸಾಗಲು ಅವಕಾಶವಿಲ್ಲ. ಪ್ರವಾಸಿ ಕೇಂದ್ರದಲ್ಲಿ ಶಿಬಿರಗಳು, ಸಭೆಗಳು, ವಿಚಾರಗೋಷ್ಠಿಗಳು, ತರಗತಿಗಳು ಮೊದಲಾದವುಗಳನ್ನು ನಡೆಸಲು ಅನುಮತಿ ಇದೆ. ಟೂರಿಸ್ಟ್‌ ಕಾಟೇಜುಗಳಲ್ಲಿ ವಾಸ್ತವ್ಯ ಹೂಡಲು ಅವಕಾಶವಿದೆ. ಅರಣ್ಯ ಪ್ರದೇಶದ ಗಡಿಯವರೆಗೆ ಸಾಗಬಹುದು.

ಬೇಸಗೆಯಲ್ಲಿ ಕಾಡ್ಗಿಚ್ಚು ಸಾಮಾನ್ಯವಾಗಿರುವುದರಿಂದ ರಕ್ಷಣಾ ಕಾರ್ಯ ಕಷ್ಟಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಚಾರಣಿಗರಿಗೆ ಯಾವುದೇ ಅಪಾಯ ಎದುರಾಗಬಾರದೆಂಬ ಕಾರಣಕ್ಕೆ ರಾಣಿಪುರಂನಲ್ಲಿ ಚಾರಣ ನಿಷೇಧಿಸಲಾಗಿದೆ. ರಾಣಿಪುರಂನಲ್ಲಿ ಆಗಾಗ ಕಾಡ್ಗಿಚ್ಚು ಸಾಮಾನ್ಯವಾಗಿದೆ. ರಾಣಿಪುರಂ ಪ್ರವಾಸಿ ಕೇಂದ್ರದಿಂದ ಅರಣ್ಯ ಪ್ರದೇಶದಲ್ಲಿ ಎರಡು ಕಿಲೋ ಮೀಟರ್‌ ದೂರಕ್ಕೆ ಟ್ರಕ್ಕಿಂಗ್‌ ಮೂಲಕ ತಲುಪುವ ಪ್ರವಾಸಿಗರ ಸ್ವರ್ಗವಾಗಿ ಪರಿಣಮಿಸುವ ಮಾಣಿಮಲದಲ್ಲಿ ಹುಲ್ಲು ಒಣಗಿ ನಿಂತಿರುವುದರಿಂದ ಬೆಂಕಿಯ ಕಿಡಿ ತಗುಲಿದರೂ ವ್ಯಾಪಕವಾಗಿ ಬೆಂಕಿ ಹತ್ತಿಕೊಳ್ಳುವ ಸಾಧ್ಯತೆ ಅಧಿಕವಾಗಿದೆ. ಕೆಲವೇ ನಿಮಿಷಗಳಲ್ಲಿ ಬೆಂಕಿ ಹತ್ತಿಕೊಂಡು ಹುಲ್ಲು ಸರ್ವನಾಶವಾಗಲಿದೆ. ಇಂತಹ ಸಂದರ್ಭದಲ್ಲಿ ಚಾರಣಿಗರು ಸಿಕ್ಕಿ ಹಾಕಿಕೊಂಡರೆ ಅವರನ್ನು ರಕ್ಷಿಸುವುದು ಬಹಳಷ್ಟು ಕಷ್ಟ. ಈ ಕಾರಣಕ್ಕೆ ಚಾರಣಕ್ಕೆ ತಾತ್ಕಾಲಿಕ ನಿಷೇಧ  ಹೇರಲಾಗಿದೆ.

ಟಾಪ್ ನ್ಯೂಸ್

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

101

Daali Dhananjay: ಸರಳವಾಗಿ ನೆರವೇರಿತು ಡಾಲಿ – ಧನ್ಯತಾ ನಿಶ್ಚಿತಾರ್ಥ

No support for liquor bandh: Tourism Hotel Owners Association

Liquor: ಮದ್ಯ ಬಂದ್‌ ಗೆ ಬೆಂಬಲವಿಲ್ಲ: ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘ

: ಸಿಎಂ ಸಿದ್ದರಾಮಯ್ಯ

Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು

Shimoga; Omini caught fire while filling with petrol

Shimoga; ಪೆಟ್ರೋಲ್ ಹಾಕುವಾಗ ಹೊತ್ತಿ ಉರಿದ ಓಮಿನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್‌ ಮಗುಚಿ ಇಬ್ಬರು ನಟಿಯರ ಸಾವು

Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್‌ ಮಗುಚಿ ಇಬ್ಬರು ನಟಿಯರ ಸಾವು

3

Kasaragod: ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದಿಂದ ಕಳವು; ಆರೋಪಿಯ ಬಂಧನ

Kumble: ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ

Kumble: ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ

police

Kumbala: ಸಂತ್ರಸ್ತೆಯ ತಾಯಿ ಆತ್ಮಹ*ತ್ಯೆ: ಸಚಿತಾ ರೈ ವಿರುದ್ಧ ಮತ್ತೊಂದು ದೂರು ದಾಖಲು

Arrest

Madikeri: ಕುಶಾಲನಗರ ಕಳವು ಪ್ರಕರಣ: ಇಬ್ಬರ ಬಂಧನ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

2

Thekkatte: ಕುಂಭಾಶಿಯಲ್ಲಿ ಸಿದ್ಧವಾಗಿದೆ ನಂದಿ ದೇಗುಲದ ಬ್ರಹ್ಮರಥ

4(1)

Lupus Nephritis: ಲೂಪಸ್‌ ನೆಫ್ರೈಟಿಸ್‌ ರೋಗಿಗಳಿಗೆ ಒಂದು ಮಾರ್ಗದರ್ಶಿ

Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ

Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.