ಕೃಷಿಕರ ಸಮಗ್ರ ಅಭಿವೃದ್ಧಿ ಸರಕಾರದ ಗುರಿ: ಡಿ. ವಿ. ಸದಾನಂದ ಗೌಡ
Team Udayavani, Jan 9, 2018, 11:33 AM IST
ಕಾಸರಗೋಡು: ಕೃಷಿ ಕ್ಷೇತ್ರದ ಸಮಗ್ರ ಅಭಿವೃದ್ಧಿ ಕೇಂದ್ರ ಸರಕಾರದ ಗುರಿಯಾಗಿದೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು. ಕಾಸರಗೋಡಿನ ಐಸಿಎಆರ್ – ಸಿಪಿಸಿಆರ್‌ಐಯಲ್ಲಿ ಜ. 5ರಿಂದ 10ರ ತನಕ ನಡೆಯುತ್ತಿರುವ ಎಗ್ರಿ ಎಕ್ಸ್‌ಪೋ – 2018ರ ಅಂಗವಾಗಿ ಸೋಮವಾರ ಆಯೋಜಿಸಿದ ಕೃಷಿ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿ ಅಭಿವೃದ್ಧಿಗೆ ಹಲವು ಯೋಜನೆ
ಕೃಷಿಕರ ಸಮಗ್ರ ಅಭಿವೃದ್ಧಿಗಾಗಿ ಹಲವು ಯೋಜನೆ ಜಾರಿಗೊಳಿಸಲಾಗಿದೆ. ಶೀಘ್ರವೇ ದೇಶದ 648 ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಮಿನಿಲ್ಯಾಬ್ ಆರಂಭಿಸಲಾಗುವುದು ಎಂದು ಅವರು ಹೇಳಿದರು. ಈ ಸಂದರ್ಭ ದಲ್ಲಿ ಸಚಿವರು ಕೇಂದ್ರೀಯ ವಿದ್ಯಾಲಯ ಸಿ.ಪಿ.ಸಿ. ಆರ್.ಐ.ಯ ನೂತನ ಕಟ್ಟಡವನ್ನು ಲೋಕಾರ್ಪಣೆಗೈದರು.
ಸಮ್ಮಾನ
ಅತ್ಯುತ್ತಮ ಕೃಷಿಕರಾದ ಸಿಬಿ ಜೋಸೆಫ್, ರಾಮಕೃಷ್ಣ, ವಿಶ್ವನಾಥ ರಾವ್ ಅವರನ್ನು ಸಚಿವರು ಸಮ್ಮಾನಿಸಿದರು. ಸಂಸದ ಪಿ. ಕರುಣಾಕರನ್ ಅಧ್ಯಕ್ಷತೆ ವಹಿಸಿದ್ದರು. ಎನ್. ಎ. ನೆಲ್ಲಿಕ್ಕುನ್ನು, ಎ.ಜಿ.ಸಿ. ಬಶೀರ್, ಎ.ಎ. ಜಲೀಲ್, ಉಷಾದೇವಿ, ಡಾ| ಮನೋಜ್ ಕುಮಾರ್ ಉಪಸ್ಥಿತರಿದ್ದರು. ಐ.ಸಿ.ಎ. ಆರ್ ಉಪ ನಿರ್ದೇಶಕ ಡಾ| ಎ. ಕೆ. ಸಿಂಗ್ ಪ್ರಸ್ತಾವನೆಗೈದರು.
ಅಂಚೆ ಚೀಟಿ ಬಿಡುಗಡೆ
ಸಂಸ್ಥೆಯ ಶತಮಾನೋತ್ಸವದ ಸವಿನೆನಪಿಗೆ ಹೊರತಂದ ಅಂಚೆ ಚೀಟಿಯನ್ನು ಉತ್ತರ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಎಸ್. ಎಫ್.ಎಚ್. ರಿಜ್ವಿ ಬಿಡುಗಡೆಗೊಳಿಸಿದರು. 25 ವರ್ಷದ ಕೃಷಿಕರೊಂದಿಗಿನ ಪಯಣ, ಉದ್ಯಮಶೀಲ ಹಾಗೂ ಕೃಷಿಕ ಸ್ನೇಹಿ ತಂತ್ರಜ್ಞಾನಗಳು, ಮಲಯಾಳ ಹಾಗೂ ಕನ್ನಡದಲ್ಲಿ ತೆಂಗು ಎಂಬ ಶೀರ್ಷಿಕೆಯ ಪುಸ್ತಕಗಳ ಬಿಡುಗಡೆ, ಕಲ್ಪ ವರ್ಧಿನಿ ಹಾಗೂ ಕಲ್ಪ ಪೋಷಕ ಎಂಬ ಎರಡು ತೆಂಗಿಗಾಗಿ ಇರುವ ಲಘು ಪೋಷಕಾಂಶ ಗಳ ಬಿಡುಗಡೆ, ಅಂಗಾಂಶ ಕಸಿ ತಂತ್ರಜ್ಞಾನ ಹಸ್ತಾಂತರ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Kasaragod: ರಸ್ತೆಯಲ್ಲಿ ಬಿಯರ್ ಬಾಟ್ಲಿ ಎಸೆದು ಘರ್ಷಣೆಗೆ ಯತ್ನ; ಕೇಸು ದಾಖಲು
Kasaragod ಅಪರಾಧ ಸುದ್ದಿಗಳು; ತಂಬಾಕು ಉತ್ಪನ್ನಗಳ ಸಹಿತ ಇಬ್ಬರ ಬಂಧನ
Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ
Kasaragod: ಮುಖವಾಡ ಧರಿಸಿದ ವ್ಯಕ್ತಿಯಿಂದ ವಿದ್ಯಾರ್ಥಿಗೆ ಇರಿತ; ಪ್ರಕರಣ ದಾಖಲು
MUST WATCH
ಹೊಸ ಸೇರ್ಪಡೆ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.