ಪಾಣಾರ್‌ಕುಳಂನಲ್ಲಿ ನಿರ್ಮಾಣಗೊಳ್ಳಲಿದೆ ಕಾಸ್ರೋಡ್ ಕೆಫೆ
Team Udayavani, Mar 2, 2019, 1:20 AM IST
ಕಾಸರಗೋಡು: ಜಿಲ್ಲೆಯ ಪ್ರವಾಸೋದ್ಯಮ ವಲಯಕ್ಕೆ ಪುನಶ್ಚೇತನ ನೀಡುವ ನಿಟ್ಟಿನಲ್ಲಿ ರೂಪಿಸಲಾದ ಯೋಜನೆ ಕಾಸ್ರೋಡ್ ಕೆಫೆ ಚೆಂಗಳ ಗ್ರಾಮ ಪಂಚಾಯತ್‌ನ ಪಾಣಾರ್‌ಳಂನಲ್ಲೂ ಜಾರಿಗೊಳ್ಳಲಿದೆ.
ಪ್ರವಾಸೋದ್ಯಮ ಉದ್ಯಾನ ಸಹಿತ ಕೇಂದ್ರ ಪಾಣಾರ್‌ಕುಳಂನಲ್ಲಿ ಈ ನಿಟ್ಟಿನಲ್ಲಿ ಸ್ಥಾಪನೆಗೊಳ್ಳಲಿದೆ. ಕಂದಾಯ ಇಲಾಖೆ ಈ ಯೋಜನೆಗಾಗಿ ಪ್ರವಾಸೋ ದ್ಯಮ ಇಲಾಖೆಗೆ ಹಸ್ತಾಂತರಿಸಿದ 50 ಸೆಂಟ್ಸ್ ಜಾಗದಲ್ಲಿ ಚೆಂಗಳ ಗ್ರಾ. ಪಂ.ಸಹಾಯದೊಂದಿಗೆ ಪ್ರವಾಸೋದ್ಯಮ ಉದ್ಯಾನ ನಿರ್ಮಾಣಗೊಳ್ಳಲಿದೆ. ರಾಷ್ಟ್ರೀಯ ಹೆದ್ದಾರಿ ಬದಿ ವಿದೇಶಿ ಪ್ರವಾಸಿಗರನ್ನೂ ಆಕರ್ಷಿಸುವ ನಿಟ್ಟಿನಲ್ಲಿ ಈ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆಯ ಅ ಧಿಕಾರಿಗಳು ತಿಳಿಸಿದರು.
ಮಕ್ಕಳಿಗಾಗಿ ಆಟದ ಮೈದಾನ, ಆ್ಯಂಪಿ ಥಿಯೇಟರ್ ಸಹಿತದ ಟ್ಯೂರಿಸಂ ಹಟ್ ಇಲ್ಲಿ ಸ್ಥಾಪನೆಗೊಳ್ಳಲಿದೆ. ಪಾರ್ಕಿಂಗ್ ಸೌಲಭ್ಯ, ಶೌಚಾಲಯ ಸೌಲಭ್ಯ, ಹೂದೋಟ, ಕಾಲ್ನಡಿಗೆ ಹಾದಿ, ಮಿನಿಮಾಸ್, ಮಕ್ಕಳ ಮನರಂಜನಾ ಸಾಮಾಗ್ರಿಗಳು ಇತ್ಯಾದಿ ಈ ಉದ್ಯಾನ ಯೋಜನೆಯಲ್ಲಿ ಒಳಗೊಂಡಿದೆ ಎಂದು ಅವರು ತಿಳಿಸಿದರು.
ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ಬಾಬು ಅವರ ವಿಶೇಷ ಕಾಳಜಿಯೊಂದಿಗೆ ಜಾರಿಗೊಳಿಸುವ “ಕಾಸೋÅಡ್ ಕೆಫೆ’ ಯೋಜನೆಯನ್ನು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಅನುಷ್ಠಾನಕ್ಕೆ ತರುತ್ತಿದ್ದು, ಮೊದಲ ಸಂಸ್ಥೆ ತಲಪ್ಪಾಡಿಯಲ್ಲಿ ಕೆಲವೇ ದಿನಗಳ ಹಿಂದೆ ಉದ್ಘಾಟನೆಗೊಂಡಿದೆ. ಕುಂಬಳೆ, ಬಟ್ಟತ್ತೂರು, ಪೆರಿಯ, ಚೆಮ್ಮಟ್ಟಂವಯಲ್, ಕಾಲಿಕಡವು ಪ್ರದೇಶಗಳಲ್ಲೂ ಕೆಫೆ ನಿರ್ಮಾಣಗೊಳಿಸುವ ಚಟುವಟಿಕೆಗಳು ತ್ವರಿತಗತಿಯಲ್ಲಿ ನಡೆಯುತ್ತಿವೆ. ಮುಂದಿನ 6 ತಿಂಗಳಲ್ಲಿ ಇವು ಚಟುವಟಿಕೆ ಆರಂಭಿಸುವ ನಿರೀಕ್ಷೆಯಿದೆ ಎಂದು ಅ ಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲೆಯ ಹೆದ್ದಾರಿಗಳ ಮೂಲಕ ಸಾಗುವ ಪ್ರಯಾಣಿಕರಿಗೆ ಅತ್ಯುತ್ತಮ ಗುಣಮಟ್ಟದ ಆಹಾರ, ಪಾನೀಯ ನೀಡಿಕೆ, ವಿಶ್ರಾಂತಿಗೆ ವ್ಯವಸ್ಥೆ ಒದಗಿಸುವಿಕೆ ಇಲ್ಲಿನ ಪ್ರಧಾನ ಉದ್ದೇಶ, ಲಘು ಉಪಾಹಾರ, ವಿಶ್ರಾಂತಿ ಕೊಠಡಿ, ಶೌಚಾಲಯ ಸಹಿತದ ಯೂನಿಟ್‌ಗಳಲ್ಲಿ ಉತ್ತಮ ಪರಿಣತಿ ಪಡೆದ ಸಮವಸ್ತ್ರಧಾರಿ ಸಿಬಂದಿ ಸೇವೆ ನೀಡಲಿದ್ದಾರೆ. ರೆಸ್ಟಾರೆಂಟ್ ನಡೆಸಿ ಅನುಭವ ಹೊಂದಿರುವ ಮಂದಿಗೆ ಕರಾರು ಮೇರೆಗೆ ಈ ಯೂನಿಟ್ ನಡೆಸಲು ಹೊಣೆ ನೀಡಲಾಗುತ್ತದೆ. ಜತೆಗೆ ಇವುಗಳ ಚಟುವಟಿಕೆಗಳ ಮೇಲೆ ಡಿ.ಟಿ.ಪಿ.ಸಿ. ನಿಗಾ ಇರಿಸಲಿದೆ.
ಕಾಮಗಾರಿಗೆ ಚಾಲನೆ
ಚೆಂಗಳ ಗ್ರಾಮ ಪಂಚಾಯತ್‌ನ ಪಾಣಾರ್‌ಕುಳಂನಲ್ಲಿ ನಿರ್ಮಾಣಗೊಳ್ಳುವ ಕಾಸ್ರೋಡ್ ಕೆಫೆ ಪ್ರವಾಸೋದ್ಯಮ ಉದ್ಯಾನ ನಿರ್ಮಾಣ ಸಂಬಂಧ ನಡೆಯುವ ಕಾಮಗಾರಿಗೆ ಶಾಸಕ ಎನ್.ಎ.ನೆಲ್ಲಿಕುನ್ನು ಚಾಲನೆ ನೀಡಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ. ಬಶೀರ್, ಜಿಲ್ಲಾ ಧಿಕಾರಿ ಡಾ| ಡಿ. ಸಜಿತ್ ಬಾಬು,
ಡಿ.ಟಿ.ಪಿ.ಸಿ. ಕಾರ್ಯದರ್ಶಿ ಬಿಜು ರಾಘವನ್ ವರದಿ ವಾಚಿಸಿದರು. ಚೆಂಗಳ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾಹಿನಾ ಸಲೀಂ, ಉಪಾಧ್ಯಕ್ಷೆ ಶಾಂತಕುಮಾರಿ ಟೀಚರ್, ಡಿ.ಟಿ.ಪಿ.ಸಿ. ಪ್ರಬಂಧಕ ಪಿ.ಸುನಿಲ್ ಕುಮಾರ್, ಗ್ರಾಮ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷರಾದ ಎ. ಅಹಮ್ಮದ್ ಹಾಜಿ, ಹಾಜಿರಾ ಮಹಮ್ಮದ್ ಕುಂಞಿ, ಶಾಹಿದಾ ಮಹಮ್ಮದ್, ಜಿಲ್ಲಾ ಪಂಚಾಯತ್ ಸದಸ್ಯ ಮುಂತಾಝ್ ಝಮೀರ, ಖದೀಜಾ ಮಹಮೂದ್, ಪಂಚಾಯತ್ ಮಾಜಿ ಅಧ್ಯಕ್ಷ ಸಿ.ಬಿ. ಅಬ್ದುಲ್ಲ ಹಾಜಿ, ಪಂಚಾಯತ್ ಕಾರ್ಯದರ್ಶಿ ಎಂ. ಸುರೇಂದ್ರನ್, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
ಹಣಕಾಸು ಯೋಜನೆ
ಪ್ರವಾಸೋದ್ಯಮ ಇಲಾಖೆಯ ಎಂಪಾನೆಲ್ಡ್ ಆರ್ಕಿಟೆಕ್ಟ್ ಪಿ.ಸಿ. ರಶೀದ್ ಅವರು ಸಿದ್ಧಪಡಿಸಿದ ಯೋಜನೆ ಪ್ರಕಾರ ನಿರ್ಮಿತಿ ಕೇಂದ್ರ ಈ ಕಾಮಗಾರಿ ನಡೆಸುತ್ತಿದೆ. 1.53 ಕೋಟಿ ರೂ. ವೆಚ್ಚ ನೀರಿಕ್ಷಿಸಲಾಗುತ್ತಿದ್ದು, ಜಿ.ಪಂ. 25 ಲಕ್ಷ ರೂ., ಚೆಂಗಳ ಗ್ರಾ. ಪಂ. 25 ಲಕ್ಷ ರೂ., ಶಾಸಕ ಎನ್.ಎ. ನೆಲ್ಲಿಕುನ್ನು ಅವರ ಸ್ಥಳೀಯ ಅಭಿವೃದ್ಧಿ ನಿ ಧಿಯಿಂದ 5 ಲಕ್ಷ ರೂ. ಮಂಜೂರುಗೊಳಿಸಲು ನಿರ್ಧರಿಸಲಾಗಿದೆ ಎಂದು ಅ ಧಿಕಾರಿಗಳು ಹೇಳಿದರು. ಪ್ರವಾಸೋದ್ಯಮ ಇಲಾಖೆ 98 ಲಕ್ಷ ರೂ. ನೀಡುವ ಕುರಿತು ಮಾತುಕತೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kumbale: ವರ್ಕಾಡಿ ಪ್ಲೈವುಡ್ ಕಾರ್ಖಾನೆಯಲ್ಲಿ ಬೆಂಕಿ ಅನಾಹುತ: ಬೆಂಕಿ: ಕೋಟ್ಯಂತರ ರೂ. ನಷ್ಟ
Kasargod: ಬೆಕ್ಕಿಗಾಗಿ ಬಾವಿಗಿಳಿದ ವಿದ್ಯಾರ್ಥಿಯ ರಕ್ಷಣೆ
Kasaragodu: ಸಿವಿಲ್ ಪೊಲೀಸ್ ಆಫೀಸರ್ ಕೊಲೆ ಪ್ರಕರಣ: ಪತಿಯ ಸೆರೆ
Kasragodu: ನರ್ಸಿಂಗ್ ವಿದ್ಯಾರ್ಥಿನಿ ಸಾವು : ಕ್ರೈಂ ಬ್ರ್ಯಾಂಚ್ ತನಿಖೆ
Court: ಮಾವೋವಾದಿ ಸೋಮನ್ ಕಾಸರಗೋಡು ಕೋರ್ಟಿಗೆ ಹಾಜರು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.