ನಗರದ ಮಧ್ಯದಲ್ಲೊಂದು ರೋಗ ಉತ್ಪಾದನಾ ಕೇಂದ್ರ
Team Udayavani, Jul 5, 2019, 5:36 AM IST
ವಿದ್ಯಾನಗರ: ಮಳೆಗಾಲ ಪ್ರಾರಂಭವಾದಂತೆ ಎಲ್ಲೆಡೆ ಸ್ವಚ್ಛತಾ ಕಾರ್ಯ, ಮಾಹಿತಿ ಶಿಬಿರಗಳನ್ನು ಆಯೋಜಿಸಿ ಜನತೆಗೆ ಜಾಗೃತಿ ಮೂಡಿಸುವ ಮತ್ತು ಮಳೆಗಾಲದ ರೋಗಗಳು ಬಾರದಂತೆ ತಡೆಯಲು ನೆರವಾಗುವ ಸಲಹೆ-ಸೂಚನೆಗಳನ್ನು ಕೊಡುವತ್ತ ಪಂಚಾಯತ್‌ಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹೆಚ್ಚು ಪ್ರಾಮುಖ್ಯವನ್ನು ನೀಡುತ್ತಿದ್ದರೆ ಕಾಸರಗೋಡು ನಗರಸಭೆ ನಗರ ಮಧ್ಯದಲ್ಲೇ ರೋಗ ಉತ್ಪಾದನಾ ಕೇಂದ್ರ ಸೃಷ್ಟಿಯಾಗಿದ್ದರೂ ಮೌನವಾಗಿರುವುದು ಜನರ ಆತಂಕ ಮತ್ತು ಸಿಟ್ಟಿಗೆ ಕಾರಣವಾಗಿದೆ. ನಗರದ ಮೀನು ಮಾರುಕಟ್ಟೆ ಇಂದು ಮೀನಿನೊಂದಿಗೆ ಹತ್ತು ಹಲವು ಕಾಯಿಲೆಗಳನ್ನು ಉಚಿತವಾಗಿ ನೀಡುವ ತಾಣವಾಗಿ ಬದಲಾಗಿದೆ. ಡೆಂಗ್ಯೂ, ಚಿಕೂನ್‌ಗುನ್ಯ ಮುಂತಾದ ಭೀಕರ ರೋಗಗಳು ಮನುಷ್ಯನ ಜೀವಕ್ಕೆ ಸವಾಲಾಗಿರುವ ಸಮಯದಲ್ಲಿ ಸೊಳ್ಳೆಗಳ ಉತ್ಪಾದನಾ ಕೇಂದ್ರವಾದ ಕಾಸರಗೋಡು ಮೀನು ಮಾರುಕಟ್ಟೆ ನೂರಾರು ಸಮಸ್ಯೆಗಳ ತಾಣವಾಗಿದೆ.
ಎಲ್ಲೆಲ್ಲೂ ಮೀನು ತೊಳೆದ ನೀರು
ಮಾರುಕಟ್ಟೆಗೆ ಮೀನು ಹೇರಿ ಬರುವ ಲಾರಿಗಳಿಂದ ಹರಿದುಬರುವ ನೀರು ಮಾರುಕಟ್ಟೆಯಲ್ಲಿ ಹರಿದುಹೋಗುತ್ತದೆ. ಮಾರುಕಟ್ಟೆ ಎತ್ತರದ ಪ್ರದೇಶದಲ್ಲಿದ್ದು ಕೆಳ ಭಾಗದ ರಸ್ತೆಯಲ್ಲಿ ಸಾಗಿ ತಳಭಾಗದಲ್ಲಿ ಸಂಗ್ರಹವಾಗುತ್ತದೆ. ಮಾರಾಟಗಾರರು ಇದರ ನಡುವೆ ಕುಳಿತು ಮೀನು ಮಾರಾಟ ಮಾಡುತ್ತಾರೆ. ಮೀನು ಕೊಳ್ಳಲು ಹೋಗುವವರಿಗೂ ಮೀನಿನ ನೀರು ಉಂಟು ಮಾಡುವ ಸಮಸ್ಯೆ ಅಷ್ಟಿಷ್ಟಲ್ಲ.
ಶೇಖರಣೆಗೊಂಡ ನೀರಿನ ಬಗ್ಗೆ ವ್ಯಾಪಾರಿಗಳು ಮಾತೆತ್ತಿದ್ದರೆ ಎದ್ದು ಹೋಗುವಂತೆ ಹೇಳುವ ದಲ್ಲಾಳಿಗಳ ದರ್ಪದ ಮಾತಿಗೆ ಹೆದರಿ ಅವರೂ ಸುಮ್ಮನಾಗುತ್ತಾರೆ. ಮಾರುಕಟ್ಟೆಯ ಬಳಿ ನೀರು ಹಾದುಹೋಗುವಂತೆ ಚರಂಡಿ ವ್ಯವಸ್ಥೆ ಮಾಡಲಾಗಿದೆ ಯಾದರೂ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯಗಳಿಂದ ಈ ಚರಂಡಿಗಳು ಮುಚ್ಚಿ ಹೋಗಿ ಕೊಳಚೆ ನೀರು ಮಾರ್ಗದಲ್ಲಿಯೇ ತುಂಬಿ ತಗ್ಗು ಪ್ರದೇಶಗಳಲ್ಲಿ, ಹಾದಿಬದಿಯಲ್ಲಿ ಸಂಗ್ರಹವಾಗುತ್ತದೆ. ಈ ನೀರಿನ ತುಂಬಾ ಕಿ‌್ರಮಿಕೀಟಗಳ ನರ್ತನ ಸಾಮಾನ್ಯ ಜನರಲ್ಲಿ ಭಯ ಹುಟ್ಟಿಸುತ್ತದೆ.
ಮಾರ್ಗದಲ್ಲೇ ಮೀನು ಮಾರಾಟ
ವ್ಯವಸ್ಥಿತವಾದ ನಗರಸಭಾ ಮಾರುಕಟ್ಟೆ ಇದ್ದರೂ ಗ್ರಾಹಕರು ಮಾರುಕಟ್ಟೆಯೊಳಗೆ ಬರಲು ಹಿಂದೇಟು ಹಾಕುತ್ತಾರೆ. ಮೀನು ಮಾರಾಟವಾಗುವುದಿಲ್ಲ ಎಂಬ ಆರೋಪ ಹೊರಿಸಿ ಮಾರ್ಗದ ಬದಿಯಲ್ಲೇ ಮೀನು ಮಾರಾಟ ಮಾಡಲಾಗುತ್ತದೆ. ಈ ಮಾರಾಟಗಾರರ ಸುತ್ತಮುತ್ತೆಲ್ಲ ಮೀನಿನ ನೀರು ಹಾಗೂ ಪ್ಲಾಸ್ಟಿಕ್ ಪೊಟ್ಟಣಗಳು ಕೆಟ್ಟ ವಾಸನೆಗೆ ಕಾರಣವಾಗಿವೆ. ಮಾತ್ರವಲ್ಲದೆ ಪಕ್ಕದಲ್ಲಿರುವ ಶೌಚಾಲಯದ ಸುತ್ತ ಮಾಲಿನ್ಯ ರಾಶಿ ಹಾಕಲಾಗಿರುವುದರಿಂದ ಸೊಳ್ಳೆಗಳು ತುಂಬಿ ಶೌಚಾಲಯವನ್ನು ಉಪಯೋಗಿಸಲಾಗದ ಸ್ಥಿತಿ ಉಂಟಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Aranthodu: ಉಡುಪಿಗೆ ಭತ್ತದ ಲೋಡ್ ಸಾಗಿಸುತ್ತಿದ್ದ ವೇಳೆ ಲಾರಿಗೆ ಆಕಸ್ಮಿಕ ಬೆಂಕಿ
Anandapura: ಬಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು
Liquor Sale; ರಾಜ್ಯದಲ್ಲಿ ಒಂದೇ ದಿನ 408 ಕೋಟಿ ರೂ ಮೌಲ್ಯದ ಮದ್ಯ ಮಾರಾಟ ದಾಖಲೆ
S.Korea: ರನ್ ವೇಯಲ್ಲಿ ಸ್ಕಿಡ್ ಆಗಿ ಗೋಡೆಗೆ ಅಪ್ಪಳಿಸಿದ ವಿಮಾನ: ಇಲ್ಲಿದೆ ನೋಡಿ ವಿಡಿಯೋ
ICC: ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಕರ್ನಾಟಕದ ಶ್ರೇಯಾಂಕಾ ಹೆಸರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.