ಸಮಸ್ಯೆ ಪರಿಹಾರಕ್ಕೆ ಸಿದ್ಧವಾದ ಮೇಲ್ಪರಂಬ ಠಾಣೆ
Team Udayavani, Feb 10, 2019, 12:30 AM IST
ಕಾಸರಗೋಡು: ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಚೆಮ್ನಾಡ್ ಗ್ರಾಮ ಪಂಚಾಯತ್ನ ಮೇಲ್ಪರಂಬದಲ್ಲಿ ನೂತನ ಪೊಲೀಸ್ ಠಾಣೆ ಆರಂಭಗೊಳ್ಳಲಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಠಾಣೆ ಉದ್ಘಾಟಿಸುವರು.
ರಾಜ್ಯ ಸರಕಾರ ಒಂದು ಸಾವಿರ ದಿನ ಪೂರೈಸಿದ ನಿಟ್ಟಿನಲ್ಲಿ ನಡೆಯುವ ಜನಪರ ಉತ್ಸವಗಳ ಅಂಗವಾಗಿ ಈ ಠಾಣೆಯ ಚಾಲನೆ ನಡೆಯಲಿದೆ.ಈ ಮೂಲಕ ಜಿಲ್ಲೆಯಲ್ಲಿ ಮೂರನೇ ಹೈವೇ ಪೊಲೀಸ್ ಠಾಣೆ ಶುಭಾರಂಭ ಕಾಣುತ್ತಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಯಾತ್ರಿಕರಿಗೆ ಪ್ರಯಾಣ ಮಧ್ಯೆ ಯಾವುದಾದರೂ ಸಮಸ್ಯೆ ತಲೆದೋರಿದಲ್ಲಿ ಕಾಸರಗೋಡು ಯಾ ನೀಲೇಶ್ವರ ಠಾಣೆಗಳನ್ನು ಸಂಪರ್ಕಿಸಬೇಕಾಗಿ ಬರುತ್ತಿತ್ತು. ಬಹಳ ಅಂತರದ ಹಿನ್ನೆಲೆಯಲ್ಲಿ ಇದು ಬಹುತೇಕ ಬಾರಿ ಸಮಸ್ಯೆಯಾಗುತ್ತಿತ್ತು. ಮೇಲ್ಪರಂಬ ಠಾಣೆ ಆರಂಭ ಮೂಲಕ ಈ ಸಮಸ್ಯೆ ಬಗೆಹರಿಯಲಿದೆ.ಎರಡು ಅಂತಸ್ತಿನ ಕಟ್ಟಡದಲ್ಲಿ ಈ ಪೊಲೀಸ್ ಠಾಣೆ ಚಟುವಟಿಕೆ ನಡೆಸಲಿದೆ.ಈ ಮೂಲಕ ರಾಷ್ಟ್ರೀಯ ಹೆದ್ದಾರಿ 66ರ ಸಮಸ್ಯೆಗಳ ಬಗೆಹರಿಕೆ ಸಾಧ್ಯ ಎಂದು ಅಧಿಕಾರಿಗಳು ಮತ್ತು ಸಾರ್ವಜನಿಕರು ನಿರೀಕ್ಷಿಸಿದ್ದಾರೆ.
36 ಪೊಲೀಸರು
36 ಪೊಲೀಸರು ಇಲ್ಲಿ 36 ಮಂದಿ ಪೊಲೀಸರು ಕರ್ತವ್ಯದಲ್ಲಿರುವರು. ಒಬ್ಬ ಸರ್ಕಲ್ ಇನ್ಸ್ ಪೆಕ್ಟರ್, ಇಬ್ಬರು ಸಬ್ ಇನ್ಸ್ ಪೆಕ್ಟರ್ಗಳು, ಒಬ್ಬ ಸಹಾಯಕ ಸಬ್ ಇನ್ಸ್ಪೆಕ್ಟರ್, 5 ಮಂದಿ ಹಿರಿಯ ನಾಗರಿಕ ಪೊಲೀಸರು, 20 ಮಂದಿ ನಾಗರಿಕ ಪೊಲೀಸರು, 5 ಮಂದಿ ಮಹಿಳಾ ಪೊಲೀಸರು, ಇಬ್ಬರು ವಾಹನ ಚಾಲಕರು ಇರುವರು17ರಂದು ಪೊಲೀಸ್ ಠಾಣೆಯ ಉದ್ಘಾಟನೆ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.