ಕುಟುಂಬಕ್ಕೆ ಬೇಕಿದೆ ಭರವಸೆಯ ಬೆಳಕು,ನಿಶ್ಶಕ್ತನಿಗೆ ಬೇಕಿದೆ ಸಾಂತ್ವನ


Team Udayavani, Apr 8, 2018, 7:00 AM IST

Krishnayya-Ballal.jpg

ಕಳೆದ ಹನ್ನೆರೆಡು ವರ್ಷಗಳಿಂದ ಹಾಸಿಗೆ ಹಿಡಿದಿರುವ ಕೃಷ್ಣಯ್ಯ ಬಲ್ಲಾಳ್‌ ಅವರಿಗೆ ಸಮಾಜಮುಖೀಗಳ ಸಹಾಯ ಹಸ್ತದ ಜರೂರಿದೆ. ಸಾಂತ್ವನ ನೆರವಿನ ಅಗತ್ಯವಿದೆ. ತಜ್ಞ ವೈದ್ಯರನ್ನು  ಸಂಪರ್ಕಿಸಿದಲ್ಲಿ ಅವರ ಆರೋಗ್ಯದಲ್ಲಿ ಸುಧಾರಣೆ ಕಾಣಬಹುದೆಂಬ ಭರವಸೆಯಿದೆ. ಪ್ರಸ್ತುತ ಸರಕಾರವು ಅಶಕ್ತರ ಬಾಳಿನ ಬೆಳಕಾಗಬೇಕು. ಶ್ರಮ ಜೀವನದ ಪ್ರತೀಕವಾದ ಕೃಷ್ಣಯ್ಯನಂತಹ ವ್ಯಕ್ತಿಗಳ ಜೀವನದಲ್ಲಿ ಹೊಸ ಆಶಾಭಾವ ಸೃಷ್ಟಿಯಾಗಬೇಕು. ಈ ಹಿಂದೆ ಕೃಷ್ಣಯ್ಯರನ್ನು ಸಮೀಪದ ದೇರಳಕಟ್ಟೆ ಆಸ್ಪತ್ರೆಗೆ ಕೊಂಡೊಯ್ದು ಆರೋಗ್ಯ ತಪಾಸಣೆ ನಡೆಸುವ ಬಗ್ಗೆ ಕುಟುಂಬ ವರ್ಗದವರಲ್ಲಿ ಮಾತನಾಡಿದ್ದೇನೆ. ಕೃಷ್ಣಯ್ಯ ಬಲ್ಲಾಳ್‌ ಮುಂಚಿನಂತೆ ಎದ್ದು ನಿಂತು ಅವರ ಕೆಲಸ ಕಾರ್ಯವನ್ನುನಿರ್ವ ಹಿಸುವಂತಾದಲ್ಲಿ ಕುಟುಂಬ ವರ್ಗವು ಸಂತಸ ಪಟ್ಟಿತು.

ಉಪ್ಪಳ: ಶ್ರಮ ಜೀವನವನ್ನೇ ಜೀವನದ ಪ್ರಮುಖ ಗುರಿಯಾಗಿಸಿ ಜೀವನದ ಏಳಿಗೆಯನ್ನು ಬಯಸುವ ಮಂದಿ ಹಲವರಿದ್ದಾರೆ. ಆದರೆ ಕೆಲ ಸಮಯ ಜೀವಕ್ಕೆ ಅಪಾಯ ಬಂದ ಸಂದರ್ಭ ಅದನ್ನುಎದುರಿಸಲು ಅತೀ ಅಗತ್ಯವಾದ ಆರ್ಥಿಕ ಸದೃಢತೆ ಇಲ್ಲವಾದಲ್ಲಿ ಅಂತಹವರ ಬವಣೆ ಹೇಳ ತೀರದು.ಪೈವಳಿಕೆ ಕಾಯರಕಟ್ಟೆ ನಿವಾಸಿ 40 ವರ್ಷ ವಯಸ್ಸಿನ ಕೃಷ್ಣಯ್ಯ ಬಲ್ಲಾಳ್‌ ಕಳೆದ ಒಂದು ದಶಕದಿಂದ ಹಾಸಿಗೆ ಹಿಡಿದಿದ್ದು ಆರ್ಥಿಕ ಸಂಕಷ್ಟದ ಮಧ್ಯೆ ಆರೋಗ್ಯವನ್ನು ಸುಧಾರಿಸಿಕೊಳ್ಳಲಾಗದೆ ಸಂಕಷ್ಟಮಯ ಜೀವನವನ್ನು ಎದುರಿಸುತ್ತಿದ್ದಾರೆ.

12 ವರ್ಷಗಳ ಹಿಂದೆ ಶ್ರಮ ಜೀವನದ ಕೂಲಿ ಕಾರ್ಮಿಕ ವೃತ್ತಿ ನಿರ್ವಹಿಸುತ್ತಿದ್ದ ಕೃಷ್ಣಯ್ಯ ಬಲ್ಲಾಳ್‌ ತೆಂಗಿನ ಮರದಿಂದ ಬಿದ್ದು ಬೆನ್ನು ಮೂಳೆ ಮುರಿತಕ್ಕೊಳಗಾಗಿದ್ದರು. ಹಲವು ಆಸ್ಪತ್ರೆ, ವೈದ್ಯರು, ಚಿಕಿತ್ಸಾಲಯಗಳನ್ನು ಕಂಡರು ಪ್ರಯೋಜನವಾಗದೆ, ಆರ್ಥಿಕವಾಗಿ ಆಧಾರಸ್ತಂಭವೂ ಇಲ್ಲದೆ, ಹಿಂದಿದ್ದ ತೋಳ್ಬಲದ ಶಕ್ತಿಯನ್ನು ಕಾಣದೆ ಹಾಸಿಗೆ ಹಿಡಿಯುವಂತಾಗಿದೆ. ಮನೆಯಲ್ಲಿ ತಾಯಿ ಲಕ್ಷ್ಮೀ ಅಮ್ಮ ಮಾತ್ರವಿದ್ದು ಮಗನ ಔಷಧೋಪಚಾರ ಸಹಿತ ಮನೆಯ ಇತರ ಖರ್ಚು ವೆಚ್ಚಗಳ ಬಗ್ಗೆ ಚಿತ್ತ ಹರಿಸಬೇಕಾದ ದುಃಸ್ಥಿತಿಯು ಎದುರಾಗಿದೆ. ತಂದೆ ಆದಿತ್ಯ ಬಲ್ಲಾಳ್‌ ವರ್ಷಗಳ ಹಿಂದೆ ಅಸುನೀಗಿದ್ದು, ಕುಟುಂಬ ನಿರ್ವಹಣೆಯ ಸಂಪೂರ್ಣ ಭಾರವು ತಾಯಿ ಲಕ್ಷ್ಮೀ ಅಮ್ಮನ ಹೇಗಲ ಮೇಲಿದೆ.

ಬೆನ್ನಿನ ಮೂಳೆ ಮುರಿತಕ್ಕೊಳಗಾದ ಪ್ರಥಮ ಎರಡು ವರ್ಷಗಳ ಕಾಲ ಮಗ ಸಂಪೂರ್ಣ ಗುಣಮುಖನಾಗಬಹುದು ಎಂಬ ಆಶಾಭಾವ ಹೊಂದಿದ್ದ ಮನೆ ಮಂದಿ ಹಲವು ಲಕ್ಷಗಳನ್ನು ವ್ಯಯಿಸಿ, ವೈದ್ಯ ತಪಾಸಣೆ ಸಹಿತ ದುಬಾರಿ ಶಸ್ತ್ರ ಕ್ರಿಯೆಗೂ ಅಣಿಯಾಗಿದ್ದರು. ಆದರೆ ಮಗ ಕೃಷ್ಣಯ್ಯ ಬಲ್ಲಾಳ್‌ ಆರೋಗ್ಯ ಸುಧಾರಿಸದ ಕಾರಣ ಇಳಿ ವಯಸ್ಸಿನ ತಾಯಿ ಲಕ್ಷ್ಮೀಅಮ್ಮ ಅವರು ಹತಾಶರಾಗಿದ್ದಾರೆ. ಕೇರಳ ಸರಕಾರದ ಆರೋಗ್ಯ ಸೇವಾ ವಿಭಾಗದ ಅ ಧೀನದಲ್ಲಿರುವ ಕಾಸರಗೋಡು ಜಿಲ್ಲಾ ಅಶಕ್ತರ ಮಂಡಳಿ, ಜನರಲ್‌ಆಸ್ಪತ್ರೆ ಕಾಸರಗೋಡು ಇದರಿಂದ ಕೃಷ್ಣಯ್ಯ ಬಲ್ಲಾಳ್‌ ಅವರಿಗೆ ಶಾರೀರಿಕ ಅಸ್ವಸ್ಥನಾಗಿದ್ದಾನೆ. ಚಲನಶಕ್ತಿಯನ್ನು ಕಳೆದುಕೊಂಡಿದ್ದಾನೆ ಎಂಬ ಸರ್ಟಿಫಿಕೆಟ್‌ ಲಭ್ಯವಾಗಿದೆ. ತಿಂಗಳಿಗೊಮ್ಮೆ ಅಶಕ್ತನೆಂಬ ಯಾದಿಯಲ್ಲಿ ಕಿಂಚಿತ್ತು ಮಾಸಿಕ ಪಿಂಚಣಿ ಲಭಿಸುತ್ತಿದ್ದರೂ, ಪೂರ್ಣಗುಣಮುಖರಾಗದೆ ಹಾಸಿಗೆ ಹಿಡಿದ ಸ್ಥಿತಿಯಲ್ಲಿರುವ ಕೃಷ್ಣಯ್ಯ ಅವರ ಜೌಷಧ,ಆರೋಗ್ಯ ತಪಾಸಣೆಗೆ ಹಣ ಸಾಕಾಗುತ್ತಿಲ್ಲ. ಮನೆಯ ಎಲ್ಲ ಕೆಲಸಗಳನ್ನು ನಿರ್ವಹಿಸುವ ತಾಯಿ ಲಕ್ಷ್ಮೀ ಅಮ್ಮ ಬಿಡುವಿನ ವೇಳೆ ಬೀಡಿಕಟ್ಟಿ ಜೀವನ ನಿರ್ವಹಿಸಬೇಕಾದ ಸ್ಥಿತಿ ಇದೆ. ಸ್ಥಳಿಯಾಡಳಿತ ಸಹಿತ ಕಾರ್ಮಿಕ ಇಲಾಖೆಗಳಿಗೆ ಅರ್ಜಿ ಸಲ್ಲಿಸಿದ್ದರೂ ತಕ್ಕ ಪ್ರಮಾಣದ ಆರ್ಥಿಕ ಸಹಕಾರ ಪ್ರಾಪ್ತಿಯಾಗಿಲ್ಲ ಎನ್ನಲಾಗಿದೆ. ಹಲವು ವರ್ಷಗಳ ಹಿಂದೆ ಜಿಲ್ಲಾ ಧಿಕಾರಿ ಕಚೇರಿಯಿಂದ 25 ಸಾವಿರ ರೂ.ಧನಸಹಾಯವನ್ನು ಕೃಷ್ಣಯ್ಯ ಬಲ್ಲಾಳ್‌ ಅವರ ಚಿಕಿತ್ಸೆಗೆ ನೀಡಲಾಗಿತ್ತು. ದಯನೀಯ ಸ್ಥಿತಿಯಲ್ಲಿ ಜೀವನ ನಿರ್ವಹಿಸುತ್ತಿರುವ ಯುವಕ ಕೃಷ್ಣಯ್ಯ ಬಲ್ಲಾಳ್‌ ಅವರ ಆರೋಗ್ಯ ಸುಧಾರಣೆ ಸಹಿತ ಹೆಚ್ಚಿನ ಚಿಕಿತ್ಸೆ ಕೊಡಿಸಿದಲ್ಲಿ ಪೂರ್ಣಗುಣರಾಗ ಬಹುದು ಎಂಬ ಭರವಸೆಯು ಇದೆ.

ನುರಿತ ಕಾರ್ಮಿಕ: ಕೃಷ್ಣಯ್ಯ ಬಲ್ಲಾಳ್‌ ತಮ್ಮ ವೃತ್ತಿ ಜೀವನದ ಸಂದರ್ಭ ನುರಿತ ಕೃಷಿ ಕಾರ್ಮಿಕರಾಗಿದ್ದರು. ಪೈವಳಿಕೆ ಸಮೀಪದ ಹಲವು ಅಡಿಕೆ ತೆಂಗಿನ ತೋಟಗಳ ಬೆಳೆ ಕೀಳುವಿಕೆ, ಜೌಷಧ ಸಿಂಪಡನೆಯಂತಹ ಕೆಲಸವನ್ನು ಸುಲಲಿತವಾಗಿ ನಿರ್ವಹಿಸುತ್ತಿದ್ದರು. ಹೊಸ ತಲೆಮಾರಿನ ಯುವ ಮಂದಿ ಇಂತಹ ಕೆಲಸಕಾರ್ಯಗಳಿಗೆ ಸಿಗದಿದ್ದ ಸಂದರ್ಭ ಏರು ಯವ್ವನದ ಕೃಷ್ಣಯ್ಯ ಬಲ್ಲಾಳ್‌ ಅವರ ಕಾರ್ಮಿಕ ವೃತ್ತಿ ಸಹಕಾರಿಯಾಗಿತ್ತು. ಸಹಾಯಹಸ್ತ ನೀಡಲು ಇಚ್ಛಿಸುವವರು ಕೃಷ್ಣಯ್ಯ ಬಲ್ಲಾಳ್‌ ಅವರ ಪೈವಳಿಕೆ ಸಿಂಡಿಕೇಟ್‌ ಬ್ಯಾಂಕ್‌ಖಾತೆಗೆ ಹಣ ವರ್ಗಾಯಿಸಬಹುದಾಗಿದೆ. ಸಿಂಡಿಕೇಟ್‌ ಬ್ಯಾಂಕ್‌ ಪೈವಳಿಕೆ ಶಾಖೆ IFSC : SYNB0004230  ಅಕೌಂಟ್‌ ನಂಬರ್‌ : 42302210013940
– ಸರೋಜಾ ಬಲ್ಲಾಳ್‌, 
ಸಾಮಾಜಿಕ ಕಾರ್ಯಕರ್ತೆ

ಟಾಪ್ ನ್ಯೂಸ್

BYV-yathnal

BJP Internal Dispute: ಶಾಸಕ ಬಸನಗೌಡ ಯತ್ನಾಳ್‌ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು

Pejavara-Shree–Siddu

Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ

Train: ಗೋಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು

Train: ಗೋಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು

Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ

Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ

DKShivakumar

Congress: ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಸ್ವರ ಎತ್ತಿದರೆ ಶಿಸ್ತುಕ್ರಮ: ಡಿ.ಕೆ.ಶಿವಕುಮಾರ್‌

Gaviyappa-MLA

Congress Guarantee: ಎರಡು-ಮೂರು ಗ್ಯಾರಂಟಿ ನಿಲ್ಲಿಸಿ: ಎಚ್‌.ಆರ್‌. ಗವಿಯಪ್ಪ ಒತ್ತಾಯ

ಕೆರೆ ಬತ್ತುವ ಮೊದಲೇ ಎಚ್ಚರಿಕೆ ಅಗತ್ಯ; ಜೀವ ಸೆಲೆಯಾಗಿರುವ ಕೆರೆಗಳ ನಿರ್ವಹಣೆಯೇ ಆಗುತ್ತಿಲ್ಲ

ಕೆರೆ ಬತ್ತುವ ಮೊದಲೇ ಎಚ್ಚರಿಕೆ ಅಗತ್ಯ; ಜೀವ ಸೆಲೆಯಾಗಿರುವ ಕೆರೆಗಳ ನಿರ್ವಹಣೆಯೇ ಆಗುತ್ತಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ban

Kumble: ಹೆತ್ತವರನ್ನೇ ಕೊಠಡಿಯಲ್ಲಿ ಕೂಡಿ ಹಾಕಿದ ಪುತ್ರಿ

car-parkala

ಕಾಸರಗೋಡು: ಬೈಕ್‌ ಢಿಕ್ಕಿ; ವಿದ್ಯಾರ್ಥಿಗೆ ಗಂಭೀರ ಗಾಯ

suicide

Kasaragod;ತೀವ್ರ ತಲೆನೋವು: ವಿದ್ಯಾರ್ಥಿನಿ ಸಾ*ವು

arest

Kumbla: ಯುವಕನನ್ನು ಅಪಹರಿಸಿ ಕೊಲೆಗೆ ಯತ್ನ; ಬಂಧನ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

BYV-yathnal

BJP Internal Dispute: ಶಾಸಕ ಬಸನಗೌಡ ಯತ್ನಾಳ್‌ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು

Pejavara-Shree–Siddu

Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ

Train: ಗೋಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು

Train: ಗೋಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು

Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ

Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ

DKShivakumar

Congress: ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಸ್ವರ ಎತ್ತಿದರೆ ಶಿಸ್ತುಕ್ರಮ: ಡಿ.ಕೆ.ಶಿವಕುಮಾರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.