“ಫ್ಯಾಶನ್‌ ಹೆಸರಲ್ಲಿ ಸಂಸ್ಕೃತಿಯ ಅಧಃಪತನ’

Team Udayavani, Sep 24, 2019, 5:58 AM IST

fashion

ಪೆರ್ಲ : ಇಂದಿನ ಹೊಸ ತಲೆಮಾರು ಫ್ಯಾಶನ್‌ನ ಹೆಸರಲ್ಲಿ ವ್ಯಾಪಕ ಪ್ರಮಾಣದ ಸಂಸ್ಕೃತಿಯ ಅಧಃಪತನಕ್ಕೆ ಕಾರಣ ವಾಗುವ ಜೀವನ ಕ್ರಮ, ರೀತಿ ರಿವಾಜುಗಳತ್ತ ಮುಖಮಾಡಿರುವುದು ಅಪಾಯ ಕಾರಿಯಾಗಿದೆ. ಸಾಂಸ್ಕೃತಿಕ ಅವನತಿ ಉಂಟಾಗುತ್ತಿರುವುದು ಭೀತಿಯ ನ್ನುಂಟುಮಾಡಿದ್ದು, ಶ್ರದ್ಧಾವಂತ ಸಭ್ಯ ನಾಗರಿಕರು ಜಾಗೃತ ಕಾರ್ಯಕ್ರಮಗಳ ಮೂಲಕ ಮತ್ತೆ ಮೂಲ ಪರಂಪರೆಯನ್ನು ಬೆಂಬಲಿಸುವ ಚಟುವಟಿಕೆಗಳಿಗೆ ಬಲ ತುಂಬಬೇಕು ಎಂದು ಹಿರಿಯ ಸಾಮಾಜಿಕ, ಧಾರ್ಮಿಕ ಮುಖಂಡ ಟಿ.ಆರ್‌.ಕೆ.ಭಟ್‌ ಪೆರ್ಲ ಅವರು ತಿಳಿಸಿದರು.

ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಸಾತ್ವಿಕ-ಧಾರ್ಮಿಕ-ಸಾಂಸ್ಕೃತಿಕ- ಸಾಹಿತ್ಯಿಕ ಕಲಾಸಂಘವ‌ನ್ನು ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಗೊಂದಲಗಳು ಸೃಷ್ಟಿ
ಹಿರಿಯ ಸಾಹಿತಿ ಗೋಪಾಲಕೃಷ್ಣ ಭಟ್‌ ಗೋಳಿತ್ತಡ್ಕ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ “ಆಚರಣೆಗಳಲ್ಲಿ ಭಜನಾ ಸಂಸ್ಕೃತಿ’ ವಿಷಯದ ಬಗ್ಗೆ ಖ್ಯಾತ ಸಂಕೀರ್ತನೆಕಾರ ರಾಮಕೃಷ್ಣ ಕಾಟುಕುಕ್ಕೆ ಅವರು ವಿಶೇಷ ಉಪನ್ಯಾಸ ನೀಡಿದರು. ರಾಜಸ, ತಾಮಸ ಹಾಗೂ ಸಾತ್ವಿಕ ಗುಣಗಳು ಮನುಷ್ಯನ ಜೀವನದ ಮೇಲೆ ಪ್ರಭಾವ ಬೀರುತ್ತವೆೆ. ಆದರೆ ರಾಜಸ ಮತ್ತು ತಾಮಸ ಪ್ರವೃತ್ತಿಗಳೇ ಇಂದು ಅಧಿಕಗೊಂಡಿದ್ದು, ಸಾತ್ವಿಕತೆಯ ಕೊರತೆಯಿಂದ ಗೊಂದಲಗಳು ಸೃಷ್ಟಿ ಯಾಗಿವೆ ಎಂದು ತಿಳಿಸಿದರು. ಜೀವ ನದ ಸಾರ್ಥಕ್ಯವು ಶರಣಾಗತಿಯಲ್ಲಿ ನಿಕ್ಷಿಪ್ತವಾಗಿದ್ದು, ಅಂತಹ ಮನೋಸ್ಥಿತಿ ಕುಂಠಿತಗೊಂಡಿದೆ. ಹೊಸ ತಲೆಮಾರಿನಲ್ಲಿ ಎಲ್ಲಾ ಅರಿವಿನ ವಿಸ್ತಾರತೆ ಇದೆ.

ಆದರೆ ದೇವರ ಸಾಮೀಪ್ಯದ ಕೊರತೆ ಎದ್ದು ಕಾಣುತ್ತಿದೆ ಎಂದು ಕಳಕಳಿ ವ್ಯಕ್ತಪಡಿಸಿದ ಅವರು, ಸಾಂಪ್ರದಾಯಿಕ ಶೈಲಿಯ ಜೀವನ ಕ್ರಮ, ಆಚಾರ ಅನುಷ್ಠಾನಗಳನ್ನು ಅನುಸರಿಸುವುದರಿಂದ ನೆಮ್ಮದಿ ಪ್ರಾಪ್ತವಾಗುವುದೆಂದು ತಿಳಿಸಿದರು.

ಬರಹಗಾರ ಗೆಲ್ಲುತ್ತಾನೆ
ಧಾರ್ಮಿಕತೆ ಮತ್ತು ಸಾಹಿತ್ಯ ವಿಷಯದ ಬಗ್ಗೆ ಲೇಖಕಿ, ಕವಯಿತ್ರಿ ಅಕ್ಷತಾರಾಜ್‌ ಪೆರ್ಲ ಉಪನ್ಯಾಸ ನೀಡಿ, ಧರ್ಮಯುತವಾದ ಅಂತರಂಗದಿಂದ ಹುಟ್ಟುವ ಭಾವನೆಗಳು ಅಕ್ಷರ ರೂಪದಲ್ಲಿ ಜನರನ್ನು ಎಚ್ಚರಿಸಬೇಕು. ಸ್ವಪ್ರಶಂಸೆಯಿಂದ ದೂರ ಉಳಿದು ಬರೆಯುವ ಬರಹಗಾರ ಗೆಲ್ಲುತ್ತಾನೆ ಎಂದು ತಿಳಿಸಿದರು.
ತೇಜಸ್‌ ರೈ ಬಜಕೂಡ್ಲು ಪ್ರಾಸ್ತಾವಿಕ ವಾಗಿ ಮಾತನಾಡಿ, ಸ್ವಾಗತಿಸಿದರು. ಜಯ ಮಣಿಯಂಪಾರೆ ಕಾರ್ಯಕ್ರಮ ನಿರೂಪಿಸಿದರು. ಮಣಿರಾಜ್‌ ವಾಂತಿ ಚ್ಚಾಲ್‌ ಸಂಯೋಜಿಸಿ ದರು. ಬಳಿಕ ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳ ಹಿರಿಯ, ಯುವ ಹಾಗೂ ಉದಯೋನ್ಮುಖ ಕವಿ- ಕವಯತ್ರಿಗಳಿಂದ ಕವಿಗೋಷ್ಠಿ ನಡೆಯಿತು. ಹಿರಿಯ ಸಾಹಿತಿ ಡಾ| ಸುರೇಶ್‌ ನೆಗಳಗುಳಿ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯನ್ನು ಸಾಹಿತಿ ಡಾ| ಎಸ್‌.ಎನ್‌.ಭಟ್‌ ಪೆರ್ಲ ಉದ್ಘಾಟಿಸಿದರು.

ಪರಂಪರೆ ಉಳಿಸಿ
ಯಕ್ಷಗಾನದಲ್ಲಿ ಆಧುನಿಕ ಪ್ರಭಾವ ವಿಷಯದ ಬಗ್ಗೆ ಹಿರಿಯ ಯಕ್ಷಗಾನ ಕಲಾವಿದ ಅಪ್ಪಕುಂಞಿn ಮಣಿಯಾಣಿ ಅವರು ಮಾತನಾಡಿ ಮನಸ್ಸನ್ನು ರಂಜಿಸುವ ಸಾಹಿತ್ಯ ಗಳ ಕೊರತೆ ಇಂದಿದೆ. ಸಾಂಪ್ರದಾ ಯಿಕತೆಯನ್ನು ಮರೆತು ವೈಯಕ್ತಿಕ ವ್ಯಕ್ತಿತ್ವವನ್ನು ಪ್ರಚಾರಪಡಿಸುವ ಗೀಳಿಗೊಳಗಾಗಿ ಕಲಾವಿದರು ಸಹಿತ ಜನ ಸಾಮಾನ್ಯರು ಸಂಸ್ಕೃತಿ, ಪರಂಪರೆಯನ್ನು ಮರೆಯುತ್ತಿದ್ದಾರೆ. ಪರಂಪರೆಯನ್ನು ಉಳಿಸಿ ಬೆಳೆಸು ವಲ್ಲಿ ಆಸಕ್ತರಾಗಬೇಕು ಎಂದರು.

ಟಾಪ್ ನ್ಯೂಸ್

HIGH COURT: ಬಿಎಸ್‌ವೈ ವಿರುದ್ಧದ ಪೋಕ್ಸೋ ಪ್ರಕರಣ: ವಿಚಾರಣೆ ಮುಂದಕ್ಕೆ

HIGH COURT: ಬಿಎಸ್‌ವೈ ವಿರುದ್ಧದ ಪೋಕ್ಸೋ ಪ್ರಕರಣ: ವಿಚಾರಣೆ ಮುಂದಕ್ಕೆ

BSY ಸಿಎಂ ಸ್ಥಾನ ಕಳೆದುಕೊಳ್ಳಲು ರೇವಣ್ಣ ಕಾರಣ: ಜಿಟಿಡಿ ಆರೋಪ

BSY ಸಿಎಂ ಸ್ಥಾನ ಕಳೆದುಕೊಳ್ಳಲು ರೇವಣ್ಣ ಕಾರಣ: ಜಿಟಿಡಿ ಆರೋಪ

Congress Govt.,: ಅಧಿವೇಶನದಲ್ಲಿ ಉ.ಕ.ಕ್ಕೆ ಕೊಟ್ಟ ಹಣದ ಲೆಕ್ಕ ಕೇಳುತ್ತೇವೆ: ಅಶೋಕ್‌

Congress Govt.,: ಅಧಿವೇಶನದಲ್ಲಿ ಉ.ಕ.ಕ್ಕೆ ಕೊಟ್ಟ ಹಣದ ಲೆಕ್ಕ ಕೇಳುತ್ತೇವೆ: ಅಶೋಕ್‌

BJP: ಅಶಿಸ್ತಿನ ವಿರುದ್ಧ ಹೈಕಮಾಂಡ್‌ ಕ್ರಮ ಕೈಗೊಳ್ಳಲಿ: ಡಿವಿಎಸ್‌

BJP: ಅಶಿಸ್ತಿನ ವಿರುದ್ಧ ಹೈಕಮಾಂಡ್‌ ಕ್ರಮ ಕೈಗೊಳ್ಳಲಿ: ಡಿವಿಎಸ್‌

National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ

National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ

Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು

Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು

1-sindu

Badminton; ಸಯ್ಯದ್‌ ಮೋದಿ ಇಂಟರ್‌ನ್ಯಾಶನಲ್‌: ಸಿಂಧು, ಸೆನ್‌ ಕ್ವಾರ್ಟರ್‌ಫೈನಲಿಗೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

HIGH COURT: ಬಿಎಸ್‌ವೈ ವಿರುದ್ಧದ ಪೋಕ್ಸೋ ಪ್ರಕರಣ: ವಿಚಾರಣೆ ಮುಂದಕ್ಕೆ

HIGH COURT: ಬಿಎಸ್‌ವೈ ವಿರುದ್ಧದ ಪೋಕ್ಸೋ ಪ್ರಕರಣ: ವಿಚಾರಣೆ ಮುಂದಕ್ಕೆ

BSY ಸಿಎಂ ಸ್ಥಾನ ಕಳೆದುಕೊಳ್ಳಲು ರೇವಣ್ಣ ಕಾರಣ: ಜಿಟಿಡಿ ಆರೋಪ

BSY ಸಿಎಂ ಸ್ಥಾನ ಕಳೆದುಕೊಳ್ಳಲು ರೇವಣ್ಣ ಕಾರಣ: ಜಿಟಿಡಿ ಆರೋಪ

Congress Govt.,: ಅಧಿವೇಶನದಲ್ಲಿ ಉ.ಕ.ಕ್ಕೆ ಕೊಟ್ಟ ಹಣದ ಲೆಕ್ಕ ಕೇಳುತ್ತೇವೆ: ಅಶೋಕ್‌

Congress Govt.,: ಅಧಿವೇಶನದಲ್ಲಿ ಉ.ಕ.ಕ್ಕೆ ಕೊಟ್ಟ ಹಣದ ಲೆಕ್ಕ ಕೇಳುತ್ತೇವೆ: ಅಶೋಕ್‌

BJP: ಅಶಿಸ್ತಿನ ವಿರುದ್ಧ ಹೈಕಮಾಂಡ್‌ ಕ್ರಮ ಕೈಗೊಳ್ಳಲಿ: ಡಿವಿಎಸ್‌

BJP: ಅಶಿಸ್ತಿನ ವಿರುದ್ಧ ಹೈಕಮಾಂಡ್‌ ಕ್ರಮ ಕೈಗೊಳ್ಳಲಿ: ಡಿವಿಎಸ್‌

National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ

National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.