ಅತೀ ಹಿಂದುಳಿದಿದ್ದ ಪೆರಡಾಲ ಕೊರಗ ಕಾಲನಿ ನವಜೀವನದತ್ತ ದಾಪುಗಾಲು
ಬದಿಯಡ್ಕ ಜನಮೈತ್ರಿ ಪೊಲೀಸ್ , ಸಾಮಾಜಿಕ ಕಾರ್ಯಕರ್ತರ ನೆರವು
Team Udayavani, Nov 24, 2019, 5:11 AM IST
ಬದಿಯಡ್ಕ: ಅತೀ ಹಿಂದುಳಿದ ಪೆರಡಾಲ ಕೊರಗ ಕಾಲನಿಯು ನವಜೀವನದತ್ತ ಕಾಲಿಡುತ್ತಿದೆ. ಪೆರಡಾಲ ನವಜೀವನ ಶಾಲೆಯ ಎನ್.ಎಸ್.ಎಸ್. ವಿದ್ಯಾರ್ಥಿಗಳು, ಎಸ್‌ಪಿಸಿ ವಿದ್ಯಾರ್ಥಿಗಳು, ಬದಿಯಡ್ಕ ಜನಮೈತ್ರಿ ಪೊಲೀಸ್ ಹಾಗೂ ಸಾಮಾಜಿಕ ಕಾರ್ಯಕರ್ತರ ನೇತೃತ್ವದಲ್ಲಿ ವಿದ್ಯುತ್ ಸಂಪರ್ಕವಿರುವ ಕಾಲನಿಯ ಎಲ್ಲಾ ಮನೆಗಳಿಗೆ ಫ್ಯಾನ್ ಹಾಗೂ ಪೆರಡಾಲ ಕಾಲನಿಯಲ್ಲಿರುವ ಏಕೋಪಾಧ್ಯಾಯ ಶಾಲೆಗೆ ಬೆಂಚ್, ಡೆಸ್ಕ್, ಫ್ಯಾನ್ ವಿತರಿಸಲಾಯಿತು. ಬದಿಯಡ್ಕ ಸಿಐ ಅನಿಲ್ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಎನ್.ಎಸ್.ಎಸ್. ಜಿಲ್ಲಾ ಸಂಚಾಲಕ ಹರಿದಾಸ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾಲನಿಯಲ್ಲಿ ಅಸೌಖ್ಯದಲ್ಲಿರುವ ವ್ಯಕ್ತಿಗಳ ಮನೆಗೆ ವಿತರಿಸಿದ ಮಂಚದ ವ್ಯವಸ್ಥೆಯನ್ನು ನವಜೀವನ ಹೆ„ಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲ ಮಾಧವನ್ ಭಟ್ಟಾತ್ತಿರಿ ಹಸ್ತಾಂತರಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ತಂಗಮಣಿ ಟಿ., ಎನ್‌ಎಸ್‌ಎಸ್‌ನ ಶಾಹುಲ್ ಹಮೀದ್, ಮುಹಮ್ಮದ್ ಶಾಹಿದ್ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಊರುಕೂಟದ ಪ್ರಧಾನೆ ವಿಮಲ, ಏಕೋಪಾಧ್ಯಾಯ ಶಾಲೆಯ ಅಧ್ಯಾಪಕ ಬಾಲಕೃಷ್ಣ, ರಾಮ ಬದಿಯಡ್ಕ, ಎಸ್.ಟಿ.ಪ್ರಮೋಟರ್ ಪುಷ್ಪವೇಣಿ, ಅಧ್ಯಾಪಕರಾದ ಉಣ್ಣಿಕೃಷ್ಣನ್, ರಾಜೇಶ್ ಅಗಲ್ಪಾಡಿ, ನಿರಂಜನ ರೈ ಪೆರಡಾಲ, ಕೃಷ್ಣ ಯಾದವ್ ಅಗಲ್ಪಾಡಿ ಉಪಸ್ಥಿತರಿದ್ದರು. ಬದಿಯಡ್ಕ ಠಾಣಾಧಿಕಾರಿ ಅನೀಶ್ ಸ್ವಾಗತಿಸಿ, ಎನ್‌ಎಸ್‌ಎಸ್ ಸಂಚಾಲಕ ಶ್ರೀನಾಥ್ ವಂದಿಸಿದರು. ಅಧ್ಯಾಪಕ ರಾಜೀವನ್ ನಿರೂಪಿಸಿದರು. ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು.
ವಿದ್ಯುತ್ ಸಂಪರ್ಕ ಕಡಿತ ವಿಚಾರವನ್ನು ತಿಳಿದು ಕೂಡಲೇ ಕಾರ್ಯಪ್ರವೃತ್ತರಾದ ಪೆರಡಾಲ ನವಜೀವನ ಶಾಲೆಯ ಎನ್.ಎಸ್.ಎಸ್. ವಿದ್ಯಾರ್ಥಿಗಳು, ಎಸ್‌ಪಿಸಿ, ಬದಿಯಡ್ಕ ಜನಮೈತ್ರಿ ಪೊಲೀಸ್ ಹಾಗೂ ಸಾಮಾಜಿಕ ಕಾರ್ಯಕರ್ತರ ನೇತƒತ್ವ ದಲ್ಲಿ ಕಾಲನಿಯಲ್ಲಿ ಕಡಿತಗೊಳಿಸಲ್ಪಟ್ಟ ವಿದ್ಯುತ್ ಸಂಪರ್ಕವನ್ನು ಮರುಸ್ಥಾಪಿಸಲು ಕ್ರಮಕೈಗೊಃಡರು. ಕೆಲವೊಂದು ಮಂದಿ ಇವರೊಂದಿಗೆ ಜೊತೆಗೂಡಿದರು.
ಮುಂದಿನ ಕಾರ್ಯಯೋಜನೆ
ವಿದ್ಯುತ್ ಇಲ್ಲದ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದು, ಉಪಯೋಗ ಶೂನ್ಯವಾದ ವಾಸವಿಲ್ಲದ ಮನೆಗಳ ದುರಸ್ಥಿಗೆ„ಯುವ ಯೋಜನೆಯಿದೆ. ಇದಕ್ಕಾಗಿ ಎಲ್ಲಾ ರೂಪುರೇಶೆಗಳನ್ನು ಈಗಾಗಲೇ ತಯಾರಿಸಲಾಗಿದೆ.
ವಿದ್ಯುತ್ ಸಂಪರ್ಕ ಮರು ಜೋಡಣೆ
ಬಿಲ್ ಕಟ್ಟದ ಹಿನ್ನೆಲೆಯಲ್ಲಿ ಸಂಪರ್ಕ ವನ್ನು ಅಧಿಕಾರಿ ಗಳು ಕಡಿತಗೊಳಿ ಸಿದ್ದರು. ಸಾಮಾಜಿಕ ಜಾಲತಾಣದ ಮೂಲಕ ತಿಳಿದ ಮುಂಬಯಿಯಲ್ಲಿರುವ ಕೇರಳ ವ್ಯಕ್ತಿಯೊಬ್ಬರು ಬಡ್ಡಿಸಮೇತ 29.762 ರೂ ಕೂಡಲೇ ಆನ್‌ಲೆ„ನ್ ಮೂಲಕ ಕಟ್ಟಿದರು. ನಂತರ ವಿದ್ಯುತ್ ತಲುಪದ ಮನೆಗಳಿಗೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲಾಯಿತು.ಈ ವೇಳೆ ಕಾಲನಿಯ ಮನೆಗಳ ವಯರಿಂಗ್ ಹಾಳಾಗಿತ್ತು. ವಯರಿಂಗ್‌ಗಳನ್ನು ಸರಿ ಪಡಿಸಿ 21 ಮನೆಗಳಿಗೆ ಫ್ಯಾನ್ ನೀಡಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.