ನೀರ್ಚಾಲು ಅಗ್ನಿಶಾಮಕ ದಳ ಸಾಕಾರಗೊಂಡೀತೇ…


Team Udayavani, Feb 11, 2020, 5:14 AM IST

10KSDE9

ಕಾಸರಗೋಡು: ಹಲವು ವರ್ಷ ಗಳಿಂದ ಎದುರು ನೋಡುತ್ತಿದ್ದ ನೀರ್ಚಾ ಲಿನಲ್ಲಿ ಅಗ್ನಿಶಾಮಕ ದಳ ಸ್ಥಾಪನೆ ಸಾಕಾರ ಗೊಂಡಿತೇ ಎಂಬ ಕುತೂಹಲಕ್ಕೆ ಕಾರಣವಾಗಿದೆ. ದಿನಗಳ ಹಿಂದೆ ವಿತ್ತ ಸಚಿವ ಥೋಮಸ್‌ ಐಸಾಕ್‌ ಮಂಡಿಸಿದ 2020-21ನೇ ಹಣಕಾಸು ವರ್ಷದ ಮುಂಗಡ ಪತ್ರದಲ್ಲಿ ನೀರ್ಚಾಲು ಅಗ್ನಿಶಾಮಕ ದಳ ಸ್ಥಾಪನೆಗೆ ಒಂದು ಕೋಟಿ ರೂ. ಕಾದಿರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳದ ಬಗ್ಗೆ ಆಶಾಭಾವನೆ ಮೂಡಿದೆ.

2020-21ರ ಕೇರಳ ಬಜೆಟ್‌ನಲ್ಲಿ ನೀರ್ಚಾಲು ಅಗ್ನಿಶಾಮಕ ದಳ ಕೇಂದ್ರ ಕಟ್ಟಡ ನಿರ್ಮಾಣಕ್ಕೆ 1 ಕೋಟಿ ರೂಪಾಯಿ ಟೋಕನ್‌ ಫಂಡ್‌ ಮಂಜೂರಾತಿ ದೊರೆತಿದೆ. 10 ವರ್ಷಗಳಿಂದ ವಿವಿಧ ಸಂಘಟನೆಗಳು ನೀರ್ಚಾಲು ಅಗ್ನಿಶಾಮಕ ದಳ ಕೇಂದ್ರ ನಿರ್ಮಾಣಕ್ಕೆ ಬೇಡಿಕೆ ನೀಡುತ್ತಲೇ ಬಂದಿದ್ದರೂ ಈ ವರೆಗೂ ಸಾಧ್ಯವಾಗಿರಲಿಲ್ಲ. ಇದೀಗ ಹಲವು ಇಲಾಖೆಗಳಿಗೆ ಸರಿಯಾದ ಸಮಯಕ್ಕೆ ದಾಖಲೆಗಳನ್ನು ನೀಡಿದುದರ ಫಲವಾಗಿ ಬದಿಯಡ್ಕ ಪಂಚಾಯತ್‌ ಪ್ರದೇಶಗಳಲ್ಲಿ ಅಗ್ನಿ ದುರಂತ, ಮಳೆಗಾಲದಲ್ಲಿ ಜಲ ದುರಂತಗಳ ನಿವಾರಣೆಗೆ ಆದ್ಯತೆ ನೀಡಿ ಮುಖ್ಯಮಂತ್ರಿಯವರ ಪ್ರತ್ಯೇಕ ಪರಿಗಣನೆಯು ನೀರ್ಚಾಲು ಅಗ್ನಿ ಶಾಮಕ ದಳ ಕೇಂದ್ರ ನಿರ್ಮಾಣಕ್ಕೆ ಅಂಗೀಕಾರವು ಲಭಿಸಿದ್ದು ಶ್ಲಾಘನೀಯವಾಗಿದೆ.

ನೀರ್ಚಾಲು ಅಗ್ನಿಶಾಮಕ ದಳ ಕೇಂದ್ರ ನಿರ್ಮಾಣಕ್ಕೆ ಸ್ಥಳ ಹಾಗೂ ಫಂಡ್‌ ಮಂಜೂರಾತಿ ಮಾಡಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌, ಕಂದಾಯ ಇಲಾಖೆಯ ಸಚಿವ ಇ.ಚಂದ್ರಶೇಖರನ್‌, ಆರೋಗ್ಯ ಸಚಿವೆ ಕೆ.ಕೆ.ಶೈಲಜಾ, ಹಣಕಾಸು ಸಚಿವಥೋಮಸ್‌ ಐಸಾಕ್‌, ಕಾಸರಗೋಡು ಶಾಸಕ ಎನ್‌.ಎ. ನೆಲ್ಲಿಕುನ್ನು, ಅಗ್ನಿಶಾಮಕ ದಳದ ಡಿ.ಜಿ.ಪಿ. ಹೇಮಚಂದ್ರನ್‌, ಡಿ.ಜಿ.ಪಿ. ಟೋಮಿನ್‌ ತಚ್ಚಂಗೇರಿ ಮೊದಲಾದವರಿಗೆ ಬದಿಯಡ್ಕ ಗ್ರಾಮ ಪಂಚಾಯತ್‌ ಯೋಜನಾ ಸಮಿತಿ ಸದಸ್ಯ ಎಂ.ಎಚ್‌. ಜನಾದ‌ìನ ಅಭಿನಂದನೆಯನ್ನು ಸಲ್ಲಿಸಿದ್ದಾರೆ.

ಉಕ್ಕಿನಡ್ಕ ಮೆಡಿಕಲ್‌ ಕಾಲೇಜು ಅಕಾಡೆಮಿಕ್‌ ಕಟ್ಟಡ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರಿಗೆ ಬದಿಯಡ್ಕ ಗ್ರಾಮ ಪಂಚಾಯತ್‌ ಯೋಜನಾ ಸಮಿತಿ ಸದಸ್ಯ ಎಂ.ಎಚ್‌. ಜನಾರ್ದನ ಅವರು ನೀರ್ಚಾಲು ಅಗ್ನಿಶಾಮಕ ದಳ ಯೋಜನೆಗೆ ಮಂಜೂರಾತಿ ನೀಡಲು ವಿಳಂಬವಾಗುವ ಬಗ್ಗೆ ಮರು ಮನವಿ ಮಾಡಿರುವುದು ಸ್ಮರಣೀಯವಾಗಿದೆ.

ಆರು ತಿಂಗಳ ಹಿಂದೆ ಕಂದಾಯ ಸಚಿವರಾದ ಇ. ಚಂದ್ರಶೇಖರನ್‌ ಅವರ ಪೆರುಂಬಳ ವಸತಿಯಲ್ಲಿ ಬದಿಯಡ್ಕ ಪಂಚಾಯತ್‌ ಅಧ್ಯಕ್ಷ ಕೆ.ಎನ್‌. ಕೃಷ್ಣ ಭಟ್‌ ಜತೆಯಾಗಿ ಗಂಟೆಗಳ ಕಾಲ ಚರ್ಚಿಸಿದಾಗ ಸಚಿವರು ನೀರ್ಚಾಲು ಅಗ್ನಿಶಾಮಕ ದಳ ಕೇಂದ್ರ ಸ್ಥಾಪಿಸಲು 2 ಎಕ್ರೆ ಸ್ಥಳ ಹಾಗೂ ಫಂಡ್‌ ನೀಡುವ ಭರವಸೆ ಇತ್ತಿದ್ದರು.

2 ಎಕ್ರೆ ಸ್ಥಳ
ನಿರ್ದಿಷ್ಟ ಅಗ್ನಿಶಾಮಕ ದಳ ಕೇಂದ್ರದ 2 ಎಕ್ರೆ ಸ್ಥಳದಲ್ಲಿ 3 ಅಗ್ನಿ ಶಮನ ವಾಹನ ಸಮುತ್ಛಯ, ಸುಸಜ್ಜಿತ ಕಚೇರಿ ಕಟ್ಟಡ, ಸಿಬಂದಿಗೆ ವಸತಿ ಕೇಂದ್ರ, ನಾಗರಿಕರಿಗೆ ದುರಂತ ಗಳಿಂದ ಪಾರಾಗುವ ತರಬೇತಿ ಕೇಂದ್ರ, ವಿಶಾಲವಾದ ಪೆರೇಡ್‌ ಗ್ರೌಂಡ್‌, ಜಲ ಸಂಗ್ರಹಕ್ಕೆ ಬೃಹತ್‌ ಟ್ಯಾಂಕ್‌, ಸುರಕ್ಷಿತ ಸುತ್ತುಗೋಡೆ, ಇತರ ಅನುಬಂಧ ನಿರ್ಮಾಣ ಕಾರ್ಯಗಳು ಅಗ್ನಿಶಾಮಕ ದಳ ಕೇಂದ್ರ ನಿರ್ಮಾಣದಲ್ಲಿ ಒಳಗೊಂಡಿದೆ.

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.