ಇತಿಹಾಸದಿಂದ ಕಣ್ಮರೆಯಾಗುತ್ತಿರುವ ಅಡ್ಕ ಕೋಟೆ


Team Udayavani, May 3, 2018, 7:00 AM IST

02ksde4.jpg

ಕಾಸರಗೋಡು: ಅಷ್ಟೇನೂ ಪ್ರಚಾರದಲ್ಲಿಲ್ಲದ ಕಾಸರಗೋಡು ಜಿಲ್ಲೆಯ ಹಲವು ಕೋಟೆಗಳು ಇತಿಹಾಸದಿಂದ ಕಣ್ಮರೆಯಾಗುತ್ತಿವೆ. ಈಗಾಗಲೇ ಹಲವು ಕೋಟೆಯ ಬಹುಭಾಗ ಅನ್ಯರ ಸ್ವಾಧೀನವಾಗಿವೆ. ಚರಿತ್ರೆಯ  ಹೆಗ್ಗುರುತುಗಳಾಗಿರುವ ಕೋಟೆಗಳನ್ನು ರಕ್ಷಿಸಿ ಗತ ಕಾಲದ ಇತಿಹಾಸವನ್ನು ಮುಂದಿನ ತಲೆಮಾರಿಗೆ ದಾಟಿಸಬೇಕಾದ ಜವಾಬ್ದಾರಿ ಹೊತ್ತ ಸಂಬಂಧಪಟ್ಟ ಅಧಿಕಾರಿಗಳೇ ಕೋಟೆ ಬಗ್ಗೆ ತಾತ್ಸಾರ ಮನೋಭಾವ ತೋರುತ್ತಿರುವುದರಿಂದಲೇ ಕಾಸರಗೋಡಿನ ಕೋಟೆಗಳೆಲ್ಲ ಅನ್ಯರ ಸ್ವಾಧೀನ ವಾಗುತ್ತಲೇ ಸಾಗುತ್ತಿದೆ. ಇಂತಹ ಕೋಟೆಗಳ ಲ್ಲೊಂದು ಬಂದ್ಯೋಡ್‌ ಅಡ್ಕ ಕೋಟೆ. ಇದೀಗ ಈ ಕೋಟೆ ಯನ್ನು ಅಭಿವೃದ್ಧಿಪಡಿಸಿ ಪ್ರವಾಸಿ ಕೇಂದ್ರ ವನ್ನಾಗಿ ಪರಿವರ್ತಿಸಲು ಸಾಧ್ಯವಿರುವ ಕೇಂದ್ರವಾಗಿದೆ ಎಂದು ತಹಶೀಲ್ದಾರ್‌ ವರದಿ ಸಲ್ಲಿಸಿದ್ದಾರೆ.

ಕಾಸರಗೋಡು ಜಿಲ್ಲಾಧಿಕಾರಿ ಕೆ. ಜೀವನ್‌ಬಾಬು ಅವರ ನಿರ್ದೇಶದಂತೆ  ಸಮರ್ಪಿಸಿದ ವರದಿಯಲ್ಲಿ ಈ ಬಗ್ಗೆ ಸ್ಪಷ್ಟ ಮಾಹಿತಿ ಇದೆ. ಶಿರಿಯ ಗ್ರಾಮದಲ್ಲಿರುವ ಈ ಕೋಟೆ ಸುಮಾರು ಆರು ಎಕರೆ ಪ್ರದೇಶದಲ್ಲಿ ಚಾಚಿಕೊಂಡಿದೆ. ಕಂದಾಯ ಇಲಾಖೆಯ ಸ್ವಾಧೀನದಲ್ಲಿರುವ ಈ ಕೋಟೆಯನ್ನು ಅಭಿವೃದ್ಧಿ ಪಡಿಸಿ ಪ್ರವಾಸಿ ಕೇಂದ್ರವನ್ನಾಗಿ ಮಾಡಬಹುದು ಎಂಬುದಾಗಿ ವರದಿಯಲ್ಲಿ ಹೇಳಿದೆ.

ಅಡ್ಕ ಕೋಟೆಯನ್ನು ಸಮೀಪದ ಹಿನ್ನೀರು ಪ್ರದೇಶಗಳನ್ನು ಮತ್ತು ಇತರ ಕೋಟೆಗಳನ್ನು ಜತೆಗೂಡಿಸಿ ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿ ಪಡಿಸಬೇಕೆಂದು ಕೋಟೆ ಸಂರಕ್ಷಣೆ ಸಮಿತಿ ಪದಾಧಿಕಾರಿಗಳು ಕಂದಾಯ ಸಚಿವ ಇ. ಚಂದ್ರಶೇಖರನ್‌ ಅವರಿಗೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಸಚಿವರು ಜಿಲ್ಲಾಧಿಕಾರಿಗಳಿಂದ ವರದಿ ಕೇಳಿದ್ದರು. ಇದರಂತೆ ತಹಶೀಲ್ದಾರ್‌ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.

ಇತಿಹಾಸದ ಮೈಲುಗಲ್ಲು: ಶತಮಾನಗಳ ಇತಿಹಾಸವಿರುವ 6.07 ಎಕರೆ ವಿಸ್ತೀರ್ಣದಲ್ಲಿರುವ ಬಂದ್ಯೋಡ್‌ ಸಮೀಪದ ಅಡ್ಕ ಕೋಟೆ ಅಷ್ಟೇನೂ ಪ್ರಚಾರದಲ್ಲಿಲ್ಲದಿದ್ದರೂ ಇತಿಹಾಸದ ಮೈಲುಗಲ್ಲು ಎಂಬುದರಲ್ಲಿ ಎರಡು ಮಾತಿಲ್ಲ. ಇಕ್ಕೇರಿ ರಾಜ ವಂಶಜರ ಶೌರ್ಯ ಸಾಹಸದ ಪ್ರತೀಕವಾಗಿರುವ ಅಡ್ಕ ಕೋಟೆಯ ಬಹುಪಾಲು ಭೂಮಿ ಅನ್ಯರ ಸ್ವಾಧೀನವಾಗಿದೆ. ಬಂದ್ಯೋಡ್‌ ಪೇಟೆಯಿಂದ ಸುಮಾರು ಒಂದೂವರೆ ಕಿಲೋ ಮೀಟರ್‌ ದೂರದ ವಳಯಂ ರಸ್ತೆಯಲ್ಲಿ ಇತಿಹಾಸ ಪ್ರಸಿದ್ಧವಾದ ಅಡ್ಕ ಕೋಟೆ ಇದೆ. ಕೋಟೆಯ ಒಂದೊಂದು ಕಲ್ಲುಗಳು ಒಂದೊಂದು ಇತಿಹಾಸವನ್ನು ಹೇಳುತ್ತವೆ. ಈ ಕಲ್ಲುಗಳು ನೆಲಕಚ್ಚಿದ್ದು, ಹಲವು ಕಲ್ಲುಗಳು ಕೋಟೆಯಿಂದಲೇ ಕಣ್ಮರೆಯಾಗಿವೆೆ. ಶಿರಿಯ ಕೋಟೆ ಎಂದು ಕರೆಯಲ್ಪಡುವ ಈ ಕೋಟೆ ಶಿರಿಯಾ ಗ್ರಾಮದ ಆರ್‌.ಎಸ್‌.ನಂಬ್ರ 130ರಲ್ಲಿ 6.7 ಎಕರೆ ಸ್ಥಳದಲ್ಲಿ ವಿಸ್ತರಿಸಿಕೊಂಡಿದೆ.ಕಾಸರಗೋಡು ಜಿಲ್ಲೆ ಕೋಟೆಗಳ ನಾಡು. ಜಿಲ್ಲೆಯ ಅಲ್ಲಲ್ಲಿ ಕೋಟೆಗಳು ಇದ್ದರೂ ಅವುಗಳಲ್ಲಿ ಬಹುತೇಕ ಕೋಟೆಗಳು 

ಶೋಚನೀಯ ಸ್ಥಿತಿಯಲ್ಲಿವೆ. ಇಲ್ಲವೆ ಅನ್ಯರ ಪಾಲಾಗಿವೆ. ಇಂತಹ ಕೋಟೆಗಳ ಸಾಲಿ ನಲ್ಲಿರುವ ಅಡ್ಕ ಕೋಟೆಯನ್ನು ಅಭಿವೃದ್ಧಿಪಡಿಸಿ ಪ್ರವಾಸಿಗಳ ಕೇಂದ್ರವನ್ನಾಗಿ ಬದಲಾಯಿಸಲು ಸಾಕಷ್ಟು ಅವಕಾಶಗಳಿದ್ದರೂ ಸಂಬಂಧಪಟ್ಟವರು ಈ ಬಗ್ಗೆ ಚಿಂತಿಸಿಲ್ಲ. ಕೋಟೆ ಸುತ್ತ ಕಾಡು ಬೆಳೆದಿರುವುದರಿಂದ ಕೋಟೆ ಇರುವ ಬಗ್ಗೆ ಯಾರ ಗಮನಕ್ಕೂ ಬರುವುದಿಲ್ಲ. ಬತ್ತೇರಿ ಮತ್ತು ಬುರುಜುಗಳು ಕೆಲವಿದ್ದರೂ ಅವುಗಳನ್ನು ಕಾಡು ಆವರಿಸಿಕೊಂಡಿದ್ದು, ಕೋಟೆಯೊಳಗೆ ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಪ್ರವೇಶಿಸಬೇಕೆಂದಿದ್ದರೆ ಹರಸಾಹಸ ಮಾಡಬೇಕು.

ಕಣ್ಣೂರು ವಿಶ್ವವಿದ್ಯಾಲಯದ ಕ್ಯಾಂಪಸ್‌ ಕೋಟೆ ಪರಿಸರದಲ್ಲಿ ಸ್ಥಾಪಿಸಲು 2009 ರಲ್ಲಿ ಶಿಫಾರಸು ಮಾಡಲಾಗಿತ್ತು. ಆದರೆ ಈ ಉದ್ದೇಶ ಈವರೆಗೂ ಈಡೇರಿಲ್ಲ. ಸರಕಾರಿ ಯೋಜನೆಗಳೆಲ್ಲವೂ ಹೀಗೆ. ಯೋಜನೆಗಳು ಘೋಷಣೆಯಾಗುತ್ತವೆ. ಆದರೆ ಈ ಘೋಷಣೆಗಳು ಯಾರಿಗೂ ತಿಳಿಯದಂತೆ ನೆಲಕಚ್ಚುತ್ತದೆ. ಇಲ್ಲಿ ಕೂಡ ಇದೇ ಸಂಭವಿಸಿದೆ. ಕಾಸರಗೋಡು ಕೋಟೆ ಭೂ ಮಾರಾಟದ ಹಿನ್ನೆಲೆಯಲ್ಲಿ ಭಾರೀ ಸುದ್ದಿಯಾಗಿರುವಂತೆ ಅಡ್ಕ ಕೋಟೆ ಯಾರ ಕಣ್ಣಿಗೂ ಬೀಳದೆ ಇತಿಹಾಸದಿಂದ ಭೂಗತವಾಗುತ್ತಿದೆ.
ಕೋಟ್ಯಂತರ ರೂ. ಬೆಲೆಬಾಳುವ ಅಡ್ಕ ಕೋಟೆಯ ಬಹುಪಾಲು ಅನ್ಯರ ಪಾಲಾ ಗಿದೆ. ಇತಿಹಾಸದ ಹೆಗ್ಗುರುತುಗಳಾಗಿರುವ ಕೋಟೆಗಳನ್ನು ರಕ್ಷಿಸಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕಾದುದು ಅನಿವಾರ್ಯವಾಗಿದ್ದರೂ, ಆರ್ಕಿಯೋಲಜಿಕಲ್‌ ಸರ್ವೇ ಆಫ್‌ ಇಂಡಿಯಾ ಇಲಾಖೆಗೆ ಕಾಸರಗೋಡು ಜಿಲ್ಲೆಯಲ್ಲಿ ಅಧಿಕಾರಿಗಳಿಲ್ಲ. ಈ ಕಾರಣದಿಂದ ಕಾಸರಗೋಡಿನ ಕೋಟೆಗಳೆಲ್ಲ ಸಂರಕ್ಷಿಸಲಾಗದೆ ಬಹುತೇಕ ಕೋಟೆಗಳು ಅನ್ಯರ ಸ್ವಾಧೀನವಾಗುತ್ತಿವೆ. ಇಲ್ಲವೇ ಕೋಟೆಗಳ ಕಲ್ಲುಗಳು ಒಂದೊಂದಾಗಿ ಕಣ್ಮರೆಯಾಗುತ್ತಿವೆ. ಕಾಸರಗೋಡು ಜಿಲ್ಲೆಯಲ್ಲಿ ಕೋಟೆಗಳನ್ನು ಸಂರಕ್ಷಿಸಲು ಸಂಬಂಧಪಟ್ಟ ಇಲಾಖೆಗಳೇ ಇಲ್ಲದಿರುವುದರಿಂದ ಕಾಸರಗೋಡಿನ ಕೋಟೆಗಳೆಲ್ಲ ಮುಂದಿನ ದಿನಗಳಲ್ಲಿ ಕಾಣಸಿಗದು. ಇಂತಹ ಕೋಟೆಗಳ ಸಾಲಿಗೆ ಅಡ್ಕ ಕೋಟೆ ಸೇರದಿರಲಿ.

ಈಗಲಾದರೂ ಕೋಟೆ ರಕ್ಷಿಸೋಣ: ಕಾಸರಗೋಡು ಹೃದಯ ಭಾಗದಲ್ಲಿರುವ ಕೋಟ್ಯಂತರ ರೂ. ಮೌಲ್ಯದ ಇತಿಹಾಸ ಪ್ರಸಿದ್ಧ ಕಾಸರಗೋಡು ಕೋಟೆಯ ಭೂ ಮಾರಾಟದಿಂದ ಕಾಸರಗೋಡು ಕೋಟೆ ಎಲ್ಲರ ಗಮನ ಸೆಳೆದಿದ್ದು, ಇದೇ ಪರಿಸ್ಥಿತಿ ಗಮನಕ್ಕೆ ಬಾರದ ಕೋಟೆಗಳಿಗೆ ಬಾರದಿರಲಿ ಎಂಬುದು ಪ್ರಾಚ್ಯವಸ್ತುಗಳ ಬಗ್ಗೆ ವಿಶೇಷ ಆಸಕ್ತಿಯುಳ್ಳ ಅಭಿಮಾನಿಗಳ ಕೋರಿಕೆಯಾಗಿದೆ. ಅಡ್ಕ ಕೋಟೆಯೂ ಇದೇ ರೀತಿಯಾಗಿ ಅನ್ಯರಿಗೆ ಮಾರಾಟ (!)ವಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಸಂಬಂಧಪಟ್ಟ ಇಲಾಖೆಗೆ ಸೇರಿದೆ. ಈ ಜವಾಬ್ದಾರಿಯನ್ನು ಚಾಚು ತಪ್ಪದೇ ನಿರ್ವಹಿಸಬಹುದೇ ಎಂಬುದು ಕಾಲವೇ ನಿರ್ಣಯಿಸಲಿದೆ.

ಕಾಸರಗೋಡು ಕೋಟೆ ಭೂ ಮಾರಾಟದಿಂದ ಬಹಳಷ್ಟು ಸುದ್ದಿಯಾಯಿತು. ಈ ಗತಿ ಅಡ್ಕ ಕೋಟೆಗೆ ಬಾರದಿರಲಿ. ಈ ಕೋಟೆಯನ್ನು ಸಂರಕ್ಷಿಸುವ ಮತ್ತು ಅಭಿವೃದ್ಧಿ ಪಡಿಸುವ ಮೂಲಕ ಜನರ ಗಮನ ಸೆಳೆಯಬೇಕು. ಪ್ರವಾಸಿಗಳ ಕೇಂದ್ರವನ್ನಾಗಿಸುವ ಮೂಲಕ ಪ್ರಸಿದ್ಧವಾಗಬೇಕು. ಕೋಟೆ ಭೂಮಿಯ  ಮಾರಾಟದಿಂದಲ್ಲ (!).

ಶೋಚನೀಯ ಸ್ಥಿತಿಯಲ್ಲಿರುವ  ಕೋಟೆ
ಆರ್ಕಿಯೋಲಜಿಕಲ್‌ ಸರ್ವೇ ಆಫ್‌ ಇಂಡಿಯಾ ಇದರ ಸ್ವಾಧೀನದಲ್ಲಿರುವ ಅಡ್ಕ ಕೋಟೆಯ ಬಹುಭಾಗ ಕುಸಿದು ಬಿದ್ದಿದ್ದು, ಶೋಚನೀಯ ಸ್ಥಿತಿಯಲ್ಲಿದೆ. ಅಲ್ಲಲ್ಲಿ ಮುರಿದು ಬಿದ್ದ ಬತ್ತೇರಿ, ಬುರುಜುಗಳು ಐತಿಹಾಸಿಕ  ಮಹತ್ವದ ಸಾಕ್ಷಿಗಳಾಗಿವೆ.  ಇಕ್ಕೇರಿ ರಾಜವಂಶದ  ಶೌರ್ಯಕ್ಕೆ  ಹೆಸರಾದ ಶಿವಪ್ಪ ನಾಯಕನ ಕಾಲದಲ್ಲಿ ಈ ಕೋಟೆಯನ್ನು ನಿರ್ಮಿಸಲಾಗಿದೆ. ಆದರೆ ಶತಮಾನಗಳ ಹಳಮೆಯಿರುವ ಈ ಕೋಟೆಯನ್ನು ರಕ್ಷಿಸಲು ಆರ್ಕಿಯೋಲಜಿಕಲ್‌ ವಿಭಾಗವಾಗಲೀ, ಕಂದಾಯ ವಿಭಾಗವಾಗಲೀ ಈ ವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಬಹುದಾದ ಅಡ್ಕ ಕೋಟೆ ದಿನದಿಂದ ದಿನಕ್ಕೆ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಲೇ ಇದೆ. ದಿನಾ ಕೋಟೆಯ ಭಾಗಗಳು ಅನ್ಯರ ಸ್ವಾಧೀನವಾಗುತ್ತಲೇ ಇವೆ. ಇದು ಹೀಗೇ ಮುಂದುವರಿದರೆ ಕೆಲವೇ ವರ್ಷಗಳಲ್ಲಿ ಇಲ್ಲಿ ಕೋಟೆ ನೆಲೆಗೊಂಡಿತ್ತು ಎಂಬುದಕ್ಕೆ ಯಾವುದೇ ಸಾಕ್ಷಿಗಳು ಉಳಿಯುವುದಿಲ್ಲ.

– ಪ್ರದೀಪ್‌ ಬೇಕಲ್‌

ಟಾಪ್ ನ್ಯೂಸ್

Sabarimala Virtual Queue Booking Limit Increase

Kerala govt: ಶಬರಿಮಲೆ ವರ್ಚುವಲ್‌ ಕ್ಯೂ ಬುಕ್ಕಿಂಗ್‌ ಮಿತಿ ಹೆಚ್ಚಳ

UP-Jhansi

Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು

PM-Nigirya

G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್‌, ಗಯಾನಾ ಪ್ರವಾಸ ಶುರು

Chattisgadh-Petrol

Chhattisgarh: ನೀರಿನ ಬಾವೀಲಿ ಪೆಟ್ರೋಲ್‌: ಸಂಗ್ರಹಕ್ಕೆ ಮುಗಿಬಿದ್ದ ಜನ

Manipu: ಸಿಎಂ ಬಿರೇನ್‌ ಸಿಂಗ್‌ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ

Manipur: ಸಿಎಂ ಬಿರೇನ್‌ ಸಿಂಗ್‌ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ

DK-Shivakumar

Racial Remark: ಕುಮಾರಸ್ವಾಮಿಯವರ “ಕರಿಯ” ಎಂದದ್ದು ತಪ್ಪು: ಡಿ.ಕೆ.ಶಿವಕುಮಾರ್‌

MNG-hosp

Mangaluru: ವೆನ್ಲಾಕ್‌ ಆಸ್ಪತ್ರೆ 10 ಕೋಟಿ ರೂ. ವೆಚ್ಚದಲ್ಲಿ ಆಧುನೀಕರಣ: ಸಚಿವ ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್‌ ಮಗುಚಿ ಇಬ್ಬರು ನಟಿಯರ ಸಾವು

Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್‌ ಮಗುಚಿ ಇಬ್ಬರು ನಟಿಯರ ಸಾವು

3

Kasaragod: ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದಿಂದ ಕಳವು; ಆರೋಪಿಯ ಬಂಧನ

Kumble: ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ

Kumble: ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ

police

Kumbala: ಸಂತ್ರಸ್ತೆಯ ತಾಯಿ ಆತ್ಮಹ*ತ್ಯೆ: ಸಚಿತಾ ರೈ ವಿರುದ್ಧ ಮತ್ತೊಂದು ದೂರು ದಾಖಲು

Arrest

Madikeri: ಕುಶಾಲನಗರ ಕಳವು ಪ್ರಕರಣ: ಇಬ್ಬರ ಬಂಧನ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Sabarimala Virtual Queue Booking Limit Increase

Kerala govt: ಶಬರಿಮಲೆ ವರ್ಚುವಲ್‌ ಕ್ಯೂ ಬುಕ್ಕಿಂಗ್‌ ಮಿತಿ ಹೆಚ್ಚಳ

UP-Jhansi

Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು

PM-Nigirya

G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್‌, ಗಯಾನಾ ಪ್ರವಾಸ ಶುರು

Chattisgadh-Petrol

Chhattisgarh: ನೀರಿನ ಬಾವೀಲಿ ಪೆಟ್ರೋಲ್‌: ಸಂಗ್ರಹಕ್ಕೆ ಮುಗಿಬಿದ್ದ ಜನ

Manipu: ಸಿಎಂ ಬಿರೇನ್‌ ಸಿಂಗ್‌ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ

Manipur: ಸಿಎಂ ಬಿರೇನ್‌ ಸಿಂಗ್‌ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.