ದೇಶದ ಸಹಕಾರಿ ರಂಗ ವಿಶ್ವಕ್ಕೆ ಮಾದರಿ: ಮೆಹ್ತಾ
Team Udayavani, Feb 24, 2017, 12:18 PM IST
ಬದಿಯಡ್ಕ: ದೇಶದ ಸಮಗ್ರ ಅಭಿವೃದ್ಧಿಗೆ ಸಹಕಾರಿ ವಲಯ ಇಂದು ಅನಿವಾರ್ಯವಾಗಿದ್ದು, ಮುಂದಿನ ದಿನಗಳಲ್ಲಿ ಈ ಬ್ಯಾಂಕ್ ಬಡಜನರಿಗೆ ನೆರವಾಗುವ ರೀತಿಯಲ್ಲಿ ಉತ್ತಮ ಸೇವೆಯನ್ನು ನೀಡಲಿದೆ. ದೇಶದ ಸಹಕಾರಿ ರಂಗ ವಿಶ್ವಕ್ಕೆ ಮಾದರಿಯಾಗಿದೆ ಎಂದು ನವದೆಹಲಿಯ ನ್ಯಾಶನಲ್ ಫೆಡರೇಶನ್ ಆಫ್ ಕೋ-ಆಪರೇಟಿವ್ ಅರ್ಬನ್ ಬ್ಯಾಂಕ್ಸ್ ಚೆಯರ್‌ಮನ್ ಜ್ಯೋತಿಂದರ್ ಮೆಹ್ತಾ ಹೇಳಿದರು.
ಅವರು 1912ರಲ್ಲಿ ಆರಂಭಗೊಂಡ ಕಾಸರಗೋಡು ಕೋ-ಆಪರೇಟಿವ್ ಟೌನ್ ಬ್ಯಾಂಕ್‌ನ ಬದಿಯಡ್ಕ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು.
ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದರು. ರಾಜ್ಯ ಕೋ-ಆಪರೇಟಿವ್ ಬ್ಯಾಂಕ್ ನಿರ್ದೇಶಕ ಬಾಲಕೃಷ್ಣ ವೋಕೂìಡ್ಲು ಎಸ್.ಬಿ. ಅಕೌಂಟ್ಸ್ ಉದ್ಘಾಟಿಸಿದರು. ಸಹಕಾರ ಭಾರತಿ ಅಖೀಲ ಭಾರತೀಯ ಕಾರ್ಯದರ್ಶಿ ನ್ಯಾಯವಾದಿ ಕೆ.ಕರುಣಾಕರನ್ ನಂಬ್ಯಾರ್ ಬ್ಯಾಂಕ್ ಕೌಂಟರ್ ಉದ್ಘಾಟಿಸಿದರು.
ಆರ್‌ಎಸ್‌ಎಸ್ ತಾಲೂಕ್ ಸಂಘ ಚಾಲಕ್ ಜಿ.ಶಿವಕು ಮಾರ್ ಭಟ್ ಸ್ಟ್ರಾಂಗ್ ರೂಂ ಉದ್ಘಾಟಿಸಿದರು. ಬದಿಯಡ್ಕ ನವಜೀವನ ಎಜುಕೇಶನ್ ಸೊಸೈಟಿ ಅಧ್ಯಕ್ಷ ನ್ಯಾಯವಾದಿ ಐ.ವಿ.ಭಟ್ ಸೇಫ್ ಡೆಪೋಸಿಟ್ ಲಾಕರ್ ಉದ್ಘಾಟಿಸಿದರು.
ಕಾಸರಗೋಡು ಬ್ಲಾಕ್ ಪಂಚಾಯತ್ ಸದಸ್ಯರಾದ ಅವಿನಾಶ್ ವಿ.ರೈ, ಎ.ಎಸ್. ಅಹಮ್ಮದ್, ಕಾಸರಗೋಡು ಕೋ-ಆಪರೇಟಿವ್ ಸೊಸೈಟೀಸ್(ಜನರಲ್) ಅಸಿಸ್ಟೆಂಟ್ ರಿಜಿಸ್ಟ್ರಾರ್ ಸುರೇಂದ್ರನ್ ನಾಯರ್ ಎನ್.ಜಿ., ಬದಿಯಡ್ಕ ಗ್ರಾಮ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷ ನ್ಯಾಯವಾದಿ ವೆಂಕಟ್ರಮಣ ಸಿ., ಪೆರಡಾಲ ಎಸ್.ಸಿ. ಬ್ಯಾಂಕ್ ಅಧ್ಯಕ್ಷ ಜಯದೇವ ಖಂಡಿಗೆ, ಪೆರ್ಲ ಎಸ್.ಸಿ. ಬ್ಯಾಂಕ್ ಅಧ್ಯಕ್ಷ ಕೃಷ್ಣ ಕುಮಾರ್ ಎಸ್., ಕ್ಯಾಂಪ್ಕೋ ನಿರ್ದೇಶಕ ಪದ್ಮರಾಜ ಪಟ್ಟಾಜೆ, ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಬದಿಯಡ್ಕ ಘಟಕ ಅಧ್ಯಕ್ಷ ಎಸ್.ಎನ್.ಮಯ್ಯ, ನಿವೃತ್ತ ಪ್ರಾಂಶುಪಾಲ ಎಂ.ನಾರಾಯಣ ಭಟ್ ಶುಭಹಾರೈಸಿದರು.ಬ್ಯಾಂಕ್ ಚೆಯರ್‌ಮನ್ ನ್ಯಾಯವಾದಿ ಎ.ಸಿ. ಅಶೋಕ್ ಕುಮಾರ್ ಸ್ವಾಗತಿಸಿದರು. ಬ್ಯಾಂಕ್‌ನ ಜನರಲ್ ಮೆನೇಜರ್ ಕೆ.ಸದಾಶಿವ ವಂದಿಸಿದರು.
ಚಿತ್ರ: ಫೋಕ್ಸ್ ಸ್ಟಾರ್ ಬದಿಯಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದೂ ಕಾರ್ಯಕರ್ತರ ಪರ ಕಾನೂನು ಪ್ರಕೋಷ್ಠ ಹೋರಾಟ: ಬಿ.ವೈ.ವಿಜಯೇಂದ್ರ
ಇಂದಿರಾ ಗಾಂಧಿ ಸಂವಿಧಾನ ತಿದ್ದುಪಡಿ ಮಾಡಿದ್ದರಿಂದ ದೇಶಕ್ಕೆ ಭಾರೀ ಹಿನ್ನಡೆ: ಕೆ.ಅಣ್ಣಾಮಲೈ
ಕೆಮ್ತೂರು ತುಳು ನಾಟಕ ಸ್ಪರ್ಧೆ: “ಈದಿ’ ಪ್ರಥಮ, “ದಿ ಫೈಯರ್’ ದ್ವಿತೀಯ
Dharmasthala: ಜನಜಾಗೃತಿ ವೇದಿಕೆ ನೂರಾರು ಕವಲಿರುವ ವೃಕ್ಷ: ಡಾ.ಹೇಮಾವತಿ ಹೆಗ್ಗಡೆ
ತುಳುವಿಗೆ ರಾಜ್ಯಭಾಷೆ ಗೌರವ ಪರಿಗಣನೆ; ನರಿಂಗಾನ ಕಂಬಳೋತ್ಸವದಲ್ಲಿ ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.